Anitha EAnitha E
|
news18-kannada Updated:January 21, 2021, 9:12 AM IST
ಕಾಶ್ಮೀರದಲ್ಲಿ ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ (Rakshit Shetty) ಅಭಿನಯಿಸುತ್ತಿರುವ 777 ಚಾರ್ಲಿ (777 Charlie) ಸಿನಿಮಾ ರಿಲೀಸ್ಗೆ ಸಜ್ಜಾಗುತ್ತಿದೆ. ಲಾಕ್ಡೌನ್ ಸಡಿಲಗೊಂಡ ನಂತರ ಮತ್ತೆ ಶೂಟಿಂಗ್ ಆರಂಸಿರುವ ಚಿತ್ರತಂಡ ಈಗಾಗಲೇ ಕೊಡೈಕೆನಾಲ್, ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರದಲ್ಲಿಲ್ಲಿ ಶೂಟಿಂಗ್ ಮುಗಿಸಿದೆ. ಕೊಡೈಕೆನಾಲ್ ನಂತರ ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರದಲ್ಲಿ ಬೀಡು ಬಿಟ್ಟಿತ್ತು ಚಾರ್ಲಿ ಚಿತ್ರತಂಡ. ಕೊರೋನಾ ಕಾಟ ಆರಂಭವಾಗುವ ಮೊದಲು ಚಾರ್ಲಿ ಸಿನಿಮಾದ ಚಿತ್ರೀಕರಣ ಜೋರಾಗಿ ನಡೆಯುತ್ತಿತ್ತು. ಆದರೆ ಇದ್ದಕ್ಕಿದ್ದಂತೆಯೇ ಆರಂಭವಾದ ಕೊರೋನಾ ವೈರಸ್ ಕಾಟದಿಂದಾಗಿ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿತ್ತು. ಆಗ ದೇಶದಿಂದ ದೂರ ಇದ್ದವರು ಹಾಗೂ ಮನೆಯಿಂದ ಹೊರ ರಾಜ್ಯಗಳಿಗೆ ಹೋಗಿದ್ದವರೆಲ್ಲ ಬಂದು ಮನೆ ಸೇರಿಕೊಂಡರು. ಅಂತೆಯೇ 777 ಚಾರ್ಲಿ ಚಿತ್ರತಂಡ ಸಹ ಅರ್ಧಕ್ಕೆ ಚಿತ್ರೀಕರಣ ನಿಲ್ಲಿಸಿ, ಮರಳಬೇಕಾಯಿತು. ಒಂದು ಸಲ ಕಾಶ್ಮೀರದಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಮತ್ತೆ ಕಾಶ್ಮೀರ ಸೇರಿಕೊಂಡಿದೆ.
ಚಾರ್ಲಿ ಚಿತ್ರತಂಡ ಮೊನ್ನೆಯೇ ಕಾಶ್ಮೀರ ಸೇರಿಕೊಂಡಿದ್ದು, ಅಲ್ಲಿ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ಗೆ ಎಲ್ಲ ಸಿದ್ಧತೆ ನಡೆಸಿತ್ತು. ಕಾಶ್ಮೀರಕ್ಕೆ ಹೋಗುತ್ತಿದ್ದಂತೆಯೇ ಚಿತ್ರದ ನಿರ್ದೇಶಕ ಕಿರಣ್ ರಾಜ್ ಕೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಮಾಡಿದ್ದರು.
ಈಗ ರಕ್ಷಿತ್ ಶೆಟ್ಟಿ ಸಹ ಕಾಶ್ಮೀರ ಸೇರಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಸಂಚರಿಸುತ್ತಿರುವ ವಿಡಿಯೋವನ್ನು ಶೆಟ್ರು ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಹಂಚಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಈಗ 777 ಚಾರ್ಲಿ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಅಂದರೆ ಕ್ಲೈಮ್ಯಾಕ್ಸ್ ಶೂಟಿಂಗ್ ಆರಂಭವಾಗಿದೆ.

ಕಾಶ್ಮೀರದಲ್ಲಿ ರಕ್ಷಿತ್ ಶೆಟ್ಟಿ
ಎಲ್ಲ ಸರಿ ಇದ್ದಿದ್ದರೆ, ಇಷ್ಟೊತ್ತಿಗೆ ಚಿತ್ರೀಕರಣ ಮುಗಿದು ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿತ್ತು. ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಚಿತ್ರದ ಬಗ್ಗೆ ಸಿನಿಪ್ರಿಯರಿಗೆ ತುಂಬಾ ನಿರೀಕ್ಷೆ ಇದೆ. ಈಗ ಕಾಶ್ಮೀರದಲ್ಲಿ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿಯುತ್ತಿದ್ದಂತೆಯೇ, ಅದರ ಜೊತೆಗೆ 2 ದಿನಗಳು ಪ್ಯಾಚ್ಅಪ್ ಕೆಲಸಗಳನ್ನು ಪೂರ್ಣಗೊಳಿಸಲಿದೆಯಂತೆ ಚಿತ್ರತಂಡ. ನಂತರಸಿನಿಮಾದ ಸೆಕೆಂಡ್ ಹಾಫ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿವೆ.
ಇದನ್ನೂ ಓದಿ: Darshan: ಪುಟ್ಟ ಅಭಿಮಾನಿಯ ಹುಟ್ಟುಹಬ್ಬದಲ್ಲಿ ಭಾಗಿಯಾದ ದರ್ಶನ್..!
ಲಾಕ್ಡೌನ್ನಲ್ಲಿ ಸಾಕಷ್ಟು ಸಮಯ ಸಿಕ್ಕಿದ್ದು, ಆಗಲೇ ಸಿನಿಮಾದ ಮೊದಲರ್ಧ ಭಾಗದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಹಾಗೂ ಡಬ್ಬಿಂಗ್ ಎಲ್ಲ ಮುಗಿದಿದೆಯಂತೆ. ಇದರಿಂದಾಗಿ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಇದೆ ಎಂದು ರಕ್ಷಿತ್ ಶೆಟ್ಟಿ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದಾಗ ಹೇಳಿದ್ದರು.
ಸುದೀಪ್ ಜತೆ ಸಿನಿಮಾಗೆ ಬಗ್ಗೆ ರಕ್ಷಿತ್ ಕೊಟ್ಟ ಅಪ್ಡೇಟ್
ಚಾರ್ಲಿ ಸಿನಿಮಾ ಮುಗಿದ ನಂತರ ಸಪ್ತಸಾಗರದಾಚೆ ಎಲ್ಲೋ, ನಂತರ ರಿಚ್ಚಿ ಚಿತ್ರೀಕರಣ. ಇವೆಲ್ಲ ಮುಗಿದ ಮೇಲೆ ಪುಣ್ಯಕೋಟಿ ಸಿನಿಮಾ ಕೆಲಸಗಳು ಆರಂಭವಾಗಲಿವೆ.
ಕಿಚ್ಚ ಸುದೀಪ್ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಷನ್ನಲ್ಲಿ ಚಿತ್ರವೊಂದು ಬರಲಿದೆ ಎಂದು ಹೇಳಲಾಗುತ್ತಿದೆ. ಬಹಳ ಸಮಯದಿಂದ ಹರಿದಾಡುತ್ತಿರುವ ಈ ಸುದ್ದಿಯ ಕುರಿತಾಗಿ ರಕ್ಷಿತ್ ಲೈವ್ನಲ್ಲಿ ಅಪ್ಡೇಟ್ ಕೊಟ್ಟಿದ್ದರು. ಅವರಿಗಾಗಿ ಕಥೆ ಬರೆಯುತ್ತಿದ್ದೇನೆ. ಇನ್ನೂ ಪೂರ್ಣಗೊಂಡಿಲ್ಲ. ನನ್ನ ಬಾಕಿ ಇರುವ ಸಿನಿಮಾಗಳನ್ನು ಮುಗಿಸಿ, ಆ ಕೆಲಸ ಕೈಗೆತ್ತಿಕೊಳ್ಳುತ್ತೇನೆ ಎಂದಿದ್ದರು.
Published by:
Anitha E
First published:
January 21, 2021, 9:10 AM IST