RRR: ಮನೆಯಲ್ಲೇ ಕೂತು ನೋಡಿ 'ಆರ್​ಆರ್​ಆರ್'​​! ತಾರಕ್ ಹುಟ್ಟುಹಬ್ಬದ ದಿನವೇ ಒಟಿಟಿಗೆ ಎಂಟ್ರಿ

ಬಾಹುಬಲಿ ಖ್ಯಾತಿಯ ರಾಜಮೌಳಿ ನಿರ್ದೇಶನದ ಬ್ಲಾಕ್​ಬಸ್ಟರ್​ ಸಿನಿಮಾ 'ಆರ್​ಆರ್​ಆರ್​' ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದು ಗೊತ್ತೇ ಇದೆ. ಈ ಮಧ್ಯೆಯೇ ಸಿನಿಮಾವನ್ನು ಒಟಿಟಿ ಪ್ಲಾಟ್​ಫಾರ್ಮ್​ಗೆ ತರಲು ನಿರ್ಮಾಪಕರು ಮುಂದಾಗಿದ್ದಾರೆ.

ಆರ್​ಆರ್​ಆರ್​ ಸಿನಿಮಾ ಪೋಸ್ಟರ್​

ಆರ್​ಆರ್​ಆರ್​ ಸಿನಿಮಾ ಪೋಸ್ಟರ್​

  • Share this:
ವಿಶ್ವವೇ ತೆಲುಗು ರಂಗದತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ರಾಜಮೌಳಿ (S.S Rajmouli). ಅವರ ಬಾಹುಬಲಿ ಸರಣಿ ಚಿತ್ರಗಳು (Moive) ಹೊಸ ಇತಿಹಾಸವನ್ನೇ ಬರೆದಿತ್ತು. ನಾಯಕ ಪ್ರಭಾಸ್ ಸೇರಿ ಎಲ್ಲರಿಗೂ ಈ ಸಿನಿಮಾಗಳು ವೃತ್ತಿ ಜೀವನದ ಗೇಮ್ ಚೇಂಜರ್ ಆದವು. ಬಾಹುಬಲಿ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಯ್ತು, ಪ್ರಭಾಸ್ ಪ್ಯಾನ್ ಇಂಡಿಯಾ ಹೀರೋ ಆದರು ಮತ್ತು ರಾಜಮೌಳಿ ಸ್ಟಾರ್ ನಿರ್ದೇಶಕರು (Star Director) ಎಂಬ ಖ್ಯಾತಿ ಪಡೆದರು. ಬಾಹುಬಲಿ 1,2, ನಂತರ  RRR ಕೂಡ ರಾಜಮೌಳಿ ಬತ್ತಳಿಕೆ ಇಂದ ಬಂದ ಮತ್ತೊಂದು ಅದ್ಭುತ ಸಿನಿಮಾ.  ತೆರೆ ಮೇಲೆ ರಾಮ್​ಚರಣ್​ ಹಾಗೂ ಎನ್​ಟಿಆರ್​ ಜೋಡಿ ಕಮಾಲ್ ಮಾಡಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ. ನೀವು ಮನೆಯಲ್ಲೇ ಕುತು ಈ ಸಿನಿಮಾವನ್ನು ನೋಡುವ ದಿನ ಹತ್ತಿರ ಬಂದಿದೆ.

ಮೇ 20ಕ್ಕೆ ಒಟಿಟಿಗೆ ಬರ್ತಿದೆ 'ಆರ್​ಆರ್​ಆರ್​'

ಬಾಹುಬಲಿ ಖ್ಯಾತಿಯ ರಾಜಮೌಳಿ ನಿರ್ದೇಶನದ ಬ್ಲಾಕ್​ಬಸ್ಟರ್​ ಸಿನಿಮಾ 'ಆರ್​ಆರ್​ಆರ್​' ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದು ಗೊತ್ತೇ ಇದೆ. ಈ ಮಧ್ಯೆಯೇ ಸಿನಿಮಾವನ್ನು ಒಟಿಟಿ ಪ್ಲಾಟ್​ಫಾರ್ಮ್​ಗೆ ತರಲು ನಿರ್ಮಾಪಕರು ಮುಂದಾಗಿದ್ದಾರೆ. ಮೇ 20ರಂದು ಸಿನಿಮಾ ಒಟಿಟಿಗೂ ಲಗ್ಗೆ ಇಡಲಿದೆ. ಸ್ಟಾರ್​ ನಟರಾದ ರಾಮ್​ಚರಣ್​, ಜೂನಿಯರ್​ ಎನ್​ಟಿಆರ್ ನಟನೆಯ ಆರ್​ಆರ್​ಆರ್​ ಸಿನಿಮಾ ಈಗಾಗಲೇ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ. ಇದೀಗ ಈ ಸಿನಿಮಾವನ್ನು ಮನೆಯಲ್ಲಿ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಜೀ5, ನೆಟ್​ಫ್ಲಿಕ್ಸ್​ನಲ್ಲಿ ರಾಜಮೌಳಿ ಸಿನಿಮಾ!

ಮಾರ್ಚ್ 24ರಂದು ವರ್ಲ್ಡ್ ವೈಡ್ ರಿಲೀಸ್ ಆಗಿದ್ದ ರೌದ್ರ, ರಣ, ರುಧೀರ ಸಿನಿಮಾ ಬೆಳ್ಳಿತೆರೆಯಲ್ಲಿ ಅಬ್ಬರಿಸಿ, ಬೊಬ್ಬಿರಿದಿತ್ತು. ಈಗ ಈ ಸಿನಿಮಾ ಜೀ5 ಒಟಿಟಿಗೆ ಎಂಟ್ರಿ ಕೊಡ್ತಿದೆ. ವಿಶೇಷ ಅಂದ್ರೆ ಜೂನಿಯರ್ ಎನ್ ಟಿಆರ್ ಹುಟ್ಟುಹಬ್ಬದ ದಿನವೇ ಅಂದ್ರೆ ಮೇ 20ಕ್ಕೆ ತ್ರಿಬಲ್ ಆರ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವುದು ತಾರಕ್ ಫ್ಯಾನ್ಸ್ ಗೆ ಡಬ್ಬಲ್ ಖುಷಿಕೊಟ್ಟಿದೆ. ಜೀ5 ಒಟಿಟಿಗೆ ಎಂಟ್ರಿ ಕೊಡ್ತಿರುವ ಹಿನ್ನೆಲೆ ಆರ್ ಆರ್ ಆರ್ ಸಿನಿಮಾದ ನಯಾ ಟ್ರೇಲರ್ ನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅನಾವರಣ ಮಾಡಿದ್ದಾರೆ.

ಇದನ್ನೂ ಓದಿ: ಆರ್‌ಆರ್‌ಆರ್‌ ಸಿನಿಮಾ ನೋಡಿದ್ದೀರಾ? ಹಾಗಿದ್ರೆ ಈ ಪ್ರಶ್ನೆಗಳಿಗೆ ಸರಿ ಉತ್ತರ ಬರೆಯಿರಿ!

ಜೂನ್​ 3ಕ್ಕೆ ಆಹಾ ದಲ್ಲಿ ಆರ್​ಆರ್​ಆರ್​  ಲಭ್ಯ!

'RRR', ಇತ್ತೀಚೆಗಿನ ಎಸ್‌ಎಸ್ ರಾಜಮೌಳಿ ಅದ್ಭುತ ಸಿನಿಮಾವು ವಿಶ್ವಾದ್ಯಂತ ಬಿಡುಗಡೆಯಾದ ಕೇವಲ 16 ದಿನಗಳಲ್ಲಿ ಅತ್ಯಂತ ಅಪೇಕ್ಷಿತ 1000 ಕೋಟಿ ಕ್ಲಬ್‌ ಸೇರಿದೆ. ಒಂದು ವೇಳೆ ಸಿನಿಮಾವನ್ನು ಪ್ರತ್ಯೇಕವಾಗಿ ಹಣ ಪಾವತಿ ಮಾಡಲು ಬಯಸದೇ ಇದ್ದಲ್ಲಿ ನೀವು ಜೂನ್​ 3ರವರೆಗೂ ಕಾಯಬೇಕಾಗುತ್ತದೆ. ಜೂನ್​ 3ರ ಬಳಿಕ ಆಯಾ ಒಟಿಟಿಗಳಲ್ಲಿ ಸಹಜವಾಗಿ ಸ್ಟ್ರೀಮಿಂಗ್​ ಆಗಲಿದೆ. ಆಗ ಅದು ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ.

ಇದನ್ನೂ ಓದಿ: ಹಾಲಿವುಡ್​ ಸಿನಿಮಾಗೂ ಸೆಡ್ಡು ಹೊಡೆದ ಕೆಜಿಎಫ್​ 2​, ಸೂಪರ್​​ ಹೀರೋ ಕೈಯಲ್ಲೂ ರಾಕಿನಾ ಟಚ್​ ಮಾಡೋಕೆ ಆಗ್ಲಿಲ್ಲ


ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅವರ 'RRR' ಚಿತ್ರ 20 ನೇ ಶತಮಾನದ ಆರಂಭದ ಇಬ್ಬರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಸುತ್ತ ಸುತ್ತುವ ಕಾಲ್ಪನಿಕ ಅವಧಿಯ ನಾಟಕವಾಗಿದೆ. ಚಲನಚಿತ್ರವು ಅದರ ಅಗಾಧವಾದ ಸಿನಿಮೀಯ ಪ್ರಮಾಣ, ಆಕ್ಷನ್ ಮತ್ತು ನಾಟಕಕ್ಕಾಗಿ ಪ್ರಶಂಸೆಯನ್ನು ಪಡೆಯಿತು ಮತ್ತು UK ನಂತಹ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಭಾರತೀಯ ಚಲನಚಿತ್ರಗಳು ಸಾಂಪ್ರದಾಯಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ, ಆದರೆ RRR ಯುಕೆಯಲ್ಲೂ ಸಹ ಕಮಾಲ್ ಮಾಡಿ ಸೈ ಎನಿಸಿಕೊಂಡಿದೆ.

Published by:Vasudeva M
First published: