• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rakshit Shetty: ರಿಚರ್ಡ್​ ಆಂಟನಿ ಬಗ್ಗೆ ಅಪ್​ಡೇಟ್​ ಕೊಟ್ಟ ರಕ್ಷಿತ್, ಮತ್ತೆ ರಿಚ್ಚಿ ಬಂದೇ ಬರ್ತಾನೆ!

Rakshit Shetty: ರಿಚರ್ಡ್​ ಆಂಟನಿ ಬಗ್ಗೆ ಅಪ್​ಡೇಟ್​ ಕೊಟ್ಟ ರಕ್ಷಿತ್, ಮತ್ತೆ ರಿಚ್ಚಿ ಬಂದೇ ಬರ್ತಾನೆ!

ರಿಚರ್ಡ್ ಆ್ಯಂಟೋನಿ

ರಿಚರ್ಡ್ ಆ್ಯಂಟೋನಿ

Richard Anthony: ಅವರ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ವಿವಿಧ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ. ಅದಕ್ಕೆಲ್ಲಾ ಸಿದ್ದತೆಯಾಗಿದ್ದು, ರಿಚರ್ಡ್​ ಆಂಟನಿ ಸಿನಿಮಾಗೆ ಸಹ ಫುಲ್ ಸಿದ್ಧತೆ ಮಾಡಿಕೊಂಡು ಅಖಾಡಕ್ಕೆ ಇಳಿಯುವುದಾಗಿ ತಿಳಿಸಿದ್ದಾರೆ.

  • Share this:

ರಕ್ಷಿತ್ ಶೆಟ್ಟಿ (Rakshit Shetty) 777 ಚಾರ್ಲಿ (777 Charlie) ಸಿನಿಮಾ ಮೂಲಕ ಮತ್ತೆ ಜನರನ್ನು ರಂಜಿಸಿದ್ದಾರೆ. ಇದೊಂದು ಸಿನಿಮಾ ಮಾತ್ರವಲ್ಲ ಅವರ  ಎಲ್ಲಾ ಸಿನಿಮಾಗಳು ಯಾವಾಗಲೂ ವಿಭಿನ್ನತೆಯನ್ನು ಹೊಂದಿರುತ್ತದೆ. ಜನರಿಗೆ ಹತ್ತಿರವಾಗುವ ಕತೆಯೊಂದಿಗೆ ರಕ್ಷಿತ್ ಬರುವುದು. ಅನೇಕ ಟೀಕೆ ಟಿಪ್ಪಣಿಗಳನ್ನು ಎದುರಿಸಿದರೂ ಸಹ ಎಲ್ಲಾದಕ್ಕೂ ಸಿನಿಮಾ ಮೂಲಕ ಉತ್ತರ ನೀಡಿದವರು ರಕ್ಷಿತ್. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟ ಬಹು ನಿರೀಕ್ಷಿತ ಸಿನಿಮಾ ರಿಚರ್ಡ್​ ಆಂಟನಿ (Richard Antony) ಬಗ್ಗೆ ಅಪ್​ಡೆಟ್​ ಕೊಟ್ಟಿದ್ದಾರೆ.


ಡಿಸೆಂಬರ್​ನಲ್ಲಿ ಸಿನಿಮಾ ಶೂಟಿಂಗ್ ಸ್ಟಾರ್ಟ್ 


ಜನರಿಗೆ ರಕ್ಷಿತ್ ಶೆಟ್ಟಿ ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿ ಸಹ ಬಹಳ ಇಷ್ಟ. ಅವರ ನಿರ್ದೇಶನದ ಉಳಿದವರು ಕಂಡಂತೆ ಕಲ್ಟ್​ ಕ್ಲಾಸಿಕ್ ಸಿನಿಮಾ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೆಯೇ ಅದರ ಮುಂದುವರೆದ ಭಾಗ ಎನ್ನಲಾಗುತ್ತಿರುವ ರಿಚರ್ಡ್​ ಆಂಟನಿ ಬಗ್ಗೆ ಸಹ ಜನರಲ್ಲಿ ಕುತೂಹಲ ಮನೆ ಮಾಡಿದೆ. ಈ ಬಗ್ಗೆ ಅಪ್​ಡೇಟ್​ ನೀಡುವಂತೆ ಅಭಿಮಾನಿಗಳು ಬಹಳಷ್ಟು ಬಾರಿ ರಕ್ಷಿತ್ ಶೆಟ್ಟಿ ಬಳಿ ಕೇಳಿಕೊಂಡಿದ್ದರು. ಅದಕ್ಕೆ ಈಗ ಉತ್ತರ ಲಭಿಸಿದೆ.


ಸದ್ಯ ರಕ್ಷಿತ್ ಶೆಟ್ಟಿ ಹೇಮಂತ್ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಅದರ ಶೂಟಿಂಗ್ ಮುಗಿದ ನಂತರ ಅವರು ರಿಚರ್ಡ್​ ಆಂಟನಿ ಸಿನಿಮಾವನ್ನು ಆರಂಭಿಸಲಿದ್ದಾರೆ ಎಂಬ ಮಾಹಿತಿ ಇದೆ. ಈ ಸಪ್ತ ಸಾಗರದಾಚೆ ಸಿನಿಮಾಗಾಗಿ ರಕ್ಷಿತ್ ಬಹಳ ಶ್ರಮ ಪಟ್ಟಿದ್ದು, ತಮ್ಮ ಲುಕ್ ಅನ್ನು ಬದಲಾಯಿಸಿಕೊಂಡು ಸುದ್ದಿ ಮಾಡಿದ್ದರು. ಈ ಸಿನಿಮಾದ ಶೂಟಿಂಗ್ ಮುಗಿದ ನಂತರ ಸರಿ ಸುಮಾರು ನವೆಂಬರ್​ ಅಂತ್ಯ ಅಥವಾ ಡಿಸೆಂಬರ್​ನಲ್ಲಿ ಸಿನಿಮಾ ಆರಂಭಿಸುವುದಾಗಿ ರಕ್ಷಿತ್ ಹೇಳಿದ್ದಾರಂತೆ.


ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟ ವಿಜಯ್ ಅರೆಸ್ಟ್!


ಈಗಾಗಲೇ ಈ ಸಿನಿಮಾದ ಸ್ಕ್ರಿಪ್ಟ್​ ತಯಾರಿ ಆರಂಭಿಸಿದ್ದು, ಬಹು ಬೇಗ ಶೂಟಿಂಗ್ ಆರಂಭಿಸುವುದಾಗಿ ತಿಳಿಸಿದ್ದಾರೆ. ಇನ್ನು ರಕ್ಷಿತ್ ನಟಿಸಿ, ನಿರ್ಮಾಣ ಮಾಡಿರುವ 777 ಚಾರ್ಲಿ ಸಿನಿಮಾ ಯಶಸ್ಸುಗಳಿಸಿದ್ದು, ಅದರ ಸಂತಸದಲ್ಲಿ ರಕ್ಷಿತ್ ಇದ್ದಾರೆ. ಅವರ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ವಿವಿಧ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ. ಅದಕ್ಕೆಲ್ಲಾ ಸಿದ್ದತೆಯಾಗಿದ್ದು, ರಿಚರ್ಡ್​ ಆಂಟನಿ ಸಿನಿಮಾಗೆ ಸಹ ಫುಲ್ ಸಿದ್ಧತೆ ಮಾಡಿಕೊಂಡು ಅಖಾಡಕ್ಕೆ ಇಳಿಯುವುದಾಗಿ ತಿಳಿಸಿದ್ದಾರೆ.


ಅಖಾಡಕ್ಕಿಳಿಯಲು ರಕ್ಷಿತ್ ಸಜ್ಜು


ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮಾಡುತ್ತಿದ್ದು, ಟೈಟಲ್​ ಅನ್ನು ವಿಡಿಯೋ ಮೂಲಕ ರಿವೀಲ್ ಮಾಡಲಾಗಿತ್ತು. ಅಲ್ಲದೇ ಈ ಬಗ್ಗೆ ಸಂತಸದಿಂದ ಬರೆದುಕೊಂಡಿದ್ದ ನಟ ರಕ್ಷಿತ್ ಶೆಟ್ಟಿ, ರಿಚರ್ಡ್​ ಆಂಟನಿ ಉಳಿದವರು ಕಂಡಂತೆ ಸಿನಿಮಾದ 2ನೇ ಅಧ್ಯಾಯ ಎಂದು ಹೇಳಬಹುದು. ಆದರೆ ಸಂಪೂರ್ಣ ವಿಭಿನ್ನವೂ ಹೌದು. ಬಹಳ ವರ್ಷಗಳ ಹಿಂದೆ, ನಾನು ಉಳಿದವರು ಕಂಡಂತೆ ಬರೆದಾಗ ಮುಂದೊಂದು ದಿನ ಇದರ ಇನ್ನೊಂದು ಭಾಗವನ್ನು ನಾನೇ ಮಾಡುತ್ತೀನಿ ಎಂದು ನನಗೆ ಕಿಂಚಿತ್ತೂ ಅನಿಸಿರಲಿಲ್ಲ. ಆದರೆ ಈ ಪ್ರಾಜೆಕ್ಟ್​ ಕೈಗೆತ್ತಿಕೊಂಡ ಮೇಲೆ ಅನಿಸಿದ್ದು, ಇದು ಅಂದೇ ಮೊಳಕೆಯೊಡೆದ ಪ್ರಬಂಧದ ನಿರ್ಣಯ ಅಂತ. ಆಗ ಗಿಡದ ಎಲೆಯಷ್ಟು ತೆರೆ ಮೇಲೆ ತರಲು ಅವಕಾಶ ನೀಡಿತ್ತು. ಕಥೆಗೆ ತಾಳ್ಮೆ ಕೊಂಚ ಜಾಸ್ತಿ ಅನಿಸುತ್ತೆ. ಈಗ ಮರದ ಕೊಂಬೆಯಷ್ಟು ಹೇಳಲು ನನ್ನನ್ನು ತಯಾರು ಮಾಡಿದೆ ಎಂದು ಬರೆದಿದ್ದರು.


ಇದನ್ನೂ ಓದಿ: ಪ್ರೆಗ್ನೆಂಟ್ ಆಗಿದ್ದು ಆಲಿಯಾ, ಆದ್ರೆ ಟ್ರೋಲ್ ಆಗ್ತಿರೋದು ದೀಪಿಕಾ!


ಹೌದು, ಮುಂದಿನ ಅಧ್ಯಾಯವನ್ನು ಆರಂಭ ಮಾಡುವ ಸಮಯ ಬಂದಾಗಿದೆ. ಆ ಅಧ್ಯಾಯದ ಒಂದು ಭಾಗವೇ, ಮರು ಬಂದನು ಅಲೆಗಳ ಜೊತೆ, ಕೆಂಪಾದವು ಕಡಲ ತೀರದ ಕಥೆ. ಹೊಂಬಾಳೆ ಫಿಲಂಸ್​ ಜೊತೆ ಕೈ ಜೋಡಿಸಿದ್ದು, ನಮ್ಮಿಬ್ಬರ ಈ ಸಿನಿ ಪಯಣ ಸದಾ ಸುಖಮಯವಾಗಿರಲಿ ಎಂದು ಆಶೀರ್ವದಿಸಿ ಎಂದು ಕೇಳಿಕೊಂಡಿದ್ದರು.

top videos
    First published: