Rakshit Shetty: 777 ಚಾರ್ಲಿ ಸಕ್ಸಸ್ ಬಳಿಕ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ನಟ ರಕ್ಷಿತ್ ಶೆಟ್ಟಿ

11 ವರ್ಷದ ಬಾಲಕನ ನೋವಿನ ಕಥೆಯನ್ನು ಚಿತ್ರದ ಮೂಲಕ ಹೇಳಲು ನಿರ್ದೇಶಕ ಸುಮಂತ್ ಭಟ್​ ಮುಂದಾಗಿದ್ದಾರೆ. ನಿರ್ದೇಶಕರ ಒಳ್ಳೆಯ ಪ್ರಯತ್ನಕ್ಕೆ ನಿರ್ಮಾಪಕ ರಕ್ಷಿತ್​ ಶೆಟ್ಟಿ ಕೂಡ ಸಾಥ್ ಕೊಟ್ಟಿದ್ದಾರೆ.

ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ನಟ ರಕ್ಷಿತ್ ಶೆಟ್ಟಿ

ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ನಟ ರಕ್ಷಿತ್ ಶೆಟ್ಟಿ

  • Share this:
'ಚಾರ್ಲಿ'  ಸಿನಿಮಾ ಗೆದ್ದ ಖುಷಿಯಲ್ಲಿದ್ದ ರಕ್ಷಿತ್​ ಶೆಟ್ಟಿ (Rakshit Shetty), ಇದೀಗ ಮತ್ತೊಂದು ಹೊಸ ಚಿತ್ರದ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದೀಗ ರಕ್ಷಿತ್ ಶೆಟ್ಟಿ  ಪರಂವಃ ಸ್ಟುಡಿಯೋಸ್ ಕಡೆಯಿಂದ ಹೊಸ ಸಿನಿಮಾ ನಿರ್ಮಾಣಕ್ಕೆ (Producer) ಮುಂದಾಗಿದ್ದಾರೆ. ವಿಭಿನ್ನ ಕಥಾ ಹಂದರವಿರೋ ಮಿಥ್ಯ ಚಿತ್ರ (Mithya Movie) ನಿರ್ಮಾಣಕ್ಕೆ ರಕ್ಷಿತ್ ಬಂಡವಾಳ ಮುಂದಾಗಿದ್ದಾರೆ.  ನಟನೆ, ನಿರ್ದೇಶನ, ನಿರ್ಮಾಣದಲ್ಲೂ ಸೈ ಎನಿಸಿಕೊಂಡಿರೋ ರಕ್ಷಿತ್ ಶೆಟ್ಟಿ ಇದೀಗ ತನ್ನ ಬ್ಯಾನರ್​ನಲ್ಲಿ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. 

ಮಿಥ್ಯ ಚಿತ್ರ ನಿರ್ಮಾಣಕ್ಕೆ ಮುಂದಾದ ರಕ್ಷಿತ್​

ರಕ್ಷಿತ್​ ಶೆಟ್ಟಿ  ‘ಮಿಥ್ಯ’ ಎಂಬಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 11 ವರ್ಷದ ಬಾಲಕನ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ‘ಮಿಥ್ಯ’ ರಕ್ಷಿತ್​ ಶೆಟ್ಟಿ ನಿರ್ಮಾಣದ ಹೊಸ ಚಿತ್ರ. ಸುಮಂತ್ ಭಟ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಬಾರಿಗೆ ನಿರ್ದೇಶನ ಮಾಡೋ ಪ್ರತಿಭಾನ್ವಿತರಿಗೆ ರಕ್ಷಿತ್ ಚಾನ್ಸ್​ ಕೊಡ್ತಿರೋದು ನಿಜಕ್ಕೂ ಚಿತ್ರರಂಗ ಮೆಚ್ಚುವ ಕೆಲಸವಾಗಿದೆ.

ಮಿಥ್ಯಾ ಚಿತ್ರಕ್ಕೆ ಸುಮಂತ್ ಭಟ್​ ನಿರ್ದೇಶನ

ಸುಮಂತ್ ಭಟ್ ಅವರಿಗೂ ಇದು ಮೊದಲ ಚಿತ್ರವಾಗಿದೆ. 11 ವರ್ಷದ ಬಾಲಕನ ನೋವಿನ ಕಥೆಯನ್ನು ಚಿತ್ರದ ಮೂಲಕ ಹೇಳಲು ನಿರ್ದೇಶಕ ಸುಮಂತ್ ಭಟ್​ ಮುಂದಾಗಿದ್ದಾರೆ. ನಿರ್ದೇಶಕರ ಒಳ್ಳೆಯ ಪ್ರಯತ್ನಕ್ಕೆ ನಿರ್ಮಾಪಕ ರಕ್ಷಿತ್​ ಶೆಟ್ಟಿ ಕೂಡ ಸಾಥ್ ಕೊಟ್ಟಿದ್ದಾರೆ.

ಇದನ್ನೂ ಓದಿ: Kiccha Sudeep: ಕಿಚ್ಚಂಗೂ ಶೆಟ್ರಿಗೂ ಕೋಲ್ಡ್​ ವಾರ್​? ಇಬ್ಬರ ಕಾಂಬಿನೇಷನ್​ ಸಿನಿಮಾ ನೋಡೋದು ಯಾವಾಗ?

'ಮಿಥ್ಯಾ'  11 ವರ್ಷದ ಬಾಲಕನ ನೋವಿನ ಕಥೆ

ಪುಟ್ಟ ಬಾಲಕನ ತಂದೆ-ತಾಯಿ ನಿಧನ ಹೊಂದುತ್ತಾರೆ. ಅವರ ನೆನಪುಗಳಿಂದ ಹೊರಬರಲಾರದ ಈ ಬಾಲಕ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ಈ ‘ಮಿಥ್ಯ’. ಕಥೆಯ ಒಂದೆಳೆ ಕೇಳಿ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ.





ಇದನ್ನೂ ಓದಿ: ಥೈಲ್ಯಾಂಡ್​ಗೆ ಹಾರಿದ 777 Charlie ಚಿತ್ರತಂಡ, ಚಾರ್ಲಿ ಎಲ್ಲಿ ಎಂದು ಕೇಳಿದ ನೆಟ್ಟಿಗರು

ಸುಮಂತ್ ಭಟ್ ಅವರು ವೃತ್ತಿಯಲ್ಲಿ ಇಂಜಿನಿಯರ್​ ಆಗಿದ್ದರು. ಆದರೆ, ಅವರಿಗೆ ಬಣ್ಣದ ಲೋಕದ ಮೇಲೆ ಎಲ್ಲಿಲ್ಲದ ಆಸಕ್ತಿ. ಈ ಕಾರಣಕ್ಕೆ ಅವರು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಪರಂವಃ ಸ್ಟುಡಿಯೋಸ್​ ‘ಏಕಂ’ ಹೆಸರಿನ ವೆಬ್​ಸೀರೀಸ್ ನಿರ್ಮಾಣ ಮಾಡಿತ್ತು. ಏಳು ಎಪಿಸೋಡ್​ಗಳ ಪೈಕಿ ನಾಲ್ಕು ಎಪಿಸೋಡ್​ಗಳನ್ನು ಸುಮಂತ್ ಅವರೇ ಬರೆದು ನಿರ್ದೇಶನ ಮಾಡಿದ್ದರು. ಈಗ ಅವರು ‘ಮಿಥ್ಯ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಸ್ಯಾಂಡಲ್​ವುಡ್​ನ ನಟ ಸಿಂಪಲ್​ ಸ್ಟಾರ್​ ರಕ್ಷಿತ್ ಶೆಟ್ಟಿ  ಅಭಿನಯದ 777 ಚಾರ್ಲಿ  ಬಿಡುಗಡೆ ಆಗಿ ಸೂಪರ್ ಹಿಟ್​ ಆಗಿದ್ದು ಗೊತ್ತೇ ಇದೆ. ಚಿತ್ರವು ಬಾಕ್ಸ್ ಆಫೀಸ್​ನಲ್ಲಿಯೂ ಸಖತ್ ಆಗಿ ಸದ್ದು ಮಾಡಿದ್ದು, ಸ್ಯಾಂಡಲ್​ವುಡ್​ನಲ್ಲಿ ಹೊಸದ ಸಂಚಲನವನ್ನು ಸೃಷ್ಟಿ ಮಾಡಿತ್ತು. ಅದರಲ್ಲಿ ಚಾರ್ಲಿ ಪಾತ್ರದಲ್ಲಿ ನಟಿಸಿದ್ದ ನಾಯಿ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Published by:Pavana HS
First published: