Ram Charan-Jr NTR ಅಭಿಮಾನಿಗಳಿಗೆ ಕಹಿ ಸುದ್ದಿ: ಮತ್ತೆ ರಿಲೀಸ್ ದಿನಾಂಕ ಮುಂದೂಡಿದ RRR ಚಿತ್ರತಂಡ

ಬಾಹುಬಲಿ ಚಿತ್ರ ನಿರ್ದೇಶಕ ರಾಜಮೌಳಿ ಅವರ ಮುಂದಿನ ದೃಶ್ಯಕಾವ್ಯ RRR ನಾನಾ ಕಾರಣಗಳಿಂದ ಸುದ್ದಿಯಲ್ಲಿರುತ್ತದೆ. 3 ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಚಿತ್ರದ ಶೂಟಿಂಗ್​ ಮುಕ್ತಾಯವಾಗಿದೆ. ಚಿತ್ರತಂಡ ಸಿನಿಮಾ ರಿಲೀಸ್​ಗೆ ಹೊಸ ದಿನಾಂಕ ಸಹ ಪ್ರಕಟಿಸಿತ್ತು. ಅಕ್ಟೋಬರ್ 13ರಂದು ಆರ್​ಆರ್​ಆರ್ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಬೇಕಿತ್ತು. ಆದರೆ ಇದ್ದಕ್ಕಿದ್ದಂತೆಯೇ ಚಿತ್ರತಂಡ ಈಗ ರಿಲೀಸ್​ ದಿನಾಂಕವನ್ನು ಮುಂದೂಡಿದೆ.

ಆರ್​​ಆರ್​ಆರ್​ ಚಿತ್ರದ ಪೋಸ್ಟರ್​.

ಆರ್​​ಆರ್​ಆರ್​ ಚಿತ್ರದ ಪೋಸ್ಟರ್​.

  • Share this:
ಬಾಹುಬಲಿ ಸಿನಿಮಾದ ನಂತರ ಸ್ಟಾರ್​ ನಿರ್ದೇಶಕ ರಾಜಮೌಳಿ  (Rajamouli) ಅವರು ನಿರ್ದೇಶನ ಮಾಡುತ್ತಿರುವ ಪ್ಯಾನ್​ ಇಂಡಿಯಾ ಸಿನಿಮಾ ಆರ್​ ಆರ್​ ಆರ್​. (RRR) ಹೌದು, ರಾಮ್ ಚರಣ್  (Ram Charan) ಹಾಗೂ ಜೂನಿಯರ್ ಎನ್​ಟಿಆರ್ (Junior NTR) ಇದೇ ಮೊಲದ‌ ಬಾರಿಗೆ ತೆರೆ ಮೇಲೆ ಒಂದಾಗಿದ್ದಾರೆ. ರಾಜಮೌಳಿ ಆ್ಯಕ್ಷನ್ ಕಟ್ ಹೇಳುತ್ತಿರುವ ಹಾಗೂ ಸ್ಟಾರ್​ ನಟರು ತೆರೆ ಹಂಚಿಕೊಂಡಿರುವ ಕಾರಣಕ್ಕೆ ಆರ್.ಆರ್.ಆರ್ ಸಿನಿಮಾದ ಮೇಲೆ ಮುಗಿಲೆತ್ತರದ ನಿರೀಕ್ಷೆ ಕ್ರಿಯೇಟ್ ಆಗಿದೆ. ಆರ್. ಆರ್.ಆರ್ ಸಿನಿಮಾ ಬಾಹುಬಲಿ  ಚಿತ್ರದ (Bahubali Movie) ದಾಖಲೆಗಳನ್ನು ನುಚ್ಚುನೂರಾಗಿಸೋದು ಗ್ಯಾರಂಟಿ ಅನ್ನೋ‌ ಮಾತುಗಳ ಕೇಳಿ ಬರುತ್ತಲೇ ಇವೆ. ಇನ್ನೇನು ಈ ಸಿನಿಮಾ ರಿಲೀಸ್ ಆಗಲಿದೆ, ಅದಕ್ಕಾಗಿ ದಿನಗಳನ್ನು ಎಣಿಸುತ್ತಾ ಕಾಯುತ್ತಿದ್ದ ಸಿನಿಪ್ರಿಯರಿಗೆ ಚಿತ್ರತಂಡ ಶಾಕ್​ ಮೇಲೆ ಶಾಖ್ ಕೊಡುತ್ತಿದೆ. ಹೌದು, ಇತ್ತೀಚೆಗಷ್ಟೆ ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸಿದ್ದ ರಾಜಮೌಳಿ ಈಗ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ. 

ಬಾಹುಬಲಿ ಚಿತ್ರ ನಿರ್ದೇಶಕ ರಾಜಮೌಳಿ ಅವರ ಮುಂದಿನ ದೃಶ್ಯಕಾವ್ಯ RRR ನಾನಾ ಕಾರಣಗಳಿಂದ ಸುದ್ದಿಯಲ್ಲಿರುತ್ತದೆ. 3 ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಚಿತ್ರದ ಶೂಟಿಂಗ್​ ಮುಕ್ತಾಯವಾಗಿದೆ. ಚಿತ್ರತಂಡ ಸಿನಿಮಾ ರಿಲೀಸ್​ಗೆ ಹೊಸ ದಿನಾಂಕ ಸಹ ಪ್ರಕಟಿಸಿತ್ತು. ಅಕ್ಟೋಬರ್ 13ರಂದು ಆರ್​ಆರ್​ಆರ್ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಬೇಕಿತ್ತು. ಆದರೆ ಇದ್ದಕ್ಕಿದ್ದಂತೆಯೇ ಚಿತ್ರತಂಡ ಈಗ ರಿಲೀಸ್​ ದಿನಾಂಕವನ್ನು ಮುಂದೂಡಿದೆ.

Post production nearly done to have #RRRMovie ready by October’21.ಆರ್​ಆರ್​ಆರ್ ಸಿನಿಮಾದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಡಿರುವ ಟ್ವೀಟ್​ನಲ್ಲಿ ಈ ವಿಷಯ ತಿಳಿಸಲಾಗಿದೆ. ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಅಕ್ಟೋಬರ್​ 21ರ ಒಳಗೆ ಸಿನಿಮಾದ ಕೆಲಸಗಳು ಪೂರ್ಣಗೊಳ್ಳಲಿದೆ. ಸಿನಿಮಾ ಮಂದಿರಗಳ ಲಭ್ಯತೆ ನೋಡಿಕೊಂಡು ಚಿತ್ರದ ಹೊಸ ರಿಲೀಸ್ ದಿನಾಂಕ ಪ್ರಕಟಿಸಲಾಗುವುದು ಎಂದು ಬರೆಯಲಾಗಿದೆ.

ಇದನ್ನೂ ಓದಿ: Thalaivii: ತನ್ನ ಬಯೋಪಿಕ್​ನಲ್ಲಿ ಐಶ್ವಯಾ ರೈ ನಾಯಕಿಯಾಗಬೇಕೆಂದು ಬಯಸಿದ್ದ ಜಯಲಲಿತಾ..!

ಸದ್ಯಕ್ಕೆ ಸಾಕಷ್ಟು ಕಡೆ ಇನ್ನೂ ಸಹ ಚಿತ್ರಮಂದಿರಗಳು ಬಾಗಿಲು ತೆರೆದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸುವುದಿಲ್ಲ. ಸಿನಿಮಾ ಮಾರುಕಟ್ಟೆ ಕೊಂಚ ಸುಧಾರಿಸಿಕೊಂಡು ಎಲ್ಲ ಸಿನಿಮಾ ಮಂದಿಗಳು ಬಾಗಿಲು ತೆರೆದ ನಂತರ ಪ್ರಕಟಣೆ ಹೊರಡಿಸಲಾಗುತ್ತದೆ ಎಂದು ಚಿತ್ರತಂಡ ಅನೌನ್ಸ್​ ಮಾಡಿದೆ.

ಇನ್ನೇನು ತಮ್ಮ ನೆಚ್ಚಿನ ನಟರನ್ನು ಬೆಳ್ಳಿ ಪರದೆ ಮೇಲೆ ನೋಡಲು ಕಾತರರಾಗಿದ್ದ ಸಿನಿಪ್ರಿಯರಿಗೆ ಮಾತ್ರ ಈ ಸುದ್ದಿ ಕೇಳಿ ಬೇಸರವಾಗಿದೆ. ಅಂದಾಜು 400 ಕೋಟಿ ಬಜೆಟ್​ನಲ್ಲಿ ಆರ್​ಆರ್​ಆರ್​ ಸಿನಿಮಾ ನಿರ್ಮಿಸಲಾಗಿದೆಯಂತೆ. ಇದರಲ್ಲಿ ಹಾಲಿವುಡ್​ ಹಾಗೂ ಬಾಲಿವುಡ್​ ಸ್ಟಾರ್​ಗಳೂ ನಟಿಸುತ್ತಿದ್ದಾರೆ. ಬಾಲಿವುಡ್​ನ ಆಲಿಯಾ ಭಟ್​ ಹಾಗೂ ಅಜಯ್​ ದೇವಗನ್​ ಸಹ ಪ್ರಮುಖ ಪಾತ್ರದಲ್ಲಿ ಅಭನಯಿಸುತ್ತಿದ್ದಾರೆ. ಒಲಿವಿಯಾ ಮೊರಿಸ್​ ಸಹ ತಾರಾಗಣದಲ್ಲಿದ್ದಾರೆ.

ಇದನ್ನೂಓದಿ: Raj Kundra-Shamita Shetty ಗೈರಿನಲ್ಲಿ ಮಕ್ಕಳ ಜತೆ ಗಣಪತಿ ಹಬ್ಬ ಆಚರಿಸಿದ Shilpa Shetty

ರಾಮ್​ ಚರಣ್​ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋವನ್ನು ಅವರ ಹುಟ್ಟುಹಬ್ಬದಂದು ರಿಲೀಸ್ ಮಾಡಲಾಗಿತ್ತು. ಆ ವಿಡಿಯೋಗೆ ಜೂನಿಯರ್ ಎನ್​ಟಿಆರ್​ ಕಂಠದಾನ ಮಾಡಿದ್ದರು. ಮಲಯಾಳಂ ಒಂದನ್ನು ಬಿಟ್ಟು ಉಳಿದ ಎಲ್ಲ ಭಾಷೆಗಳಲ್ಲೂ ಜೂನಿಯರ್ ಎನ್​ಟಿಆರ್ ಅವರೇ ಹಿನ್ನೆಲೆ ಧ್ವನಿ ನೀಡಿದ್ದರು. ರಾಜಮೌಳಿ ನಿರ್ದೇಶನದ ಈ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ರಿಲೀಸ್​ ಆಗಲಿದೆ.
Published by:Anitha E
First published: