• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • RRR: ಅಯ್ಯೋ.. ಸ್ಟಾರ್​ ನಟರ ಬಗ್ಗೆ ಹಿಂಗಾ ಮಾತಾಡೋದು? ಜೂ.NTR- ರಾಮ್​ಚರಣ್​ ಡೇಂಜರಸ್​ ಎಂದ RGV!

RRR: ಅಯ್ಯೋ.. ಸ್ಟಾರ್​ ನಟರ ಬಗ್ಗೆ ಹಿಂಗಾ ಮಾತಾಡೋದು? ಜೂ.NTR- ರಾಮ್​ಚರಣ್​ ಡೇಂಜರಸ್​ ಎಂದ RGV!

ರಾಮ್​ ಗೋಪಾಲ್​, ಜೂ.ಎನ್​ಟಿಆರ್​, ರಾಮ್​

ರಾಮ್​ ಗೋಪಾಲ್​, ಜೂ.ಎನ್​ಟಿಆರ್​, ರಾಮ್​

ಆದರೆ ಈಗ, ರಾಮ್ ಗೋಪಾಲ್ ವರ್ಮಾ ಸಾಮಾಜಿಕ ಮಾಧ್ಯಮವಾದ ಟ್ವಿಟರ್ ನಲ್ಲಿ ಈ ದಕ್ಷಿಣದ ಸೂಪರ್ ಸ್ಟಾರ್ ಗಳನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಏಕೆ ಎಂದು ಆಶ್ಚರ್ಯ ಪಡುತ್ತಿದ್ದೀರಾ? ಬನ್ನಿ ಹಾಗಾದರೆ ಇವರು ಏನೆಂದು ಹೇಳಿದ್ದಾರೆ ನೋಡೋಣ

 • Share this:

  ಇತ್ತೀಚೆಗೆ ದೇಶಾದ್ಯಂತ ಬಿಡುಗಡೆ ಕಂಡು ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ದುಡ್ಡು ಮಾಡುತ್ತಾ ಮುಂದೆ ಸಾಗಿರುವ ಎಸ್.ಎಸ್. ರಾಜಮೌಳಿ(SS Rajamouli) ನಿರ್ದೇಶನದ ‘ಆರ್‌ಆರ್‌ಆರ್’(RRR) ಚಿತ್ರದ ನಾಯಕ ನಟರ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ram Gopal Varma) ಅವರು ಕಾಮೆಂಟ್(Comment) ಮಾಡಿದ್ದಾರಂತೆ. ‘ಆರ್‌ಆರ್‌ಆರ್’ ಚಿತ್ರವು ವರ್ಷದ ಅತ್ಯಂತ ಲಾಭದಾಯಕ ಚಿತ್ರಗಳಲ್ಲಿ ಒಂದಾಗಿದೆ ಎಂದು ಹೇಳಬಹುದು. ಜೂನಿಯರ್ ಎನ್‌ಟಿಆರ್(Junior NTR) ಮತ್ತು ರಾಮ್ ಚರಣ್(Ram Charan) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಪ್ರಚಾರದ ಸಮಯದಲ್ಲಿ ದಕ್ಷಿಣದ ಸೂಪರ್ ಸ್ಟಾರ್(South Super Stars) ಗಳ ಮುದ್ದಾದ ಒಡನಾಟವನ್ನು ನಾವು ನೋಡಿದ್ದೇವೆ.


  ಒಬ್ಬರಿಗೊಬ್ಬರು ಕಚಗುಳಿ ಇಡುವುದರಿಂದ ಹಿಡಿದು ಚಿತ್ರದ ಪ್ರಚಾರದ ಸಮಯದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಅವರ ಮೋಜಿನ ಕ್ಷಣಗಳಿಗೆ ಸಾಕ್ಷಿಯಾಗುವುದನ್ನು ಅಭಿಮಾನಿಗಳು ದೃಶ್ಯ ಔತಣಗಳೆಂದು ಪರಿಗಣಿಸಿದರು ಎಂದು ಹೇಳಿದರೆ ತಪ್ಪಾಗುವುದಿಲ್ಲ.


  ಜೂ.ಎನ್​ಟಿಆರ್​-ರಾಮಚರಣ್​ ಬಗ್ಗೆ ಆರ್​ಜಿವಿ ಮಾತು!


  ಆದರೆ ಈಗ, ರಾಮ್ ಗೋಪಾಲ್ ವರ್ಮಾ ಸಾಮಾಜಿಕ ಮಾಧ್ಯಮವಾದ ಟ್ವಿಟರ್ ನಲ್ಲಿ ಈ ದಕ್ಷಿಣದ ಸೂಪರ್ ಸ್ಟಾರ್ ಗಳನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಏಕೆ ಎಂದು ಆಶ್ಚರ್ಯ ಪಡುತ್ತಿದ್ದೀರಾ? ಬನ್ನಿ ಹಾಗಾದರೆ ಇವರು ಏನೆಂದು ಹೇಳಿದ್ದಾರೆ ನೋಡೋಣ.


  ಆರ್​ಆರ್​ಆರ್​​ ನಾಯಕರ ಬಗ್ಗೆ ವರ್ಮಾ ಹೇಳಿದ್ದೇನು?


  ‘ಆರ್‌ಆರ್‌ಆರ್’ ಚಿತ್ರವು 2022 ರ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದ್ದು, ಈ ಚಿತ್ರವು 11 ದಿನಗಳಲ್ಲಿ 921.80 ಕೋಟಿ ರೂಪಾಯಿಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಇನ್ನೂ ಬಲವಾಗಿ ಸಾಗುತ್ತಿದೆ. ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರು ಈ ಚಿತ್ರದ ತಾರೆಗಳನ್ನು ತರಾಟೆಗೆ ತೆಗೆದು ಕೊಂಡರು ಮತ್ತು ಅವರನ್ನು ‘ಡೇಂಜರಸ್ 2.0’ ಎಂದು ಕರೆದಿದ್ದಾರೆ.  ಇದನ್ನೂ ಓದಿ: ಮದುವೆಯಾಗೋಕೆ ರೆಡಿಯಾಗ್ತಿದ್ದಾರೆ ಮಿಲ್ಕಿ ಬ್ಯೂಟಿ! ತಮನ್ನಾ ಮದುವೆ ಆಗುವ ವರನ್ಯಾರು? ನೀವೇ ನೋಡಿ


  ಹೀಗೇಕೆ ಹೇಳಿದರು ಇವರು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಆರ್‌ಜಿವಿ ಅವರ ಮುಂಬರುವ ಚಿತ್ರ, ಖತ್ರಾ (ಡೇಂಜರಸ್) ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಕೆಲವು ಥಿಯೇಟರ್ ದೈತ್ಯರು ಸಲಿಂಗಕಾಮಿ ಥೀಮ್ ಕಾರಣದಿಂದಾಗಿ ಚಿತ್ರವನ್ನು ಪ್ರದರ್ಶಿಸಲು ನಿರಾಕರಿಸುತ್ತಿದ್ದಾರೆ ಎಂದು ಚಲನಚಿತ್ರ ನಿರ್ಮಾಪಕರು ಹೇಳುತ್ತಾರೆ. ಇದೇ ಹಿನ್ನೆಲೆಯಲ್ಲಿ ರಾಮ್ ಗೋಪಾಲ್ ವರ್ಮಾ ಅವರು ‘ಆರ್‌ಆರ್‌ಆರ್’ ಪ್ರಚಾರದ ವೇಳೆ ರಾಜಮೌಳಿ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ಬ್ರೋಮನ್ಸ್ ಅನ್ನು 'ಡೆಂಜರಸ್ 2.0' ಎಂದು ಕರೆಯುವ ಮೂಲಕ ಟ್ರೋಲ್ ಮಾಡಿದ್ದಾರೆ. ಅವರು ಈ ಚಿತ್ರದ ತಾರೆಗಳ ಪ್ರಚಾರದ ಭರಾಟೆಯಿಂದ ಕೂಡಿದ ವೀಡಿಯೋ ಹಂಚಿ ಕೊಂಡಿದ್ದಾರೆ.


  ಖತ್ರಾ ಪ್ರದರ್ಶನ ನಿರಾಕರಣೆ!


  ಖತ್ರಾ (ಡೇಂಜರಸ್), ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಕ್ರೈಮ್ ಥ್ರಿಲ್ಲರ್ ಆಗಿದೆ. ಇದು ಅವರ ಮೊದಲ ಸಲಿಂಗಕಾಮಿ ಚಿತ್ರ ಎಂದು ಚಲನಚಿತ್ರ ನಿರ್ಮಾಪಕರು ಹೇಳಿದರು. ಏಪ್ರಿಲ್ 5 ರಂದು, ಆರ್‌ಜಿವಿ ತಮ್ಮ ಚಿತ್ರವನ್ನು ಪ್ರದರ್ಶಿಸಲು ಕೆಲವು ಚಿತ್ರಮಂದಿರದ ದೈತ್ಯರು ನಿರಾಕರಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಅವರ ಮೊದಲ ಟ್ವೀಟ್ ನಲ್ಲಿ "ನನ್ನ ಖತ್ರಾ (ಡೇಂಜರಸ್) ಚಿತ್ರವನ್ನು ಪ್ರದರ್ಶಿಸಲು ನಿರಾಕರಿಸುತ್ತಿದ್ದಾರೆ, ಏಕೆಂದರೆ ಅದರ ಕಥೆ ಸಲಿಂಗಕಾಮಿಗಳದ್ದಾಗಿದೆ ಮತ್ತು ಇದು ಸುಪ್ರೀಂ ಕೋರ್ಟ್ ಸೆಕ್ಷನ್ 377 ಅನ್ನು ರದ್ದುಗೊಳಿಸಿದ ನಂತರ ಮತ್ತು ಸೆನ್ಸಾರ್ ಮಂಡಳಿ ಈಗಾಗಲೇ ಅಂಗೀಕರಿಸಿದ ನಂತರ ಹೀಗೆ ಮಾಡುತ್ತಿದ್ದಾರೆ. ಇದು ಎಲ್‌ಜಿಬಿಟಿ ಸಮುದಾಯದ ವಿರುದ್ಧ ಚಿತ್ರ ಮಂದಿರಗಳ ಆಡಳಿತ ಮಂಡಳಿಗಳ ಸ್ಪಷ್ಟ ವಿರೋಧಿ ನಿಲುವಾಗಿದೆ” ಎಂದು ಬರೆದಿದ್ದಾರೆ.


  ಇದನ್ನೂ ಓದಿ: RRR Success ಮೀಟ್​ನಲ್ಲಿ ರಾಖಿ ಸಾವಂತ್​ ಫುಲ್​ ಮಿಂಚಿಂಗ್​! ಈಕೆ ಮಾತಾಡಿಸಿದ್ರೂ ಕ್ಯಾರೇ ಅನ್ನದ ಕರಣ್​ ಜೋಹರ್​


  ಎರಡನೇ ಟ್ವೀಟ್ ನಲ್ಲಿ "ನಾನು ಎಲ್‌ಜಿಬಿಟಿ ಸಮುದಾಯವನ್ನು ಮಾತ್ರವಲ್ಲದೆ, ಪ್ರತಿಯೊಬ್ಬರೂ ಈ ಚಿತ್ರ ಮಂದಿರಗಳ ಆಡಳಿತದವರ ಎಲ್‌ಜಿಬಿಟಿ ವಿರೋಧಿ ನಿಲುವಿಗೆ ವಿರುದ್ಧವಾಗಿ ನಿಲ್ಲುವಂತೆ ವಿನಂತಿಸುತ್ತೇನೆ. ಇದು ಮಾನವ ಹಕ್ಕುಗಳಿಗೆ ಮಾಡಿದ ಅಪಮಾನವಾಗಿದೆ" ಎಂದು ಹೇಳಿದ್ದಾರೆ. ಖತ್ರಾ (ಡೇಂಜರಸ್) ಚಿತ್ರವು ಏಪ್ರಿಲ್ 8 ರಂದು ಬಿಡುಗಡೆಯಾಗಲಿದೆ.

  Published by:ವಾಸುದೇವ್ ಎಂ
  First published: