ವಯಸ್ಕರಿಗೆ ಮಾತ್ರ : ಇದು ಡಿ ಕಂಪನಿಯ ಅಸಲಿ ಕಥೆ

news18
Updated:July 26, 2018, 9:01 PM IST
ವಯಸ್ಕರಿಗೆ ಮಾತ್ರ : ಇದು ಡಿ ಕಂಪನಿಯ ಅಸಲಿ ಕಥೆ
news18
Updated: July 26, 2018, 9:01 PM IST
-ನ್ಯೂಸ್ 18 ಕನ್ನಡ

ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಆರ್​ಜಿವಿ ತಮ್ಮ ಹಳೆಯ ಖದರ್​ನೊಂದಿಗೆ ಮರಳುವ ಸೂಚನೆ ನೀಡಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್​ನಲ್ಲಿ ಭೂಗತ ಜಗತ್ತಿನ ಅಧ್ಯಯನಗಳನ್ನು ತೆರೆ ಮೇಲೆ ಮೂಡಿಸುವ ನಿರ್ದೇಶಕರಲ್ಲಿ ರಾಮ್ ಗೋಪಾಲ್ ವರ್ಮಾ ಮುಂಚೂಣಿಯಲ್ಲಿದ್ದರು. ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ದೇಶಿಸಿ ಸೂಪರ್ ಡೂಪರ್ ಹಿಟ್​ ಮಾಡುತ್ತಿದ್ದ ವರ್ಮಾಜಿ ಕಳೆದ ಕೆಲ ವರ್ಷಗಳಿಂದ ಸತತ ಸೋಲಿನ ಸುಳಿಯಲ್ಲಿ ಸಿಲುಕಿದ್ದರು.

ಇದರಿಂದ ಹೊರ ಬರಲು ಕನ್ನಡದಲ್ಲಿ ಅಂಡರ್​ವಲ್ಡ್​​ ಕಥೆಯನ್ನು ಕೈಗೆತ್ತಿ ಕೊಂಡಿದ್ದರು. 'ರೈ' ಎಂಬ ಸಿನಿಮಾ ಮೂಲಕ ಮುತ್ತಪ್ಪ ರೈಯ ರಕ್ತ ಚರಿತ್ರೆಯನ್ನು ತಿಳಿಸಲು ವರ್ಮಾ ಮುಂದಾಗಿದ್ದರು. ಆದರೆ ಆಮೇಲೆ ಏನಾಯ್ತೊ ಆ ಚಿತ್ರದ ಕುರಿತು ಸದ್ದು ಸುದ್ದಿಗಳೇ ಇಲ್ಲದಂತಾಯಿತು. ಇದರ ನಡುವೆ ಟ್ರಾಕ್ ಬಿಟ್ಟು ಹೋದ ವರ್ಮಾ ಸನ್ನಿ ಲಿಯೋನ್​ಗೆ ಪರ್ಯಾಯವಾಗಿ ಮತ್ತೊಬ್ಬಳು ಪೋರ್ನ್​ ನಟಿಯನ್ನು ಸಿನಿರಂಗಕ್ಕೆ ಪರಿಚಯಿಸುತ್ತೇನೆ ಎಂದು ತೊಡೆ ತಟ್ಟಿದ್ದರು. ಆದರೆ ಬಳಿಕ ಇದು ವೆಬ್ ಸಿರೀಸ್ ರೂಪ ಪಡೆದು ಬಂದ ಪುಟ್ಟ ಹೋದ ಪುಟ್ಟ ಎಂಬ ಲೀಸ್ಟ್​ಗೆ ಸೇರಿತ್ತು.

ಕೆಲ ವರ್ಷಗಳಿಂದ ದಕ್ಷಿಣ ಭಾರತದ ಚಿತ್ರಗಳಲ್ಲೇ ತೊಡಗಿಸಿಕೊಂಡಿದ್ದ ರಾಮ್ ಗೋಪಾಲ್ ಮತ್ತೆ 'ಬಾಂಬೆ' ಎಂಬ ಮಾಯಾ ಲೋಕಕ್ಕೆ ಮರಳಿದ್ದಾರೆ. 2002ರಲ್ಲಿ ಬಾಲಿವುಡ್ ಬಾಕ್ಸಾಫೀಸ್​ ಅನ್ನು ಲೂಟಿ ಮಾಡಿದ್ದ 'ಕಂಪನಿ' ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ್ದರು. ಈ ಚಿತ್ರದ ಮೂಲಕ ತೆರೆಮರೆಯಲ್ಲಿದ್ದ ಭೂಗತ ಜಗತ್ತಿನ ಕಹಾನಿಯನ್ನು ಬೆಳ್ಳಿಪರದೆಯಲ್ಲಿ ವರ್ಮಾ ಮೂಡಿಸಿದ್ದರು. 'ಕಂಪನಿ'ಯಲ್ಲಿ ಬಾಂಬೆಯ ಗ್ಯಾಂಗ್​ಸ್ಟರ್​ಗಳ ಕಥೆ ಹೇಳಿದ್ದ ಆರ್​ಜಿವಿ ಅಂದು ಹೇಳಲು ಬಿಟ್ಟಿದ್ದ ಅಸಲಿ ಕಹಾನಿ ತಿಳಿಸಲು ಹೊರಟಿದ್ದಾರೆ.ಅದೂ ಸಹ ವೆಬ್​ ಸಿರೀಸ್ ಮೂಲಕ ಎಂಬುದು ವಿಶೇಷ.

'ಡಿ ಕಂಪನಿ' ಎಂದು ಟೈಟಲ್ ಇಟ್ಟಿರುವ ಈ ವೆಬ್ ಸಿರೀಸ್​ನಲ್ಲಿ ಭೂಗತ ಜಗತ್ತಿನ ಮದಗಜಗಳ ಕಾಳಗ ಮತ್ತು ಮದನಾರಿಗಳ ವಿಷಯವನ್ನು ಅವರು ತಿಳಿಸಲಿದ್ದಾರೆ. ಇದರ ಮೊದಲ ಎಪಿಸೋಡ್​ನ ಟ್ರೇಲರ್ ಬಿಡುಗಡೆಯಾಗಿದ್ದು, 'ಗನ್ ಅಂಡ್​ ಥಾಯ್ಸ್' ಎಂಬ ಶೀರ್ಷಿಕೆ ನೀಡಲಾಗಿದೆ. ಇಲ್ಲಿ ಲೋಕಲ್ ರೌಡಿಗಳು ಮತ್ತು ಅಂಡರ್​ವರ್ಲ್ಡ್​ ಸಂಬಂಧವನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಈ ವೆಬ್​ ಸಿರೀಸ್​ನಲ್ಲಿ ಭೂಗತ ಜಗತ್ತಿನ ಅನಾಭಿಷಕ್ತ ದೊರೆಗಳಾದ ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್ ಅಸಲಿ ಕಹಾನಿಗಳು ಮೂಡಿ ಬರಲಿದೆ. 80ರಲ್ಲಿ ದಾವೂದ್ ಎಂಬ ಪುಡಿ ರೌಡಿ ಹೇಗಿದ್ದ ಅಂದಿನ ಡಾನ್ ಯಾರಾಗಿದ್ದರು ಎಂಬುದನ್ನು ಇಲ್ಲಿ ವರ್ಮಾ ತಿಳಿಸಲಿದ್ದಾರೆ. ಹಾಗೆಯೇ ಬಾಂಬೆ ಬ್ಲಾಸ್ಟ್​ನಿಂದ ಪ್ರಾರಂಭವಾಗುವ ಗ್ಯಾಂಗ್ ವಾರ್​ಗಳು ಹೇಗೆ ಮುಂಬಯಿ ನಗರವನ್ನು ಆಳುತ್ತಿದೆ ಎಂಬುದು ಈ ಎಪಿಸೋಡ್​ ಮೂಲಕ ತಿಳಿಯಲಿದೆ. ಅಂಡರ್​ವರ್ಲ್ಡ್​​ನ ಭಯಾನಕ ಕದನಗಳನ್ನು 5 ಸೀಸನ್​ಗಳಲ್ಲಿ ರಾಮ್​ ಗೋಪಾಲ್ ವರ್ಮಾ ತಿಳಿಸಲಿದ್ದಾರೆ. ಪ್ರತಿ ಸೀಸನ್​ನಲ್ಲೂ 10 ಎಪಿಸೋಡ್​ಗಳಿರಲಿದ್ದು, ಒಂದೊಂದು ಕಥೆಯಲ್ಲೂ ಭೂಗತ ನಂಟಿನ ವ್ಯಕ್ತಿಗಳ ಪರಿಚಯವಾಗಲಿದೆ.
Loading...

ರಾಮ್ ಗೋಪಾಲ್ ವರ್ಮಾ ಪ್ರಕಾರ ಅಂಡರ್​ವರ್ಲ್ಡ್ ವಾರ್​ಗಳು​ ಕೂಡ ಹೆಣ್ಣು,ಹೊನ್ನು ಮತ್ತು ಮಣ್ಣಿಗಾಗಿ ನಡೆಯುತ್ತಿದ್ದು, 'ಡಿ ಕಂಪನಿ ವೆಬ್' ಸಿರೀಸ್ ಮೂಲಕ ಭೂಗತ ಜಗತ್ತಿನ ಈ ಕಹಿ ಸತ್ಯವು ಬಹಿರಂಗವಾಗಲಿದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಸಂಜಯ್ ದತ್ ಜೀವನ ಚರಿತ್ರೆಯನ್ನು ಮತ್ತೊಮ್ಮೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದ ವರ್ಮಾ ಈಗ ಏಕಧಮ್ ಖಡಕ್ ಕಹಾನಿಯೊಂದಿಗೆ ಮರಳಿರುವುದು ಹಳೆಯ ಚಾರ್ಮ್​ಗೆ ವಾಪಸಾಗುತ್ತಿರುವ ಸೂಚನೆ ಎನ್ನಲಾಗುತ್ತಿದೆ.

ರಾಮ್ ಗೋಪಾಲ್ ವರ್ಮಾ ಕಳೆದ ವರ್ಷ 'ಗಾಡ್​, ಸೆಕ್ಸ್​ ಅಂಡ್​ ಟ್ರೂತ್' ಎಂಬ ಹಸಿಬಿಸಿ ದೃಶ್ಯಗಳ ವೆಬ್ ಸಿರೀಸ್ ನಿರ್ದೇಶಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಇದೀಗ ಭೂಗತ ಜಗತ್ತಿನ ಸಬ್ಜೆಕ್ಟ್​ನೊಂದಿಗೆ ಮರಳಿರುವುದು ಹೊಸ ವಿವಾದವನ್ನು ಸೃಷ್ಟಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...