Rashmika Mandanna: ರಶ್ಮಿಕಾ ಮಂದಣ್ಣ ಯಾರನ್ನ ಅಷ್ಟು ಪ್ರೀತಿಸುತ್ತಿದ್ದಾರೆ ಗೊತ್ತಾ..?

Dear Comrade: ಸಾಧಿಸಬೇಕಾದನ್ನು ಛಲ ಬಿಡದೆ ಪ್ರಯತ್ನಿಸುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ಪ್ರೀತಿ ವಿಷಯದಲ್ಲೂ ಅಷ್ಟೆ. ಅವರು ತಾನು ಪ್ರೀತಿಸುವವರಿಗಾಗಿ ಎಷ್ಟು ಬೇಕಾದರೂ ಹೋರಾಡುತ್ತಾರೆ.

Anitha E | news18
Updated:June 8, 2019, 4:34 PM IST
Rashmika Mandanna: ರಶ್ಮಿಕಾ ಮಂದಣ್ಣ ಯಾರನ್ನ ಅಷ್ಟು ಪ್ರೀತಿಸುತ್ತಿದ್ದಾರೆ ಗೊತ್ತಾ..?
ರಶ್ಮಿಕಾ ಮಂದಣ್ಣ
  • News18
  • Last Updated: June 8, 2019, 4:34 PM IST
  • Share this:
- ಅನಿತಾ ಈ, 

ರಶ್ಮಿಕಾ ಮಂದಣ್ಣ ಏನನ್ನಾದರೂ ಮಾಡಬೇಕು ಎಂದುಕೊಂಡರೆ ಅದು ಪೂರ್ಣವಾಗುವವರೆಗೂ ಛಲ ಬಿಡದೆ ಪ್ರಯತ್ನಿಸುವ ಕೊಡಗಿನ ಕುವರಿ. ಪ್ರೀತಿ ವಿಷಯದಲ್ಲೂ ಅಷ್ಟೆ. ಅವರು ತಾನು ಪ್ರೀತಿಸುವವರಿಗಾಗಿ ಎಷ್ಟು ಬೇಕಾದರೂ ಹೋರಾಡುತ್ತಾರೆ.

ಅದಕ್ಕೆ ಅವರು ಮಾಡಿರುವ ಟ್ವೀಟೇ ಸಾಕ್ಷಿ. ಹೌದು, ರಶ್ಮಿಕಾ ಇಷ್ಟಪಡುವುದಕ್ಕಾಗಿ ಹೋರಾಗಿ ಎಂದು ಟ್ವೀಟ್​ ಮಾಡಿದ್ದಾರೆ. ಅವರು ಇಷ್ಪಡುವುದು ಯಾವುದೋ ವ್ಯಕ್ತಿ ಅಥವಾ ವಸ್ತುವನ್ನಲ್ಲ. ಅವರಿಗೆ ತುಂಬಾ ಇಷ್ಟವಾದದ್ದು ಸಿನಿಮಾಗಳು.‘

ನಟಿ ರಶ್ಮಿಕಾ ಮಂದಣ್ಣ


ಅವರ ಅಭಿನಯದ ಡಿಯರ್​ ಕಾಮ್ರೆಡ್​ ಸಿನಿಮಾ ಇನ್ನೇನು 50 ದಿನಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕಾಗಿ ದಿನಗಣನೆ ಆರಂಭಿಸಿದ್ದಾರೆ ರಶ್ಮಿಕಾ. ಅದಕ್ಕಾಗಿಯೇ ಅದನ್ನು ಟ್ವೀಟ್​ ಮಾಡಿದ್ದಾರೆ.

Fight for what you love. ✊🏻 #50DaysToDearComradeರಶ್ಮಿಕಾ ತಮ್ಮ ಸಿನಿಮಾಗಾಗಿ ಮಾಡಿರುವ ಟ್ವೀಟ್​ಗಳಿಗೆ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಬಹಳ ಕೆಟ್ಟದಾಗಿ ಹಾಗೂ ಮನಸ್ಸಿಗೆ ಬಂದಂತೆ ಪ್ರತಿಕ್ರಿಯಿಸುತ್ತಿದ್ದಾರೆ.

 ಇನ್ನೂ ಕೆಲವರು ರಕ್ಷಿತ್​ ಹಾಗೂ ರಶ್ಮಿಕಾರ ಹೊಸ ಸಿನಿಮಾಗಳ ನಡುವೆ ಈಗಾಗಲೇ ಸ್ಪರ್ಧೆಯನ್ನು ಆರಂಭಿಸಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಹಾಗೂ 'ಡಿಯರ್​ ಕಾಮ್ರೆಡ್' ಚಿತ್ರಗಳಲ್ಲಿ ಯಾವುದು ಹಿಟ್​ ಆಗಲಿದೆ ಎಂದೆಲ್ಲ ಟ್ವೀಟ್​ ಮಾಡುತ್ತಿದ್ದರು.

 

ರಕ್ಷಿತ್ ಹಾಗೂ ರಶ್ಮಿಕಾ ನಡುವೆ ಯಾವ ರೀತಿಯ ಸ್ಪರ್ಧೆ ಇದೆಯೋ ಇಲ್ಲವೋ ಯಾರಿಗೂ ಗೊತ್ತಿಲ್ಲ. ಆದರೆ ಅಭಿಮಾನಿಗಳು ಮಾತ್ರ ಅಭಿಮಾನದ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೆಸರೆರಚಾಡುತ್ತಿದ್ದಾರೆ.

Mouni Roy Photos: ಮುದ್ದಾದ ನಗು ಮೊಗದ 'ಕೆ.ಜಿ.ಎಫ್' ಸಿನಿಮಾದ ನಟಿ ಮೌನಿ ರಾಯ್​


First published:June 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ