ಪೋಸ್ಟರ್ ಮೂಲಕ ಸದ್ದು ಮಾಡಿದ್ದ ರಾಮ್ ಗೋಪಾಲ್ ವರ್ಮಾ ಅವರ ಥ್ರಿಲ್ಲರ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಕನ್ನಡ, ತೆಲುಗು, ಸೇರಿದಂತೆ 9 ಭಾಷೆಗಳಲ್ಲಿ ಇದನ್ನು ಬಿಡುಗಡೆ ಮಾಡಿರುವುದು ವಿಶೇಷ.
ರಾಮ್ ಗೋಪಾಲ್ ವರ್ಮಾ ಅವರ ಸಸ್ಪೆನ್ಸ್ ಥ್ರಿಲ್ಲರ್ ಕತೆ ಇರುವ ಥ್ರಿಲ್ಲರ್ ಚಿತ್ರದ ಟ್ರೇಲರ್ ತುಂಬಾ ನಾಯಕಿ ಅಪ್ಸರಾ ರಾಣಿಯ ಗ್ಲಾಮರ್ ತುಂಬಿಕೊಂಡಿದೆ. ಕ್ಯಾಮೆರಾ ಕಣ್ಣು ನಾಯಕಿಯ ಪ್ರತಿ ಚಟುವಟಿಕೆಯನ್ನೂ ಸೆರೆ ಹಿಡಿದಿದೆ. ಈ ಟ್ರೇಲರ್ ತುಂಬೆಲ್ಲ ಅಪ್ಸರಾ ಕಾಣಿಸಿಕೊಳ್ಳುತ್ತಾರೆ.
A few responses for THRILLER trailer https://t.co/qsKvXCUpo8 pic.twitter.com/S6BsHLdYvT
— Ram Gopal Varma (@RGVzoomin) July 30, 2020
Apsara Rani: ಮತ್ತೆ ಹಾಟ್ ಫೋಟೋಗಳ ಮೂಲಕ ಪಡ್ಡೆಗಳ ನಿದ್ದೆಗೆಡಿಸಿರುವ ಅಪ್ಸರಾ..!
ಕೊರೋನಾ ಲಾಕ್ಡೌನ್ನಿಂದಾಗಿ ಸಿನಿಮಾಗಳನ್ನು ಚಿತ್ರೀಕರಿಸಲು ಹಾಗೂ ಅವುಗಳ ಟ್ರೇಲರ್ ರಿಲೀಸ್ ಮಾಡಲು ಒದ್ದಾಡುತ್ತಿದ್ದಾರೆ. ಆದರೆ ರಾಮ್ಗೋಪಾಲ್ ವರ್ಮಾ ಮಾತ್ರ ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಚಿತ್ರೀಕರಿಸುತ್ತಿದ್ದಾರೆ.
ಇದನ್ನೂ ಓದಿ: ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾದ ಸುಶಾಂತ್ ಗರ್ಲ್ಫ್ರೆಂಡ್ ರಿಯಾ..!
ಥ್ರಿಲ್ಲರ್ ಸಿನಿಮಾದ ಟ್ರೇಲರ್ ಅನ್ನು ಒಂದೇ ಮನೆಯಲ್ಲಿ ಚಿತ್ರೀಕರಿಸಲಾಗಿದೆ. ಇದನ್ನು ನೋಡಿದರೆ, ಇಡೀ ಸಿನಿಮಾ, ಇದೇ ಮನೆಯಲ್ಲೇ ನಡೆಯಲಿದೆ ಎಂದೆನಿಸುತ್ತದೆ. ಕಡಿಮೆ ಬಜೆಟ್ನಲ್ಲಿ ಆರ್ಜಿವಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈ ಚಿತ್ರದ ಬಗ್ಗೆ ಪ್ರಕಟಿಸಿದಾಗ ನಾಯಕಿಯ ಹಾಟ್ ಪೋಸ್ಟರ್ಗಳು ಪಡ್ಡೆಗಳ ನಿದ್ದೆಗೆಡಿಸಿದ್ದವು. ಇನ್ನು ಈಗ ಈ ಟ್ರೇಲರ್ ನೋಡಿದ ಮೇಲಂತೂ ಸಿನಿಮಾ ನೋಡಲು ಮತ್ತಷ್ಟು ಕಾತರರಾಗಿರುವಂತೆ ಕಾಣುತ್ತಿದೆ.
ಇದನ್ನೂ ಓದಿ: ವೆಬ್ ಸೀರೀಸ್ನಲ್ಲಿ ಬೆತ್ತಲಾಗಿ ನಟಿಸಲಿದ್ದಾರಂತೆ ಈ ಸ್ಯಾಂಡಲ್ವುಡ್ ನಟಿ..!
ಆರ್ಜಿವಿ ಸದ್ಯ ಥ್ರಿಲ್ಲರ್ ಸಿನಿಮಾದ ಜೊತೆಗೆ ಕೊರೋನಾ ವೈರಸ್, ಬ್ಯೂಟಿಫುಲ್, ದಿಶಾ, ಮರ್ಡರ್ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಒಂದರ ಹಿಂದೆ ಒಂದರಂತೆ ನಗ್ನಂ ಹಾಗೂ ಕ್ಲೈಮ್ಯಾಕ್ಸ್ ಸಿನಿಮಾಗಳನ್ನು ರಿಲೀಸ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ