Viral Video: ಪಸೂರಿ ಹಾಡಿಗೆ ರಕುಲ್ ಡಾನ್ಸ್ ನೋಡಿ ನೆಟ್ಟಿಗರು ಫುಲ್ ಫಿದಾ! ಈ ವಿಡಿಯೋ ಇಲ್ಲಿದೆ

ಮೇರಿ ಡೋಲ್ ಜುದಾಯಾಂದೀ, ತೆನು ಕಬರ್ ಕಿವೆ ಹೋಂವೆ, ಆ ಜಾವೇ ದಿಲ್ ತೇರಾ, ಪೂರಾ ವಿ ನಾ ಹೋವೆ. ಹಾಡಿಗೆ ಮಾರು ಹೋಗಿರುವವರ ಪೈಕಿ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಕೂಡ ಒಬ್ಬರು. ಹಾಗಾಗಿ, ಅವರು ಕೂಡ ಇನ್‍ಸ್ಟಾಗ್ರಾಂನಲ್ಲಿ ಈ ಹಾಡಿಗೆ ತನ್ಮಯಳಾಗಿ ಡಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ರಾಕುಲ್ ಪ್ರೀತ್ ಸಿಂಗ್

ರಾಕುಲ್ ಪ್ರೀತ್ ಸಿಂಗ್

  • Share this:
ಮೇರಿ ಡೋಲ್ ಜುದಾಯಾಂದೀ, ತೆನು ಕಬರ್ ಕಿವೆ ಹೋಂವೆ, ಆ ಜಾವೇ ದಿಲ್ ತೇರಾ, ಪೂರಾ ವಿ ನಾ ಹೋವೆ.  ಈ ಹಾಡು (Song) ಇತ್ತೀಚೆಗೆ ಇಂಟರ್‍ನೆಟ್‍ನಲ್ಲಿ (Internet) ತನ್ನದೇ ಹವಾ ಸೃಷ್ಟಿಸಿದೆ. ಪಾಕಿಸ್ತಾನದ (Pakistan) ಜನಪ್ರಿಯ ಕೋಕ್ ಸ್ಟುಡಿಯೋಸ್‍ನ ಈ ಪಸೂರಿ ಹಾಡನ್ನು ಅಲ್ಲಿನ ಗಾಯಕರಾದ ಅಲಿ ಸೇಥಿ ಮತ್ತು ಶಾಯಿ ಗಿಲ್ ಹಾಡಿದ್ದು, ಎಲ್ಲೆಡೆ ಸಿಕ್ಕಾಪಟ್ಟೆ ಜನಪ್ರಿಯತೆ ಗಿಟ್ಟಿಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ (Social Media) ಈ ಹಾಡಿಗೆ ಸಂಬಂಧಿಸಿದಂತೆ ನೀವೂ ಕೂಡ ಒಂದಲ್ಲ ಒಂದು ಪೋಸ್ಟ್ ಅನ್ನು ನೋಡಿಯೇ ಇರುತ್ತೀರಾ? ಇನ್ನು ಇನ್‍ಸ್ಟಾಗ್ರಾಂ, ಯೂಟ್ಯೂಬ್‍ನಲ್ಲಂತೂ, ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೆ (Celebrity) ಲೆಕ್ಕವಿಲ್ಲದಷ್ಟು ಮಂದಿ ಈ ಹಾಡಿನ ರೀಲ್‍ಗಳನ್ನು ಮಾಡಿ ಪೋಸ್ಟ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ರಕುಲ್ ಸಿಂಗ್ ಡಾನ್ಸ್ ವಿಡಿಯೋ
ಮೇರಿ ಡೋಲ್ ಜುದಾಯಾಂದೀ, ತೆನು ಕಬರ್ ಕಿವೆ ಹೋಂವೆ, ಆ ಜಾವೇ ದಿಲ್ ತೇರಾ, ಪೂರಾ ವಿ ನಾ ಹೋವೆ. ಹಾಡಿಗೆ ಮಾರು ಹೋಗಿರುವವರ ಪೈಕಿ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಕೂಡ ಒಬ್ಬರು. ಹಾಗಾಗಿ, ಅವರು ಕೂಡ ಇನ್‍ಸ್ಟಾಗ್ರಾಂನಲ್ಲಿ ಈ ಹಾಡಿಗೆ ತನ್ಮಯಳಾಗಿ ಡಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ತಕ್ಷಣವೇ ವೈರಲ್ ಆಗಿದ್ದು, ಹಾಡಿನಂತೆ, ರಾಕುಲ್ ಅವರ ನೃತ್ಯವೂ ಕೂಡ ನೋಡುಗರನ್ನು ಮೋಡಿ ಮಾಡಿದೆ.

ಇದನ್ನೂ ಓದಿ: Barso Re: ಟೈಮ್ಸ್ ಸ್ಕ್ವೇರ್​ನಲ್ಲಿ ಬಾಲಿವುಡ್ ಮಳೆ ಹಾಡು! ಐಶ್ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಯುವತಿಯರು

“ನನ್ನ ಸದ್ಯದ ಮೆಚ್ಚಿನ ಹಾಡಿನ ಕುರಿತಂತೆ ನನ್ನ ಭಾವನೆಗಳು” ಎಂದು ಈ ಪೋಸ್ಟಿನ ಜೊತೆಗೆ ಬರೆದುಕೊಂಡಿದ್ದಾರೆ ರಕುಲ್. ತಮ್ಮ ಡಾನ್ಸಿನ ವಿಡಿಯೋ ಪೋಸ್ಟಿನಲ್ಲಿ ರಾಕುಲ್ ಪ್ರೀತ್ ಸಿಂಗ್, ಕೋರಿಯೋಗ್ರಾಫರ್ ಡಿಂಪಲ್ ಕೊಟೆಚಾ ಅವರನ್ನು ಕೂಡ ಟ್ಯಾಗ್ ಮಾಡಿದ್ದು, “ಅತ್ಯುತ್ತಮವಾಗಿ ಇರುವುದಕ್ಕೆ ಧನ್ಯವಾದಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.


View this post on Instagram


A post shared by Rakul Singh (@rakulpreet)
ಈ ವಿಡಿಯೋದಲ್ಲಿ ರಕುಲ್ ಕಪ್ಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ತಾಳಕ್ಕೆ ತಕ್ಕಂತೆ ವಿಭಿನ್ನ ಬಗೆಯಲ್ಲಿ ಹೆಜ್ಜೆ ಹಾಕಿದ್ದಾರೆ ಆಕೆ. ರಕುಲ್ ಅವರ ಈ ಡಾನ್ಸ್ ನೋಡಿ ನೀವು ಕೂಡ ಫಿದಾ ಆಗುವುದರಲ್ಲಿ ಸಂಶಯವಿಲ್ಲ.

ಮನಮೋಹಕ ನೃತ್ಯವನ್ನು ಕಂಡು, ನೆಟ್ಟಿಗರು ಏನು ಹೇಳಿದ್ದಾರೆ ನೋಡಿ
ಈ ವೈರಲ್ ವಿಡಿಯೋವನ್ನು ಕೇವಲ ಆರು ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ಈಗಾಗಲೇ ಇದು ಸುಮಾರು 3.1 ಮಿಲಿಯನ್‍ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಈ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ ಕೂಡ. ವಿಡಿಯೋದಲ್ಲಿ ರಕುಲ್ ಪ್ರೀತ್ ಸಿಂಗ್ ಮಾಡಿರುವ ಮನಮೋಹಕ ನೃತ್ಯವನ್ನು ಕಂಡು, ನೆಟ್ಟಿಗರು ಮೆಚ್ಚುಗೆ ಸೂಚಿಸಿ, ಹಲವಾರು ಬಗೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ನಟ, ನಿರ್ಮಾಪಕ ಜಾಕಿ ಭಗ್ನಾನಿ ಅವರು ಈ ವಿಡಿಯೋವನ್ನು ವೀಕ್ಷಿಸಿ, “ನೀನು ನನಗೂ ಕಲಿಸುತ್ತೀಯಾ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ರಕುಲ್ ಮತ್ತು ಜಾಕಿ ಭಗ್ನಾನಿ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ಆ ವಿಷಯ ಗುಟ್ಟಾಗಿ ಉಳಿದಿಲ್ಲ. ಇಬ್ಬರು ಹಲವಾರು ಬಾರಿ ಬಹಿರಂಗವಾಗಿ ಸಮಾರಂಭಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಕೋರಿಯೋಗ್ರಾಫರ್ ಡಿಂಪಲ್ ಕೊಟೆಚಾ ಅವರು ಕೂಡ ರಕುಲ್ ಅವರ ಈ ವೈರಲ್ ವಿಡಿಯೋಗೆ , “ನೀನು ನೀನಾಗಿರುವುದಕ್ಕೆ ಧನ್ಯವಾದಗಳು” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Kiara Advani: ಕಿಯಾರಾ ಮಾದಕ ನೋಟಕ್ಕೆ ಅಭಿಮಾನಿಗಳು ಫಿದಾ, ಸೀರೆ ತೊಟ್ಟು ಫೋಸ್​​ ನೀಡಿದ ನಟಿ

“ಅತ್ಯಂತ ಸುಂದರವಾದ ಡಾನ್ಸ್ ಕಾಂಬಿನೇಶನ್ ಮ್ಯಾಡಮ್” ಎಂದು ಒಬ್ಬ ಇನ್‍ಸ್ಟಾಗ್ರಾಂ ಬಳಕೆದಾರರು ಪ್ರಶಂಸಿಸಿದ್ದರೆ, ಇನ್ನೊಬ್ಬರು “ಈ ಪಸೂರಿ ಹಾಡು ನನಗಿಷ್ಟ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ನೆಟ್ಟಿಗ “ಮ್ಯಾಮ್ ನೀವು ನನಗೆ ಅಚ್ಚುಮೆಚ್ಚು” ಎಂದು ಬರೆದಿದ್ದರೆ, ಸಾಕಷ್ಟು ಮಂದಿ ನೆಟ್ಟಿಗರು ಹೃದಯದ ಇಮೋಜಿಗಳನ್ನು ಪೋಸ್ಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published by:Ashwini Prabhu
First published: