news18-kannada Updated:October 20, 2020, 3:57 PM IST
ರಕ್ಷಿತ್ ಶೆಟ್ಟಿ
ಸಿನಿಮಾ ಇಂಡಸ್ಟ್ರಿಯಲ್ಲಿ ಟೈಟಲ್ ವಿವಾದಗಳೇನು ಹೊಸದಲ್ಲ. ಯಾರಾದರೂ ಸಿನಿಮಾ ಘೋಷಣೆ ಮಾಡಿದ ನಂತರದಲ್ಲಿ ಅದು ನಮ್ಮ ಟೈಟಲ್ ಎಂದು ಕೆಲವರು ಮುಂದೆ ಬಂದಿರುವ ಸಾಕಷ್ಟು ಉದಾಹರಣೆಗಳಿವೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈ ರೀತಿಯ ಸಾಕಷ್ಟು ಘಟನೆಗಳು ನಡೆದಿವೆ. ಈಗ ರಕ್ಷಿತ್ ಶೆಟ್ಟಿ ನಟನೆಯ ಸಿನಿಮಾದ ಟೈಟಲ್ ಕೂಡ ವಿವಾದಕ್ಕೀಡಾಗಿದೆ. ಅವರು ನಟಿಸಬೇಕಿರುವ ರಿಚ್ಚಿ ಸಿನಿಮಾ ಟೈಟಲ್ ನಮ್ಮದು ಎಂದು ನಿರ್ದೇಶಕರೊಬ್ಬರು ಆರೋಪ ಮಾಡಿದ್ದಾರೆ.
ಉಳಿದವರು ಕಂಡಂತೆ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ರಿಚ್ಚಿ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ಪಾತ್ರದ ಹೆಸರಲ್ಲಿ ಸಿನಿಮಾ ಬರುತ್ತಿದೆ. ಈಗ ಈ ಸಿನಿಮಾ ಶೀರ್ಷಿಕೆ ನಮ್ಮದು ಎಂದು ಹೇಮಂತ್ ಹೆಸರಿನ ನಿರ್ದೇಕರೊಬ್ಬರು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ನಾನು ಎರಡು ವರ್ಷಗಳ ಹಿಂದೆಯೇ ರಿಚ್ಚಿ ಸಿನಿಮಾ ಕೈಗೆತ್ತಿಕೊಂಡಿದ್ದೆ. ಈಗಾಗಲೇ ಶೇ.70 ಶೂಟಿಂಗ್ ಕೂಡ ಪೂರ್ಣಗೊಂಡಿದೆ. ಹೀಗಿರುವಾಗ ರಕ್ಷಿತ್ ಸಿನಿಮಾಗೂ ಅದೇ ರೀತಿಯ ಹೆಸರಿಟ್ಟರೆ ಹೇಗೆ ಎನ್ನುವ ಪ್ರಶ್ನೆ ಹೇಮಂತ್ ಅವರದ್ದು. ಅಲ್ಲದೆ, ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಹೇಮಂತ್.
ಸದ್ಯ ರಕ್ಷಿತ್ ಶೆಟ್ಟಿ ಚಾರ್ಲಿ-777 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಶ್ವಾನ ಹಾಗೂ ಮನುಷ್ಯನ ಬಾಂಧವ್ಯದ ಬಗ್ಗೆ ಹೇಳಲಾಗುತ್ತಿದೆ. ಹೀಗಾಗಿ, ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಚಿತ್ರದ ನಂತರದಲ್ಲಿ ಅವರು ರಿಚ್ಚಿ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ. ರಿಚ್ಚಿ ಸಿನಿಮಾದಲ್ಲಿ ಉಳಿದವರು ಕಂಡಂತೆ ಸಹಾಯ ನಿರ್ದೇಶಕ ರಾಹುಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
Published by:
Rajesh Duggumane
First published:
October 20, 2020, 3:57 PM IST