'ಕೆ.ಜಿ.ಎಫ್​' ವಿಲನ್​ ಗರುಡ ಕಾಲಿವುಡ್​ನತ್ತ: ರಶ್ಮಿಕಾ-ಕಾರ್ತಿಯ ಹೊಸ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡಿಗ

ಕನ್ನಡ ಸಿನಿ ರಂಗದಲ್ಲೇ ಇತಿಹಾಸ ಬರೆದ ಸಿನಿಮಾ ಎಂದೇ ಖ್ಯಾತಿಯಾಗಿರುವುದು 'ಕೆ.ಜಿ.ಎಫ್​'. ಇದು ಎಷ್ಟೋ ಮಂದಿ ಕಲಾವಿದರ ಜೀವನಕ್ಕೂ ದಾರಿ ದೀಪವಾದ ಸಿನಿಮಾ. ಈ ಚಿತ್ರದಲ್ಲಿ ಗರುಡ ಎಂಬ ಖಡಕ್​ ಖಳನಾಯಕನಾಗಿ ಮಿಂಚಿದ್ದ ರಾಮ್​ ಈಗ ಕಾಲಿವುಡ್​ವತ್ತ ಪಯಣ ಬೆಳೆಸಲು ಸಿದ್ದರಾಗಿದ್ದಾರೆ.

ಕಾಲಿವುಡ್​ಗೆ ಕಾಲಿಟ್ಟ 'ಕೆ.ಜಿ.ಎಫ್'​ ವಿಲನ್​ ಗರುಡ

ಕಾಲಿವುಡ್​ಗೆ ಕಾಲಿಟ್ಟ 'ಕೆ.ಜಿ.ಎಫ್'​ ವಿಲನ್​ ಗರುಡ

  • News18
  • Last Updated :
  • Share this:
'ಕೆ.ಜಿ.ಎಫ್ ಚಾಪ್ಟರ್ 1' ಚಿತ್ರಕ್ಕೆ ಕೇವಲ ಕನ್ನಡವಲ್ಲದೆ ಬೇರೆ ಭಾಷೆಗಳಲ್ಲೂ ತುಂಬಾ ಕ್ರೇಜ್​ ಇದೆ. ಈ ಸಿನಿಮಾದಲ್ಲಿ ನಾಯಕ ಮಾತ್ರವಲ್ಲದೆ, ಚಿತ್ರದಲ್ಲಿ ಅಭಿನಯಿಸಿರುವ ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಮಹತ್ವ ಇದೆ.

ಇದನ್ನೂ ಓದಿ: ವಿವಾಹಕ್ಕೂ ಮೊದಲೇ ಗರ್ಭಿಣಿಯಾದ ಕಿಚ್ಚನ ಹುಡುಗಿ: ಸಾಮಾಜಿಕ ಜಾಲತಾಣದಲ್ಲಿ ಆಕೆ ಬರೆದುಕೊಂಡಿದ್ದೇನು..?

ಅದರಲ್ಲೂ 'ಕೆ.ಜಿಎಫ್​. ಚಾಪ್ಟರ್​ 1'ರ ಪ್ರಮುಖ ಆಕರ್ಷಣೆ ಅದರ ವಿಲನ್​ ಗರುಡ. ಉದ್ದ ಗಡ್ಡ ಬಿಟ್ಟು, ಕೇವಲ ನೋಟದಲ್ಲೇ ಹೆದರಿಸುವ ಖಳನ ಪಾತ್ರದಲ್ಲಿ ನಟ ರಾಮ್​ ಅಭಿನಯ ಪ್ರಶಂಸನಾರ್ಹ.

ಈ ಸಿನಿಮಾದಲ್ಲಿನ ಗರುಡ ಪಾತ್ರದಿಂದಾಗಿ ಈಗ ಗರುಡ ಎಂದೇ ಖ್ಯಾತರಾಗುತ್ತಿರುವ ರಾಮ್​ ಅವರಿಗೆ ಕನ್ನಡ ಸೇರಿದಂತೆ ಬೇರೆ ಭಾಷೆಗಳಿಂದಲೂ ಅವಕಾಶಗಳು ಅರಸಿ ಬರುತ್ತಿವೆಯಂತೆ. ಸದ್ಯ ರಾಮ್​ ಅವರಿಗೆ ಕಾಲಿವುಡ್​ನಿಂದ ಒಂದು ಅವಕಾಶ ಅರಸಿ ಬಂದಿದೆ.

ಹೌದು, ಇನ್ನೂ ಹೆಸರೇ ಇಡದ ತಮಿಳು ಸಿನಿಮಾದಲ್ಲಿ ರಾಮ್​ಗೆ ವಿಲನ್​ ಆಗಿ ಅಭಿನಯಿಸುವ ಅವಕಾಶ ಸಿಕ್ಕಿದೆಯಂತೆ. ಅದೂ ಸಹ ಕಾರ್ತಿ ಹಾಗೂ ಕೊಡಗಿನ ಬೆಡಗಿ ರಶ್ಮಿಕಾ ಅಭಿನಯದ ಇನ್ನೂ ಶೀರ್ಷಿಕೆ ಇಡದ ತಮಿಳು ಚಿತ್ರದಲ್ಲಿ ರಾಮ್​ ಖಳನಾಯಕನಾಗಲಿದ್ದಾರಂತೆ.

I’ve always had such great support from my Kannada and Telugu people..✨💕And you Have also been asking me to come to tamil and in 2019..I finally am!!😎 I am so happy to be doing a film with this team.இதுவொரு புதிய துவக்கம்✨ with loads of love from me to you!😘♥ pic.twitter.com/LaVZJLdVllನಿರ್ದೇಶಕ ಬಕಿಯಾ ರಾಜ್​ ಕಣ್ಣನ್​ ಅವರ #Karthi19 ಚಿತ್ರದಲ್ಲಿ ರಾಮ್​ ಅಭಿನಯಿಸಲಿದ್ದಾರಂತೆ. ಇದು ನಟ ಕಾರ್ತಿ ಅಭಿನಯದ 19ನೇ ಚಿತ್ರವಾಗಿದ್ದು, ಸದ್ಯ ಇದಕ್ಕೆ #Karthi19 ಎಂದೇ ಕರೆಯಲಾಗುತ್ತಿದೆ.

ಇದನ್ನೂ ಓದಿ: ಇಲ್ಲ ಇಲ್ಲ ಎನ್ನುತ್ತಲೇ ಮದುವೆಗೆ ಸಿದ್ಧರಾದ ರೌಡಿ ಬೇಬಿ ಸಾಯಿ ಪಲ್ಲವಿ..!

ಇತ್ತೀಚೆಗಷ್ಟೆ ಈ ಸಿನಿಮಾದ ಮೂಹೂರ್ತ ನಡೆದಿದ್ದು, ಚಿತ್ರೀಕರಣವೂ ಆರಂಣಭವಾಗಿದೆ. ಸದ್ಯದಲ್ಲೇ ರಾಮ್​ ಸಹ ಈ ತಂಡದ ಜೊತೆಯಾಗಲಿದ್ದಾರೆ. ತಮಿಳು ಸಿನಿಮಾದಲ್ಲಿ ರಾಮ್​ ಅವರ ಹೊಸ ಲುಕ್​ ಹೇಗಿರುತ್ತದೆಯೋ ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಒಟ್ಟಾರೆ ತಮಿಳು ಚಿತ್ರದಲ್ಲಿ ಕನ್ನಡದ ಗರುಡನ ಘರ್ಜನೆ ಇರಲಿದೆ.

PHOTOS: ಟಾಲಿವುಡ್ ಪ್ರಿನ್ಸ್ ಆದರೂ ಮಗಳಿಗೆ ಮಾತ್ರ ಪ್ರೀತಿಯ ಅಪ್ಪ: 'ಮಹರ್ಷಿ' ಸೆಟ್​ನಲ್ಲಿ ಮಗಳೊಂದಿಗೆ ಮಹೇಶ್​ ಬಾಬು..!
First published: