ಇಂದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ 37ನೇ ಹುಟ್ಟುಹಬ್ಬ. ಸಿಂಪಲ್ ಸ್ಟಾರ್ಗೆ ಡುವರ ಚಿತ್ರ ತಂಡಗಳು ಬರ್ತ್ಡೇಗೆ ಭರ್ಜರಿ ಉಡುಗೊರೆಯನ್ನೇ ಕೊಟ್ಟಿದ್ದಾರೆ. 777 ಚಾರ್ಲಿ ಚಿತ್ರತಂಡ ಪೋಸ್ಟರ್ ಹಾಗೂ ವಿಶೇಷ ವಿಡಿಯೋವನ್ನು ರಿಲೀಸ್ ಮಾಡಿದರೆ, ಮತ್ತೊಂದು ಸಿನಿಮಾದ ತಂಡ ಅವರ ಪಾತ್ರದ ಪರಿಚಯ ಮಾಡುವ ಪೋಸ್ಟರ್ ರಿಲೀಸ್ ಮಾಡಿದೆ.
ರಕ್ಷಿತ್ ಶೆಟ್ಟಿ ಅಭಿನಯದ ಮತ್ತೊಂದು ಹೊಸ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ. ಹೇಮಂತ್ ರಾವ್ ನಿರ್ದೇಶನದ ಈ ಚಿತ್ರ ಈ ಹಿಂದೆ ಟೈಟಲ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು. ಆದರೆ ಇಂದು ರಕ್ಷಿತ್ ಹುಟ್ಟುಹಬ್ಬದ ಉಡುಗೊರೆಯಾಗಿ ಅವರ ಪಾತ್ರವನ್ನು ರಿವೀಲ್ ಮಾಡಿದೆ.
View this post on Instagram
ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಕೈದಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಬಿಡುಗಡೆಯಾಗಿರುವ ಪೋಸ್ಟರ್ನಲ್ಲಿ ರಕ್ಷಿತ್ ಶೆಟ್ಟಿ ಪಾತ್ರವನ್ನು ವಿಭಿನ್ನ ರೀತಿಯಯಲ್ಲಿ ರಿವೀಲ್ ಮಾಡಲಾಗಿದೆ.
ಬೆಂಗಳೂರಿನ ಪೊಲೀಸ್ ಠಾಣೆಯೊಂದರ ಕೈದಿಗಳ ಫೈಲ್ನಲ್ಲಿ ಮನು ಅಲಿಯಾಸ್ ರಾಜೇಂದ್ರ ಎನ್ನುವ ಹೆಸರಿದೆ. ಅದರಲ್ಲಿ ರಕ್ಷಿತ್ ಶೆಟ್ಟಿ ಅವರ ಹಳೇ ಫೋಟೋ ಇದೆ. ಅದರ ಮೇಲೆ ಒಂದು ಹೆಬ್ಬೆಟ್ಟಿನ ಗುರುತಿದೆ.
ಇದನ್ನೂ ಓದಿ: Uday Kiran: ದುರಂತ ನಾಯಕ ಉದಯ್ ಕಿರಣ್ ಮೊದಲ ಸಿನಿಮಾಗೆ ಪಡೆದಿದ್ದ ಸಂಭಾವನೆ ಇಷ್ಟಂತೆ..!
ಅಂದರೆ ರಕ್ಷಿತ್ ಈ ಸಿನಿಮಾದಲ್ಲಿ ಕೈದಿಯಾಗಿ ಕಾಣಿಸಿಕೊಳ್ಳಲಿದ್ದು, ಮತ್ತದೇ ಹತ್ತು ವರ್ಷಗಳ ಹಿಂದೆ ಹೇಗಿದ್ದರೋ ಅದೇ ಸ್ಟೈಲ್ನಲ್ಲಿ ತೆರೆ ಮೇಲೆ ಬರಲಿದ್ದಾರಂತೆ. ಈ ಪೋಸ್ಟರ್ನಲ್ಲಿ 2010ರಲ್ಲಿ ಮನು ವಿರುದ್ಧ ಕೇಸ್ ದಾಖಲಾಗಿರುವಂತೆ ತೋರಿಸಲಾಗಿದೆ. ಇನ್ನು ಇದರ ಪೋಸ್ಟರ್ ನೋಡಿದ ಮೇಲಂತೂ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಆಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
HDB Rakshit Shetty: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ