ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಸಾನ್ವಿಯಾಗಿ ಎಂಟ್ರಿ ಕೊಟ್ಟ ರಶ್ಮಿಕಾ ಇಂದು ನ್ಯಾಷನಲ್ ಕ್ರಶ್ ಆಗಿ ಬೆಳೆದಿದ್ದಾರೆ. ಕನ್ನಡ ಸೇರಿದಂತೆ, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಬೆಳೆಯುತ್ತಿದ್ದಾರೆ. ರಶ್ಮಿಕಾಗೆ ಈಗ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿರುವ ಸಮಯ. ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಗರು ಕೊಡುವ ಕಾಟವನ್ನು ಸಹಿಸಿಕೊಳ್ಳುತ್ತಲೇ ತಮ್ಮ ಏಳಿಗೆಯಿಂದಲೇ ಅವರಿಗೆ ಉತ್ತರ ಕೊಡುತ್ತಿರುವ ಕೊಡಗಿನ ಕುವರಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ಬ್ರೇಕಪ್ ಮಾಡಿಕೊಂಡಿದ್ದ ರಕ್ಷಿತ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಿ ಒಂದು ಟ್ವೀಟ್ ಮಾಡಿದ್ದರು. ನಿಶ್ಚಿತಾರ್ಥ ಮುರಿದು ಬಿದ್ದ ನಂತರ ಇದೇ ಮೊದಲ ಬಾರಿಗೆ ಲಿಲ್ಲಿ ರಕ್ಷಿತ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದು. ಇದರಿಂದಾಗಿ ಈ ಟ್ವೀಟ್ ವಿಷಯ ಸಹ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈಗ ಈ ಟ್ವೀಟ್ಗೆ ರಕ್ಷಿತ್ ಶೆಟ್ಟಿ ಸಹ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ನಿಶ್ವಿತಾರ್ಥ ಮುರಿದು ಬಿದ್ದಾಗಲೂ ಸಹ ರಶ್ಮಿಕಾ ಪರವಾಗಿಯೇ ಮಾತನಾಡಿದ್ದರು. ಅಲ್ಲದೆ ನಟಿಯನ್ನು ಟ್ರೋಲ್ ಮಾಡುತ್ತಿದ್ದವರ ಬಾಯಿ ಮುಚ್ಚಿಸಿದ್ದರು. ಇಂತಹ ನಟ, ಈಗ ರಶ್ಮಿಕಾ ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯಿಸಿರುವ ರೀತಿ ನೆಟ್ಟಿಗರಿಗೆ ರಕ್ಷಿತ್ ಮೇಲೆ ಇರುವ ಗೌರವ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಕಿರಿಕ್ ಪಾರ್ಟಿ ಸಿನಿಮಾದ ಬೆಳಗೆದ್ದು ಹಾಡಿಗೆ ಯೂಟ್ಯೂಬ್ನಲ್ಲಿ ಹತ್ತು ಕೋಟಿ ಅಂದರೆ ನೂರು ಮಿಲಿಯನ್ ವೀಕ್ಷಣೆ ಸಿಕ್ಕಿದೆ. ಈ ವಿಷಯವನ್ನು ಕಿರಿಕ್ ಪಾರ್ಟಿ ಚಿತ್ರತಂಡ ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಇದೇ ವಿಷಯವಾಗಿ ರಶ್ಮಿಕಾ ಸಹ ಟ್ವೀಟ್ ಮಾಡಿದ್ದು, ರಕ್ಷಿತ್ ಸೇರಿದಂತೆ ಇತರೆ ಸಹಕಲಾವಿದರು ಹಾಗೂ ನಿರ್ದೇಶಕರನ್ನು ಟ್ಯಾಗ್ ಮಾಡಿದ್ದರು.
Belageddu - My first ever song.. Which I absolutely adore reached 100M.. 🤗🤍 I remember making this song mine.. Living through those montages.. And just finding Saanvi in me..✨
Ahh.. The journey.💃🏻✨@shetty_rishab @rakshitshetty @SamyukthaHegde @AJANEESHB @ParamvahStudios
— Rashmika Mandanna (@iamRashmika) December 24, 2020
Grow grow and grow girl. May all your dreams come true ☺️🤗 https://t.co/WVm6BM4smk
— Rakshit Shetty (@rakshitshetty) December 25, 2020
🤗😊
— Rashmika Mandanna (@iamRashmika) December 25, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ