Rakul Preet Singh: ಡ್ರಗ್ ಕೇಸ್​ ವಿಚಾರಣೆಗೆ ಸಂಬಂಧಿಸಿದಂತೆ ಹೈದರಾಬಾದ್​ನಲ್ಲಿ ಕಾಣಿಸಿಕೊಂಡ ನಟಿ ರಾಕುಲ್ ಪ್ರೀತ್!

Rakul Preet Singh: 2017ರ ಜುಲೈ ತಿಂಗಳಿನಲ್ಲಿ ಡ್ರಗ್​​ ಪ್ರಕರಣ ಬಹಿರಂಗವಾಗಿತ್ತು. ಮಾತ್ರವಲ್ಲದೆ ಡ್ರಗ್​ ಕಳ್ಳ ಸಾಗಣೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳು ದಾಖಲಾಗಿತ್ತು. ಇದರಲ್ಲಿ ಭಾಗಿಯಾಗಿದ್ದ ಸುಮಾರು 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದರು.

ನಟಿ ರಾಕುಲ್ ಪ್ರೀತ್ ಸಿಂಗ್

ನಟಿ ರಾಕುಲ್ ಪ್ರೀತ್ ಸಿಂಗ್

 • Share this:
  Rakul Preet Singh: ಬಾಲಿವುಡ್ ನಟಿ ರಾಕುಲ್​ ಪ್ರೀತ್​ ಸಿಂಗ್​ ಹೈದರಾಬಾದ್​ನಲ್ಲಿ ಕಾಣಿಸಿಕೊಂಡಿದ್ದಾರೆ. 2017ರ ಡ್ರಗ್​ ಪ್ರಕರಣ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ರಾಕುಲ್​ ಅವರನ್ನು ಹೈದರಾಬಾದ್​ಗೆ ಕರೆಸಿಕೊಂಡಿದೆ. ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ಈ ತಾರೆ ಡ್ರಗ್​ ಕೇಸ್​ ವಿಚರಣೆಗೆ ಹಾಜರಾಗುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೀಗ ಇದ್ದಕ್ಕಿದ್ದಂತೆ ಹೈದರಾಬಾದ್​ನಲ್ಲಿ ಕಾಣಿಸಿಕೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

  ತೆಲುಗು ಸಿನಿಮಾರಂಗದಲ್ಲೂ ಸಂಚಲನ ಮೂಡಿಸಿದ್ದ ಡ್ರಗ್​ ಪ್ರಕರಣಕ್ಕೆ (Drug case) ಸಂಬಂಧಿಸಿದಂತೆ ತನಿಖೆ ಭರದಿಂದ ಸಾಗುತ್ತಿದೆ.  ಸಾಕ್ಷಿ ಕಲೆ ಹಾಕಲೆಂದು ನಟಿ ರಾಕುಲ್​ ಪ್ರೀತ್ (Rakul Preet)​ ಅವರನ್ನು ಇಡಿ ಕರೆಸಿಕೊಂಡಿದೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ 10 ಕ್ಕೂ ಹೆಚ್ಚು ಟಾಲಿವುಡ್​ ಕಲಾವಿದರನ್ನು ಕರೆಸಿಕೊಂಡಿತ್ತು.

  2017ರ ಜುಲೈ ತಿಂಗಳಿನಲ್ಲಿ ಡ್ರಗ್​​ ಪ್ರಕರಣ ಬಹಿರಂಗವಾಗಿತ್ತು. ಮಾತ್ರವಲ್ಲದೆ ಡ್ರಗ್​ ಕಳ್ಳ ಸಾಗಣೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳು ದಾಖಲಾಗಿತ್ತು. ಇದರಲ್ಲಿ ಭಾಗಿಯಾಗಿದ್ದ ಸುಮಾರು 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದರು.

  ಟಾಲಿವುಡ್​ ನಟರಾದ ರಾಣಾ ದಗ್ಗುಬಾಟಿ, ರವಿತೇಜ, ಪುರಿ ಜಗನ್ನಾಥ್​, ವನದೀಪ್​ ಇನ್ನಿತರರನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ಅದರಂತೆ ಟಾಲಿವುಡ್​ ಪರದೆಯ ಮೇಲೂ ಮಿಂಚಿದ್ದ ರಾಕುಲ್ ಅವರನ್ನು ಜಾರಿ ನಿರ್ದೇಶನಾಲಯ ಕರೆಸಿಕೊಂಡಿದ್ದು, ಡ್ರಗ್​​ ಪ್ರಕರಣ ಕುರಿತು ಕೆಲವು ದಾಖಲೆಯನ್ನು ಕಲೆಹಾಕುತ್ತಿದೆ ಎನ್ನಲಾಗುತ್ತಿದೆ.

  Ponniyin Selvan: ಮಣಿರತ್ನಂ ನಿರ್ದೇಶನದ ಸಿನಿಮಾ ಶೂಟಿಂಗ್​ನಲ್ಲಿ ಅವಘಡ: ಎಫ್​ ಐಆರ್​ ದಾಖಲು

  ಇನ್ನು ನಟಿ ಏಕಾಏಕಿ ಹೈದರಾಬಾದ್​ನಲ್ಲಿ ಕಾಣಿಸಿಕೊಂಡಿರುವು ಅನೇಕರಿಗೆ ಅಚ್ಚರಿಗೂ ಕಾರಣವಾಗಿರುವುಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ನಟಿ ಫೋಟೋಗಳು ಮತ್ತು ಹೈದರಾಬಾದ್​​ಗೆ ಬಂದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  2105-17ನನೇ ಸಾಲಿನ ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ನಟಿ ಚಾರ್ಮಿ ಕೌರ್​ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರದಂದು ಕರೆಸಿಕೊಂಡಿತ್ತು. ಸುಮಾರು 8 ಗಂಟೆಗಳ ಕಾಲ ನಟಿ ವಿಚಾರಣೆ ಎದುರಿಸಿದರು. ಆಗಸ್ಟ್ 31ರಂದು ನಿರ್ದೇಶಕ ಪುರಿ ಜಗನ್ನಾಥ್​ ಅವರನ್ನು  ಕರೆಸಿ ಹಣಕಾಸಿನ ವಿಚಾರದ ಬಗ್ಗೆ ವಿಚಾರಣೆ ಮಾಡಿತ್ತು.

  ಒಟ್ಟಿನಲ್ಲಿ ವಿಚಾರಣೆ ಬಳಿಕ ಮುಂದಿನ ನಡೆ ಏನು ಎಂಬುದು ತಿಳಿದುಬರಲಿದೆ. ಸದ್ಯ ನಟಿ ರಾಕುಲ್​ ಡಾಕ್ಟರ್​ ಜಿ ಸಿನಿಮಾದಲ್ಲಿ ಆಯುಷ್ಮಾನ್​ ಖುರಾನಾ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಅನುಭೂತಿ ಕಶ್ಯಪ್​ ನಿರ್ದೇಶಿಸಲಿದ್ದಾರೆ.
  Published by:Harshith AS
  First published: