'ವಿನಯ ವಿಧೇಯ ರಾಮ'ನಾಗಲು ರಾಮ್​ ಚರಣ್​ ಪಟ್ಟ ಶ್ರಮವೆಷ್ಟು ಗೊತ್ತಾ.?

  • News18
  • 3-MIN READ
  • Last Updated :
  • Share this:

-ಅನಿತಾ ಈ, 

ಕಳೆದ ವರ್ಷ 'ರಂಗಸ್ಥಲಂ' ಮೂಲಕ ಬಾಕ್ಸಾಫಿಸ್‍ನಲ್ಲಿ ಹೊಸ ಇತಿಹಾಸ ಬರೆದಿದ್ದರು ರಾಮ್‍ಚರಣ್. ಈಗ 'ವಿನಯ ವಿಧೇಯ ರಾಮ' ಸಿನಿಮಾ ಮೂಲಕ ಮತ್ತೆ ಬಾಕ್ಸಾಫಿಸ್‍ನಲ್ಲಿ ಧೂಳೆಬ್ಬಿಸಲು ಬರುತ್ತಿದ್ದಾರೆ. ಬೋಯಪಾಟಿ ಸೀನು ನಿರ್ದೇಶನದ ಈ ಸಿನಿಮಾಗಾಗಿ ರಾಮ್‍ಚರಣ್ ಮಾಡದ ಕಸರತ್ತುಗಳಿಲ್ಲ. ಅದಕ್ಕಾಗಿ ಸಂಪೂರ್ಣವಾಗಿ ಚೇಂಜೋವರ್ ಮಾಡ್ಕೊಂಡಿದ್ದಾರೆ. ಅದಕ್ಕಾಗಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ.

ಇದನ್ನೂ ಓದಿ: ಪ್ರಿನ್ಸ್​ ಮಹೇಶ್​ಬಾಬುಗೆ ಜತೆಯಾಗಲಿರುವ 'ಮಲ್ಲೀಶ್ವರಿ': 13 ವರ್ಷಗಳ ನಂತರ ಟಾಲಿವುಡ್​ಗೆ ಕತ್ರಿನಾ ಕೈಫ್​ ಮರು ಪ್ರವೇಶ ..!

ಟಾಲಿವುಡ್ ಮೆಗಾಪವರ್​ ಸ್ಟಾರ್​ ಯಾವುದೇ ಸಿನಿಮಾ ಮಾಡಲು, ಅದಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು ಬಿಡುತ್ತಾರೆ. ಕಳೆದ ವರ್ಷ 'ರಂಗಸ್ಥಲಂ' ಸಿನಿಮಾ ಮಾಡಿದ್ದರು. ಅದಕ್ಕಾಗಿ ಗಡ್ಡಬಿಟ್ಟು ಪಕ್ಕಾ ರಗಡ್‍ಲುಕ್‍ನಲ್ಲಿ ಕಾಣಿಸಿಕೊಂಡಿದ್ದರು. ಈಗ 'ವಿನಯ ವಿಧೇಯ ರಾಮ' ಚಿತ್ರ ಮಾಡಿದ್ದಾರೆ. ಇದೊಂದು ಔಟ್ ಅಂಡ್ ಔಟ್ ಮಾಸ್ ಮಸಾಲ ಸಿನಿಮಾವಾಗಿದೆ.

ಜನವರಿ 11ಕ್ಕೆ ಬರಲಿರೋ ಈ ಚಿತ್ರದಲ್ಲಿ ರಾಮ್‍ಚರಣ್ ಸಂಪೂರ್ಣವಾಗಿ ಬೇರೆಯದೇ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಗಂಟೆ ಗಟ್ಲೇ ಜಿಮ್ ನಲ್ಲಿ ಬೆವರಿಳಿಸಿದ್ದಾರೆ. ಊಟ ಉಪಚಾರದಲ್ಲೂ ಕಟ್ಟು ನಿಟ್ಟು ಅನುಸರಿಸಿದ್ದಾರೆ. ಅವರು ದೇಹವನ್ನು ದಂಡಿಸಿರುವ ವಿಡಿಯೋವೊಂದನ್ನು ಪತ್ನಿ ಉಪಾಸನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.



ಕೇವಲ ಜಿಮ್​ನಲ್ಲಿ ಮಾತ್ರವಲ್ಲದೆ, ಊಟದ ವಿಷಯದಲ್ಲೂ ರಾಮ್​ ಸಿಕ್ಕಾಪಟ್ಟೆ ಡಯಟ್​ ಮಾಡಿದ್ದಾರೆ. ಬೆಳಗಿನಿಂದ ಸಂಜೆ ತನಕ ರಾಮ್‍ಚರಣ್ ಅವರ ಜೀವನ ಶೈಲಿ ಹೆಗಿತ್ತು ಅನ್ನೋದರ ಸಂಪೂರ್ಣ ವಿವರ ಇಲ್ಲಿದೆ ಓದಿ...

ರಾಮ್‍ಚರಣ್ ಡಯಟ್ ಪ್ಲಾನ್: ಬೆಳಗ್ಗೆ 8ಕ್ಕೆ- 3 ಎಗ್ ವೈಟ್, ಎರಡು ಫುಲ್ ಎಗ್, 3/4 ಓಟ್ಸ್, ಆಲ್ಮಂಡ್​ ಮಿಲ್ಕ್, ಬೆಳಗ್ಗೆ 11ಕ್ಕೆ- ಒಂದು ದೊಡ್ಡ ಕಪ್‍ನಲ್ಲಿ ವೆಜ್ ಸೂಪ್, ಮಧ್ಯಾಹ್ನ 1.30ಕ್ಕೆ- 220 ಗ್ರಾಂ ಚಿಕನ್ ಬ್ರೆಸ್ಟ್, 3/4 ಬ್ರೌನ್ ರೈಸ್, 1/2 ಹಸಿ ತರಕಾರಿ ಕರಿ, ಸಂಜೆ 4ಕ್ಕೆ- 250 ಗ್ರಾಂ ಗ್ರಿಲ್ಡ್ ಫಿಶ್, 200 ಗ್ರಾಂ ಸ್ವೀಟ್ ಪೊಟಾಟೋ, 1/2 ಕಪ್ ಹಸಿ ತರಕಾರಿ, ಸಂಜೆ6ಕ್ಕೆ-ದೊಡ್ಡ ಕಪ್​ನಲ್ಲಿ ಮಿಕ್ಸಡ್ ಗ್ರೀನ್ ಸಲಾಡ್, 1/4 ಕಪ್​ ನಟ್ಸ್.

ಇದನ್ನೂ ಓದಿ: ಆಕೆ ನಿತ್ಯ ಸುಮಂಗಲಿ: 11 ಗಂಡಂದಿರು...ಲೆಕ್ಕವಿಲ್ಲದಷ್ಟು ಬಾಯ್​ಫ್ರೆಂಡ್ಸ್ ಜತೆ ಪ್ರೇಮದಾಟ​...!

ಇದಿಷ್ಟೇ ಅಲ್ಲದೆ, ಬೆಳಗ್ಗೆ 8 ರಿಂದ 6 ವರೆಗೆ ಹೊಟ್ಟೆ ಹಸಿದಾಗ ಸ್ನ್ಯಾಕ್ಸ್, ನಟ್ಸ್, ಹಸಿ ತರಕಾರಿ ಎಲ್ಲ ತಿನ್ನುತ್ತಿದ್ದರು. ಆದರೆ ಕೆಲವು ಆಹಾರವನ್ನು ಮುಟ್ಟುತ್ತಲೇ ಇರಲಿಲ್ಲವಂತೆ. ಅದರಲ್ಲಿ ಕಾಫಿ, ರೆಡ್ ಮೀಟ್, ಡೈರಿ ಐಟಮ್ಸ್ ಹಾಗೆ ಆಲ್ಕೋಹಾಲ್ ಇಂದ ದೂರ ಇದ್ದರಂತೆ ರಾಮ್‍ಚರಣ್.

ರಾಕೇಶ್ ಉಡಿಯಾರ, ಅವರ ಸಲಹೆ ಸೂಚನೆಯಂತೆ ಇದೆಲ್ಲವನ್ನ ಪಾಲಿಸಿದ್ದು, 3 ವಾರಗಳ ಕಾಲ ಕಟ್ಟು ನಿಟ್ಟಾದ ಜೀವನ ಶೈಲಿಯಿಂದ ರಾಮ್ ಚರಣ್ ತಮ್ಮ ದೇಹವನ್ನು ಬದಲಾಯಿಸಿಕೊಂಡಿದ್ದಾರಂತೆ. ಒಟ್ಟಾರೆ ರಾಮ್‍ಚರಣ್ ಅವರ ಶ್ರಮ-ಪರಿಶ್ರಮ ಟ್ರೈಲರ್ ಮತ್ತು ಹಾಡುಗಳಲ್ಲಿ ಕಾಣಿಸುತ್ತದೆ.

 

First published: