ಎರಡು ತಿಂಗಳ ಕಾಲ ಇದ್ದ ಲಾಕ್ಡೌನ್ ಅನ್ನು ಸಡಿಲಗೊಳಿಸಿದ ನಂತರ ಅಂತರ ರಾಜ್ಯ ವಿಮಾನಯಾನ ಆರಂಭಗೊಂಡಿದೆ. ಸಾಕಷ್ಟು ಮಂದಿ ತಮ್ಮ ತಮ್ಮ ಮನೆಗಳಿಗೆ ಹಾಗೂ ಕೆಲಸಗಳಿಗೆ ಹಿಂತಿರುಗುತ್ತಿದ್ದಾರೆ. ಸೆಲೆಬ್ರಿಟಿಗಳೂ ಸಹ ತಮಗೆ ಬೇಕಾದಲ್ಲಿಗೆ ಹಾರುತ್ತಿದ್ದಾರೆ. ಇತ್ತೀಚೆಗಷ್ಟೆ ಅಂಗ್ರೇಜಿ ಮೀಡಿಯಂ ನಟಿ ರಾಧಿಕಾ ಸಹ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದರು. ಈಗ ನಟಿ ರಾಕುಲ್ ಪ್ರೀತ್ ಸಿಂಗ್ ಸಹ ಮುಂಬೈ ಏರ್ಪೋರ್ಟ್ನಲ್ಲಿ ಪ್ರತ್ಯಕ್ಷರಾಗಿದ್ದಾರೆ.
ರಾಕುಲ್ ಪ್ರೀತ್ ಸಿಂಗ್ ಹಾಗೂ ನಿರ್ದೇಶಕ ಲಕ್ಷ್ಯ ರಾಜ್ ಆನಂದ್ ಇಂದು ಮುಂಬೈನಿಂದ ದೆಹಲಿ ಪ್ರಯಾಣ ಬೆಳೆಸಿದ್ದಾರೆ. ಪಿಪಿಇ ಕಿಟ್ ತೊಟ್ಟು ವಿಮಾನ ನಿಲ್ದಾಣಕ್ಕೆ ಬಂದಿದ್ದ ರಾಕುಲ್ ಹಾಗೂ ಲಕ್ಷ್ಯ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ನಟಿಯನ್ನು ಕಂಡ ಛಾಯಾಗ್ರಾಹಕರು ಫೋಟೋ ತೆಗೆಯಲು ಮುಂದಾದರೆ, ಮುಖ ಕಾಣಿಸುವುದಿಲ್ಲ ಫೋಟೋ ಏಕೆ ತೆಗೆಯುತ್ತೀರಿ ಎಂದು ರಾಕುಲ್ ತಮಾಷೆ ಮಾಡುತ್ತಿದ್ದರು.
ಲಕ್ಷ್ಯ ದಾಳಿ ಮಾಡಲು ಬಾಹ್ಯಾಕಾಶ್ಕ್ಕೆ ಹೋಗುತ್ತಿದ್ದಾರೆ ಎಂದು ರಾಕುಲ್ ಆ ವಿಡಿಯೋಗೆ ಶೀರ್ಷಿಕೆ ನೀಡಿದ್ದು, ನಂತರ ಅದನ್ನು ನಾನು ಹಾಗೂ ಲಕ್ಷ್ಯ ಆಟ್ಯಾಕ್ ಮಾಡಲು ಹೋಗುತ್ತಿದ್ದೇವೆ ಎಂದು ಬದಲಾಯಿಸಿದ್ದಾರೆ.
#RakulPreetSingh shares what it's like travelling by a flight. pic.twitter.com/nynkrDVN24
— Filmfare (@filmfare) June 11, 2020
ವಿಮಾನ ನಿಲ್ದಾಣದಲ್ಲೂ ಸಾಮಜಿಕ ಅಂತರ ಕಾಯ್ದುಕೊಂಡಿರುವುದಾಗಿ ತಿಳಿಸಿರುವ ನಟಿ, ತಮ್ಮ ಮುಂದಿನ ಸಿನಿಮಾ ಅಟ್ಯಾಕ್ ಬಗ್ಗೆ ಕೊಂಚ ಮಾಹಿತಿ ನೀಡಿದ್ದಾರೆ. ಅದಕ್ಕೆ ಪರೋಕ್ಷವಾಗಿ ಬಾಹ್ಯಾಕಾಶಕ್ಕೆ ದಾಳಿ ಮಾಡಲು ಹೋಗುತ್ತಿರುವುದಾಗಿ ಎಂದಿದ್ದಾರೆ.
Rashmika Mandanna: ರಶ್ಮಿಕಾಗಿಂತ ಸಹ ನೃತ್ಯಗಾರ್ತಿಯೇ ಚೆಂದ ಎಂದ ಟಾಲಿವುಡ್ ನಿರ್ದೇಶಕ ನಾಗ್ ಅಶ್ವಿನ್
ಇದನ್ನೂ ಓದಿ: Nikhil Kumaraswamy: ಅಪ್ಪ-ಅಮ್ಮನೊಂದಿಗೆ ರಾಮನಗರಕ್ಕೆ ಭೇಟಿ ಕೊಟ್ಟ ನಿಖಿಲ್ ಕುಮಾರಸ್ವಾಮಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ