ASN Teaser: ಲೇಟ್ ಆದರೂ ಲೇಟೆಸ್ಟ್ ಆಗಿ ಬಂದ ‘ಅವನೇ ಶ್ರೀಮನ್ನಾರಾಯಣ’; ಟೀಸರ್​ಗೆ ಭಾರೀ ಮೆಚ್ಚುಗೆ

ರಕ್ಷಿತ್​ ಜನ್ಮ ದಿನಕ್ಕೆಂದೇ ಟೀಸರ್​ ರಿಲೀಸ್​ ಆಗಿತ್ತು. ಹಾಗಾಗಿ ಟೀಸರ್​ನಲ್ಲಿ ರಕ್ಷಿತ್​ಗೆ ವಿಭಿನ್ನವಾಗಿ ವಿಷ್​ ಕೂಡ ಮಾಡಲಾಗಿದೆ. ಸಚಿನ್​ ರವಿ ನಿರ್ದೇಶನ ಇರುವ ಈ ಚಿತ್ರದಲ್ಲಿ ರಕ್ಷಿತ್​ ಹಾಗೂ ಶಾನ್ವಿ ಶ್ರೀವಾತ್ಸವ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

Rajesh Duggumane | news18
Updated:June 7, 2019, 11:47 AM IST
ASN Teaser: ಲೇಟ್ ಆದರೂ ಲೇಟೆಸ್ಟ್ ಆಗಿ ಬಂದ ‘ಅವನೇ ಶ್ರೀಮನ್ನಾರಾಯಣ’; ಟೀಸರ್​ಗೆ ಭಾರೀ ಮೆಚ್ಚುಗೆ
ರಕ್ಷಿತ್​ ಶೆಟ್ಟಿ ​
  • News18
  • Last Updated: June 7, 2019, 11:47 AM IST
  • Share this:
ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಗುರುವಾರ ಸಂಜೆ 6 ಗಂಟೆಗೆ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಟೀಸರ್​ ತೆರೆಕಾಣಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಟೀಸರ್​ ರಾತ್ರಿ 12 ಗಂಟೆಗೆ ತೆರೆ ಕಂಡಿದೆ. ಟೀಸರ್​ ಗುಣಮಟ್ಟ ನೋಡಿ ಎಲ್ಲರೂ ಹುಬ್ಬೇರಿಸಿದ್ದಾರೆ.

ಈ ಮೊದಲು ಬಿಡುಗಡೆ ಆಗಿದ್ದ ಟೀಸರ್​ಅನ್ನು ಮೀರಿಸುವಂತೆ ಎರಡನೇ ಟೀಸರ್ ರಿಲೀಸ್​ ಆಗಿದೆ. ಸಿನಿಮಾದಲ್ಲಿ ಕ್ಯಾಮೆರಾ ಕುಸುರಿ ಎಷ್ಟು ಅದ್ಭುತವಾಗಿರಲಿದೆ ಎಂಬುದಕ್ಕೆ ಟೀಸರ್​ ಸಾಕ್ಷಿಯಾಗಿದೆ. ಹಿನ್ನೆಲೆ ಸಂಗೀತ, ಸಂಭಾಷಣೆ ಎಲ್ಲವೂ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಅಲ್ಲದೆ, ಸಾಕಷ್ಟು ಪಾತ್ರ ಪರಿಚಯವನ್ನು ಇಲ್ಲಿ ಮಾಡಿಕೊಡಲಾಗಿದೆ.

‘ರಾಕ್ಷಸನನ್ನು ಎದುರಿಸಬೇಕಾದರೆ ಮೊದಲು ನಮ್ಮೊಳಗಿನ ರಾಕ್ಷಸನಿಂದ ಮುಕ್ತವಾಗಬೇಕು’ ಎಂಬ ಡೈಲಾಗ್​ ತುಂಬಾನೇ ಕಾಡುತ್ತದೆ. ಇಡೀ ಸಿನಿಮಾದಲ್ಲಿ ಸಂಭಾಷಣೆ ಬಹಳ ಪ್ರಮುಖ ಪಾತ್ರವಹಿಸಲಿದೆ ಎಂಬುದು ಟೀಸರ್​ ನೋಡಿದವರ ಊಹೆ.ರಕ್ಷಿತ್​ ಜನ್ಮ ದಿನಕ್ಕೆಂದೇ ಟೀಸರ್​ ರಿಲೀಸ್​ ಆಗಿತ್ತು. ಹಾಗಾಗಿ ಟೀಸರ್​ನಲ್ಲಿ ರಕ್ಷಿತ್​ಗೆ ವಿಭಿನ್ನವಾಗಿ ವಿಶ್​​ ಕೂಡ ಮಾಡಲಾಗಿದೆ. ಸಚಿನ್​ ರವಿ ನಿರ್ದೇಶನ ಇರುವ ಈ ಚಿತ್ರದಲ್ಲಿ ರಕ್ಷಿತ್​ ಹಾಗೂ ಶಾನ್ವಿ ಶ್ರೀವಾತ್ಸವ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಪುಷ್ಕರ್​ ಮಲ್ಲಿಕಾರ್ಜುನಯ್ಯ ಹಾಗೂ ಎಚ್​ಕೆ ಪ್ರಕಾಶ್​ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಆಗಸ್ಟ್​​ನಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.

First published:June 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ