Yash-Ram Charan: ರಾಮ್​ ಚರಣ್​ ಜೊತೆ ತೆರೆ ಹಂಚಿಕೊಳ್ಳಲಿದ್ದಾರಾ ರಾಕಿಂಗ್​ ಸ್ಟಾರ್​ ಯಶ್​..!

Yash and Ram Charan: ನಟ ಹಾಗೂ ನಿರ್ಮಾಪಕ ರಾಮ್​ ಚರಣ್​ ಹಾಗೂ ಯಶ್​ ಅವರ ಭೇಟಿ ಟಾಲಿವುಡ್​ ಮತ್ತು ಸ್ಯಾಂಡಲ್​ವುಡ್​ನಲ್ಲಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಇವರಿಬ್ಬರು ಸಿನಿಮಾಗಾಗಿ ಕೈ ಜೋಡಿಸಿದ್ದು, ಅದರ ಹಿನ್ನಲೆಯಲ್ಲೇ ಈ ಭೇಟಿ ನಡೆದಿದೆ ಎನ್ನಲಾಗುತ್ತಿದೆ.

Anitha E | news18-kannada
Updated:December 9, 2019, 12:27 PM IST
Yash-Ram Charan: ರಾಮ್​ ಚರಣ್​ ಜೊತೆ ತೆರೆ ಹಂಚಿಕೊಳ್ಳಲಿದ್ದಾರಾ ರಾಕಿಂಗ್​ ಸ್ಟಾರ್​ ಯಶ್​..!
ರಾಮ್​ಚರಣ್​ ಹಾಗೂ ಯಶ್​
  • Share this:
ಕೆಜಿಎಫ್​ ಸಿನಿಮಾದ ಮೂಲಕ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿರುವ ನಟ ರಾಕಿಂಗ್​ ಸ್ಟಾರ್​ ಯಶ್​. ಸದ್ಯ ಯಶ್​ 'ಕೆ.ಜಿ.ಎಫ್​ ಚಾಪ್ಟರ್​ 2' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಯಶ್​ ಟಾಲಿವುಡ್​ ನಟ ರಾಮ್​ ಚರಣ್​ತೇಜ ಅವರನ್ನು ಭೇಟಿ ಮಾಡಿದ್ದಾರೆ.

ನಟ ಹಾಗೂ ನಿರ್ಮಾಪಕ ರಾಮ್​ ಚರಣ್​ ಹಾಗೂ ಯಶ್​ ಅವರ ಭೇಟಿ ಟಾಲಿವುಡ್​ ಮತ್ತು ಸ್ಯಾಂಡಲ್​ವುಡ್​ನಲ್ಲಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಇವರಿಬ್ಬರು ಸಿನಿಮಾಗಾಗಿ ಕೈ ಜೋಡಿಸಿದ್ದು, ಅದರ ಹಿನ್ನಲೆಯಲ್ಲೇ ಈ ಭೇಟಿ ನಡೆದಿದೆ ಎನ್ನಲಾಗುತ್ತಿದೆ.

Ram Charan met kgf hero yash behindwoods gold awards
ರಾಮ್​ಚರಣ್​ ಹಾಗೂ ಯಶ್​


ಇತ್ತೀಚೆಗಷ್ಟೆ ಚೆನ್ನೈನಲ್ಲಿ ನಡೆದ ಬಿಹೈಂಡ್​ವುಡ್ಸ್​ ಗೋಲ್ಡ್​ ಮೆಡಲ್ಸ್​ ಸಮಾರಂಭದಲ್ಲಿ ರಾಮ್​ ಚರಣ್​ ಹಾಗೂ ಯಶ್​ ಭಾಗವಹಿಸಿದ್ದರು. ಈ ವೇಳೆ ರಾಮ್​ ಚರಣ್​ ಪ್ರತ್ಯೇಕವಾಗಿ ಯಶ್​ ಅವರನ್ನು ಭೇಟಿ ಮಾಡಿದ್ದಾರಂತೆ. ಈ ವೇಳೆ ಇಬ್ಬರೂ ನಟರು ಕುಶಲೋಪರಿ ವಿಚಾರಿಸಿಕೊಂಡಿದ್ದು, ಜೊತೆಗೆ ತಮ್ಮ ಸಿನಿಮಾಗಳ ಬಗ್ಗೆಯೂ ಚರ್ಚೆ ಮಾಡಿದ್ದಾರಂತೆ.

ಇದನ್ನೂ ಓದಿ: Radhika Pandit: ಆ ದಿನಗಳ ಫೋಟೋ ಮೂಲಕ ರಾಕಿಂಗ್ ಸ್ಟಾರ್​ ಯಶ್​ಗೆ ವಿಶ್​ ಮಾಡಿದ ರಾಧಿಕಾ..!

ಈ ಕಾರ್ಯಕ್ರಮದಲ್ಲಿ ನಟ ವಿಜಯ್​ ದೇವರಕೊಂಡ ಹಾಗೂ ಮಲಯಾಳಂ ನಟ ನಿವಿನ್​ ಸಹ ಭಾಗವಹಿಸಿದ್ದರಂತೆ. ರಾಮ್​ ಚರಣ್​ ಸದ್ಯ ರಾಜಮೌಳಿ ಅವರ 'ಆರ್​ಆರ್​ಆರ್​' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ಜೋಡಿಯ ಭೇಟಿ ಮಾತ್ರ ಟಾಲಿವುಡ್​ ಹಾಗೂ ಸ್ಯಾಂಡಲ್​ವುಡ್​ನಲ್ಲಿ ಚರ್ಚೆಯ ಹಾಟ್​ ಟಾಪಿಕ್​ ಆಗಿದೆ.

 Deepika Padukone: ಹೊಸ ಸ್ಟೈಲ್​ನಲ್ಲಿ ಮಿಂಚಿದ ದೀಪಿಕಾ: ಗುಳಿಕೆನ್ನೆ ಸುಂದರಿಯ ಲುಕ್​ಗೆ ಬಿ-ಟೌನ್​ ಸ್ಟಾರ್​ಗಳು ಫಿದಾ..!

First published: December 9, 2019, 12:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading