Video: ನಟಿ ಜೊತೆ ನೃತ್ಯ ಮಾಡಿ ಕಾಲಿಗೆ ಬಿದ್ದ ರಾಮ್ ಗೋಪಾಲ್ ವರ್ಮಾ!

ವರ್ಮಾ ಇನಾಯಾರ ಹುಟ್ಟುಹಬ್ಬದಂದು ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿರುವಂತೆ ವಿಡಿಯೋದಲ್ಲಿ ಕಾಣುತ್ತದೆ. ಈ ಜೋಡಿಯು ಪರ್ಫಾರ್ಮೆನ್ಸ್ ಅನ್ನು ಪೂರ್ಣವಾಗಿ ಎಂಜಾಯ್ ಮಾಡುತ್ತಿರುವುದು ಮತ್ತು ಹಾಡಿನ ಬೀಟ್ಸ್‌ಗೆ ಯಾವುದೇ ಮುಜುಗರವಿಲ್ಲದೇ ನೃತ್ಯ ಮಾಡಿರುವುದು ಕಾಣುತ್ತಿದೆ.

Ram Gopal Varma - Inaya Sultana

Ram Gopal Varma - Inaya Sultana

  • Share this:

ಸದಾ ವಿವಾದಾತ್ಮಕ ಟ್ವೀಟ್‍ಗಳ ಮೂಲಕ ಸುದ್ದಿಯಲ್ಲಿರುವವರು ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಇವರು ಇತ್ತೀಚೆಗೆ ನಟಿ ಇನಾಯಾ ಸುಲ್ತಾನರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಸ್ವತಃ ರಾಮ್ ಗೋಪಾಲ್ ವರ್ಮಾ ಹಂಚಿಕೊಂಡಿದ್ದು, ಅದರಲ್ಲಿ ಅವರು ನಟಿಯೊಂದಿಗೆ ನೃತ್ಯ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಆದರೂ, ಈ ಕುರಿತು ಟ್ವೀಟ್ ಮಾಡಿದ ರಾಮ್ ಗೋಪಾಲ್ ವರ್ಮಾ ವಿಡಿಯೋದಲ್ಲಿ ಅವರೇ ಇರುವುದು ಸ್ಪಷ್ಟವಾಗಿ ಗೋಚರವಾಗುತ್ತಿದ್ದರೂ ನೃತ್ಯ ಮಾಡುವ ವ್ಯಕ್ತಿ ನಾನಲ್ಲ ಮತ್ತು ಕೆಂಪು ಉಡುಪಿನಲ್ಲಿರುವ ಹುಡುಗಿ ಇನಾಯಾ ಅಲ್ಲ ಎಂದು ಹೇಳುವ ಮೂಲಕ ಸಣ್ಣ ಚಮಕ್ ಕೊಟ್ಟಿದ್ದಾರೆ.


ವಿಡಿಯೋ ಶೇರ್ ಮಾಡಿ ''ಈ ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ ಮತ್ತು ಕೆಂಪು ಬಣ್ಣದ ಹುಡುಗಿ @inaya_sultana ಅಲ್ಲ ಎಂದು ಮತ್ತೊಮ್ಮೆ ನಾನು ಸ್ಪಷ್ಟಪಡಿಸಲು ಬಯಸುತ್ತೇನೆ ಮತ್ತು ಇವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಎಂದು ಪ್ರತಿಜ್ಞೆ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.


ವರ್ಮಾ ಇನಾಯಾರ ಹುಟ್ಟುಹಬ್ಬದಂದು ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿರುವಂತೆ ವಿಡಿಯೋದಲ್ಲಿ ಕಾಣುತ್ತದೆ. ಈ ಜೋಡಿಯು ಪರ್ಫಾರ್ಮೆನ್ಸ್ ಅನ್ನು ಪೂರ್ಣವಾಗಿ ಎಂಜಾಯ್ ಮಾಡುತ್ತಿರುವುದು ಮತ್ತು ಹಾಡಿನ ಬೀಟ್ಸ್‌ಗೆ ಯಾವುದೇ ಮುಜುಗರವಿಲ್ಲದೇ ನೃತ್ಯ ಮಾಡಿರುವುದು ಕಾಣುತ್ತಿದೆ. ಅಲ್ಲದೇ ಇದರ ಮಧ್ಯೆ ನಟಿಯ ಕಾಲಿಗೆ ಬಿದ್ದಿರುವುದೂ ತಿಳಿದು ಬರುತ್ತಿದೆ.


ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದು ಮತ್ತು ಕೆಲವರು ಅವರ ನೃತ್ಯವನ್ನು ಹೊಗಳಿದ್ದಾರೆ. ಇತರರು ಅವರ ನಡವಳಿಕೆ ಎಲ್ಲೆ ಮೀರಿದೆ ಎಂದು ಟೀಕಿಸಿದ್ದಾರೆ. ಇದು ಸೂಕ್ತವಾದ ಅಭಿವ್ಯಕ್ತಿಯಲ್ಲ ಎಂದು ಹೇಳಿದ್ದಾರೆ.


ನಟಿ ಇನಾಯಾ ಸುಲ್ತಾನಾ ಸಹ ಆರ್‌ಜಿವಿ ಜೊತೆ ಇರುವ ತನ್ನ ಹುಟ್ಟುಹಬ್ಬದ ಪಾರ್ಟಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ನನ್ನ ಜೀವನದ ಉತ್ತಮ ಮತ್ತು ನಂಬಲು ಅಸಾಧ್ಯವಾದ, ಮರೆಯಲಾಗದ ಸಂದರ್ಭ. ನನ್ನ ಹುಟ್ಟುಹಬ್ಬ ಎಂಬ ಬರಹದಡಿ ಟ್ವಿಟ್ಟರ್‌ನಲ್ಲಿ ಫೋಟೋ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.


ರಾಮ್ ಗೋಪಾಲ್ ವರ್ಮಾ ಇತ್ತೀಚೆಗೆ ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ 'ಸ್ಪಾರ್ಕ್ ಒಟಿಟಿ' ಪ್ರಾರಂಭಿಸಿದರು ಮತ್ತು ಅವರ ಡಿಜಿಟಲ್ ಚಲನಚಿತ್ರ ಡಿ ಕಂಪನಿಯನ್ನು ಮೇ 15, 2021 ರಂದು ಬಿಡುಗಡೆ ಮಾಡಿದರು. ಈ ಚಿತ್ರವು ವಿವಾದಾತ್ಮಕ ದರೋಡೆಕೋರ ದಾವೂದ್ ಇಬ್ರಾಹಿಂ ಮತ್ತು ಆತನ ಆಪ್ತ ಛೋಟಾ ರಾಜನ್‌ರ 80ರ ದಶಕದ ಆಳ್ವಿಕೆಯಲ್ಲಿ ಮುಂಬೈ ನಗರ ಎಂದು ಬಿಂಬಿಸಿದ್ದಾರೆ.





ಕೆಲವು ದಿನಗಳ ಹಿಂದೆಯಷ್ಟೇ ಅಂದರೆ ಸ್ನೇಹಿತರ ದಿನಾಚರಣೆಯ ದಿನದಂದು ಮಾಡಿರುವ ಟ್ವೀಟ್ ಕೂಡ ವೈರಲ್ ಆಗಿತ್ತು. ಹೌದು ಅವರು, ನೀವು ನಿಮ್ಮ ಸ್ನೇಹಿತರಿಗೆ ಸಹಾಯ ಮಾಡಿದರೆ, ಮುಂದಿನ ಬಾರಿ ಅವರು ನಿಮ್ಮ ಬಳಿಯೇ ಬರುತ್ತಾರೆ. ಹ್ಯಾಪಿ ಫ್ರೆಂಡ್‍ಶಿಪ್ ಡೇ ಎಂದು ಟ್ವೀಟ್ ಮಾಡಿದ್ದರು.

First published: