• Home
  • »
  • News
  • »
  • entertainment
  • »
  • Ram Charan: ಅಯ್ಯಪ್ಪ ಮಾಲೆ ಧರಿಸಿದ ರಾಮ್​ ಚರಣ್​.. ಇವ್ರನ್ನು ನೋಡಿ ಕಲಿಬೇಕು ಬಾಲಿವುಡ್​ನವ್ರು ಎಂದ ಫ್ಯಾನ್ಸ್​!

Ram Charan: ಅಯ್ಯಪ್ಪ ಮಾಲೆ ಧರಿಸಿದ ರಾಮ್​ ಚರಣ್​.. ಇವ್ರನ್ನು ನೋಡಿ ಕಲಿಬೇಕು ಬಾಲಿವುಡ್​ನವ್ರು ಎಂದ ಫ್ಯಾನ್ಸ್​!

ರಾಮ್​ಚರಣ್​

ರಾಮ್​ಚರಣ್​

ರಾಮ್ ಚರಣ್ ಅವರು, 41 ದಿನಗಳ ಅಯ್ಯಪ್ಪ ದೀಕ್ಷೆ ತೆಗೆದುಕೊಂಡಿರುವುದೇ, ಅವರು ಈ ಲುಕ್‍ನಲ್ಲಿ ಕಂಡು ಬರಲು ಕಾರಣ. ರಾಮ್ ಚರಣ್, ಕಪ್ಪು ಕುರ್ತಾ ಪೈಜಾಮ ಧರಿಸಿದ್ದರು. ಈ ದೃಶ್ಯವುಳ್ಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

  • Share this:

ಬಹು ನಿರೀಕ್ಷಿತ ಆರ್​ಆರ್​ಆರ್(RRR)​​ ಸಿನಿಮಾ ಕೊನೆಗೂ ಬಿಡುಗಡೆ ಆಗಿದ್ದು, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಜಾಗತಿಕ ಮಟ್ಟದಲ್ಲಿ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿದೆ. ಇದರ ಬೆನ್ನೆಲ್ಲೇ, ಆರ್​ಆರ್​ಆರ್​ ಸಿನಿಮಾದ ನಟ ರಾಮ್ ಚರಣ್(Ram Charan) ಭಾನುವಾರ ಮುಂಬೈ ವಿಮಾನ ನಿಲ್ದಾಣ(Mumabai Airport)ದಲ್ಲಿ ಕಾಣಿಸಿಕೊಂಡರು. ತಾರೆಗಳು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವುದರಲ್ಲಿ ದೊಡ್ಡ ವಿಶೇಷವೇನಿದೆ, ಅದು ಅತ್ಯಂತ ಮಾಮೂಲಿ ಸಂಗತಿ ಎನ್ನುತ್ತೀರಾ? ತಾರೆಯರು ಏರ್​​ಪೋರ್ಟ್​ನಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಎಂಬುವುದು ನಿಜವಾದರೂ, ಅವರ ಏರ್​​ಪೋರ್ಟ್​ ಲುಕ್ ಮತ್ತು ಅವರು ಯಾರ ಜೊತೆ ಅಲ್ಲಿ ಕಾಣಿಸಿಕೊಳ್ಳುತ್ತಾರೆ, ಅವರು ನೀಡುವ ಗಾಸಿಪ್(Gossip) ಹೇಳಿಕೆಗಳು ಮತ್ತಿತರ ಕಾರಣಗಳಿಂದಾಗಿ, ಅಭಿಮಾನಿಗಳಿಗೆ ತಾರೆಗಳ ವಿಮಾನ ನಿಲ್ದಾಣದಲ್ಲಿನ ಚಲನವಲನದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ.


ಅಯ್ಯಪ್ಪನ ಮೊರೆ ಹೋದ ರಾಮ್​ಚರಣ್​!


ಹಾಗಾದರೆ, ರಾಮ್ ಚರಣ್ ಯಾವ ಲುಕ್‍ನಲ್ಲಿ ಅಥವಾ ಯಾರ ಜೊತೆ ಕಾಣಿಸಿಕೊಂಡರು ಎನ್ನುತ್ತೀರಾ? ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಪ್ಪು ವಸ್ತ್ರಧಾರಿಯಾಗಿ, ಕಾಲಿಗೆ ಪಾದರಕ್ಷೆಗಳನ್ನು ಧರಿಸದೇ ಕಾಣ ಸಿಕ್ಕರು. ರಾಮ್ ಚರಣ್ ಅವರು, 41 ದಿನಗಳ ಅಯ್ಯಪ್ಪ ದೀಕ್ಷೆ ತೆಗೆದುಕೊಂಡಿರುವುದೇ, ಅವರು ಈ ಲುಕ್‍ನಲ್ಲಿ ಕಂಡು ಬರಲು ಕಾರಣ. ರಾಮ್ ಚರಣ್, ಕಪ್ಪು ಕುರ್ತಾ ಪೈಜಾಮ ಧರಿಸಿದ್ದರು. ಈ ದೃಶ್ಯವುಳ್ಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಧಾರ್ಮಿಕ ಆಚರಣೆಗಳನ್ನು ಅನುಸರಿಸುತ್ತಿರುವ ತಮ್ಮ ನೆಚ್ಚಿನ ನಟನನ್ನು ನೆಟ್ಟಿಗರು ಸಿಕ್ಕಾಪಟ್ಟೆ ಕೊಂಡಾಡುತ್ತಿದ್ದಾರೆ.


ರಾಮ್​ಚರಣ್​ ವಿಡಿಯೋ ಸಿಕ್ಕಾಪಟ್ಟೆ ವೈರಲ್​!


‘ಆರ್​ಆರ್​ಆರ್​​ ಸಿನಿಮಾದ ಅದ್ಭುತ ಯಶಸ್ಸಿನ ಬಳಿಕ ಮುಂಬೈಗೆ ಆಗಮಿಸಿದ ರಾಮ್‍ಚರಣ್. ಪ್ರಸ್ತುತ ಅವರು ಅಯ್ಯಪ್ಪ ಸ್ವಾಮಿ ಮಾಲೆ ಹಾಕಿರುವುದನ್ನು ಕಾಣಬಹುದು’ ಎಂದು ಅವರ ಅಭಿಮಾನಿಯೊಬ್ಬರಯ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿರುವ ಆ ದೃಶ್ಯದಲ್ಲಿ ರಾಮ್‍ಚರಣ್ ಅವರು ಎರಡೂ ಕೈಗಳಿಂದ ನಮಸ್ಕರಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಕಂಡು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.



ಇದನ್ನೂ ಓದಿ: RRR ಸಿನಿಮಾ ಗೆದ್ದಿದ್ದಕ್ಕೆ ಏನ್​ ಮಾಡಿದ್ದಾರೆ ನೋಡಿ Ram Charan​.. ನಿಜಕ್ಕೂ ನೀವು `ಗೋಲ್ಡನ್​ ಮ್ಯಾನ್​’!


ಇವರನ್ನು ನೋಡಿ ಬಾಲಿವುಡ್​​ನವರು ಕಲಿಬೇಕು ಎಂದ ಫ್ಯಾನ್ಸ್​!


“ಸಿನಿಮಾಗಳನ್ನು ಮಾಡುವುದರಿಂದ ಹಿಡಿದು ವಿನಮ್ರ ಮತ್ತು ಸರಳವಾಗಿರುವುದರ ವರೆಗೆ, ಅವರಿಂದ ಬಾಲಿವುಡ್‍ನವರು ಕಲಿಯುವುದು ಬಹಳಷ್ಟಿದೆ” ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಇನ್ನೊಬ್ಬರು, “ ದಕ್ಷಿಣದ ನಟರು, ಬಾಲಿವುಡ್‍ನಲ್ಲಿ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಮರಳಿ ತರಲಿದ್ದಾರೆ” ಎಂದು ಬರೆದುಕೊಂಡಿದ್ದಾರೆ. “ ಅತ್ಯಂತ ಶ್ರೀಮಂತ ಮತ್ತು ಪ್ರಖ್ಯಾತರು, ಆದರೂ ಎಷ್ಟೊಂದು ಸರಳ ಮತ್ತು ವಿನಮ್ರ ವ್ಯಕ್ತಿತ್ವ. . . .” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. “ಬಾಲಿವುಡ್‍ನವರು ರಾಮ್‍ಚರಣ್, ಟಾಲಿವುಡ್ ಮತ್ತು ರಾಜಮೌಳಿ ಅವರಿಂದ ಕಲಿಯಬೇಕಿದೆ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿ: ಬಾಕ್ಸ್​ ಆಫೀಸ್​ ಲೂಟಿ ಮಾಡಿದ `ಆರ್​ಆರ್​ಆರ್​’.. ಸಾವಿರ ಕೋಟಿ ಕಲೆಕ್ಷನ್​​ಗೆ ಇನ್ನೆಷ್ಟು ಬಾಕಿ?


ಸಾವಿರ ಕೋಟಿ ಕ್ಲಬ್​ನತ್ತ ಆರ್​ಆರ್​ಆರ್​ ಸಿನಿಮಾ!


ಎಸ್‍.ಎಸ್. ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಚಿತ್ರದಲ್ಲಿ ರಾಮ್‍ಚರಣ್ ಮತ್ತು ಜೂನಿಯರ್ ಎನ್‍ಟಿಆರ್ ಅವರು ಅತ್ಯದ್ಭುತವಾಗಿ ನಟಿಸಿದ್ದು, ಚಿತ್ರವು ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ಬಾಲಿವುಡ್ ಇಬ್ಬರು ಅತ್ಯಂತ ಜನಪ್ರಿಯ ತಾರೆಯರಾದ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಕೂಡ ನಟಿಸಿದ್ದಾರೆ. ಮಾರ್ಚ್ 24 ರಂದು ವಿಶ್ವದಾದ್ಯಂತ ಬಿಡುಗಡೆಗೊಂಡಿರುವ ಈ ಚಿತ್ರ, ಬಿಡುಗಡೆಗೂ ಮುನ್ನ ಚಿತ್ರತಂಡ ಭರವಸೆ ನೀಡಿದ್ದಂತೆ, ಭಾರತೀಯ ಸಿನಿಮಾರಂಗಕ್ಕೆ ಅದರ ವೈಭವವನ್ನು ಮರಳಿ ತಂದುಕೊಟ್ಟಿದೆ.

Published by:ವಾಸುದೇವ್ ಎಂ
First published: