ರಕ್ಷಿತ್ ಶೆಟ್ಟಿ (Rakshit Shetty) ನಟನೆ ಜೊತೆ ನಿರ್ದೇಶನದಲ್ಲೂ ಸೈ ಎನಿಸಿಕೊಂಡವರು. ಸ್ಯಾಂಡಲ್ವುಡ್ (Sandalwood) ನಲ್ಲಿ ತಮ್ಮದೇ ಆದ ಟ್ರೆಂಡ್ (Trend) ಸೃಷ್ಟಿ ಮಾಡಿದವರು ಎಂದರೆ ತಪ್ಪಾಗಲಾರದು. ರಕ್ಷಿತ್ ಶೆಟ್ಟಿ ಅಭಿನಯಕ್ಕೆ ಮಾರು ಹೋಗದವರು ಯಾರೂ ಇಲ್ಲ. ವಿಭಿನ್ನ ಮ್ಯಾನರಿಸಂ, ಕಿಕ್ ಕೊಡುವ ಡೈಲಾಗ್ಸ್ ರಕ್ಷಿತ್ ಶೆಟ್ಟಿ ಅವರ ಟ್ರೇಡ್ ಮಾರ್ಕ್ (Trade Mark) ಎನ್ನಬಹುದು. ತುಘಲಕ್'ನಿಂದ ತಮ್ಮ ಸಿನಿಮಾ ಜರ್ನಿ ಆರಂಭಿಸಿ ಈಗ '777 ಚಾರ್ಲಿ'(777 Charlie)ಗ ಬಂದು ನಿಂತಿದ್ದಾರೆ. ಅವರ ಪ್ರತಿ ಸಿನಿಮಾವೂ ಡಿಫ್ರೆಂಟ್. ಇದೀಗ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ‘777 ಚಾರ್ಲಿ’ ಜೂನ್ 10ರಂದು ಬಿಡುಗಡೆಯಾಗಲಿದೆ. ಇದೀಗ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಸಂತಸದ ವಿಚಾರ ಸಿಕ್ಕಿದ್ದು, '777 ಚಾರ್ಲಿ ಟ್ರೇಲರ್ (Trailer) ಬಿಡುಗಡೆಯಾಗಿದೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಈ ಚಿತ್ರದ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ. ಅದಕ್ಕೆ ಸೂಕ್ತವಾಗುವಂತೆ ಈ ಟ್ರೇಲರ್ ಇದ್ದು, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಪರಭಾಷ ನಟ, ನಟಿಯರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ 777 ಚಾರ್ಲಿ ಚಿತ್ರದ ಟ್ರೇಲರ್ ಅನ್ನು ಹಂಚಿಕೊಂಡಿದ್ದು, ರಕ್ಷಿತ್ ಶೆಟ್ಟಿ ಹಾಗೂ ತಂಡಕ್ಕೆ ಶುಭಕೋರಿದ್ದಾರೆ.
ಈ ಟ್ರೇಲರ್ ಬಹಳ ಅದ್ಬುತವಾಗಿದ್ದು, ಹಿಂದೆಂದೂ ಯಾರೂ ಮಾಡದ ರೀತಿಯ ಸಿನೆಮಾ ಇದು ಎನ್ನಬಹುದು. ನೋಡುಗರ ಕಣ್ಣಲ್ಲಿ ಕಣ್ಣಾಲಿ ಬರದೇ ಇರದು. ಕನ್ನಡ ಸಿನೆಮಾ ಹಿಸ್ಟರಿಯಲ್ಲಿ ವಿಭಿನ್ನ ರೀತಿಯ ದಾಖಲೆ ಮಾಡುವುದರಲ್ಲಿ ಅನುಮಾನವಿಲ್ಲ. ಅಲ್ಲದೇ ಕೆಜಿಎಫ್ 2 ನಂತರ ಕನ್ನಡದ ಮತ್ತೊಂದು ಸೂಪರ್ ಹಿಟ್ ಚಿತ್ರವಾಗುವುದರಲ್ಲಿ ಅನುಮಾನವಿಲ್ಲ.
Our years of journey is pieced into a short snippet for you. This is a prelude to all that June 10th is going to bring, we hope you receive it with love ❤️#777CharlieTrailer
Kannada - https://t.co/eCuCdkkeOw pic.twitter.com/VXlMsttTFn
— Rakshit Shetty (@rakshitshetty) May 16, 2022
ಇನ್ನು ಕಿರಣ್ ರಾಜ್ ನಿರ್ದೇಶನದ ಈ ಚಿತ್ರ ಒಂದು ಸುಂದರವಾದ ಕಥಾ ಹಂದರವನ್ನು ಹೊಂದಿದ್ದು, ಶ್ವಾನ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಸಾರಿ ಹೇಳುತ್ತದೆ. ಈ ಕಥೆ ತುಂಬಾ ಎಮೋಷನಲ್ ಆಗಿದ್ದು, ಜನರ ಮನಸ್ಸಿಗೆ ಹತ್ತಿರವಾಗುತ್ತದೆ ಎನ್ನುತ್ತಾರೆ ನಿರ್ಮಾಪಕರು.
ಇದನ್ನೂ ಓದಿ: ಎಂಜಿನಿಯರಿಂಗ್ ಪದವೀಧರೆಯಂತೆ ಗಟ್ಟಿಮೇಳದ ಸುಂದರಿ - ಕಿರುತೆರೆಯಲ್ಲಿ ಮಿಂಚಲು ಶರಣ್ಯಾ ಶೆಟ್ಟಿ ರೆಡಿ
ಇನ್ನು ಈ ಚಿತ್ರದ ವಿಶೇಷತೆ ಎಂದರೆ ಶ್ವಾನದ ಅದ್ಭುತ ಪ್ರದರ್ಶನ ಎನ್ನಬಹುದು. ಇದರಲ್ಲಿ ಪ್ರಮುಖ ಪಾತ್ರ ಶ್ವಾನದ್ದೇ ಆಗಿರುವುದರಿಂದ, ಅದರ ಮೂಡ್ಗೆ ತಕ್ಕ ಹಾಗೆ ಶೂಟಿಂಗ್ ಮಾಡಬೇಕಿತ್ತು, ಹಾಗಾಗಿ ಚಿತ್ರ ಸ್ವಲ್ಪ ತಡವಾಯಿತು ಎಂದು ತಂಡ ಹೇಳಿದೆ.
ಚಿತ್ರಕ್ಕೆ ರಾಣಾ ದಗ್ಗುಬಾಟಿ ಸಾಥ್
ಬಹು ಭಾಷೆಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ರಾಣಾ ದಗ್ಗುಬಾಟಿ ಅವರು ಪ್ರಸ್ತುತ ಪಡಿಸುತ್ತಿದ್ದು, ತಮ್ಮ ಸುರೇಶ್ ಪ್ರೊಡಕ್ಷನ್ ಮೂಲಕ ಚಿತ್ರವನ್ನು ವಿತರಣೆ ಮಾಡಲಿದ್ದಾರೆ. ಆ ಮೂಲಕ ರಕ್ಷಿತ್ ಶೆಟ್ಟಿಅವರ ಈ ಚಿತ್ರವನ್ನು ಟಾಲಿವುಡ್ನಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. ‘ಕೆಜಿಎಫ್ 2’ ಚಿತ್ರದ ನಂತರ ಮತ್ತೊಂದು ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ತಯಾರಾಗುತ್ತಿದೆ. ಅದರಲ್ಲೂ ಬೇರೆ ಭಾಷೆಗಳಲ್ಲಿ ಕಮಾಲ್ ಮಾಡುವುದಕ್ಕೆ ರಕ್ಷಿತ್ ಶೆಟ್ಟಿ ಸಿನಿಮಾ ಸಜ್ಜಾಗಿ ನಿಂತಿದೆ.
ಇದನ್ನೂ ಓದಿ: ಸ್ನೇಹಿತೆಯ ಮದುವೆಯಲ್ಲಿ ಮಿಂಚಿದ ಪುಷ್ಪ ಸುಂದರಿ - ಫೋಟೋ ನೋಡಿ ಕ್ಯೂಟ್ ಎಂದ ಅಭಿಮಾನಿಗಳು
21 ಕೋಟಿಗೆ ಸೇಲಾಯ್ತು ಚಾರ್ಲಿ ಟಿವಿ ರೈಟ್ಸ್!
ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿಯೂ ತೆರೆ ಕಾಣುತ್ತಿರುವ ಈ ಸಿನಿಮಾದ ವಿತರಣೆ ಹಕ್ಕನ್ನು ಆಯಾಯ ಭಾಷೆಯ ಪ್ರಖ್ಯಾತ ಸಂಸ್ಥೆಗಳು ಪಡೆದುಕೊಂಡಿವೆ. ಇನ್ನುಈ ಚಿತ್ರದ ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ರೂ .21 ಕೋಟಿಗೆ ಕಲರ್ಸ್ ಕನ್ನಡದ ಪಾಲಾಗಿದೆ. ಡಿಜಿಟಲ್ ಹಕ್ಕು ಕಲರ್ಸ್ ಸಂಸ್ಥೆಯ ಒಡೆತನದ ವೂಟ್ ಓಟಿಟಿಗೆ ಸಿಕ್ಕಿದೆ. ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ರೂ .21 ಕೋಟಿಗೆ ಕಲರ್ಸ್ ಕನ್ನಡದ ಪಾಲಾಗಿದೆ.
ಇನ್ನು ಜೂನ್ 10ರಂದು ಬಿಡುಗಡೆಯಾಗುವ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ