• Home
  • »
  • News
  • »
  • entertainment
  • »
  • 777 Charlie: ರಕ್ಷಿತ್​ ಶೆಟ್ಟಿ ಹುಟ್ಟುಹಬ್ಬದಂದು 777 ಚಾರ್ಲಿ ಟೀಸರ್​ ರಿಲೀಸ್​..!

777 Charlie: ರಕ್ಷಿತ್​ ಶೆಟ್ಟಿ ಹುಟ್ಟುಹಬ್ಬದಂದು 777 ಚಾರ್ಲಿ ಟೀಸರ್​ ರಿಲೀಸ್​..!

777 ಚಾರ್ಲಿ ಸಿನಿಮಾ ಪೋಸ್ಟರ್​

777 ಚಾರ್ಲಿ ಸಿನಿಮಾ ಪೋಸ್ಟರ್​

Rakshit Shetty Birthday: ಪ್ಯಾನ್​ ಇಂಡಿಯಾ ಸಿನಿಮಾ ಆಗಿರುವ ಚಾರ್ಲಿ 777 ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಕಿರಣ್​ ರಾಜ್​ ನಿರ್ದೇಶನದ ಈ ಸಿನಿಮಾ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ. ವಿಭಿನ್ನ ಸಿನಿಮಾಗಳನ್ನು ಮಾಡುವ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ಹೀಗಿರುವಾಗಲೇ ಚಿತ್ರತಂಡ ಗುಡ್​ ನ್ಯೂಸ್​ ಕೊಟ್ಟಿದೆ.

ಮುಂದೆ ಓದಿ ...
  • Share this:

ರಕ್ಷಿತ್​ ಶೆಟ್ಟಿ (Rakshit Shetty) ಅಭಿನಯಿಸುತ್ತಿರುವ  777 ಚಾರ್ಲಿ (777 Charlie) ಸಿನಿಮಾ ಚಿತ್ರೀಕರಣ ಲಾಕ್​ಡೌನ್​ ಸಡಿಲಗೊಂಡ ನಂತರ ಮತ್ತೆ ಆರಂಭವಾಗಿತ್ತು. ಕಳೆದ ವರ್ಷ ಲಾಕ್​ಡೌನ್​ ಆರಂಭವಾದಾಗ ಬೆಂಗಳೂರಿಗೆ ಹಿಂತಿರುಗಿದ್ದ ಚಿತ್ರತಂಡ ಮತ್ತೆ ಡಿಸೆಂಬರ್​ನಲ್ಲಿ ಕೊಡೈಕೆನಾಲ್​ನಲ್ಲಿ ಶೂಟಿಂಗ್​ ಮುಗಿಸಿ, ನಂತರ ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರದಲ್ಲಿ ಬೀಡು ಬಿಟ್ಟಿತ್ತು ಚಾರ್ಲಿ ಚಿತ್ರತಂಡ. ವರ್ಷದ ಆರಂಭದಲ್ಲಿ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಮುಗಿಸಿದ್ದ ಚಿತ್ರತಂಡ ಪೋಸ್ಟ್​ ಪ್ರೊಡಕ್ಷನ್​ ಕೆಲಸದಲ್ಲಿ ನಿರತವಾಗಿತ್ತು. ಈ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬಂದಿದ್ದ ರಕ್ಷಿತ್ ಸಿನಿಮಾ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿಯೂ ಹೇಳಿದ್ದರು. ಈಗ ಈ ಚಿತ್ರತಂಡ ಸಿಹಿ ಸುದ್ದಿಯನ್ನು ಕೊಟ್ಟಿದೆ. 


ಪ್ಯಾನ್​ ಇಂಡಿಯಾ ಸಿನಿಮಾ ಆಗಿರುವ 777 ಚಾರ್ಲಿ ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಕಿರಣ್​ ರಾಜ್​ ನಿರ್ದೇಶನದ ಈ ಸಿನಿಮಾ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ. ವಿಭಿನ್ನ ಸಿನಿಮಾಗಳನ್ನು ಮಾಡುವ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ಹೀಗಿರುವಾಗಲೇ ಚಿತ್ರತಂಡ ಗುಡ್​ ನ್ಯೂಸ್​ ಕೊಟ್ಟಿದೆ.

View this post on Instagram


A post shared by Kiranraj K (@kiranraj_k)

ಹೌದು, ಜೂನ್​ 6ರಂದು ಅಂದರೆ ರಕ್ಷಿತ್​ ಶೆಟ್ಟಿ ಹುಟ್ಟುಹಬ್ಬದಂದು ಚಾರ್ಲಿ ಸಿನಿಮಾದ ಟೀಸರ್​ ರಿಲೀಸ್ ಆಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಟೀಸರ್​ ರಿಲೀಸ್​ ಆಗಲಿದೆ. ಟೀಸರ್​ಗೆ ಲೈಫ್ ಆಫ್ ಚಾರ್ಲಿ ಎಂದು ಹೆಸರು ನೀಡಲಾಗಿದೆ. ಈಗಾಗಲೇ ಸಿನಿಮಾದ ಪೋಸ್ಟರ್​ ಹಾಗೂ ಕೆಲವು ವಿಡಿಯೋ ತುಣುಕುಗಳನ್ನು ಚಿತ್ರತಂಡ ಈ ಹಿಂದೆಯೇ ಹಂಚಿಕೊಂಡಿದ್ದು, ಅವುಗಳಿಂದ ಸಿನಿರಸಿಕರಲ್ಲಿದ್ದ ಕುತೂಹಲ ಹೆಚ್ಚಾಗಿದೆ.
View this post on Instagram


A post shared by Kiranraj K (@kiranraj_k)

ಕೊರೋನಾ ಮೊಲದ ಅಲೆ ಆರಂಭವಾದಾಗಿನಿಂದ ಸಿನಿಮಾ ಚಿತ್ರೀಕರಣಕ್ಕೆ ತೊಂದರೆಯಾಗ ತೊಡಗಿತ್ತು. ಇದ್ದಕ್ಕಿದ್ದಂತೆಯೇ ಆರಂಭವಾದ ಕೊರೋನಾ ವೈರಸ್​ ಕಾಟದಿಂದಾಗಿ ಇಡೀ ದೇಶವನ್ನೇ ಲಾಕ್​ಡೌನ್​ ಮಾಡಲಾಗಿತ್ತು. ಆಗ ದೇಶದಿಂದ ದೂರ ಇದ್ದವರು ಹಾಗೂ ಮನೆಯಿಂದ ಹೊರ ರಾಜ್ಯಗಳಿಗೆ ಹೋಗಿದ್ದವರೆಲ್ಲ ಬಂದು ಮನೆ ಸೇರಿಕೊಂಡರು. ಅಂತೆಯೇ 777 ಚಾರ್ಲಿ ಚಿತ್ರತಂಡ ಸಹ ಅರ್ಧಕ್ಕೆ ಚಿತ್ರೀಕರಣ ನಿಲ್ಲಿಸಿ, ಮರಳಬೇಕಾಯಿತು. ಲಾಕ್​ಡೌನ್​ ಈಗ ಮುಗಿಯಲಿದೆ, ಆಗ ಅನ್​ಲಾಕ್​ ಆಗಲಿದೆ ಎಂದು ಕಾದಿದ್ದೇ ಆಯಿತು. ಸಂಪೂರ್ಣವಾಗಿ ಲಾಕ್​ಡೌನ್​ ಅನ್​ಲಾಕ್​ ಆಗಿಲೇ ಇಲ್ಲ. ಆಗಲೇ ಅನ್​ಲಾಕ್​ ಆಗಿದ್ದಿದ್ದರೆ, 777 ಚಾರ್ಲಿ ವಿದೇಶಕ್ಕಾದರೂ ಹೋಗಿ ಹಿಮ ಬೀಳುವ ಭಾಗದಲ್ಲಿ ನಡೆಸಬೇಕಿದ್ದ ಚಿತ್ರೀಕರಣ ಮುಗಿಸಿಕೊಂಡು ಬರುತ್ತಿತ್ತು. ಆದರೆ ಲಾಕ್​ಡೌನ್​ನಿಂದಾಗಿ ಅದು ಸಾಧ್ಯವಾಗಲಿಲ್ಲ.


ಇದನ್ನೂ ಓದಿ: ಕಾಲೇಜಿನಲ್ಲಿ ಆರತಿಯನ್ನ ಚುಡಾಯಿಸುತ್ತಿದ್ದ ಅಂಬಿ: ನಾಗರಹಾವು ಚಿತ್ರದಲ್ಲಿ ಅದೇ ದೃಶ್ಯಕ್ಕೆ ಸಾಕ್ಷಿಯಾದರು


ಲಾಕ್​ಡೌನ್​ನಲ್ಲಿ ಸಾಕಷ್ಟು ಸಮಯ ಸಿಕ್ಕಿದ್ದು, ಆಗಲೇ ಸಿನಿಮಾದ ಮೊದಲರ್ಧ ಭಾಗದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಹಾಗೂ ಡಬ್ಬಿಂಗ್​ ಎಲ್ಲ ಮುಗಿದಿದೆಯಂತೆ. ಇದರಿಂದಾಗಿ ಜೂನ್​, ಜುಲೈ ಹಾಗೂ ಆಗಸ್ಟ್​ ತಿಂಗಳಿನಲ್ಲಿ ಸಿನಿಮಾ ರಿಲೀಸ್​ ಮಾಡುವ ಪ್ಲಾನ್​ ಇದೆ ಎಂದು ರಕ್ಷಿತ್​ ಶೆಟ್ಟಿ ಇನ್​ಸ್ಟಾಗ್ರಾಂನಲ್ಲಿ ಲೈವ್​ ಬಂದಿದ್ದಾಗ ಹೇಳಿದ್ದರು.


ಕಿರಣ್​ ರಾಜ್​ ನಿರ್ದೇಶನದ 777 ಚಾರ್ಲಿ ಚಿತ್ರದ ಬಗ್ಗೆ ಸಿನಿಪ್ರಿಯರಿಗೆ ತುಂಬಾ ನಿರೀಕ್ಷೆ ಇದೆ. ಎಲ್ಲ ಸರಿ ಇದ್ದಿದ್ದರೆ, ಇಷ್ಟೊತ್ತಿಗೆ ಚಿತ್ರೀಕರಣ ಮುಗಿದು ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿತ್ತು. ಕಾಶ್ಮೀರದಿಂದ ಶೂಟಿಂಗ್​ ಮುಗಿಸಿಕೊಂಡು ಬೆಂಗಳೂರಿಗೆ ಬಂದ 777 ಚಾರ್ಲಿ ಮತ್ತೆ ಕಾಶ್ಮೀರಕ್ಕೆ ಹೋಗಿತ್ತು. ಸಿನಿಮಾದ ಕ್ಲೈಮ್ಯಾಕ್ಸ್​ ಶೂಟಿಂಗ್ ಜೊತೆಗೆ 2 ದಿನಗಳ ಪ್ಯಾಚ್​ಅಪ್​ ಕೆಲಸಗಳನ್ನು ಮುಗಿಸಿಕೊಂಡು ಬೆಂಗಳೂರಿಗೆ ಬಂದ ನಂತರ ಸಿನಿಮಾದ ಸೆಕೆಂಡ್​ ಹಾಫ್​ನ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ಬ್ಯುಸಿಯಾಗಿತತ್ತು ಚಿತ್ರತಂಡ.


ಸುದೀಪ್​ ಜತೆ ರಕ್ಷಿತ್​ ಶೆಟ್ಟಿ ಸಿನಿಮಾ


ಅವನೇ ಶ್ರೀಮನ್ನಾರಾಯಣ ಹಿಂದಿ ವರ್ಷನ್​ ರಿಲೀಸ್​ ಬಗ್ಗೆ ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ರಕ್ಷಿತ್ ಶೆಟ್ಟಿ, ಹಿಂದಿ ಸಿನಿಮಾದ ಹಕ್ಕು ಮಾರಾಟವಾಗಿದೆ. ಸಿನಿಮಾ ಸಹ ರೆಡಿ ಇದೆ. ಅದು ಯಾವಾಗ ಎಲ್ಲಿ ಬರುತ್ತದೆ ಎಂದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಚಾರ್ಲಿ ಸಿನಿಮಾ ಮುಗಿದ ನಂತರ ಸಪ್ತಸಾಗರದಾಚೆ ಎಲ್ಲೋ, ನಂತರ ರಿಚ್ಚಿ ಚಿತ್ರೀಕರಣ. ಇವೆಲ್ಲ ಮುಗಿದ ಮೇಲೆ ಪುಣ್ಯಕೋಟಿ ಸಿನಿಮಾ ಕೆಲಸಗಳು ಆರಂಭವಾಗಲಿವೆ.


ಇದನ್ನೂ ಓದಿ: Ambareesh Birthday: ನಿಜಕ್ಕೂ ಮಿಸ್​ ಮಾಡುತ್ತಿದ್ದೇವೆ ಅಂಬಿ ಮಾಮ ಎಂದ ಸುದೀಪ್​..!


ಕಿಚ್ಚ ಸುದೀಪ್​ ಹಾಗೂ ರಕ್ಷಿತ್​ ಶೆಟ್ಟಿ ಕಾಂಬಿನೇಷನ್​ನಲ್ಲಿ ಚಿತ್ರವೊಂದು ಬರಲಿದೆ ಎಂದು ಹೇಳಲಾಗುತ್ತಿದೆ. ಬಹಳ ಸಮಯದಿಂದ ಹರಿದಾಡುತ್ತಿರುವ ಈ ಸುದ್ದಿಯ ಕುರಿತಾಗಿ ರಕ್ಷಿತ್​ ಲೈವ್​ನಲ್ಲಿ ಅಪ್ಡೇಟ್​ ಕೊಟ್ಟಿದ್ದರು. ಅವರಿಗಾಗಿ ಕಥೆ ಬರೆಯುತ್ತಿದ್ದೇನೆ. ಇನ್ನೂ ಪೂರ್ಣಗೊಂಡಿಲ್ಲ. ನನ್ನ ಬಾಕಿ ಇರುವ ಸಿನಿಮಾಗಳನ್ನು ಮುಗಿಸಿ, ಆ ಕೆಲಸ ಕೈಗೆತ್ತಿಕೊಳ್ಳುತ್ತೇನೆ ಎಂದಿದ್ದರು ರಕ್ಷಿತ್​.

Published by:Anitha E
First published: