• Home
  • »
  • News
  • »
  • entertainment
  • »
  • 777 Charlie ಸಿನಿಮಾದ ಮತ್ತೊಂದು ಸಾಂಗ್​ ರಿಲೀಸ್​! ಧರ್ಮ-ಚಾರ್ಲಿ ಕನೆಕ್ಷನ್​ ತಿಳಿಸೋ ಸಾಲುಗಳಿವು

777 Charlie ಸಿನಿಮಾದ ಮತ್ತೊಂದು ಸಾಂಗ್​ ರಿಲೀಸ್​! ಧರ್ಮ-ಚಾರ್ಲಿ ಕನೆಕ್ಷನ್​ ತಿಳಿಸೋ ಸಾಲುಗಳಿವು

ರಕ್ಷಿತ್​ ಶೆಟ್ಟಿ

ರಕ್ಷಿತ್​ ಶೆಟ್ಟಿ

ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ಚಾರ್ಲಿ  ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಿ (Dog) ಯನ್ನು ಟ್ರೈಲರ್​​ನಲ್ಲಿ ನೋಡಿ ಖುಷಿ ಪಟ್ಟಿದ್ದಾರೆ. ಈ ಮೂಲಕ ಸ್ಯಾಂಡಲ್​​ವುಡ್‌ (Sandalwood)  ನಲ್ಲಿ ನಿರ್ಮಾಣವಾದ ಮತ್ತೊಂದು ಸಿನಿಮಾ ಭಾರೀ ಯಶಸ್ಸು ಗಳಿಸುವ ಮುನ್ಸೂಚನೆ ನೀಡಿದ್ದಾರೆ.  

ಮುಂದೆ ಓದಿ ...
  • Share this:

ವಿಭಿನ್ನ ಮ್ಯಾನರಿಸಂ, ಕಿಕ್ ಕೊಡುವ ಡೈಲಾಗ್ಸ್ ರಕ್ಷಿತ್ ಶೆಟ್ಟಿ ಅವರ ಟ್ರೇಡ್ ಮಾರ್ಕ್ (Trade Mark) ಎನ್ನಬಹುದು. ತುಘಲಕ್'ನಿಂದ ತಮ್ಮ ಸಿನಿಮಾ ಜರ್ನಿ ಆರಂಭಿಸಿ ಈಗ '777 ಚಾರ್ಲಿ'(777 Charlie)ಗ ಬಂದು ನಿಂತಿದ್ದಾರೆ. ಅವರ ಪ್ರತಿ ಸಿನಿಮಾವೂ ಡಿಫ್ರೆಂಟ್. ಇದೀಗ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ‘777 ಚಾರ್ಲಿ’ (777 Charlie) ಜೂನ್‌ 10ರಂದು ಬಿಡುಗಡೆಯಾಗಲಿದೆ. ರಕ್ಷಿತ್‌ ಶೆಟ್ಟಿ ನಟನೆಯ “777 ಚಾರ್ಲಿ” ಚಿತ್ರದ  ಟ್ರೈಲರ್  ರಿಲೀಸ್ ಆಗಿದ್ದು, ಟ್ರೈಲರ್  (Trailer) ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ಚಾರ್ಲಿ  ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಿ (Dog) ಯನ್ನು ಟ್ರೈಲರ್​​ನಲ್ಲಿ ನೋಡಿ ಖುಷಿ ಪಟ್ಟಿದ್ದಾರೆ. ಈ ಮೂಲಕ ಸ್ಯಾಂಡಲ್​​ವುಡ್‌ (Sandalwood)  ನಲ್ಲಿ ನಿರ್ಮಾಣವಾದ ಮತ್ತೊಂದು ಸಿನಿಮಾ ಭಾರೀ ಯಶಸ್ಸು ಗಳಿಸುವ ಮುನ್ಸೂಚನೆ ನೀಡಿದ್ದಾರೆ.  


ಚಾರ್ಲಿ ಸಿನಿಮಾದ ಮತ್ತೊಂದು ಹಾಡು ರಿಲೀಸ್​!


777 ಚಾರ್ಲಿ ಟ್ರೈಲರ್ ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಟ್ರೈಲರ್​​ ರಿಲೀಸ್‌ ಆಗಿದೆ. ಚಾರ್ಲಿ-ಧರ್ಮನ ಬಾಂಧವ್ಯ ಕಂಡು ಅಭಿಮಾನಿಗಳು ದಂಗಾಗಿ ಹೋಗಿದ್ದಾರೆ. ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ.ಇದೀಗ ಈ ಸಿನಿಮಾದ ಮತ್ತೊಂದು ಹಾಡು ರಿಲೀಸ್​ ಆಗಿದೆ. ಜರ್ನಿ ಸಾಂಗ್​ ರಿಲೀಸ್​ ಆಗಿದ್ದು, ಯುಟ್ಯೂಬ್​ನಲ್ಲಿ ಸಿಕ್ಕಾಪಟ್ಟೆ ಧೂಳೆಬ್ಬಿಸುತ್ತಿದೆ. ಈ ಹಾಡಿನಲ್ಲಿ ಧರ್ಮ ಹಾಗೂ ಚಾರ್ಲಿಯ ಸಂಬಂಧದ ಬಗ್ಗೆ ಹೇಳಲಾಗಿದೆ. ಪ್ರತಿಯೊಂದು ಸಾಲುಗಳು ಕೂಡ ಅರ್ಧ ಪೂರ್ಣವಾಗಿದೆ.


777 ಚಾರ್ಲಿ ಸೌಂಡ್​ ಮಾಡೋದ್ರಲ್ಲಿ ಡೌಟೇ ಇಲ್ಲ!


ಕನ್ನಡ ಸಿನೆಮಾ ಹಿಸ್ಟರಿಯಲ್ಲಿ 777 ಚಾರ್ಲಿ ವಿಭಿನ್ನ ರೀತಿಯ ದಾಖಲೆ ಮಾಡುವುದರಲ್ಲಿ  ಅನುಮಾನವಿಲ್ಲ. ಅಲ್ಲದೇ ಕೆಜಿಎಫ್ 2 ನಂತರ ಕನ್ನಡದ ಮತ್ತೊಂದು ಸೂಪರ್ ಹಿಟ್ ಚಿತ್ರವಾಗುವುದರಲ್ಲಿ ಅನುಮಾನವಿಲ್ಲ. ಸಿನಿಮಾ ಅನೌನ್ಸ್​ ಆದಾಗಿನಿಂದಲೂ ಸಿನಿಮಾ ಮೇಲಿರುವ ನಿರೀಕ್ಷೆ ಹೆಚ್ಚಿಸಿದೆ. ಟಾರ್ಚರ್​, ಒಗಾ ಸಾಂಗ್​ಗಳು ಈಗಾಗಲೇ ಹಿಟ್​ ಲಿಸ್ಟ್​ ಸೇರಿದೆ. ಇದೀಗ ಈ ಸಾಲಿಗೆ ಜರ್ನಿ ಸಾಂಗ್​ ಕೂಡ ಸೇರಿಕೊಂಡಿದೆ. ನೋಬಿನ್​ ಪೌಲ್​ ಸಂಗೀತ ನೀಡಿರುವ ಈ ಸಿನಿಮಾ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ.


ಇದನ್ನೂ ಓದಿ: ಸ್ಯಾಂಡಲ್​ವುಡ್ ಕ್ವೀನ್​ ಬಗ್ಗೆ ಶೆಟ್ರು ಹಿಂಗ್ಯಾಕ್​ ಅಂದ್ರು! ಏನಿಲ್ಲ ಏನಿಲ್ಲ ಅಂತಾನೇ ​ಚಮಕ್​ ಕೊಟ್ರಾ?


ಈ ಚಿತ್ರ ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೇ ರಕ್ಷಿತ್ ಶೆಟ್ಟಿ ಜೀವನದಲ್ಲಿ ಸಹ ಮೈಲುಗಲ್ಲಾಗಲಿದೆ ಎನ್ನಲಾಗುತ್ತಿದೆ. ಕೇವಲ ಟ್ರೇಲರ್ ಮೂಲಕವೇ ಕಿಚ್ಚು ಹಚ್ಚಿತ್ತಿರುವ ಈ ಚಿತ್ರ, ಅಭಿಮಾನಿಗಳ ನಿರೀಕ್ಷೆಯನ್ನು ಸಹ ಮೀರುತ್ತದೆ ಎಂದರೆ ತಪ್ಪಲ್ಲ. ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ `777 ಚಾರ್ಲಿ’ ಚಿತ್ರ ವನ್ನು ಕಿರಣ್ ರಾಜ್ ಕೆ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್‌ ನಾಯಿ ಒಂದು ಪೂರ್ಣ ಪ್ರಮಾಣದ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಂಡಿದೆ.


ಇದನ್ನೂ ಓದಿ: ಭಾವನೆಗಳೇ ಬದುಕು ಎನ್ನುವ 'ಚಾರ್ಲಿ' - ರಕ್ಷಿತ್​ ಸಿನೆಮಾದ ಟ್ರೇಲರ್​ ನೋಡಿ ಎಮೋಷನಲ್​ ಆದ ಅಭಿಮಾನಿಗಳು


ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಮತ್ತು ಜಿ.ಎಸ್.ಗುಪ್ತ ಬಂಡವಾಳ ಹೂಡಿದ್ದಾರೆ.ಚಿತ್ರದಲ್ಲಿ ನಾಯಕಿಯಾಗಿ ಸಂಗೀತಾ ಶೆಟ್ಟಿ ಆಬಿನಯಿಸಿದ್ದರೆ, ಶಾರ್ವರಿ ಮತ್ತು ಪ್ರಾಣ್ಯ ಎಂಬ ಪುಟಾಣಿ ಮಕ್ಕಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಒಟ್ಟಿನಲ್ಲಿ ಕೆಜಿಎಫ್​ 2 ಸಿನಿಮಾದ ಬಳಿಕ ಮತ್ತೊಂದು ಕನ್ನಡ ಸಿನಿಮಾ ಸೌಂಡ್ ಮಾಡುವುದಕ್ಕೆ ರೆಡಿಯಾಗಿದೆ. ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಸಿನಿಮಾದ ಬಳಿಕ ದೊಡ್ಡದಾಗಿ ಎಂಟ್ರಿಯಾಗುತ್ತಿದ್ದಾರೆ. ಪ್ರತಿಯೊಬ್ಬರು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ.

Published by:Vasudeva M
First published: