• Home
  • »
  • News
  • »
  • entertainment
  • »
  • Ram Sethu Trailer Release: ರಾಮ ಸೇತು ನಾಶ ಮಾಡಲು ಹೊರಟ ಸರ್ಕಾರಕ್ಕೆ ಟಕ್ಕರ್ ನೀಡಿದ ನಟ ಅಕ್ಷಯ್!

Ram Sethu Trailer Release: ರಾಮ ಸೇತು ನಾಶ ಮಾಡಲು ಹೊರಟ ಸರ್ಕಾರಕ್ಕೆ ಟಕ್ಕರ್ ನೀಡಿದ ನಟ ಅಕ್ಷಯ್!

ರಾಮ ಸೇತು ಸಿನೆಮಾ

ರಾಮ ಸೇತು ಸಿನೆಮಾ

ಒಂದಾದ ಮೇಲೊಂದರಂತೆ ಚಿತ್ರಗಳ ಸೋಲಿನಿಂದ ನಲುಗಿರುವ ಬಾಲಿವುಡ್ ಚಿತ್ರೋದ್ಯಮದಿಂದ ಈಗ ಮತ್ತೊಂದು ಚಿತ್ರ ನಿರ್ಮಾಣವಾಗಿದೆ. ಅದರ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಚಿತ್ರಕ್ಕೆ ರಾಮ ಸೇತು ಎಂದೇ ಟೈಟಲ್ ಇಡಲಾಗಿದ್ದು ಇದು ರಾಮಾಯಣದಲ್ಲಿ ಬರುವ ರಾಮ ಸೇತುವೆಯ ಸುತ್ತ ಸುತ್ತುತ್ತದೆ.

ಮುಂದೆ ಓದಿ ...
  • Share this:

ಭಾರತ (India) ಒಂದು ಭವ್ಯ ಪರಂಪರೆ ಇರುವಂತಹ ದೇಶ. ಇಲ್ಲಿನ ಅಗಾಧ ಜ್ಞಾನ ಬಂಢಾರ ಹೊಂದಿರುವ ವೇದ-ಪುರಾಣಗಳಲ್ಲಿ ಅನೇಕ ಅದ್ಭುತ ಸಂಗತಿಗಳನ್ನು ವಿವರಿಸಲಾಗಿದೆ. ಅದರಂತೆ ತ್ರೇತಾ ಯುಗದ ರಾಮಾಯಣ (Ramayan) ಮಹಾಕಾವ್ಯದಲ್ಲಿ ರಾಮನು ರಾವಣನ ಮೇಲೆ ಯುದ್ಧಕ್ಕೆ ಹೋದಾಗ ಅಡ್ಡ ಬರುವ ಸಮುದ್ರವನ್ನು ದಾಟಲು ಸೇತುವೆಯೊಂದನ್ನು ನಿರ್ಮಿಸಿದ್ದನೆಂಬ ಕಥೆಯಿದೆ. ಆ ಸೇತುವೆಯನ್ನು ರಾಮ ಸೇತು (Rama Setu) ಎಂದೆ ಇಂದಿಗೂ ಕರೆಯಲಾಗುತ್ತದೆ. ಹಲವರು ಇದನ್ನು ಕಾಲ್ಪನಿಕ ಅಥವಾ ಮಿಥ್ಯ ಎಂದು ಕರೆದರೆ ಇನ್ನೂ ಹಲವರು ಇದು ಐತಿಹಾಸಿಕವಾಗಿ ನೈಜವಾಗಿರುವ ವಿಷಯ ಎನ್ನುತ್ತಾರೆ. ಅದಕ್ಕೆ ಪುರಾವೆ ಎಂಬಂತೆ ಆ ಸೇತುವೆ (Bridge) ಇರುವ ಸ್ಥಳದಲ್ಲಿ ಇಂದಿಗೂ ವಿಜ್ಞಾನಿಗಳಿಗೆ ಆ ಬಗ್ಗೆ ಅನೇಕ ಸುಳಿವು ಸಹ ದೊರಕಿದೆ.


ಕಥೆ ಏನೇ ಇರಲಿ ಸದ್ಯಕ್ಕಂತೂ ರಾಮ ಸೇತು ಕುರಿತಾದ ಚಿತ್ರದ ಟ್ರೈಲರ್ ಒಂದು ಬಿಡುಗಡೆಯಾಗಿದ್ದು ಸಖತ್ ಹವಾ ಮಾಡುತ್ತಿರುವುದೇ ಈಗಿನ ಸುದ್ದಿ.


ರಾಮ ಸೇತುವೆಯ ಮೇಲೆ ಕೇಂದ್ರಿತವಾಗಿರುವ ಸಿನೆಮಾ "ರಾಮ ಸೇತು"


ಹೌದು, ಒಂದಾದ ಮೇಲೊಂದರಂತೆ ಚಿತ್ರಗಳ ಸೋಲಿನಿಂದ ನಲುಗಿರುವ ಬಾಲಿವುಡ್ ಚಿತ್ರೋದ್ಯಮದಿಂದ ಈಗ ಮತ್ತೊಂದು ಚಿತ್ರ ನಿರ್ಮಾಣವಾಗಿದ್ದು ಅದರ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಚಿತ್ರಕ್ಕೆ ರಾಮ ಸೇತು ಎಂದೇ ನಾಮಕರಣ ಮಾಡಲಾಗಿದ್ದು ಇದು ರಾಮಾಯಣದಲ್ಲಿ ಬರುವ ರಾಮ ಸೇತುವೆಯ ಮೇಲೆ ಕೇಂದ್ರಿತವಾಗಿರುವ ಕಥೆಯನ್ನೇ ಹೊಂದಿದೆ ಎನ್ನಬಹುದು.


ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸಿದರೆ, ಮಿಕ್ಕಂತೆ ಜಾಕ್ಲಿನ್ ಫರ್ನಾಂಡೀಸ್, ನಶ್ರತ್ ಭರೂಚಾ, ನಾಸಿರ್ ಹಾಗೂ ಸತ್ಯ ದೇವ್ ಇತರೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಎರಡು ನಿಮಿಷಗಳ ಈ ಟ್ರೈಲರ್ ನೋಡಿದಾಗ ಗೊತ್ತಾಗುವ ವಿಷಯವೆಂದರೆ ರಾಮ ಸೇತುವೆಯನ್ನು ನಾಶಗೊಳಿಸುವ ಹುನ್ನಾರ ಮಾಡಲಾಗಿದ್ದು ಅದನ್ನು ಉಳಿಸಲು ಕೇವಲ ಮೂರೇ ದಿನಗಳಿರುತ್ತವೆ. ಅಕ್ಷಯ್ ಕುಮಾರ್ ಅವರು ಪುರಾತತ್ವ ಶಾಸ್ತ್ರಜ್ಞರಾಗಿ ಅಭಿನಯಿಸಿದ್ದು ಅವರ ಮೇಲೆಯೇ ಸೇತುವೆಯ ಕುರಿತಾದ ಜವಾಬ್ದಾರಿಯಿದೆ ಎಂದು ತಿಳಿದುಬರುತ್ತದೆ.


ಟ್ರೈಲರ್ ನಲ್ಲಿ ಏನಿದೆ?


ಟ್ರೈಲರ್ ಅನ್ನು ನೋಡಿದಾಗ ಅದು ಮೊದಲು ನ್ಯಾಯಾಲಯ ವಿಚಾರಣೆಯೊಂದರಿಂದ ಆರಂಭವಾಗುತ್ತದೆ. ಟ್ರೈಲರ್ ಅನುಸಾರವಾಗಿ, ಸರ್ಕಾರವು ರಾಮ ಸೇತುವನ್ನು ನಾಶ ಮಾಡಲು ಅನುಮತಿ ಕೋರಿ ಸುಪ್ರೀಂ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುತ್ತದೆ. ಈ ಕುರಿತು ನಡೆಯುವ ಸಂಭಾಷಣೆಯೊಂದರಲ್ಲಿ ನಾಸಿರ್ ಅವರು "ಭಾರತ ನಡೆಯುತ್ತಿರುವುದೇ ಭಗವಂತ ರಾಮನ ಮೇಲಿರುವ ಭಕ್ತಿ, ನಂಬಿಕೆ ಮತ್ತು ಶೃದ್ಧೆಯಿಂದ. ಅಂತಹ ನಂಬಿಕೆಯನ್ನು ಪ್ರಶ್ನಿಸುವುದು ಹೇಗೆ ಸಾಧ್ಯ" ಎನ್ನುತ್ತಾರೆ. ನಂತರ ಅವರು ಅಕ್ಷಯ್ ಕುಮಾರ್ ಅವರನ್ನೊಳಗೊಂಡ ತಂಡವೊಂದನ್ನು ಆರ್ಕಿಯಾಲಾಜಿಕಲ್ ಎಕ್ಸ್ ಪೆಡೇಷನ್ ಗೆಂದು ಕಳುಹಿಸುತ್ತಾರೆ.


ಇದನ್ನೂ ಓದಿ: Ghost Film Shooting: ಚಿತ್ರದ ಹೆಸರು ಘೋಸ್ಟ್! ಇಲ್ಲಿ ದೆವ್ವಗಳಿಲ್ಲ, ಮತ್ತೇನು?


ಈಗ ಅಕ್ಷಯ್ ಅವರು ಜಾಕ್ಲಿನ್ ಹಾಗೂ ಸತ್ಯ ದೇವ್ ಅವರನ್ನು ಸೇರಿಕೊಂಡು ತಮ್ಮ ಕಾರ್ಯಾಚರಣೆಗೆ ಇಳಿಯುತ್ತಾರೆ. ಅಕ್ಷಯ್ ಅವರು ಈ ಸಂದರ್ಭದಲ್ಲಿ ತಾವು ಇತಿಹಾಸವನ್ನು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬುದನ್ನು ತಮ್ಮ ಸಹಯೋಗಿಗಳಿಗೆ ವಿವರಿಸುತ್ತಾರೆ. ಚಿತ್ರದಲ್ಲಿ ಅಕ್ಷಯ್ ಅವರ ಪ್ರಕಾರ ಇತಿಹಾಸ ಎಂದರೆ "ಇಟ್ ದಸ್ ಹ್ಯಾಪನ್ಡ್" ಎಂಬ ನಿಲುವನ್ನು ವಿವರಿಸುತ್ತಾರೆ. ಹೀಗೆ ನಡೆಯುವ ಪ್ರಯಾಣದಲ್ಲಿ ಅಕ್ಷಯ್ ಅವರಿಗೆ ನಂತರದಲ್ಲಿ ಗೊತ್ತಾದ ವಿಷಯವೆಂದರೆ ಅವರನ್ನು ಸೇತುವೆ ಉಳಿಸಲು ಅಲ್ಲ ಬದಲಾಗಿ ಅವರನ್ನೇ ಸಾಯಿಸಲೆಂದು ಈ ಕಾರ್ಯಾಚರಣೆಗೆ ಆಯ್ಕೆ ಮಾಡಿದ್ದಾರೆಂದು.


ಲಕ್ಷಾಂತರ ಅಭಿಮಾನಿಗಳ ಮನಸ್ಸನ್ನು ಗೆದ್ದ ಆ ಒಂದು ಸಂಭಾಷಣೆ 
ತದನಂತರ ಹಲವು ತಾಂತ್ರಿಕ ಕೌಶಲಗಳನ್ನು ಕ್ಲಿಪ್ ನಲ್ಲಿ ತೋರಿಸಲಾಗಿದೆ. ಸತ್ಯದೇವ್ ಅವರು ರಾಮ ಸೇತು ವನ್ನು ಕಂಡುಹಿಡಿಯುವುದು ಅಸಾಧ್ಯ ಎಂದು ಹೇಳುವ ಸಂಭಾಷಣೆ ನೋಡುಗರಲ್ಲಿ ಈ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸುವಂತಿದೆ. ಕೊನೆಯಲ್ಲಿ ಅಕ್ಷಯ್ ಅವರು ಸಮುದ್ರದಿಂದ ಹೊರ ಬಂದಾಗ ಅವರ ಭುಜದ ಮೇಲೆ ರಾಮ ಸೇತುವಿನ ಕಲ್ಲೊಂದಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಅವರು ಹೇಳುವ ಸಂಭಾಷಣೆ ನಿಜಕ್ಕೂ ಲಕ್ಷಾಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ.


ಏಕೆಂದರೆ, ಆ ಸಂಭಾಷನೆಯ ಬಗ್ಗೆನೇ ಸಾವಿರಾರು ಜನರು ಮನಸ್ಸು ಬಿಚ್ಚಿ ಪ್ರತಿಕ್ರಿಯೆ ನೀಡಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಕಾಣಬಹುದು. ಹಾಗೂ ಆ ಸಂಭಾಷಣೆ ಈ ರೀತಿಯಿದೆ. "ಶ್ರೀ ರಾಮನ ಮಂದಿರಗಳು ಜಗತ್ತಿನಲ್ಲಿ ಬಹಳಷ್ಟಿವೆ, ಆದರೆ ರಾಮನ ಸೇತುವೆ ಎಂಬುದು ಒಂದು ಮಾತ್ರ".


ರಾಮ ಸೇತು
ರಾಮಾಯಣದ ಪ್ರಕಾರ, ರಾವಣನು ಸೀತೆಯನ್ನು ಅಪಹರಿಸಿಕೊಂಡು ಲಂಕೆಗೆ ಹೋಗಿರುತ್ತಾನೆ. ಸೀತೆಯನ್ನು ರಾವಣನಿಂದ ಬಿಡಿಸಲೆಂದು ಶ್ರೀರಾಮ ಹಾಗೂ ಲಕ್ಷ್ಮಣರು ವಾನರ ಸೇನೆಯೊಂದಿಗೆ ಲಂಕೆಗೆ ತೆರಳಲು ನಿರ್ಧರಿಸಿದಾಗ ಅವರ ದಾರಿಗೆ ಸಮುದ್ರವು ಅಡ್ಡಿಪಡಿಸಿದಂತಿರುತ್ತದೆ. ಅದನ್ನು ದಾಟಲು ಸೇತುವೆಯನ್ನು ನಿರ್ಮಿಸಲೆಂದು ವಾನರ ಸೇನೆಯು ಭಕ್ತಿ ಪೂರ್ವಕವಾಗಿ ರಾಮನನ್ನು ನೆನೆಸುತ್ತ ಲೈಮ್ ಸ್ಟೋನ್ ಗಳನ್ನು ಬಳಸಿ ಸೇತುವೆ ನಿರ್ಮಿಸುತ್ತಾರೆ. ಇದನ್ನೇ ರಾಮ ಸೇತುವೆ ಎಂದು ಕರೆಯಲಾಗಿದೆ.


ಇದನ್ನೂ ಓದಿ:  10 years of English Vinglish: “ಇಂಗ್ಲಿಷ್​‌ ವಿಂಗ್ಲೀಷ್” ಸಿನಿಮಾದಲ್ಲಿ ಶ್ರೀದೇವಿ ಐಟಂ ಸಾಂಗ್‌ ಬಯಸಿದ್ದರಂತೆ ಗೌರಿ ಶಿಂಧೆ


ಎಲ್ಲಿದೆ?
ತಮಿಳು ನಾಡು ರಾಜ್ಯದ ಆಗ್ನೇಯ ಕರಾವಳಿಯ ಪಂಬನ್ ದ್ವೀಪ ಅಥವಾ ರಾಮೇಶ್ವರಂ ನಿಂದ ಶ್ರೀಲಂಕಾದ ಮನ್ನಾರ್ ದ್ವೀಪಕ್ಕೆ ಸಂಪರ್ಕ ಕಲ್ಪಿಸುವಂತೆ ಇದರ ನಿರ್ಮಾಣವಿದೆ ಎನ್ನಲಾಗಿದೆ. ಪ್ರಸ್ತುತ ಇದೇ ವಿಷಯದ ಮೇಲೆ ಈಗ ಚಲನಚಿತ್ರವನ್ನು ನಿರ್ಮಿಸಲಾಗಿದ್ದು ಅದರ ಟ್ರೈಲರ್ ಅನ್ನು ಕಳೆದ ಮಂಗಳವಾರ ಚಿತ್ರ ನಿರ್ಮಾಣಕಾರರು ಬಿಡುಗಡೆ ಮಾಡಿದ್ದಾರೆ. ಇದೇ ಅಕ್ಟೋಬರ್ 25 ರಂದು ಚಿತ್ರವು ತೆರೆ ಕಾಣುತ್ತಿದೆ.

Published by:Ashwini Prabhu
First published: