Rakshit Shetty: ಸ್ಯಾಂಡಲ್​ವುಡ್ ಕ್ವೀನ್​ ಬಗ್ಗೆ ಶೆಟ್ರು ಹಿಂಗ್ಯಾಕ್​ ಅಂದ್ರು! ಏನಿಲ್ಲ ಏನಿಲ್ಲ ಅಂತಾನೇ ​ಚಮಕ್​ ಕೊಟ್ರಾ?

ಇತ್ತೀಚೆಗೆ ರಕ್ಷಿತ್​ ಶೆಟ್ಟಿ ಅವರ ಮತ್ತೊಂದು ವಿಚಾರ ಸಖತ್​ ವೈರಲ್​ ಆಗಿತ್ತು. ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ (Sandalwood Queen Ramya) ಜೊತೆ ರಕ್ಷಿತ್​ ಹೆಸರು ತಳುಕು ಹಾಕಿಕೊಂಡಿತ್ತು. ಅಭಿಮಾನಿಗಳು ಕೂಡ ಈ ಸುದ್ದಿ ನಿಜ ಆಗಲಿ ಎಂದು ಹೇಳಿದ್ದರು.

ರಮ್ಯಾ, ರಕ್ಷಿತ್​ ಶೆಟ್ಟಿ

ರಮ್ಯಾ, ರಕ್ಷಿತ್​ ಶೆಟ್ಟಿ

  • Share this:
ರಕ್ಷಿತ್​ ಶೆಟ್ಟಿ (Rakshit Shetty)... ನಟನೆ, ನಿರ್ದೇಶನದಲ್ಲೂ ಸೈ ಎನಿಸಿಕೊಂಡವರು. ಸ್ಯಾಂಡಲ್​ವುಡ್​ (Sandalwood) ನಲ್ಲಿ ತಮ್ಮದೇ ಆದ ಟ್ರೆಂಡ್ (Trend)​ ಸೃಷ್ಟಿ ಮಾಡಿದವರು. ರಕ್ಷಿತ್​ ಶೆಟ್ಟಿ ಅಭಿನಯಕ್ಕೆ ಮನಸೋತವರೇ ಇಲ್ಲ. ವಿಭಿನ್ನ ಮ್ಯಾನರಿಸಂ, ಕಿಕ್​ ಕೊಡುವ ಡೈಲಾಗ್ಸ್​ ರಕ್ಷಿತ್​ ಶೆಟ್ಟಿ ಅವರ ಟ್ರೇಡ್​​ ಮಾರ್ಕ್ (Trade Mark) ​. 'ತುಘಲಕ್'​ನಿಂದ ತಮ್ಮ ಸಿನಿಮಾ ಜರ್ನಿ ಆರಂಭಿಸಿ ಈಗ '777 ಚಾರ್ಲಿ'(777 Charlie) ಗೆ ಬಂದು ನಿಂತಿದ್ದಾರೆ. ಅವರ ಪ್ರತಿ ಸಿನಿಮಾವೂ ಡಿಫ್ರೆಂಟ್ (Different)​. ಇದೀಗ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ‘777 ಚಾರ್ಲಿ’ ಜೂನ್‌ 10ರಂದು ಬಿಡುಗಡೆಯಾಗಲಿದೆ. ಇತ್ತೀಚೆಗೆ ರಕ್ಷಿತ್​ ಶೆಟ್ಟಿ ಅವರ ಮತ್ತೊಂದು ವಿಚಾರ ಸಖತ್​ ವೈರಲ್​ ಆಗಿತ್ತು. ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ (Sandalwood Queen Ramya) ಜೊತೆ ರಕ್ಷಿತ್​ ಹೆಸರು ತಳುಕು ಹಾಕಿಕೊಂಡಿತ್ತು. ಅಭಿಮಾನಿಗಳು ಕೂಡ ಈ ಸುದ್ದಿ ನಿಜ ಆಗಲಿ ಎಂದು ಹೇಳಿದ್ದರು.

ರಮ್ಯಾ ಬಗ್ಗೆ  ರಕ್ಷಿತ್​ ಶೆಟ್ಟಿ ಹೇಳಿದ್ದೇನು?

ರಮ್ಯಾ ಮತ್ತು ರಕ್ಷಿತ್​ ನಡುವೆ ಏನೋ ಸಂಥಿಂಗ್​ ಸಂಥಿಂಗ್​ ಇದೆ ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಇದಕ್ಕೆ ಪೂರಕವಾಗಿ ರಮ್ಯಾ ಒಂದು ಪೋಸ್ಟ್​ ಕೂಡ ಮಾಡಿದ್ದರು. ಇದಾದ ಬಳಿಕ ಈ ಸುದ್ದಿ ಮತ್ತಷ್ಟು ಜೋರಾಗಿ ಸೌಂಡ್​ ಮಾಡಿತ್ತು. 777 ಚಾರ್ಲಿ ಸಿನಿಮಾದ ಪ್ರೆಸ್​ಮೀಟ್​ನಲ್ಲಿ ರಿಷಭ್​ ಶೆಟ್ಟಿ ಈ ಬಗ್ಗೆ ಮಾತನಾಡಿದ್ದರು. ರಕ್ಷಿತ್​ ಶೆಟ್ಟಿ ನಿಜವಾಗಲೂ ರಮ್ಯಾನ ಮದುವೆ ಆಗುತ್ತಿಲ್ಲ ಎಂದು ಹೇಳಿದ್ದರು. ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ಮತ್ತೆ ರಕ್ಷಿತ್ ಶೆಟ್ಟಿ ರಮ್ಯಾ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಏನೂ ಇಲ್ಲ ಅಂತೀರಾ, ಆದ್ರೆ ನಿಮ್ಮ ಹೇಳಿಕೆಯಲ್ಲಿ ಏನೋ ಇದೆ ಅಂತ ಹೇಳುತ್ತಿದ್ದಾರೆ.

ರಮ್ಯಾನೇ ಹಾಟೆಸ್ಟ್​ ಹೀರೋಯಿನ್ ಎಂದ ರಕ್ಷಿತ್​!

ಇತ್ತೀಚೆಗೆ ಆ್ಯಂಕರ್​ ಅನುಶ್ರೀ ಅವರ ಯೂಟ್ಯೂಬ್​ ಚಾನೆಲ್​​ಗೆ ರಕ್ಷಿತ್​ ಶೆಟ್ಟಿ ಭಾಗವಹಿಸಿದ್ದರು. ಜೊತೆಗೆ ಸ್ಯಾಂಡಲ್​ವುಡ್​ ಕ್ರೇಜಿಸ್ಟಾರ್​ ರವಿಚಂದ್ರನ್​ ಕೂಡ ಭಾಗಿಯಾಗಿದ್ದರು. ಅಪೂರ್ವ ಸಂಗಮ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಎಪಿಸೋಡ್​ನಲ್ಲಿ ಹಲವಾರು ವಿಚಾರಗಳನ್ನು ಇಬ್ಬರು ನಟರು ಹಂಚಿಕೊಂಡಿದ್ದಾರೆ. ಜೊತೆಗೆ ಅನುಶ್ರಿ  ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ಸ್ಯಾಂಡಲ್​ವುಡ್​ನ ಹಾಟೆಸ್ಟ್​ ನಟಿ ಯಾರು ಎಂದು ಕೇಳಿದ್ದಾರೆ. ಇದಕ್ಕೆ ಮೊದಲು ಉತ್ತರಿಸಿದ ರವಿಚಂದ್ರನ್​ ಯಾರೂ ಇಲ್ಲ ಎಂದು ಹೇಳಿದರು. ಆದರೆ, ರಕ್ಷಿತ್ ಶೆಟ್ಟಿ ಮಾತ್ರ ರಮ್ಯಾ ಎಂದು ಹೇಳಿದ ಕೂಡಲೇ ಅಲ್ಲಿ ನೆರೆದಿದ್ದವರೆಲ್ಲ ನಕ್ಕಿದ್ದಾರೆ.

ಇದನ್ನೂ ಓದಿ: "ನಂಗೆ ಲವ್ ಫೆಲ್ಯೂರ್ ಆಗಿಲ್ಲ" ಎಂದಿದ್ದೇಕೆ ರಕ್ಷಿತ್? 'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ' ತ್ಯಾಗ ಮಾಡಿ 'ಕರ್ಣ'ನಾದ್ರಾ ಶೆಟ್ರು?

ನನಗೆ ಲವ್​ ಫೇಲ್ಯೂರ್​ ಆಗಿಲ್ಲ ಅಂದ ರಕ್ಷಿತ್

ಇನ್ನು ರಕ್ಷಿತ್​ ಅವರು ಕೂಡ ತಮ್ಮ ವಿಚಾರಗಳನ್ನು ಮಾತನಾಡಿದ್ದು, ಅನುಶ್ರೀ ನೀವು ತುಂಬಾ ರೋಮ್ಯಾಂಟಿಕ್​ ಎಂಬ ಪ್ರಶ್ನೆಗೆ ಅವರು ಸಹ ತುಂಟತನದಿಂದ ಉತ್ತರ ನೀಡಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ರಕ್ಷಿತ್ ಹೇಳಿರುವ ಒಂದು ಮಾತು ಬಹಳ ಸುದ್ದಿಯಲ್ಲಿದೆ. ರವಿಚಂದ್ರನ್ ಅವರು ರಕ್ಷಿತ್​ ಗೆ ನಿನಗೆ ಲವ್​ ಫೇಲ್ಯೂರ್​ ಆಗಿದ ಅದಕ್ಕೆ ನೀನು ಸಕ್ಸಸ್​​ ಆಗಿದಿಯಾ  ಎನ್ನುತ್ತಾರೆ. ಅದಕ್ಕೆ ನಗುತ್ತಾ ಉತ್ತರಕೊಟ್ಟ ರಕ್ಷಿತ್​, ನನ್ನ ಪ್ರಕಾರ ನನಗೆ ಲವ್ ಫೇಲ್ಯೂರ್ ಆಗಿಲ್ಲ, ಆದರೆ ಇಡೀ ಜಗತ್ತು ಪೂರ್ತಿ ಲವ್​ ಫೇಲ್ಯೂರ್​ ಆಗಿದೆ ಎಂದು ಹೇಳುತ್ತಿದ್ದೆ ಎಂದು ನಕ್ಕಿದ್ದಾರೆ.

ಇದನ್ನೂ ಓದಿ: 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಫಸ್ಟ್​ ಲುಕ್ ರಿಲೀಸ್​ - ರಕ್ಷಿತ್​ ಶೆಟ್ಟಿ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

ಇದನ್ನು ಕೇಳಿದ ಅನುಶ್ರೀ ನಗು ತಡೆಯಲಾರದೇ ಬಿದ್ದು, ಬಿದ್ದು ನಕ್ಕಿದ್ದಾರೆ.  ರಕ್ಷಿತ್ ಅವರ ಮಾತು ಈಗ ಸುದ್ದಿಯಲ್ಲಿದೆ ಏಕೆಂದರೆ, ಕಿರಿಕ್ ಪಾಟರ್ಇ ಚಿತ್ರದ ನಂತರ ರಶ್ಮಿಕಾ ಹಾಗೂ ರಕ್ಷಿತ್ ಎಂಗೇಜ್​ಮೆಂಟ್​ ಆಗಿತ್ತು. ಆದರೆ ನಂತರ ಮುರಿದು ಬಿದ್ದಿತ್ತು.  ಈಗ ರಕ್ಷಿತ್ ಹೇಳಿರುವ ಮಾತು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ. ಇನ್ನು ಕನ್ನಡ ಸಿನಿರಂಗದಲ್ಲಿ ಯಾವ ಹೀರೋಯಿನ್ ಇಷ್ಟ ಎಂದು ಕೇಳಿದ್ದಕ್ಕೆ ರಕ್ಷಿತ್ ರಮ್ಯಾ ಎಂದಿದ್ದಾರೆ
Published by:Vasudeva M
First published: