Rakshit Shetty: ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ ರಕ್ಷಿತ್ ಶೆಟ್ಟಿ, ಕಿರಿಕ್ ಪಾರ್ಟಿ 2 ಮಾಡೇ ಮಾಡ್ತಾರಂತೆ!

Sandalwood: ಕಿರಿಕ್ ಪಾರ್ಟಿ 2 ಮುಗಿದ ನಂತರ ನನ್ನ ಇನ್ನೊಂದು ನಿರ್ದೇಶನದ ಪುಣ್ಯಕೋಟಿ ಸಿನಿಮಾದಲ್ಲಿ ಕೆಲಸ ಮಾಡಲು ನಾನು ಯೋಜಿಸುತ್ತಿದ್ದೇನೆ. ಈ ಚಿತ್ರ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದು ಅವರು ಹೇಳಿದ್ದಾರೆ.

ನಟ ರಕ್ಷಿತ್ ಶೆಟ್ಟಿ

ನಟ ರಕ್ಷಿತ್ ಶೆಟ್ಟಿ

  • Share this:
ರಕ್ಷಿತ್ ಶೆಟ್ಟಿ (Rakshit Shetty) 777 ಚಾರ್ಲಿ (777 Charlie) ಸಿನಿಮಾ ಮೂಲಕ ಜನರ ಹೃದಯ ಗೆದ್ದಿದ್ದಾರೆ. ಆದರೆ ಅವರ ಅಭಿಮಾನಿಗಳು ಹಾಗೂ ಸಿನಿಪ್ರಿಯರಲ್ಲಿ ಅವರ ಮುಂದಿನ ಚಿತ್ರದ ಬಗ್ಗೆ ಕುತೂಹಲ ತುಸು ಹೆಚ್ಚಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದು,  ನಟನಾಗಿ ಮತ್ತು ನಿರ್ದೇಶಕನಾಗಿ (Director) ನಾನು ಮೂರು ವರ್ಷಗಳ ಕಾಲ ಬ್ಯುಸಿ ಇದ್ದೇನೆ. ನಾಲ್ಕು ವಿಭಿನ್ನ ಚಿತ್ರಗಳು ತಯಾರಿಕೆಯ ವಿವಿಧ ಹಂತಗಳಲ್ಲಿವೆ ಎಂದಿದ್ದಾರೆ.  ಮೊದಲನೆಯದು ಅವರ ಹೋಮ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಪ್ತ ಸಾಗರದಾಚೆ ಎಲ್ಲೋ, ಇದು ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ಹೇಮಂತ್ ಎಂ ರಾವ್ ಅವರೊಂದಿಗೆ ರಕ್ಷಿತ್ ಮಾಡುತ್ತಿರುವ ಎರಡನೇ ಸಿನಿಮಾವಾಗಿದೆ.

ಫುಲ್ ಬ್ಯುಸಿ ಇದ್ದಾರೆ ರಕ್ಷಿತ್ ಶೆಟ್ಟಿ

ಸಪ್ತ ಸಾಗರದಾಚೆ ಎಲ್ಲೋ ಹೇಮಂತ್ ಎಂ ರಾವ್ ಅವರ ಕನಸಿನ ಕೂಸು. ಅವರು ಈ ಮೊದಲು ಮಾಡಿದ ಅವರ ಎರಡೂ ಚಿತ್ರಗಳನ್ನು ನಿಗದಿತ ಬಜೆಟ್‌ನಲ್ಲಿ ಮಾಡಲಾಗಿತ್ತು, ಆದರೆ ಈ ಚಿತ್ರದಲ್ಲಿ ಅವರು ಆ ನಿರ್ಬಂಧಗಳನ್ನು ಮತ್ತು ಗಡಿಗಳನ್ನು ಮೀರಿದ್ದು ವಿಭಿನ್ನವಾದ ಪ್ರಯತ್ನ ಮಾಡಿದ್ದಾರೆ ಎಂದು ರಕ್ಷಿತ್ ಅಭಿಪ್ರಾಯಪಟ್ಟಿದ್ದಾರೆ.

ಒಬ್ಬ ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಹೇಳಬೇಕು ಎಂದರೆ, ಹೇಮಂತ್ ರಾವ್ ಮಾಡಿದ ಎರಡು ಸಿನಿಮಾಗಳು ಉತ್ತಮವಾಗಿದ್ದವು. ವಿಭಿನ್ನತೆಯನ್ನು ತೋರಿಸಿದ್ದವು. ಯಾವುದೇ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಸಿನಿಮಾ ಮಾಡಿದ್ದರು ಎಂದಿದ್ದಾರೆ ರಕ್ಷಿತ್.  ಇನ್ನು ರಿಚರ್ಡ್​ ಆಂಟನಿ ಸಿನಿಮಾ ಬಗ್ಗೆ ಸಹ ಮಾತನಾಡಿದ್ದು,ಈ ಡಿಸೆಂಬರ್ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಾನು ರಿಚರ್ಡ್ ಆಂಟನಿ ಸಿನಿಮಾ ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದ್ದೇನೆ. ಸಪ್ತ ಸಾಗರದಾಚೆ ಎಲ್ಲೋ ಮುಗಿದ ತಕ್ಷಣ, ನನಗೆ ಎರಡು ಅಥವಾ ಮೂರು ತಿಂಗಳ ಪ್ರಿ-ಪ್ರೊಡಕ್ಷನ್​ಗೆ ಸಮಯದ ಅಗತ್ಯವಿದೆ, ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಪಘಾತದ ಸಮಯದಲ್ಲಿ ದಿಗಂತ್ ಫ್ಯಾಮಿಲಿಗೆ ಸಹಾಯ ಮಾಡಿದ್ದು ಇವರೇ, ದೇವರೇ ನಿಮ್ಮನ್ನ ಕಳುಹಿಸಿದ್ದು ಅಂದ್ರು ಐಂದ್ರಿತಾ

ಈ ಸಿನಿಮಾಗಳ ಮಧ್ಯೆ ಬಹು ನಿರೀಕ್ಷಿತ ಕಿರಿಕ್ ಪಾರ್ಟಿಯ ಸೀಕ್ವೆಲ್ ಕೂಡ ಮಾಡುತ್ತಿದ್ದು, ನನಗೆ ಕಿರಿಕ್ ಪಾರ್ಟಿ 2 ಮಾಡುವ ಐಡಿಯಾ ಇದೆ ಮತ್ತು ಆ ಚಿತ್ರ ಹೇಗಿರುತ್ತದೆ ಎಂಬುದು ನನಗೆ ತಿಳಿದಿದೆ. ನನ್ನ ಪಾತ್ರದ ಪ್ರಯಾಣದ ಬಗ್ಗೆ ನನಗೆ ತಿಳಿದಿದೆ. ಮೊದಲ ಭಾಗದಂತೆಯೇ ಮುಂದಿನ ಭಾಗವು ತಮಾಷೆಯಾಗಿರಬೇಕು. ನಾವು ಎಲ್ಲವನ್ನೂ ಸ್ಕ್ರಿಪ್ಟ್​ನಿಂದ ಆರಂಭಿಸಬೇಕು. ಮೊದಲಿನಿಂದ ಕೆಲಸವನ್ನು ಆರಂಭಿಸಿ, ಸಿದ್ದತೆಗಳನ್ನು ಮಾಡಿಕೊಂಡು ಸಿನಿಮಾ ಮಾಡಬೇಕು. ರಿಚರ್ಡ್ ಆಂಟನಿ ಸಿನಿಮಾದ ಪೋಸ್ಟ್-ಪ್ರೊಡಕ್ಷನ್ ಕೆಲಸವನ್ನು ನಾವು ಪ್ರಾರಂಭಿಸಿದ ನಂತರ ಇದನ್ನು ಪ್ರಾರಂಭಿಸುವ ಆಲೋಚನೆ ಇದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಕಿರಿಕ್ ಪಾರ್ಟಿ 2 ಕೂಡ ಮಾಡ್ತಾರಂತೆ

ಕಿರಿಕ್ ಪಾರ್ಟಿ 2 ಮುಗಿದ ನಂತರ ನನ್ನ ಇನ್ನೊಂದು ನಿರ್ದೇಶನದ ಪುಣ್ಯಕೋಟಿ ಸಿನಿಮಾದಲ್ಲಿ ಕೆಲಸ ಮಾಡಲು ನಾನು ಯೋಜಿಸುತ್ತಿದ್ದೇನೆ. ಈ ಚಿತ್ರ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದು ಅವರು ಹೇಳಿದ್ದು, ಇದು ಮನರಂಜನೆಯೊಂದಿಗೆ ತತ್ವಶಾಸ್ತ್ರವನ್ನು ಬೆರೆಸುತ್ತದೆ. ಈ ರೀತಿಯ ಸಿನಿಮಾ ಮಾಡಲು ನನಗೆ ಬಹಳ ಇಷ್ಟ ಎಂದಿದ್ದಾರೆ.

ಇದನ್ನೂ ಓದಿ: ರಿಚರ್ಡ್​ ಆ್ಯಂಟೋನಿ ಬಗ್ಗೆ ಅಪ್​ಡೇಟ್​ ಕೊಟ್ಟ ರಕ್ಷಿತ್, ಮತ್ತೆ ರಿಚ್ಚಿ ಬಂದೇ ಬರ್ತಾನೆ!

ಅಲ್ಲದೇ, ರಕ್ಷಿತ್ ತನ್ನ ಆಪ್ತವಲಯದ ಜನರೊಂದಿಗೆ ಮಾತ್ರ ಕೆಲಸ ಮಾಡಲು ಇಷ್ಟಪಡುತ್ತಾರೆ ಎಂಬ ತಪ್ಪು ಕಲ್ಪನೆ ಇದೆ. ಈ ಬಗ್ಗೆ ಸಹ ಮಾತನಾಡಿರುವ ಅವರು ನಾನು ಹೆಚ್ಚಾಗಿ ಹೊಸ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ನಾನು ನಿರ್ದಿಷ್ಟ ಜನರಿಗೆ ಅಂಟಿಕೊಳ್ಳುವುದಿಲ್ಲ, ಆದರೆ ನಾನು ಕೆಲಸದಲ್ಲಿ ತುಂಬಾ ಒಳ್ಳೆಯ ಜನರೊಂದಿಗೆ ಸಂಬಂಧ ಹೊಂದಿದ್ದೇನೆ. ಅವರು ಉತ್ತಮ ಸ್ಕ್ರಿಪ್ಟ್‌ಗಳನ್ನು ಹೊಂದಿರುವಾಗ, ನಾನು ಅವರೊಂದಿಗೆ ಏಕೆ ಕೆಲಸ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.
Published by:Sandhya M
First published: