ಸದಾ ಒಂದಲ್ಲ ಒಂದು ವಿವಾದದಿಂದ ಸುದ್ದಿಯಲ್ಲಿರುವಂತಹ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಳೆದ ಕೆಲವು ದಿನಗಳಿಂದ ಒಂದು ಡ್ಯಾನ್ಸ್ ವಿಡಿಯೋದಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರಿಂದ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದ್ದಾರೆ. ಅವರು ಇತ್ತೀಚೆಗೆ ಚಲನಚಿತ್ರ ನಟಿ ಇನಾಯಾ ಸುಲ್ತಾನಾರೊಂದಿಗೆ 'ರಂಗೀಲಾ' ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇವರಿಬ್ಬರ ವಿಡಿಯೋವನ್ನು ನೋಡಿದ ನೆಟ್ಟಿಗರು ಆರ್‌ಜಿವಿ ಅನುಚಿತ ನೃತ್ಯದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗಷ್ಟೆ ಆರ್‌ಜಿವಿ ಈ ವಿಡಿಯೋದಲ್ಲಿ ಕಾಣುತ್ತಿರುವಂತಹ ವ್ಯಕ್ತಿ ನಾನಲ್ಲ ಮತ್ತು ಕೆಂಪು ಉಡುಪನ್ನು ಧರಿಸಿರುವ ಹುಡುಗಿ ಇನಾಯಾ ಅಲ್ಲ ಎಂದು ನಾನು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ ಮತ್ತು ನಾನು ಇದನ್ನು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು.
ತಾವು ಹಂಚಿಕೊಂಡ ಎರಡನೆಯ ಪೋಸ್ಟ್‌ನಲ್ಲಿ ವರ್ಮಾ ನಟಿ ಇನಾಯಾ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದನ್ನ ಹಂಚಿಕೊಂಡಿದ್ದಾರೆ. ನಟಿಯ ವೆರಿಫೈ ಆಗದ ಖಾತೆಗೆ ಇದನ್ನು ಟ್ಯಾಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅದಕ್ಕೆ "ವೈರಲ್ ವೀಡಿಯೋದಲ್ಲಿ ಸುಂದರವಾದ ನಟಿ ಇನಾಯಾ ಜೊತೆಗೆ ನನ್ನ ಡ್ಯಾನ್ಸ್ " ಎಂದು ಶೀರ್ಷಿಕೆಯನ್ನು ಬರೆದಿದ್ದಾರೆ.
ನಟಿ ಇನಾಯಾ ಸಹ ತಮ್ಮ ದೃಢೀಕರಿಸದ ಟ್ವಿಟ್ಟರ್ ಖಾತೆಯಲ್ಲಿ ಇದೀಗ ಎರಡನೇ ವಿಡಿಯೋ ಹಂಚಿಕೊಂಡಿದ್ದು, ಅದೇ ಡ್ಯಾನ್ಸ್ ಅನ್ನು ಇನ್ನೊಂದು ರೀತಿಯಲ್ಲಿ ಸೆರೆಹಿಡಿಯಲಾಗಿದೆ. 50 ಸೆಕೆಂಡುಗಳ ವಿಡಿಯೋ ತುಣುಕಿನಲ್ಲಿ ಆರ್‌ಜಿವಿ ಇರುವಿಕೆಯನ್ನು ದೃಢೀಕರಿಸಿ, ಶೀರ್ಷಿಕೆಯಲ್ಲಿ "ನಾನು ಮತ್ತು ರಾಮ್ ಗೋಪಾಲ್ ವರ್ಮಾ ಇರುವಂತಹ ಈ ವಿಡಿಯೋವನ್ನು ನಾನು ಅಧಿಕೃತವಾಗಿ ಹಂಚಿಕೊಳ್ಳುತ್ತಿದ್ದೇನೆ" ಎಂದು ಬರೆದಿದ್ದಾರೆ.
ಇದನ್ನೂ ಓದಿ: Mysuru Gang Rape: ಮೈಸೂರು ಅತ್ಯಾಚಾರ ಪ್ರಕರಣ: ಆಕ್ರೋಶ ವ್ಯಕ್ತಪಡಿಸಿದ ನಟಿಯರಾದ ರಮ್ಯಾ-ಶ್ರುತಿ
ಈ ದೃಢೀಕರಿಸದ ಖಾತೆಯ ಪುಟದಲ್ಲಿ ಇನಾಯಾ ತಮ್ಮ ಹುಟ್ಟುಹಬ್ಬದಂದು ಏರ್ಪಡಿಸಿದ ಒಂದು ಪಾರ್ಟಿಯಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ಈಗಾಗಲೇ 14,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದು, 300 ಜನರು ಇದನ್ನು ಇಷ್ಟ ಪಟ್ಟಿದ್ದು, ಇದು ಸಹ ವೈರಲ್ ಆಗಿದೆ.
ರಾಮ್ ಗೋಪಾಲ್ ವರ್ಮಾ ರಂಗೀಲಾ, ಸತ್ಯ ಮತ್ತು ಕಂಪನಿಯಂತಹ ಅನೇಕ ಹಿಟ್ ಚಲನಚಿತ್ರಗಳನ್ನು ಬಾಲಿವುಡ್‌ಗೆ ನೀಡಿದ್ದಾರೆ. ಇತ್ತೀಚೆಗೆ ತಮ್ಮ 'ರಂಗೀಲಾ' ಚಿತ್ರದ ಕಥೆಯನ್ನು ಬರೆಯಲು ಮತ್ತು ಚಿತ್ರವನ್ನು ನಿರ್ದೇಶಿಸಲು ಅವರಿಗಿದ್ದ ಸ್ಫೂರ್ತಿಯನ್ನು ಬಹಿರಂಗಪಡಿಸಿದ್ದಾರೆ. ಅವರು ಕಾಲೇಜಿನಲ್ಲಿ ಓದುತ್ತಿರುವಾಗ ಮೊದಲ ಪ್ರೀತಿ ಈ ಚಿತ್ರದ ಕಥೆಯನ್ನು ಬರೆಯಲು ಪ್ರೇರೇಪಿಸಿತು ಎಂದು ಹೇಳಿಕೊಂಡಿದ್ದಾರೆ.
"ಇನ್ನೊಬ್ಬ ಶ್ರೀಮಂತ ಸುಂದರ ವ್ಯಕ್ತಿಯಿಂದಾಗಿ ಅವಳು ನನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ನನಗೆ ಅರ್ಥವಾದ ನಂತರ ನಾನು ರಂಗೀಲಾ ಚಿತ್ರದ ಕಥೆಯನ್ನು ಬರೆದಿದ್ದೇನೆ" ಎಂದು ವರ್ಮಾ ತಮ್ಮ ಪ್ರೇಮಕಥೆಯ ಬಗ್ಗೆ ಮಾತನಾಡುತ್ತಾ ಇದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Happy Birthday Vihaan: ಮತ್ತೊಂದು ಸಿನಿಮಾದಲ್ಲಿ ಗಣೇಶ್ ಮಗ ವಿಹಾನ್: ರಿಲೀಸ್ ಆಯ್ತು ಪೋಸ್ಟರ್..!
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ