Ram Charan: ಮಕ್ಕಳೊಂದಿಗಿನ ಫೋಟೋ ಜೊತೆ ಆಸಕ್ತಿಕರ ಟ್ವೀಟ್​ ಮಾಡಿದ ರಾಮ್​ ಚರಣ್​..!

Ram Charan Teja: ಈಗಾಗಲೇ ಆರ್​ಆರ್​ಆರ್​ ಸಿನಿಮಾದ ಚಿತ್ರೀಕರಣ ಅರ್ಥಕ್ಕಿಂತ ಹೆಚ್ಚಾಗಿಯೇ ಮುಗಿದಿದೆ. ರಾಮ್​ ಚರಣ್​ ಹುಟ್ಟುಹಬ್ಬಕ್ಕೆ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಎನ್​ಟಿಆರ್ ಅವರ ಹುಟ್ಟುಹಬ್ಬಕ್ಕೂ ಅವರ ಪಾತ್ರ ಪರಿಚಯಿಸುವ ಟೀಸರ್​ ರಿಲೀಸ್​ ಮಾಡಲು ಯೋಚಿಸಲಾಗಿತ್ತು. ಆದರೆ ಲಾಕ್​ಡೌನ್​ನಿಂದಾಗಿ ಅದು ಆಗುತ್ತೋ ಇಲ್ಲವೋ ತಿಳಿಯದು.

Anitha E | news18-kannada
Updated:May 16, 2020, 5:35 PM IST
Ram Charan: ಮಕ್ಕಳೊಂದಿಗಿನ ಫೋಟೋ ಜೊತೆ ಆಸಕ್ತಿಕರ ಟ್ವೀಟ್​ ಮಾಡಿದ ರಾಮ್​ ಚರಣ್​..!
ರಾಮ್​ ಚರಣ್​
  • Share this:
ರಾಮ್​ ಚರಣ್​ ತೇಜ ಸದ್ಯ ರಾಜಮೌಳಿ ಅವರ ಆರ್​ ಆರ್​ ಆರ್​ ಸಿನಿಮಾದಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಭಟ್​ ರಾಮ್​ಗೆ ಜೋಡಿಯಾಗಿದ್ದಾರೆ. ಆದರೆ ಲಾಕ್​ಡೌನ್​ನಿಂದಾಗಿ ಚಿತ್ರ ಚಿತ್ರೀಕರಣ ಸದ್ಯಕ್ಕೆ ನಿಂತು ಹೋಗಿದೆ.

ಈಗಾಗಲೇ ಆರ್​ಆರ್​ಆರ್​ ಸಿನಿಮಾದ ಚಿತ್ರೀಕರಣ ಅರ್ಥಕ್ಕಿಂತ ಹೆಚ್ಚಾಗಿಯೇ ಮುಗಿದಿದೆ. ರಾಮ್​ ಚರಣ್​ ಹುಟ್ಟುಹಬ್ಬಕ್ಕೆ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಎನ್​ಟಿಆರ್ ಅವರ ಹುಟ್ಟುಹಬ್ಬಕ್ಕೂ ಅವರ ಪಾತ್ರ ಪರಿಚಯಿಸುವ ಟೀಸರ್​ ರಿಲೀಸ್​ ಮಾಡಲು ಯೋಚಿಸಲಾಗಿತ್ತು. ಆದರೆ ಲಾಕ್​ಡೌನ್​ನಿಂದಾಗಿ ಅದು ಆಗುತ್ತೋ ಇಲ್ಲವೋ ತಿಳಿಯದು.

Learning to make fresh butter before buttering them😜🤗 #GrandmaRecipes #MomBoss pic.twitter.com/syQS4pOEy9ಆದರೆ ರಾಮ್​ ಚರಣ್​ ಮಾತ್ರ ಮನೆಯಲ್ಲಿ ಆರಾಮಾಗಿ ಸಮಯ ಕಳೆದಯುತ್ತಿದ್ದರೂ, ಏನನ್ನೋ ತುಂಬಾ ಮಿಸ್​ ಮಾಡಿಕೊಳ್ಳುತ್ತಿರುವಂತಿದೆ. ಅದಕ್ಕೆ ಅವರು ಮಕ್ಕಳೊಂದಿಗೆ ತೆಗೆಸಿಕೊಂಡ ಚಿತ್ರದೊಂದಿಗೆ ಆಸಕ್ತಿಕರ ಟ್ವೀಟ್​ ಮಾಡಿದ್ದಾರೆ.ಮನೆಯಲ್ಲಿ ಅಜ್ಜಿ ಬಳಿ ಮಜ್ಜಿಗೆ ಮಾಡುವುದನ್ನೂ ಕಲಿಯುತ್ತಾ... ಪತ್ನಿಗೆ ಅಡುಗೆ ಮಾಡಿಕೊಡುತ್ತಾ ಸಮಯ ಕಳೆಯುತ್ತಿದ್ದರೂ, ಸಿನಿಮಾ ಚಿತ್ರೀಕರಣವನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿಯೇ ಧ್ರುವ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ತೆಗೆದ ಫೋಟೋಗಳ ಜೊತೆಗೆ ಚಿತ್ರೀಕರಣ ಆರಂಭವಾಗಲು ಕಾಯುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

Sudharani: ಸಿನಿ ಪಯಣದ ಆ ದಿನಗಳ ನೆನಪಿನಲ್ಲಿ ಸುಧಾರಾಣಿ: ಹಳೇ ಸಿನಿಮಾಗಳ ಅಪರೂಪದ ಚಿತ್ರಗಳು ಇಲ್ಲಿವೆ..! 
First published: May 16, 2020, 5:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading