ರಶ್ಮಿಕಾ ಮಂದಣ್ಣ-ರಕ್ಷಿತ್​ ಶೆಟ್ಟಿ ಸಂಬಂಧ ಮುರಿಯಲು ಕಾರಣವೇನು?

Seema.R | news18
Updated:September 10, 2018, 5:49 PM IST
ರಶ್ಮಿಕಾ ಮಂದಣ್ಣ-ರಕ್ಷಿತ್​ ಶೆಟ್ಟಿ ಸಂಬಂಧ ಮುರಿಯಲು ಕಾರಣವೇನು?
ರಕ್ಷಿತ್​ ಎಂಗೇಜ್​ಮೆಂಟ್​ ಫೋಟೋ
  • News18
  • Last Updated: September 10, 2018, 5:49 PM IST
  • Share this:
ನ್ಯೂಸ್​ 18 ಕನ್ನಡ

ನಟಿ ರಶ್ಮಿಕಾ ಮಂದಣ್ಣ ಹಾಗೂ ಕಿರಿಕ್​ ಪಾರ್ಟಿ ನಾಯಕ ರಕ್ಷಿತ್​ ಶೆಟ್ಟಿ ನಡುವಿನ ಸಂಬಂಧ ಮುರಿದು ಬಿದ್ದಿದೆ ಎಂಬ ಗಾಳಿ ಸುದ್ದಿ ನಿಜವಾಗಿದೆ ಎಂದ ಅವರ ಕುಟುಂಬದ ಮೂಲಗಳಿಂದಲೇ ಮಾಹಿತಿ ಬರುತ್ತಿದೆ.

ತೆಲುಗಿನಲ್ಲಿ ಗೀತಗೋವಿಂದಂ ಚಿತ್ರದಲ್ಲಿ ನಟ ವಿಜಯ್​ ದೇವರಕೊಂಡ ಜೊತೆಗಿನ ಹಸಿಬಿಸಿ ದೃಶ್ಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ನಡುವಿನ ಲವ್​ ಬ್ರೇಕ್​ ಅಪ್​ ಸುದ್ದಿಯೊಂದು ಹರಿದಾಡಿತ್ತು. ಬಳಿಕ ನಟ ರಕ್ಷಿತ್​ ಹಾಗೂ ರಶ್ಮಿಕಾ ಇಬ್ಬರು ಫೇಸ್​ಬುಕ್​ ಲೈವ್​ ಬಂದು ಈ ಸುದ್ದಿ ಸುಳ್ಳು ನಾವಿಬ್ಬರು ಈಗಾಗಲೇ ಹಿರಿಯ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ನಮ್ಮ ಸಂಬಂಧದಲ್ಲಿ ಯಾವುದೇ ಬಿರುಕಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಆದರೆ, ಇದಾದ ಬಳಿಕ ನಟ ರಕ್ಷಿತ್​ ಸಾಮಾಜಿಕ ಜಾಲತಾಣದಿಂದ ಹೊರ ಹೋಗಿರುವುದು ಅವರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟಪಡಿಸಿತ್ತು. ಅಲ್ಲದೇ ಹಿರಿಯರೊಂದಿಗೆ ಮಾತನಾಡಿ ತಮ್ಮ ನಿಶ್ಚಿತಾರ್ಥ ಸಂಬಂಧವನ್ನು ಮುರಿದುಕೊಳ್ಳಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಮಾತನಾಡಲು ಎರಡು ಕುಟುಂಬಗಳು ನಿರಾಕರಿಸಿದೆ.

ಕನ್ನಡದ ಮೊಸ್ಟ್​ ಕ್ಯೂಟ್​ ಕಪಲ್​ ಆಗಿದ್ದ ಇವರ ಸಂಬಂಧ ಮುರಿಯಲು ಕಾರಣ ರಶ್ಮಿಕಾ ಯಶಸ್ಸು ಎಂದು ಕೂಡ ಹೇಳಲಾಗಿದೆ. ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಈಗ ಬಲು ಬೇಡಿಕೆ ನಟಿಯಾಗಿದ್ದು, ಆಕೆ ಟಾಪ್​ ನಟಿಯಾಗುವುದರಲ್ಲಿ ಸಂದೇಹವಿಲ್ಲ ಎನ್ನಲಾಗಿದೆ.

'ಚಲೋ', 'ಗೀತ ಗೋವಿಂದಂ' ಯಶಸ್ಸು ಅವರಿಗೆ ತೆಲುಗಿನಲ್ಲಿ ಅವಕಾಶಗಳ ಹೆಬ್ಬಾಗಿಲನ್ನೆ ತೆರೆದಿದೆ.  ಸದ್ಯದಲ್ಲೇ  ಈಗ ಚಿತ್ರ ಖ್ಯಾತಿಯ ನಾನಿ  ಅವರ ಜೊತೆ 'ದೇವದಾಸ್​ ಚಿತ್ರ ಕೂಡ ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿದ್ದು, ಅವರು ಈ ಸಂದರ್ಭದಲ್ಲಿ ತಮ್ಮ ಸಿನಿ ಕೆರೆಯರ್​ನತ್ತ ಹೆಚ್ಚು ಕೇಂದ್ರಿಕರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಶ್ಮಿಕಾ ಅವರೇ ರಕ್ಷಿತ್​ ಜೊತೆಗಿನ ತಮ್ಮ ಸಂಬಂಧ ಮುರಿದುಕೊಳ್ಳಲು ಮುಂದಾಗಿದ್ದಾರೆ. ಈ ಕುರಿತು ಈಗಾಗಲೇ ತಮ್ಮ ಪೋಷಕರು ಹಾಗೂ ಸ್ನೇಹಿತರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.ಈ ಎಲ್ಲಾ ಕುರಿತು ನಿಖರ ಮಾಹಿತಿಯನ್ನು ಆ ಜೋಡಿಗಳೆ ಸ್ಪಷ್ಟಪಡಿಸಬೇಕಾಗಿದ್ದು, ಈ ಸುದ್ದಿಗಳಿಗೆ ಬ್ರೇಕ್​ ನೀಡಬೇಕಿದೆ.

First published: September 10, 2018, 2:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading