ನಮ್ಮ ಶಾಲೆಗಳಲ್ಲಿ (School) ಮತ್ತು ಕಾಲೇಜುಗಳಲ್ಲಿ (Collage) ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಲೈಂಗಿಕ ವಿಷಯದ ಬಗ್ಗೆ ಶಿಕ್ಷಣದ ಅವಶ್ಯಕತೆ ತುಂಬಾನೇ ಇದೆ ಅಂತ ಅನೇಕರು ಹೇಳುತ್ತಲೇ ಇರುವುದನ್ನು ನಾವೆಲ್ಲಾ ಕೇಳುತ್ತೇವೆ ಮತ್ತು ನೋಡುತ್ತಿರುತ್ತೇವೆ. ಏನಿದು ಲೈಂಗಿಕ ಶಿಕ್ಷಣ? ಇದರ ಬಗ್ಗೆ ಓದುವ ಮಕ್ಕಳಿಗೆ ಅರಿವು ಮೂಡಿಸುವುದು ಈಗಿನ ದಿನಗಳಲ್ಲಿ ಎಷ್ಟು ಮುಖ್ಯವಾಗುತ್ತದೆ? ಅಂತೆಲ್ಲಾ ಪ್ರಶ್ನೆಗಳು (Question) ನಮ್ಮ ನಿಮ್ಮೆಲ್ಲರ ತಲೆಯಲ್ಲಿ ಒಮ್ಮೆಯಾದರೂ ಬಂದು ಹೋಗಿರಬಹುದು.
ಲೈಂಗಿಕ ಶಿಕ್ಷಣ ಎಂದರೆ ನಮ್ಮ ದೇಹದಲ್ಲಿ ವಯಸ್ಸಿಗೆ ತಕ್ಕಂತೆ ಬದಲಾಗುವಂತಹ ನೈಸರ್ಗಿಕವಾದ ಬದಲಾವಣೆಗಳಿಂದ ಹಿಡಿದು ಮಹಿಳೆಯರ ಸಂತಾನೋತ್ಪತ್ತಿ ಮತ್ತು ಮುಟ್ಟಿನ ಸಮಸ್ಯೆಗಳವರೆಗೆ ಎಲ್ಲವೂ ಮಕ್ಕಳಿಗೆ ಅರಿವು ಮೂಡಿಸುವುದು ಅತ್ಯಗತ್ಯ ಅಂತ ಹೇಳಲಾಗುತ್ತದೆ.
ಈಗಾಗಲೇ ಲೈಂಗಿಕ ಶಿಕ್ಷಣವು ಶಾಲೆಯ ಮತ್ತು ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳಿಗೆ ಎಷ್ಟು ಮುಖ್ಯ ಅಂತ ಅನೇಕ ಸೆಲೆಬ್ರಿಟಿಗಳು ಹೇಳಿರುವುದನ್ನು ನಾವೆಲ್ಲಾ ಕೇಳಿರುತ್ತೇವೆ. ಈಗ ಇಲ್ಲಿ ಒಬ್ಬ ಬಾಲಿವುಡ್ ನಟಿ ಕೂಡ ಈ ವಿಷಯದ ಬಗ್ಗೆ ಮಾತಾಡಿದ್ದಾರೆ ನೋಡಿ.
ಲೈಂಗಿಕ ಶಿಕ್ಷಣದ ಬಗ್ಗೆ ಏನ್ ಹೇಳಿದ್ರು ನಟಿ ರಕುಲ್ ಪ್ರೀತ್ ಸಿಂಗ್?
ಕೊನೆಯ ಬಾರಿಗೆ 'ಡಾಕ್ಟರ್ ಜಿ' ಚಿತ್ರದಲ್ಲಿ ಕಾಣಿಸಿಕೊಂಡ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯವನ್ನು ಆಧರಿಸಿದ 'ಛತ್ರಿವಾಲಿ' ಎಂಬ ಚಿತ್ರದಲ್ಲಿ ಮುಂದೆ ಕಾಣಿಸಿಕೊಳ್ಳಲಿದ್ದಾರೆ.
ಮನೋರಂಜನೆ ಮಾಧ್ಯಮ ಪೋರ್ಟಲ್ ನೊಂದಿಗಿನ ಸಂವಾದದ ಸಮಯದಲ್ಲಿ, ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ತೆರೆದಿಟ್ಟ ರಾಕುಲ್ ಪ್ರೀತ್ ಅವರು "ನಾವು ಲೈಂಗಿಕ ಶಿಕ್ಷಣದ ಮಹತ್ವವನ್ನು ಬೇರೆ ರೀತಿಯಲ್ಲಿಯೇ ಅರ್ಥ ಮಾಡಿಕೊಂಡಿದ್ದೇವೆ, ಆದರೆ ಆ ವಿಷಯಗಳನ್ನು ಈಗ ನಮ್ಮ ತಲೆಯಿಂದ ಹೊರಕ್ಕೆ ತಳ್ಳಿಹಾಕಲು ಬಯಸುತ್ತೇವೆ.
ಇದು ಕಡ್ಡಾಯ ಎಂಬಂತಾಗಿದ್ದು ಇದು ಪುಸ್ತಕಗಳು ಮತ್ತು ಪಠ್ಯಕ್ರಮದ ಒಂದು ಭಾಗವಾಗಲು ಒಂದು ಕಾರಣವಿದೆ ಎಂದು ನಮ್ಮ ಚಿತ್ರದ ಟ್ರೈಲರ್ ಹೇಳುತ್ತದೆ ಎಂದು ರಕುಲ್ ಪ್ರೀತ್ ಸಿಂಗ್ ಹೇಳಿದ್ದಾರೆ.
ಮುಂದುವರೆಯುತ್ತ ಅವರು, "ನಾನು ದೊಡ್ಡವಳಾದಂತೆ, ಇದು ಸಮಯದ ಅಗತ್ಯ ಮತ್ತು ಇದು ಮುಖ್ಯ ಎಂದು ನಾನು ಯೋಚಿಸುತ್ತಲೇ ಇದ್ದೆ. ಲೈಂಗಿಕ ಶಿಕ್ಷಣವು ನೈಸರ್ಗಿಕ ಮಾನವ ಪ್ರಗತಿಯನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.
ನಾವು ಅದರಿಂದ ಓಡಿಹೋಗಲು ಅಥವಾ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಂತಿಮವಾಗಿ, ಇದು ಜೀವಶಾಸ್ತ್ರ ಮತ್ತು ವಿಜ್ಞಾನ ಮತ್ತು ಅದಕ್ಕೆ ಸಂಬಂಧಿಸಿದ ಆರೋಗ್ಯವನ್ನು ಹೊಂದಿದೆ” ಎಂದು ಹೇಳಿದ್ದಾರೆ.
ಮಕ್ಕಳಿಗೆ 13-14ನೇ ವಯಸ್ಸಿನಲ್ಲಿ ಲೈಂಗಿಕ ಶಿಕ್ಷಣ ನೀಡುವುದು ಮುಖ್ಯ
"ಆದರೆ ಜನರಿಗೆ ಲೈಂಗಿಕ ವಿಷಯದ ಬಗ್ಗೆ ಶಿಕ್ಷಣ ನೀಡಲು ಪ್ರಾರಂಭಿಸಲು ಸರಿಯಾದ ವಯಸ್ಸು ಯಾವುದು? ಅವರು ಈಗಾಗಲೇ ತಮ್ಮ ತಲೆಯಲ್ಲಿ ಅನೇಕ ರೀತಿಯ ನಿಷೇಧಗಳನ್ನು ತುಂಬಿಕೊಂಡಿದ್ದಾರೆ.
ಆದ್ದರಿಂದ ಮಕ್ಕಳು 13-14ನೇ ವಯಸ್ಸಿನಲ್ಲಿ ಎಂದರೆ ಪ್ರೌಢಾವಸ್ಥೆಯನ್ನು ತಲುಪುವ ಸಮಯಕ್ಕೆ ಅವರು ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲವನ್ನೂ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.
ಇದು ಅವರಿಗೆ ಲೈಂಗಿಕ ಶಿಕ್ಷಣ ನೀಡಲು ಪ್ರಾರಂಭಿಸುವ ಸರಿಯಾದ ವಯಸ್ಸು, ಏಕೆಂದರೆ ಅವರು ವಿದ್ಯಾವಂತರಾಗಿರುತ್ತಾರೆ ಮತ್ತು ಆಗ ಅವರು ಯಾವುದೇ ರೀತಿಯ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ” ಎಂದು ರಕುಲ್ ಪ್ರೀತ್ ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಮಹಿಳೆ ಸುರಕ್ಷತೆಯ ಬಗ್ಗೆ ಮಾತಾಡಿದ ರಾಕುಲ್
ದೆಹಲಿಯನ್ನು ಹೆಚ್ಚಾಗಿ ಅಸುರಕ್ಷಿತ ಸ್ಥಳವೆಂದು ಗುರುತಿಸಲಾಗಿದೆ, ವಿಶೇಷವಾಗಿ ಮಹಿಳೆಯರಿಗೆ ಅಂತ ಹೇಳಬಹುದು. ರಾಷ್ಟ್ರ ರಾಜಧಾನಿಯಲ್ಲಿನ ಅಪರಾಧ ಪ್ರಮಾಣವು ವಿವಿಧ ಸಾರ್ವಜನಿಕ ವೇದಿಕೆಗಳಲ್ಲಿ ಆಗಾಗ್ಗೆ ಚರ್ಚಿಸಲ್ಪಡುವುದರಿಂದ, ರಕುಲ್ ಪ್ರೀತ್ ಸಿಂಗ್ ಸಹ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ನೋಡಿ.
"ಪೋಷಕರು ಮನೆಯಲ್ಲಿ ತಮ್ಮ ಮಕ್ಕಳೊಂದಿಗೆ ಇಂತಹ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಬೇಕು ಮತ್ತು ಸಹ-ಶಿಕ್ಷಣ ಸಂಸ್ಕೃತಿಯನ್ನು ಉತ್ತೇಜಿಸಬೇಕು” ಎಂದು ನಟಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ