Rakshith Shetty: ರಿಚರ್ಡ್ ಆಂಟನಿಯಾಗಿ ರಕ್ಷಿತ್ ಶೆಟ್ಟಿ, ಹೊಂಬಾಳೆ ಫಿಲಂಸ್​ ಹೊಸಾ ಚಿತ್ರದಲ್ಲಿ ರಿಚ್ಚಿ ಸಮುದ್ರರಾಜ !

Rakshith Shetty: ರಕ್ಚಿತ್ ಶೆಟ್ಟಿ ಹೊಸಾ ಚಿತ್ರಕ್ಕೆ ಈ ಬಾರಿ ಹೊಂಬಾಳೆ ಫಿಲಂಸ್ ಹೆಗಲು ಕೊಟ್ಟಿದೆ. ಕರಾವಳಿಯ ಪಿಲಿವೇಶವನ್ನು ಬೆಂಗಳೂರಿನ ಮಾಲ್​ಗಳಲ್ಲೂ ಕುಣಿಯುವಂತೆ ಮಾಡಿದ್ದ ಉಳಿದವರು ಕಂಡಂತೆಯ ರಿಚಿ ಈಗ ಮತ್ತೊಂದು ರೂಪದಲ್ಲಿ ಅದ್ಧೂರಿಯಾಗಿ ಬರೋಕೆ ಸಜ್ಜಾಗಿದ್ದಾನೆ.

ರಿಚರ್ಡ್ ಆಂಟನಿ ಪೋಸ್ಟರ್

ರಿಚರ್ಡ್ ಆಂಟನಿ ಪೋಸ್ಟರ್

  • Share this:
Rakshith Shetty: ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಯಾಕೋ ಸ್ವಲ್ಪ ದಿನ ಅಷ್ಟೇನೂ ಸುದ್ದಿಯಲ್ಲಿ ಇಲ್ವಲ್ಲಾ ಯಾಕೆ ಎಂದೇ ಅಭಿಮಾನಿಗಳು ಮಾತಾಡಿಕೊಳ್ತಾ ಇದ್ರು. ಅವನೇ ಶ್ರೀಮನ್ನಾರಾಯಣ ನಂತರ 777 ಚಾರ್ಲಿ ಬರುತ್ತೆ ಅನ್ನೋದು ಗೊತ್ತಾದ್ರೂ ಶೆಟ್ರ ಸೌಂಡ್ ಜಾಸ್ತಿ ಇಲ್ಲ ಎನ್ನುವಂತಿತ್ತು. ಆದ್ರೆ ಈಗ ಭಾರೀ ಸದ್ದಿನೊಂದಿಗೆ ಬರ್ತಿದ್ದಾರೆ ರಕ್ಷಿತ್ ಶೆಟ್ಟಿ. ಹೊಂಬಾಳೆ ಫಿಲಂಸ್​ನ ಮುಂದಿನ ಚಿತ್ರ ಘೋಷಣೆಯಾಗಿದ್ದು ಇದರ ನಿರ್ದೆಶನದ ಜವಾಬ್ದಾರಿ ಜೊತೆಗೆ ನಾಯಕ ಕೂಡಾ ರಕ್ಷಿತ್ ಶೆಟ್ಟಿ ಎನ್ನುವುದು ಅವರ ಫ್ಯಾನ್ಸ್ ಗೆ ಡಬಲ್ ಧಮಾಕಾ. ಅಂದ್ಹಾಗೆ ಚಿತ್ರದ ಹೆಸರು 'ರಿಚರ್ಡ್ ಆಂಟನಿ - ಲಾರ್ಡ್ ಆಫ್ ದ ಸೀ'. ಹೊಂಬಾಳೆ ಫಿಲಂಸ್​ ಇಂದು ಈ ಚಿತ್ರದ ಟೈಟಲ್ ರಿವೀಲ್ ಮಾಡಿದೆ.



ಕೆಜಿಎಫ್, ಸಲಾರ್ ರೀತಿಯ ಭಾರೀ ಬಜೆಟ್ ಸಿನಿಮಾಗಳ ನಿರ್ಮಾಣದಿಂದ ದೊಡ್ಡ ಹೆಸರು ಮಾಡಿರುವ ಹೊಂಬಾಳೆ ಫಿಲಂಸ್​ ಮುಂದಿನ ಪ್ರಾಜೆಕ್ಟ್ ರಕ್ಷಿತ್ ಶೆಟ್ಟಿ ಪಾಲಾಗಿರುವುದು ಸಂತಸದ ವಿಚಾರ. ರಕ್ಷಿತ್ ಸಾರಥದ್ಯದಲ್ಲೇ ಬಂದು ಜನರ ಮನಸ್ಸು ಗೆದ್ದಿದ್ದ 'ಉಳಿದವರು ಕಂಡಂತೆ' ಚಿತ್ರದ ಮುಂಚೆ ಮತ್ತು ನಂತರದ ಕತೆ ಇದು ಎನ್ನುವ ಹಿಂಟ್ ಟೀಸರ್​ನ ಕೊನೆಯಲ್ಲಿದೆ. ಅಲ್ಲಿಗೆ ಉಳಿದವರು ಕಂಡಂತೆಯ ರಿಚಿಯ ಬಗ್ಗೆ ಮತ್ತಷ್ಟು ವಿಚಾರವನ್ನು ಈ ಚಿತ್ರ ಹೇಳಲಿದೆ. ರಿಚರ್ಡ್ ಆಂಟನಿಯೇ ರಿಚಿ ಮತ್ತು ಇದು ಅವನದ್ದೇ ಕತೆ.

ಪಕ್ಕಾ ಕುಂದಾಪುರದ ಭಾಷೆಯ ಸೊಗಡು, ಕಾಕಿಗ್ ಬಣ್ಣ ಕಾಂತಾ ಅನ್ನೋ ಹಾಡಿನೊಂದಿಗೆ ಅಜರಾಮರವಾದ ಕಾಗೆ, ಗಮನ ಒಂಚೂರೂ ಆಕಡೆ ಈಕಡೆ ಹೋಗದಂತೆ ಹಿಡಿದಿಟ್ಟುಕೊಳ್ಳೋ ಪ್ರತಿಭಾವಂತ ನಟ ಅಚ್ಯುತ್ ಡೈಲಾಗ್ ಡೆಲಿವರಿ.. ಮತ್ತು ರಿಚಿ ಅಲಿಯಾಸ್ ರಿಚರ್ಡ್ ಆಂಟನಿಯೊಬ್ಬ ಬರೋದು ಬೇಡ ಎನ್ನುತ್ತಲೇ ಕಾಣೋ ಅವನ ಸಮಾಧಿ. ಕರಾವಳಿಯ ಪಿಲಿವೇಶವನ್ನು ಬೆಂಗಳೂರಿನ ಮಾಲ್​ಗಳಲ್ಲೂ ಕುಣಿಯುವಂತೆ ಮಾಡಿದ್ದ ಉಳಿದವರು ಕಂಡಂತೆಯ ರಿಚಿ ಈಗ ಮತ್ತೊಂದು ರೂಪದಲ್ಲಿ ಅದ್ಧೂರಿಯಾಗಿ ಬರೋಕೆ ಸಜ್ಜಾಗಿದ್ದಾನೆ.

ಉಳಿದಂತೆ ರಕ್ಷಿತ್ ಶೆಟ್ಟಿ ನೆಚ್ಚಿನ ಟೆಕ್ನಿಕಲ್ ಟೀಂ ಇದರಲ್ಲೂ ಇದೆ. ಅಜನೀಶ್ ಲೋಕನಾಥ್ ಸಂಗೀತ, ಕರ್ಮ್ ಚಾವ್ಲಾ ಕ್ಯಾಮೆರಾ ಕೈಚಳಕ ಇದ್ಮೇಲೆ ಇದೊಂದು ಕಂಪ್ಲೀಟ್ ಪ್ಯಾಕೇಜ್ ಅಂದ್ರೂ ತಪ್ಪಾಗಲ್ಲ. ಯಾವ್ದಕ್ಕೂ ಆ ಟೀಸರ್ ನ  ಒಂದ್ಸಲ ನೀವೂ ನೋಡ್ಬಿಡಿ.



ಇನ್ನು ಈ ಚಿತ್ರದ ನಾಯಕಿ ಯಾರು, ನಾಯಕಿ ಇರುತ್ತಾರಾ ಎನ್ನುವುದೂ ಇನ್ನೂ ತಿಳಿದುಬಂದಿಲ್ಲ. ಆದರೆ ಭರಪೂರ ಮನರಂಜನೆಗೆ ಏನೂ ಕಡಿಮೆ ಇಲ್ಲ ಎನ್ನುವುದಂತೂ ಸತ್ಯ. ಟೀಸರ್  ಕೊನೆಯಲ್ಲಿ ಅಪಘಾತಕ್ಕೀಡಾದ ದೋಣಿ, ಚಿಲ್ಲಾಪಿಲ್ಲಿಯಾಗಿ ಸಮುದ್ರಕ್ಕೆ ಬಿದ್ದಿರುವ ಅದರೊಳಗಿನ ಡಬ್ಬಗಳು ಮತ್ತು ಅದರೆಡೆಗೆ ವೇಗವಾಗಿ ಈಜಿಕೊಂಡು ಹೋಗುತ್ತಿರುವ ವ್ಯಕ್ತಿ ಈಗಾಗಲೇ ಇರೋ ಸಸ್ಪೆನ್ಸ್​ನ್ನು ಮತ್ತಷ್ಟು ಹೆಚ್ಚು ಮಾಡಿದ್ದಾರೆ ಎನ್ನುವುದನ್ನಂತೂ ಒಪ್ಪಲೇಬೇಕು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: