• Home
  • »
  • News
  • »
  • entertainment
  • »
  • Rakul and Jackky: ಅಕ್ಕನ ಕಾಲೆಳೆದಿದ್ದೇಕೆ ಸಹೋದರ? ಅಮನ್ ಹೇಳಿಕೆಗೆ ಏನು ಹೇಳಿದ್ರು ರಕುಲ್ ಪ್ರೀತ್ ಸಿಂಗ್?

Rakul and Jackky: ಅಕ್ಕನ ಕಾಲೆಳೆದಿದ್ದೇಕೆ ಸಹೋದರ? ಅಮನ್ ಹೇಳಿಕೆಗೆ ಏನು ಹೇಳಿದ್ರು ರಕುಲ್ ಪ್ರೀತ್ ಸಿಂಗ್?

ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ

ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ

ವಿವಾಹದ ಕುರಿತಾಗಿ ಸ್ವತಃ ರಾಕುಲ್ ಸಹೋದರನೇ ದೃಢಪಡಿಸಿದ್ದರಿಂದ ಸುದ್ದಿಮಾಧ್ಯಮ ಧೈರ್ಯವಾಗಿಯೇ ಇದನ್ನು ವರದಿ ಮಾಡಿದೆ. ಆದರೆ ರಾಕುಲ್ ಪ್ರತಿಯಾಗಿ ಹಾಸ್ಯಸ್ಪದ ಕಾಮೆಂಟ್ ನೀಡಿದ್ದು ವಿವಾಹದ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದಾರೆ.

  • News18 Kannada
  • Last Updated :
  • New Delhi, India
  • Share this:

ರಕುಲ್ ಪ್ರೀತ್ ಸಿಂಗ್ (Rakul Preet Singh) ಜಾಕಿ ಭಗ್ನಾನಿ (Jackky Bhagnani) ಅವರನ್ನು 2023 ರಲ್ಲಿ ವಿವಾಹವಾಗುತ್ತಿರುವುದಾಗಿ ನಟಿಯ ಸಹೋದರ ಹೇಳಿಕೆ ನೀಡಿದ್ದು, ರಾಕುಲ್ ಈ ಹೇಳಿಕೆಯನ್ನು ಅಲ್ಲಗೆಳೆದಿದ್ದಾರೆ. ನನ್ನ ಜೀವನದ ಕುರಿತು ನನಗೆ ಮಾಹಿತಿ ಇಲ್ಲ ಇದೊಂದು ರೀತಿ ಕಾಮಿಡಿಯಾಗಿದೆ (Comedy)ಎಂದು ರಾಕುಲ್ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಪತ್ರಿಕೆಯೊಂದಕ್ಕೆ ವಿಶೇಷವಾಗಿ ರಾಕುಲ್ ಹಾಗೂ ಜಾಕಿ 2023 ರಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ ಎಂಬ ಸುದ್ದಿಯನ್ನು ವರದಿ ಮಾಡಿತ್ತು. ಈ ಕುರಿತು ನಟಿಯ ಸಹೋದರ ಅಮನ್ (Aman) ಕೂಡ ಸುದ್ದಿಪತ್ರಿಕೆಗೆ ಈ ಮಾಹಿತಿ ನಿಜ ಎಂದು ದೃಢೀಕರಿಸಿದ್ದು ಶೀಘ್ರದಲ್ಲೇ ವಿವಾಹ (Marriage) ನಡೆಯಲಿದೆ ಎಂದು ತಿಳಿಸಿದ್ದರು. ರಕುಲ್ ಹಾಗೂ ಜಾಕಿ ಹಲವಾರು ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿದ್ದಾರೆ (Relationship).


ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ ರಕುಲ್
ಆದರೆ ಈ ಸುದ್ದಿ ತಿಳಿದು ಹಾಸ್ಯಚಟಾಕಿ ಹಾರಿಸಿರುವ ರಾಕುಲ್, ಟ್ವಿಟ್ಟರ್‌ನಲ್ಲಿ ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ಇಟೈಮ್ಸ್ ಮಾಡಿರುವ ವರದಿಯನ್ನು ಹಂಚಿಕೊಂಡಿರುವ ನಟಿ, ಹಾಸ್ಯದ ಎಮೋಜಿಯನ್ನು ಕಾಮೆಂಟ್‌ನಲ್ಲಿ ಲಗತ್ತಿಸಿದ್ದು, ಅಮನ್ ಅನ್ನು ಟ್ಯಾಗ್ ಮಾಡಿದ್ದಾರೆ. ದೆ ದೆ ಪ್ಯಾರ್ ದೆ ನಟಿ ಸಹೋದರನನ್ನು ಕಿಚಾಯಿಸಿದ್ದು, ನೀನು ಇದನ್ನು ದೃಢಪಡಿಸಿರುವುದೇ ಎಂದು ನೇರವಾಗಿಯೇ ಕೇಳಿದ್ದಾರೆ. ಈ ಬಗ್ಗೆ ನೀನು ನನಗೆ ಏನೂ ಹೇಳಿಲ್ಲವಲ್ಲ ಎಂದು ಹಾಸ್ಯದಿಂದಲೇ ಸಹೋದರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನನ್ನ ಜೀವನದ ಸುದ್ದಿಯ ಕುರಿತು ನನಗೆ ಗೊತ್ತಿಲ್ಲ ಇದೊಂದು ರೀತಿ ಕಾಮಿಡಿಯಾಗಿದೆ ಎಂದು ನಟಿ ಟ್ವೀಟ್ ಮಾಡಿದ್ದಾರೆ.


ನಟಿಯ ಕಾಮೆಂಟ್ ಅನ್ನು ನೋಡಿದಾಗ ರಕುಲ್ ನಿರಾಕರಣೆ ವ್ಯಕ್ತವಾಗಿದ್ದು ನಟಿ ತಮ್ಮ ವಿವಾಹ ಸುದ್ದಿಯನ್ನು ಅಧಿಕೃತಗೊಳಿಸದೇ ಇರುವುದು ಕಂಡುಬಂದಿದೆ.


ವಿವಾಹ ವರದಿಯನ್ನು ನಿರಾಕರಿಸಿದ ರಕುಲ್
ಈ ಹಿಂದೆ ಇಟೈಮ್ಸ್ ರಾಕುಲ್ ಹಾಗೂ ಜಾಕಿ ಭಗ್ನಾನಿ ವಿವಾಹಕ್ಕೆ ಸಿದ್ಧರಾಗುತ್ತಿರುವುದಾಗಿ ವರದಿ ಮಾಡಿತ್ತು. 2023 ರಲ್ಲಿಯೇ ವಿವಾಹ ಖಚಿತವಾಗಿ ನಡೆಯಲಿದೆ. ಇಬ್ಬರೂ ಪರಸ್ಪರ ಉತ್ತಮ ಬಾಂಧವ್ಯವವನ್ನು ಹೊಂದಿದ್ದು ವಿವಾಹ ಬಂಧನಲ್ಲಿ ನಂಬಿಕೆಯನ್ನಿರಿಸಿಕೊಂಡಿದ್ದಾರೆ ಎಂಬ ವರದಿಯನ್ವಯ ಸುದ್ದಿಮಾಧ್ಯಮ ರಾಕುಲ್ ಹಾಗೂ ಜಾಕಿ ವಿವಾಹ 2023 ರಲ್ಲಿ ನಡೆಯುವುದಾಗಿ ತಿಳಿಸಿತ್ತು.


ಇದನ್ನೂ ಓದಿ: Kantara: ಭಯಾನಕ ಕಣ್ಣುಗಳಿಂದ ಪ್ರೇಕ್ಷಕರನ್ನು ಭಯಭೀತಗೊಳಿಸಿದ ಕಾಂತಾರದ ನವೀನ್ ಬೊಂದೇಲ್ ಇವ್ರೇ!


ಇನ್ನು ರಾಕುಲ್ ಸಹೋದರ ಅಮನ್ ಕೂಡ ವಿವಾಹ ಸುದ್ದಿಗೆ ಪುಷ್ಟಿನೀಡುವಂತೆಯೇ ಮಾತನಾಡಿದ್ದು, ರಾಕುಲ್ ಅವರು ಜಾಕಿ ಭಗ್ನಾನಿಯವರ ಹೆಚ್ಚಿನ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಇವರಿಬ್ಬರೂ ವಿವಾಹಕ್ಕೆ ಅಸ್ತು ಎಂದಿರುವುದು ನಿಜವಾಗಿದ್ದರೂ ಇನ್ನೂ ಈ ಕುರಿತು ಯಾವುದೇ ಮಾಹಿತಿ ದೃಢೀಕರಿಸಿಲ್ಲ. ಜಾಕಿ ಅತ್ಯುನ್ನತ ನಿರ್ಮಾಪಕರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು ನಿರೀಕ್ಷಿತ ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿದೆ. ನಿಜವಾಗಿ ಹೇಳಬೇಕೆಂದರೆ ರಾಕುಲ್ ಹಾಗೂ ಜಾಕಿ ಇಬ್ಬರೂ ಬ್ಯುಸಿಯಾಗಿಯೇ ಇರುವವರು ಹಾಗಾಗಿ ಇಬ್ಬರೂ ತಮ್ಮದೇ ಗುರಿಗಳನ್ನು ಹೊಂದಿದ್ದಾರೆ ಎಂದು ಅಮನ್ ತಿಳಿಸಿದ್ದರು.


ರಕುಲ್ ಮುಂಬರುವ ಚಿತ್ರಗಳು
ವಿವಾಹದ ಕುರಿತಾಗಿ ಸ್ವತಃ ರಾಕುಲ್ ಸಹೋದರನೇ ದೃಢಪಡಿಸಿದ್ದರಿಂದ ಸುದ್ದಿಮಾಧ್ಯಮ ಧೈರ್ಯವಾಗಿಯೇ ಇದನ್ನು ವರದಿ ಮಾಡಿದೆ. ಆದರೆ ರಾಕುಲ್ ಪ್ರತಿಯಾಗಿ ಹಾಸ್ಯಸ್ಪದ ಕಾಮೆಂಟ್ ನೀಡಿದ್ದು ವಿವಾಹದ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದಾರೆ. ಅಂತೆಯೇ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿರುವುದಾಗಿ ನಟಿ ಹೇಳಿಕೊಂಡಿದ್ದು, ಬ್ಯುಸಿಯಾಗಿರುವುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ:  Head Bush Film: ಬೆಳ್ಳಿಪರದೆ ಮೇಲೆ ಭೂಗತ ಲೋಕ! ರಿಯಲ್ ಡಾನ್ ಕಥೆಗೆ ದುಡ್ಡು ಹಾಕಿದ ಧನಂಜಯ್


ನಟಿ ಆಯುಷ್ಮಾನ್ ಖುರಾನಾ ಅವರೊಂದಿಗೆ ಡಾಕ್ಟರ್ ಜಿ ಚಿತ್ರದಲ್ಲಿ ನಟಿಸಿದ್ದು, ಚಿತ್ರ ಅಕ್ಟೋಬರ್ 14 ರಂದು ತೆರೆಕಾಣಲಿದೆ. ಥ್ಯಾಂಕ್ ಗಾಡ್ ಚಿತ್ರ ಅಕ್ಟೋಬರ್ 25 ರಂದು ರಿಲೀಸ್ ಆಗಲಿದ್ದು, ಸಿದ್ಧಾರ್ಥ್ ಮಲ್ಹೋತ್ರಾ ಅಜಯ್ ದೇವಗನ್ ಪ್ರಮುಖ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಇದಲ್ಲದೆ ಬಹುನಿರೀಕ್ಷಿತ ಚಿತ್ರ ಇಂಡಿಯನ್ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Published by:Ashwini Prabhu
First published: