777 Charlie: ಟಾರ್ಚರ್ ಕೊಡ್ತಿದಾನೆ ಚಾರ್ಲಿ: ಸಾಂಗ್ ಬಿಡುಗಡೆಗೆ ಡೇಟ್ ಫಿಕ್ಸ್

Torture Sing: ರಕ್ಷಿತ್​ ಶೆಟ್ಟಿ ಸಿನಿಮಾ ಎಂದಾಕ್ಷಣ ಏನಾದರೊಂದು ವಿಶೇಷತೆ ಇದ್ಧೆ ಇರುತ್ತದೆ. ಅದರಂತೆ 777ಚಾರ್ಲಿ ಸಿನಿಮಾ ಕೂಡ ಬಹಳ ವಿಶೇಷತೆಯನ್ನು ಹೊಂದಿದೆ. ಕೊರೋನಾ ಹಾಗೂ ಲಾಕ್​ಡೌನ್ ದಿನಚರಿಯಿಂದಾಗಿ ಶೆಟ್ರ ಚಾರ್ಲಿ ಸಿನಿಮಾದ ಅಪ್​ಡೇಟ್​ಗೆಂದು ಕಾಯುತ್ತಿದ್ದ ಅಭಿಮಾನಿಗಳಿಗೆ ‘ಟಾರ್ಚರ್’​ ಹಾಡೊಂದನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

777 ಚಾರ್ಲಿ

777 ಚಾರ್ಲಿ

 • Share this:
  ಸ್ಯಾಂಡಲ್​ವುಡ್​ ಸಿಂಪಲ್​ ಸ್ಟಾರ್ ರಕ್ಷಿತ್​ ಶೆಟ್ಟಿ  ‘777 ಚಾರ್ಲಿ’ (777 Charlie) ಸಿನಿಮಾದಲ್ಲಿ  ನಟಿಸುತ್ತಿರುವ ವಿಚಾರ ಎಲ್ಲರಿಗೂ  ಗೊತ್ತೇ ಇದೆ. ಈ ಸಿನಿಮಾವನ್ನು ಕಿರಣ್​ರಾಜ್​ ಕೆ (Kiranraj K)​​ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಕೆರಳಿಸಿದೆ. ಕಳೆದ ಜೂನ್​ 6 ರಂದು ಬಿಡುಗಡೆಯಾದ ಅಫೀಶಿಯಲ್​ ಟ್ರೇಲರ್​ ಈ ಸಿನಿಮಾದ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಿತ್ತಲ್ಲದೆ. ಅಭಿಮಾನಿಗಳಲ್ಲಿ ಸಿನಿಮಾದ ಮುಂದಿನ ಅಪ್​​ಡೇಟ್​ಗೆ ಕಾಯುವಂತೆ ಮಾಡಿದೆ. ಅಷ್ಟರ ಮಟ್ಟರ ಮಟ್ಟಿಗೆ ಧರ್ಮ ಮತ್ತು ಚಾರ್ಲಿಯ ನಟನೆಯು ಭಿನ್ನವಾಗಿ ಚಿತ್ರಿತಗೊಂಡಿದೆ . ಇದೀಗ ಚಾರ್ಲಿ ಸಿನಿಮಾದ ಹೊಸ ಅಪ್​ಡೇಟ್​ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಸ್ವತಃ ರಕ್ಷಿತ್​ ಶೆಟ್ಟಿ (Rakshit Shetty) ಅವರೇ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯ ದಿನವಾದ ಇಂದು ತಮ್ಮ ಇನ್​ಸ್ಡಾಗ್ರಾಂ ಖಾತೆಯಲ್ಲಿ 777 ಚಾರ್ಲಿ  ಸಿನಿಮಾದ ಹಾಡೊಂದರ ಬಿಡುಗಡೆಯ ಬಗ್ಗೆ ಮಾಹಿತಿ ಹಂಚಿಕೊಂಡೊದ್ದಾರೆ.

  ರಕ್ಷಿತ್​ ಶೆಟ್ಟಿ ಸಿನಿಮಾ ಎಂದಾಕ್ಷಣ ಏನಾದರೊಂದು ವಿಶೇಷತೆ ಇದ್ಧೆ ಇರುತ್ತದೆ. ಅದರಂತೆ 777ಚಾರ್ಲಿ ಸಿನಿಮಾ ಕೂಡ ಬಹಳ ವಿಶೇಷತೆಯನ್ನು ಹೊಂದಿದೆ. ಕೊರೋನಾ ಹಾಗೂ ಲಾಕ್​ಡೌನ್ ದಿನಚರಿಯಿಂದಾಗಿ ಶೆಟ್ರ ಚಾರ್ಲಿ ಸಿನಿಮಾದ ಅಪ್​ಡೇಟ್​ಗೆಂದು ಕಾಯುತ್ತಿದ್ದ ಅಭಿಮಾನಿಗಳಿಗೆ ‘ಟಾರ್ಚರ್’​ ಹಾಡೊಂದನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಇದೇ ಸೆಪ್ಟೆಂಬರ್​ 9 ರಂದು ಹಾಡನ್ನು ಪರಂ ಸ್ಟುಡಿಯೋ ಯ್ಯೂಟೂಬ್ ಚಾನೆಲ್​ನಲ್ಲಿ ಬಿಡುಗಡೆ ಮಾಡಲಿದ್ದಾರೆ.


  ಅಂದಹಾಗೆಯೇ 777 ಚಾರ್ಲಿ ಸಿನಿಮಾದಲ್ಲಿ ಧರ್ಮ ಪಾತ್ರದಲ್ಲಿ ರಕ್ಷಿತ್​ ಶೆಟ್ಟಿ ಮಿಂಚಿದರೆ ಅವರಿಗೆ ನಾಯಕಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. ಜೊತೆಗೆ ಒಂದು ಮೊಟ್ಟೆ ಸಿನಿಮಾ ಖ್ಯಾತಿಯ ರಾಜ್ ಬಿ ಶೆಟ್ಟಿ, ಫ್ರೆಂಚ್​ ಬಿರಿಯಾನಿ ಸಿನಿಮಾ ನಾಯಕ ಡ್ಯಾನಿಶ್ ಸೇಟ್, ಬಾಬಿ ಸಿಂಹ ಮುಂತಾದ ತಾರಗಣ ಈ ಸಿನಿಮಾದಲ್ಲಿ ಕಾಣಬಹುದಾಗಿದೆ.

  ಅರವಿಂದ್​ ಕಶ್ಯಪ್​ ಸಿನಿಮಾಟೋಗ್ರಫಿಯಲ್ಲಿ ಈ ಸಿನಿಮಾ ಮೂಡಿಬರಲಿದ್ದು, ನೊಬಿನ್​ ಪೌಲ್​​ ಸಂಗೀತ ಸಂಯೋಜಿಸುತ್ತಿದ್ದಾರೆ. ರಕ್ಷಿತ್​ ಶೆಟ್ಟಿ ಮತ್ತು ಜಿಎಸ್​ ಗುಪ್ತಾ ಬಂಡವಾಳ ಹಾಕಿದ್ದಾರೆ.
  Published by:Harshith AS
  First published: