777 Charlie Collection: ಚಾರ್ಲಿ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್! ವೀಕೆಂಡ್‌ನಲ್ಲಿ ಹೆಚ್ಚಾಯ್ತು ಕಲೆಕ್ಷನ್

Rakshit Shetty: ಹಿಂದಿ ಆವೃತ್ತಿಯಲ್ಲಿನ ಪ್ರದರ್ಶನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಮುಂಬರುವ ದಿನಗಳಲ್ಲಿ 777 ಚಾರ್ಲಿ ಇನ್ನು ಉತ್ತಮ ಪ್ರದರ್ಶನ ನೀಡುತ್ತದೆ ಎಂಬ ಅಂದಾಜಿದೆ.

ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ

  • Share this:
ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ 777 ಚಾರ್ಲಿ (777 Charlie) ಬಿಡುಗಡೆಯಾಗುವ ಮೊದಲಿನಿಂದಲೂ ಸುದ್ದಿಯಲ್ಲಿದ್ದು, ಬಿಡುಗಡೆಯಾದ ನಂತರ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಮೊದಲ ದಿನದಿಂದಲೇ ಉತ್ತಮ ಕಲೆಕ್ಷನ್ (collection) ಮಾಡುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ (Box Office) ಉತ್ತಮ ಆರಂಭವನ್ನು ಪಡೆದಿದೆ.  ವರದಿಗಳ ಪ್ರಕಾರ, 2 ನೇ ದಿನದಂದು ಈ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದ್ದು, ಎಷ್ಟಿದೆ ಕಲೆಕ್ಷನ್ ಇಲ್ಲಿದೆ ಮಾಹಿತಿ. ವಿಶಿಷ್ಟ ಸಿನಿಮಾಗಳನ್ನು ನೀಡುವ ಮೂಲಕ ಹೆಸರುವಾಸಿಯಾಗಿರುವ ರಕ್ಷಿತ್ ಮತ್ತೊಮ್ಮೆ ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನು ಒಳಗೊಂಡಿರುವ ಹೊಸ ಪರಿಕಲ್ಪನೆಯ ಸಿನಿಮಾದೊಂದಿಗೆ ಬಂದಿದ್ದಾರೆ. ಈ ಚಿತ್ರವು ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತಿದೆ ಮತ್ತು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. 

ಬರೋಬ್ಬರಿ 8 ಕೋಟಿ ಗಳಿಕೆ ಮಾಡಿದ ಚಾರ್ಲಿ

ಈಗ, ತಿಳಿದುಬಂದಿರುವ ವ್ಯಾಪಾರ ವರದಿಗಳ ಪ್ರಕಾರ, 777 ಚಾರ್ಲಿ ತನ್ನ 2 ನೇ ದಿನದಲ್ಲಿ (ಎಲ್ಲಾ ಭಾಷೆಗಳನ್ನು ಒಳಗೊಂಡಂತೆ) 8 ಕೋಟಿ ರೂ ಗಳಿಸಿದೆ. ಮೊದಲ ದಿನದ ಕಲೆಕ್ಷನ್ 6.5 ಕೋಟಿಗಳೊಂದಿಗೆ ಹೋಲಿಸಿದರೆ, ಇದು 23% ರಷ್ಟು ಉತ್ತಮ ಬೆಳವಣಿಗೆ ಕಂಡಿದೆ. ಈ ಸಿನಿಮಾ ಭಾರತದಾದ್ಯಂತ ಒಟ್ಟು 14.5 ಕೋಟಿ ಗಳಿಕೆ ಮಾಡಿದೆ ಎಂಬ ಮಾಹಿತಿ ಇದೆ.

ಇನ್ನು ಈ ಚಿತ್ರದ ಹಿಂದಿ ಆವೃತ್ತಿಯ ಬಗ್ಗೆ ಹೇಳುವುದಾದರೆ, ಗಳಿಕೆ 0.20 ಕೋಟಿಯಿಂದ 0.35 ಕೋಟಿಗೆ ಏರಿಕೆ ಕಂಡಿವೆ, ಆದರೂ ಇದು ಕಡಿಮೆ ಕಲೆಕ್ಷನ್ ಎನ್ನಲಾಗುತ್ತಿದೆ. ಹಿಂದಿ ಆವೃತ್ತಿಯಲ್ಲಿನ ಪ್ರದರ್ಶನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಮುಂಬರುವ ದಿನಗಳಲ್ಲಿ 777 ಚಾರ್ಲಿ ಇನ್ನು ಉತ್ತಮ ಪ್ರದರ್ಶನ ನೀಡುತ್ತದೆ ಎಂಬ ಅಂದಾಜಿದೆ.

ಇದನ್ನೂ ಓದಿ: ನಯನತಾರಾ ಮದುವೆಗೆ ಬಂದ್ ಶಾರುಖ್ ಖಾನ್ ಟ್ರೋಲ್, ಇಷ್ಟ್​ ಬೇಗ ಕೊರೊನಾ ಹೋಯ್ತಾ ಎಂದ ನೆಟ್ಟಿಗರು

ಚಾರ್ಲಿ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ನಟಿ ಸಂಯುಕ್ತಾ ಹೆಗ್ಡೆ

ಈ ಮಧ್ಯೆ, ಇತ್ತೀಚೆಗೆ 777 ಚಾರ್ಲಿಯನ್ನು ವೀಕ್ಷಿಸಿದ ನಟಿ ಸಂಯುಕ್ತಾ ಹೆಗ್ಡೆ, ಚಿತ್ರ ಮತ್ತು ಅದರ ಪಾತ್ರವರ್ಗ ಮತ್ತು ಸಿಬ್ಬಂದಿ ಎಲ್ಲರನ್ನು ಹಾಡಿ ಹೊಗಳಿದ್ದಾರೆ. ರಕ್ಷಿತ್ ಶೆಟ್ಟಿಗೆ ತಡವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿರುವ ನಟಿ, “ನಿಮಗೆ ತಡವಾಗಿ ಜನ್ಮದಿನದ ಶುಭಾಶಯಗಳು. ನಿನ್ನೆ '777 ಚಾರ್ಲಿ' ಅನ್ನು ನೋಡಿದಾಗ ನಾನು ಹಲವಾರು ವರ್ಷಗಳಿಂದ ನನ್ನ ನಾಯಿಯೊಂದಿಗೆ ಕಳೆದ ಹಲವು ಕ್ಷಣಗಳು ನನ್ನ ಕಣ್ಣ ಮುಂದೆ ಹಾದು ಹೋಗಿದೆ. ಇದು ಅತ್ಯುತ್ತಮ ಚಲನಚಿತ್ರ. ನೀವು ಎಲ್ಲಾ ಭಾವನೆಗಳನ್ನು ಚೆನ್ನಾಗಿ ಸೆರೆಹಿಡಿದಿದ್ದೀರಿ ಎಂದು ಬರೆದಿದ್ದಾರೆ.

ವಿಶ್ವದಾದ್ಯಂತ 777 ಚಾರ್ಲಿ' ಸಿನಿಮಾ ಮೊದಲ ದಿನವೇ ಸರಿ ಸುಮಾರು 6-10 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್​ ಕಲೆಕ್ಷನ್ ವರದಿ ಮಾಡಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿರಲಿಲ್ಲ. ಬಾಕ್ಸ್ ಆಫೀಸ್​ ಕಲೆಕ್ಷನ್ ಪ್ರಕಾರ ಚಾರ್ಲಿ ಗಳಿಕೆ ಚೆನ್ನಾಗಿದ್ದು, 100 ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ಚಿತ್ರಕ್ಕೆ ಉತ್ತಮ ರಿವ್ಯೂ ಬಂದಿದ್ದು ಸಿನಿ ಪ್ರಿಯರು ಈ ಚಿತ್ರವನ್ನು ವಿಮರ್ಶೆ ಮಾಡಲು ಸಾಧ್ಯವಿಲ್ಲ. ಮಾಡಲೂ ಬಾರದು. ಇದರಲ್ಲಿ ತಪ್ಪು ಹುಡುಕಲು ಸಾಧ್ಯವಿಲ್ಲ ಎಂದಿದ್ದಾರೆ. ಬಹಳ ಎಮೋಷನ್ ಸಿನಿಮಾ ಇದಾಗಿದ್ದು, ನಾಯಿಯನ್ನು ಇಷ್ಟಪಡದವರೂ ಕೂಡ ಭಾವುಕರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ಒಂದೇ ದಿನದಲ್ಲಿ ಚಾರ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ? ಮುದ್ದು ನಾಯಿ ಆಟಕ್ಕೆ ಪ್ರೇಕ್ಷಕರು ಫಿದಾ, 100 ಕೋಟಿ ಕ್ಲಬ್ ಸೇರುತ್ತೆ ಅಂತಾರೆ ಫ್ಯಾನ್ಸ್

ಇನ್ನು ಸಿನಿಮಾ ರಿಲೀಸ್​ಗೂ ಮುನ್ನ ಚಿತ್ರತಂಡ ಹಲವೆಡೆ ಪ್ರೀಮಿಯರ್ ಶೋ ಮಾಡಿದ್ದು, ಅಲ್ಲಿ ಸಹ ಬಹಳ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈ ಚಿತ್ರದ ಪ್ರಸಾರದ ಹಕ್ಕು ಕೂಡ ಈ ಮೊದಲೇ ಬಹಳ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿತ್ತು. ಈ ಚಿತ್ರದ ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ರೂ .21 ಕೋಟಿಗೆ ಕಲರ್ಸ್‌ ಕನ್ನಡದ ಪಾಲಾಗಿದೆ. ಡಿಜಿಟಲ್‌ ಹಕ್ಕು ಕಲರ್ಸ್‌ ಸಂಸ್ಥೆಯ ಒಡೆತನದ ವೂಟ್‌ ಓಟಿಟಿಗೆ ಸಿಕ್ಕಿದೆ
Published by:Sandhya M
First published: