ಸ್ಯಾಂಡಲ್ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಲಾಕ್ಡೌನ್ ನಡುವೆಯೂ ರಕ್ಷಿತಾ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸದಾ ತಮ್ಮ ಗಂಡ ಹಾಗೂ ಪ್ರೊಡಕ್ಷನ್ ಟೀಮ್ ಜೊತೆ ಹೊರಗಡೆ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸುತ್ತಿದ್ದರು ರಕ್ಷಿತಾ. ಹೆಂಡತಿಯ ಹುಟ್ಟುಹಬ್ಬವನ್ನು ಪ್ರತಿವರ್ಷ ಸಂಭ್ರಮದಿಂದ ಆಚರಿಸುತ್ತಿದ್ದ ಪ್ರೇಮ್ ಈ ಸಲವೂ ಪ್ರೀತಿಯಿಂದ ಮನೆಯಲ್ಲೇ ರಕ್ಷಿತಾರ ಬರ್ತ್ ಡೇ ಆಚರಿಸಿದ್ದಾರೆ.
ಮಗ ಸೂರ್ಯನೊಂದಿಗೆ ಸೇರಿಕೊಂಡು ನಿನ್ನೆ ಸಂಜೆಯಿಂದಲೇ ರಕ್ಷಿತಾರ ಹುಟ್ಟುಹಬ್ಬಕ್ಕೆಂದು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು.ಮನೆಯಲ್ಲೇ ರಕ್ಷಿತಾಗಾಗಿ ತಮ್ಮ ಕೈಯಾರೆ ಕೇಕ್ ತಯಾರಿಸಿದ್ದಾರೆ. ಮಧ್ಯೆ ಅದರ ಟಿಕ್ಟಾಕ್ ವಿಡಿಯೋ ಸಹ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
View this post on Instagram
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ