KGF 2: ಬಾಲಿವುಡ್​ನಲ್ಲಿ ಕೆಜಿಎಫ್​ 2 ಯಾರಿಗೂ ಇಷ್ಟವಾಗಲಿಲ್ವಂತೆ! ಖ್ಯಾತ ನಿದೇರ್ಶಕನಿಂದ ಶಾಕಿಂಗ್​​ ಹೇಳಿಕೆ

ಕೆಜಿಎಫ್ ಮೊದಲನೆಯ ಭಾಗವು ಸಹ ಅಷ್ಟೇ ದೊಡ್ಡ ಮಟ್ಟದ ಹಿಟ್ ಆಗಿತ್ತು ಮತ್ತು ಗಲ್ಲಾ ಪೆಟ್ಟಿಗೆಯಲ್ಲಿ ತುಂಬಾ ಹಣವನ್ನು ಗಳಿಸಿತ್ತು. ಈ ಎರಡು ಭಾಗಗಳು ಬರೀ ಭಾರತದಲ್ಲಿ ಅಷ್ಟೇ ಅಲ್ಲದೆ, ವಿದೇಶಗಳಲ್ಲಿಯೂ ಸಹ ತುಂಬಾನೇ ಹಣ ಗಳಿಸಿವೆ.  ಆದರೆ ಇಲ್ಲೊಬ್ಬ ಚಲನಚಿತ್ರ ನಿರ್ಮಾಪಕರು ‘ಕೆಜಿಎಫ್: ಚಾಪ್ಟರ್ 2’ ಚಿತ್ರವನ್ನು ಯಾರು ಇಷ್ಟಪಟ್ಟಿಲ್ಲ ಎಂದು ಹೇಳಿದ್ದಾರೆ ನೋಡಿ.

ಕೆಜಿಎಫ್ 2

ಕೆಜಿಎಫ್ 2

  • Share this:
ನೀವು ಯಾರಿಗೆ ಹೋಗಿ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸಿನೆಮಾದ (Indian Movies) ಬಹುತೇಕ ದಾಖಲೆಗಳನ್ನು ಮುರಿದಿರುವ ಚಿತ್ರ ಯಾವುದು ಅಂತ ಕೇಳಿದರೆ, ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ (KGF) ಅಂತ ಹೇಳುತ್ತಾರೆ. ಅದರಲ್ಲೂ ಕೆಜಿಎಫ್: ಚಾಪ್ಟರ್ 2 ಈ ವರ್ಷದ ಆರಂಭದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ (Box Office) ಹಲವಾರು ದಾಖಲೆಗಳನ್ನು ಮುರಿದಿದೆ.  ಕೆಜಿಎಫ್ ಮೊದಲನೆಯ ಭಾಗವು ಸಹ ಅಷ್ಟೇ ದೊಡ್ಡ ಮಟ್ಟದ ಹಿಟ್ (Hit) ಆಗಿತ್ತು ಮತ್ತು ಗಲ್ಲಾ ಪೆಟ್ಟಿಗೆಯಲ್ಲಿ ತುಂಬಾ ಹಣವನ್ನು ಗಳಿಸಿತ್ತು. ಈ ಎರಡು ಭಾಗಗಳು ಬರೀ ಭಾರತದಲ್ಲಿ ಅಷ್ಟೇ ಅಲ್ಲದೆ, ವಿದೇಶಗಳಲ್ಲಿಯೂ ಸಹ ತುಂಬಾನೇ ಹಣ ಗಳಿಸಿವೆ. 

‘ಕೆಜಿಎಫ್: ಚಾಪ್ಟರ್ 2’ ಚಿತ್ರವನ್ನು ಯಾರು ಇಷ್ಟಪಟ್ಟಿಲ್ಲ ಅಂತೆ
ಆದರೆ ಇಲ್ಲೊಬ್ಬ ಚಲನಚಿತ್ರ ನಿರ್ಮಾಪಕರು ‘ಕೆಜಿಎಫ್: ಚಾಪ್ಟರ್ 2’ ಚಿತ್ರವನ್ನು ಯಾರು ಇಷ್ಟಪಟ್ಟಿಲ್ಲ ಎಂದು ಹೇಳಿದ್ದಾರೆ ನೋಡಿ.  ಸದಾ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಚಿತ್ರ ನಿರ್ಮಾಪಕರಾದ ರಾಮ್ ಗೋಪಾಲ್ ವರ್ಮಾ ಅವರು ಈ ಚಿತ್ರದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ ನೋಡಿ.

ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ


“ಇತ್ತೀಚೆಗೆ ಹಿಂದಿ ಚಲನಚಿತ್ರೋದ್ಯಮದ ಕೆಲವು ಜನರಿಗೆ ‘ಕೆಜಿಎಫ್: ಚಾಪ್ಟರ್ 2’ ಚಿತ್ರ ಅಷ್ಟೊಂದು ಇಷ್ಟವಾಗಲಿಲ್ಲ” ಎಂದು ಹೇಳಿದ್ದಾರೆ. 'ಕೆಜಿಎಫ್: ಚಾಪ್ಟರ್ 2' ನಂತಹ ತರ್ಕರಹಿತ ಚಿತ್ರ ಎಲ್ಲ ದಾಖಲೆಗಳನ್ನು ಮುರಿದಿದೆ ಎಂದು ಅವರು ಆಘಾತ ಸಹ ವ್ಯಕ್ತಪಡಿಸಿದರು.

ಕೆಜಿಎಫ್ 2 ಯಶಸ್ಸಿನ ನಂತರ ಬಾಲಿವುಡ್ ಏನು ಮಾಡಬೇಕೆಂದು ಗೊಂದಲದಲ್ಲಿದೆ
ಸುದ್ದಿಮಾಧ್ಯಮವೊಂದಕ್ಕೆ ನೀಡಿದ ಹೊಸ ಸಂದರ್ಶನದಲ್ಲಿ, ವರ್ಮಾ ಅವರು "ಬಾಲಿವುಡ್ ನಲ್ಲಿ ಯಾರೂ ಇದನ್ನು (ಕೆಜಿಎಫ್ 2) ಇಷ್ಟಪಟ್ಟಿಲ್ಲ" ಎಂದು ಹಂಚಿಕೊಂಡಿದ್ದಾರೆ ಮತ್ತು ಹಿಂದಿ ಉದ್ಯಮವು ಅದರ ಭರ್ಜರಿ ಯಶಸ್ಸಿನ ನಂತರ ಏನು ಮಾಡಬೇಕೆಂದು ಗೊಂದಲದಲ್ಲಿದೆ ಎಂದು ವರ್ಮಾ ಅವರು ಹೇಳಿದರು. "ಬಾಲಿವುಡ್ ನ ದೊಡ್ಡ ನಿರ್ದೇಶಕರೊಬ್ಬರು ನನಗೆ ಹೇಳಿದರು, ರಾಮು, ನಾನು ಅದನ್ನು 5 ಬಾರಿ ನೋಡಲು ಪ್ರಯತ್ನಿಸಿದೆ ಆದರೆ ನಾನು ಅರ್ಧ ಗಂಟೆಗಿಂತಲೂ ಹೆಚ್ಚಿಗೆ ನೋಡಲು ಸಾಧ್ಯವಾಗುತ್ತಿಲ್ಲ. ನಂತರ ಅವರು ತಮ್ಮ ಮುಂದಿನ ಚಿತ್ರದ ಸ್ಕ್ರಿಪ್ಟ್ ನಲ್ಲಿ ಕೆಲಸ ಮಾಡಲು ಮರಳಿದರು.

ಇದನ್ನೂ ಓದಿ: Vijay Deverakonda: ಲೈಗರ್ ಸೋಲಿನ ಬಳಿಕ ನಿಂತೇ ಹೋಯ್ತು ಪುರಿ, ವಿಜಯ್ ಕಾಂಬಿನೇಷನ್ ಚಿತ್ರ ಜನ ಗಣ ಮನ!

ಒಂದು ದೃಶ್ಯದ ಬಗ್ಗೆ ವಾದಿಸುವಾಗ, ಅವರ ಸ್ಕ್ರಿಪ್ಟ್ ಬರಹಗಾರರು ತರ್ಕಿಸಿದರು, 'ಆದರೆ ಈ ರೀತಿಯ ದೃಶ್ಯವು ಕೆಜಿಎಫ್: ಚಾಪ್ಟರ್ 2, ಅಲ್ಲವೇ?'! ಹಾಲಿವುಡ್ ನಲ್ಲಿ ಒಂದು ಮಾತು ಇದೆ, 'ನೀವು ವಿಷಯದೊಂದಿಗೆ ವಾದಿಸಬಹುದು, ಆದರೆ ನೀವು ಯಶಸ್ಸಿನೊಂದಿಗೆ ವಾದಿಸಲು ಸಾಧ್ಯವಿಲ್ಲ'. ಆದ್ದರಿಂದ, ನೀವು ಅದನ್ನು ಇಷ್ಟಪಡುತ್ತೀರೋ ಇಲ್ಲವೋ, ಅದರ ಯಶಸ್ಸನ್ನು ನೀವು ನಿರ್ಲಕ್ಷಿಸಲು ಸಾಧ್ಯವಿಲ್ಲ" ಎಂದು ಹೇಳಿದರು.

ಯಶ್ ಅಭಿನಯದ ಚಿತ್ರ "ಭೂತ" ಅಂತ ಹೇಳಿದ್ಯಾಕೆ ನಿರ್ಮಾಪಕರು
ಯಶ್ ಅಭಿನಯದ ಚಿತ್ರವನ್ನು "ಭೂತ" ಎಂದು ಕರೆದಿರುವ ಚಿತ್ರ ನಿರ್ಮಾಪಕರು "ಬಾಲಿವುಡ್ ಮೇಲೆ ಇದು ಸುತ್ತುತ್ತಿದೆ" ಎಂದು ಹೇಳಿದ್ದಾರೆ. ವರ್ಮಾ ಅವರು ಕೆಜಿಎಫ್ 2 ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಮತ್ತು ಅದು 70 ರ ದಶಕದ ಅಮಿತಾಭ್ ಬಚ್ಚನ್ ಅವರ ಆಕ್ಷನ್ ಚಿತ್ರಗಳ ವಲಯದಲ್ಲಿದೆ ಎಂದು ಕಂಡುಕೊಂಡರು. "ನನಗೆ ಈ ಚಿತ್ರ ಇಷ್ಟವಾಗಲಿಲ್ಲ ಅಂತ ಹೇಳುತ್ತಿಲ್ಲ, ನಾನು ಇದನ್ನು ನೋಡಿ ಏನು ಹೇಳಬೇಕೋ ಅರ್ಥವಾಗುತ್ತಿಲ್ಲ. ನಾನು ನನ್ನ ಬಾಯಿಯನ್ನು ತೆರೆದುಕೊಂಡು ಇದನ್ನು ನೋಡುತ್ತಿದ್ದೆ'' ಎಂದು ವರ್ಮಾ ಹೇಳಿದರು.

ಇದನ್ನೂ ಓದಿ:  Real Star Uppi: ಬುದ್ದಿವಂತನ ಸಿನಿಮಾ ಎಲ್ಲಿವರೆಗೆ ಬಂತು? ಡೈರೆಕ್ಟರ್​ ಹೇಳಿದ್ದೇನು

ಕೆಜಿಎಫ್ 2 ಸಾರ್ವಕಾಲಿಕ ಅತಿದೊಡ್ಡ ಕನ್ನಡ ಚಿತ್ರ ಮಾತ್ರವಲ್ಲ, ಇದು 2022 ರ ಅತಿದೊಡ್ಡ ಭಾರತೀಯ ಚಿತ್ರವಾಗಿದೆ. ಈ ಚಿತ್ರವು ಏಪ್ರಿಲ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿತು. ಈ ಚಿತ್ರವು ವಿಶ್ವದಾದ್ಯಂತ 1100 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಗಳಿಸಿತು.
Published by:Ashwini Prabhu
First published: