ರಾಮ್‍ಗೋಪಾಲ್ ವರ್ಮಾ ನಿರ್ದೇಶನದ ರಂಗೀಲಾ ಸಿನಿಮಾ, ಸಮಕಾಲೀನ ಭಾರತೀಯ ಸಿನಿಮಾಗಳಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸ್ಪಡುತ್ತದೆ. ಈ ಸಿನಿಮಾ ಬಿಡುಗಡೆಗೊಂಡು ಎರಡು ದಶಕಗಳು ಕಳೆದಿವೆ. 1995ರಲ್ಲಿ ಈ ಸಿನೆಮಾದ ಚಿತ್ರಕಥೆ ರಚಿಸಲು ತನಗೆ ಸ್ಫೂರ್ತಿ ಯಾರೆಂಬುದನ್ನು ಇದೀಗ ರಾಮ್‍ಗೋಪಾಲ್ ವರ್ಮಾ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅವರು ಮಾಡಿರುವ ಸರಣಿ ಟ್ವೀಟ್‍ಗಳಲ್ಲಿ, ತನ್ನ ಕಾಲೇಜು ದಿನಗಳ ಒನ್ ವೇ ಪ್ರೀತಿ ಮತ್ತು ಅದು ತನಗೆ ರಂಗೀಲಾದ ಕಥೆ ಬರೆಯಲು ಪ್ರೇರಣೆ ನೀಡಿದ್ದರ ಬಗ್ಗೆ ಬರೆದುಕೊಂಡಿದ್ದಾರೆ. ರಂಗೀಲಾ ಸಿನಿಮಾದಲ್ಲಿ ಊರ್ಮಿಳಾ ಮಾಂತೋಡ್ಕರ್, ಆಮೀರ್ ಖಾನ್ ಮತ್ತು ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನೀಲಿ ಬಣ್ಣ ಈಜುಡುಗೆಯಲ್ಲಿರುವ ಮಹಿಳೆಯೊಬ್ಬರ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ಆಕೆ ತನ್ನ ಮೊದಲ ಪ್ರೀತಿ ಎಂದು ಹೇಳಿಕೊಂಡಿದ್ದಾರೆ.
The woman in blue swim suit is SATYA ..She was my 1st ever Love in my college days at Siddhardha engineering college Vijayawada.. @polavarapusatya is currently in the US practising Maternal Fetal medicine specialist and OB Gyn pic.twitter.com/UjsnhEGhwY
— Ram Gopal Varma (@RGVzoomin) August 25, 2021
ತಮ್ಮ ಇನ್ನೊಂದು ಟ್ವೀಟ್‍ನಲ್ಲಿ ಅವರು, “ ಕೆಲವು ಲಾಜಿಕಲ್ ಕಾರಣಗಳಿಂದಾಗಿ ಆ ದಿನಗಳಲ್ಲಿ ಮೆಡಿಕಲ್ ಕಾಲೇಜು ಮತ್ತು ಎಂಜಿನಿಯರಿಂಗ್ ಕಾಲೇಜು ಒಂದೇ ಆವರಣದಲ್ಲಿ ಇರುತ್ತಿದ್ದವು. ಆ ಕಾರಣದಿಂದಾಗಿ ಪೊಲವರಪುಸತ್ಯ ಜೊತೆಗಿನ ನನ್ನ ಒನ್ ವೇ ಲವ್ ಸಾಧ್ಯವಾಯಿತು. ಮತ್ತೊಬ್ಬ ಶ್ರೀಮಂತ ಹುಡುಗನ ಕಾರಣದಿಂದ ಆಕೆಗೆ ನನ್ನ ಕಡೆಗೆ ಲಕ್ಷ್ಯವಿರಲಿಲ್ಲ ಎಂದು ನನಗಿನಿಸಿತ್ತು. ಅದರಿಂದಾಗಿಯೇ ನಾನು ರಂಗೀಲಾ ಕಥೆ ಬರೆದಿದ್ದು” ಎಂದು ತನ್ನ ಕಾಲೇಜು ದಿನಗಳ ಸಂಗತಿ ರಂಗೀಲಾದಂತಹ ಸೂಪರ್ ಹಿಟ್ ಸಿನಿಮಾ ಹುಟ್ಟಿಕೊಳ್ಳಲು ಕಾರಣವಾಯಿತು ಎಂಬುದನ್ನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Mysuru Gang Rape: ಮೈಸೂರು ಅತ್ಯಾಚಾರ ಪ್ರಕರಣ: ಆಕ್ರೋಶ ವ್ಯಕ್ತಪಡಿಸಿದ ನಟಿಯರಾದ ರಮ್ಯಾ-ಶ್ರುತಿ
ತನ್ನ ಇನ್ನೊಂದು ಜನಪ್ರಿಯ ಚಿತ್ರ ‘ಸತ್ಯಾ’ ಹೆಸರನ್ನು ಆಕೆಯ ನೆನಪಿನಲ್ಲೇ ಇಟ್ಟಿದ್ದು ಎಂದು ರಾಮ್‍ಗೋಪಾಲ್ ವರ್ಮಾ ತಿಳಿಸಿದ್ದಾರೆ. “ನನ್ನ ಮೈಲಿಗಲ್ಲು ಚಿತ್ರ ಸತ್ಯಾ ಮತ್ತು ಕ್ಷಣ ಕ್ಷಣಂನಲ್ಲಿ ಶ್ರೀದೇವಿಯ ಪಾತ್ರಕ್ಕೆ @ಪೊಲವರಪುಸತ್ಯ ಹೆಸರನ್ನೇ ನೀಡಿದ್ದೆ. ಇವು ಆಕೆ ನನಗೆ ಮಿಯಾಮಿ ಬೀಚ್‍ನಿಂದ ಕಳಿಸಿರುವ ಆಕೆಯ ಈಗಿನ ಫೋಟೋಗಳು” ಎಂದು ತಮ್ಮ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
ರಾಮ್‍ಗೋಪಾಲ್ ವರ್ಮಾ, 90ರ ದಶಕದಲ್ಲಿ ಮತ್ತು 2000ರ ಆರಂಭದ ದಿನಗಳಲ್ಲಿ ಅಪರಾಧ, ರಾಜಕೀಯ ಮತ್ತು ಭಯಾನಕ ವಿಷಯಗಳ ಕುರಿತು ಪ್ರಾಯೋಗಿಕ ಸಿನಿಮಾಗಳನ್ನು ನಿರ್ದೇಶನ ಮಾಡುವ ಮೂಲಕ ಬಾಲಿವುಡ್‍ನಲ್ಲಿ ಹೊಸ ಅಲೆಯೊಂದನ್ನು ಸೃಷ್ಟಿಸಿದ್ದರು. ಅವರ ಇತ್ತೀಚಿನ ಚಿತ್ರಗಳು ಬಾಕ್ಸ್ ಆಫೀಸ್‍ನಲ್ಲಿ ಯಶಸ್ವಿಯಾಗಿಲ್ಲ. ಆದರೂ, ಇಂದಿಗೂ ರಾಮ್‍ಗೋಪಾಲ್ ವರ್ಮಾ ಒಬ್ಬ ಅದ್ಭುತ ಸಿನಿಮಾ ನಿರ್ದೇಶಕ ಎಂದು ಕರೆಯಲ್ಪಡುತ್ತಾರೆ.
ಇದನ್ನೂ ಓದಿ: Happy Birthday Vihaan: ಮತ್ತೊಂದು ಸಿನಿಮಾದಲ್ಲಿ ಗಣೇಶ್ ಮಗ ವಿಹಾನ್: ರಿಲೀಸ್ ಆಯ್ತು ಪೋಸ್ಟರ್..!
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ