Rakshit And Rishab Shetty: ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಗೆಳೆಯ ರಿಷಭ್​ ಶೆಟ್ಟಿಗೆ ಕುಚಿಕು ಸ್ಟೈಲ್​ನಲ್ಲಿ ಶುಭ ಕೋರಿದ ರಕ್ಷಿತ್ ಶೆಟ್ಟಿ..!

Rakshit And Rishab Shetty: 2018ನೇ ಸಾಲಿನಲ್ಲಿ ತೆರೆಕಂಡ ಸಿನಿಮಾಗಳ ಪೈಕಿ ಒಟ್ಟು 11 ವಿಭಾಗದಲ್ಲಿ ಸ್ಯಾಂಡಲ್​ವುಡ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇದರಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನು ರಿಷಭ್​ ಶೆಟ್ಟಿ ಅವರ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು'​  ಸಿನಿಮಾ ತನ್ನದಾಗಿಸಿಕೊಂಡಿದೆ.

ಕುಚಿಕು ಗೆಳೆಯರಾದ ರಕ್ಷಿತ್​ ಶೆಟ್ಟಿ ಹಾಗೂ ರಿಷಭ್​ ಶೆಟ್ಟಿ

ಕುಚಿಕು ಗೆಳೆಯರಾದ ರಕ್ಷಿತ್​ ಶೆಟ್ಟಿ ಹಾಗೂ ರಿಷಭ್​ ಶೆಟ್ಟಿ

  • Share this:
ನಿನ್ನೆ ದೆಹಲಿಯ ವಿಜ್ಞಾನ ಭವನದಲ್ಲಿ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದ್ದು, ಭಾರತೀಯ ಚಿತ್ರರಂಗದ ತಾರೆಗಳ ಸಮಾಗಮವಾಗಿತ್ತು. ಬಾಲಿವುಡ್​, ಸ್ಯಾಂಡಲ್​ವುಡ್​, ಕಾಲಿವುಡ್​ ಸೇರಿದಂತೆ ಇತರೆ ಭಾಷೆಗಳ ಸಿನಿ ರಂಗದವರು ಹಾಜರಿದ್ದರು.

2018ನೇ ಸಾಲಿನಲ್ಲಿ ತೆರೆಕಂಡ ಸಿನಿಮಾಗಳ ಪೈಕಿ ಒಟ್ಟು 11 ವಿಭಾಗದಲ್ಲಿ ಸ್ಯಾಂಡಲ್​ವುಡ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇದರಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನು ರಿಷಭ್​ ಶೆಟ್ಟಿ ಅವರ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು'​  ಸಿನಿಮಾ ತನ್ನದಾಗಿಸಿಕೊಂಡಿದೆ.

#NationalAward @shetty_rishab pic.twitter.com/x2pxCPr3Anರಿಷಭ್​ ಶೆಟ್ಟಿ ನಿನ್ನೆ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಜೀವದ ಗೆಳೆಯನ ಈ ಸಾಧನೆಗೆ ರಕ್ಷಿತ್​ ಶೆಟ್ಟಿ ಕುಚಿಕು ಸ್ಟೈಲ್​ನಲ್ಲಿ ಶುಭ ಕೋರಿದ್ದಾರೆ. 'ಫ್ರೌಡ್​ ಆಫ್​ ಯು ಮಗಾ' ಎಂದು ಟ್ವೀಟ್​ ಮಾಡಿದ್ದಾರೆ. ಜೊತೆಗೆ ರಿಷಭ್​ ಪ್ರಶಸ್ತಿ ಸ್ವೀಕರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.

What an achievement. The whole team is proud of you maga @shetty_rishab... Many more to come your way 🤗🤗🤗 pic.twitter.com/oUhKvElbJ9ರಿಷಭ್​ ಹಾಗೂ ರಕ್ಷಿತ್​ ಶೆಟ್ಟಿ ಗೆಳೆತನ ಎಂತಹದ್ದು ಎಂದು ಹೊಸದಾಗಿ ಹೇಳಬೇಕಿಲ್ಲ. ರಕ್ಷಿತ್​ ಅವರ ಕನಸಿನ ಕೂಸು ಅವನೇ ಶ್ರೀಮನ್ನಾರಾಯಣ ಸಿನಿಮಾದ ಟ್ರೈಲರ್​ ಸಹ ಇವರಿಬ್ಬರ ಸ್ನೇಹಕ್ಕೆ ಸಾಕ್ಷಿಯಾಯಿತು. ಕಾರಣ ಎಲ್ಲೂ ಕಾಣಿಸಿಕೊಳ್ಳದ ರಿಷಭ್​ ಆ ಚಿತ್ರದ ಟ್ರೈಲರ್​ನಲ್ಲಿ ಕೌಬಾಯ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ರಿಷಭ್​ ಅವರನ್ನು ಕೇಳಿದಾಗ ಸಿಕ್ಕ ಉತ್ತರ 'ನನ್ನ ಸ್ನೇಹಿತನ ಚಿತ್ರದಲ್ಲಿ ನಾನು ಇದ್ದೇ ಇರುತ್ತೇನೆ' ಎಂದಾಗಿತ್ತು.

13 ಸಿನಿಮಾಗಳಿಂದ ರಿಜೆಕ್ಟ್​ ಆಗಿದ್ದ ಬಾಲಿವುಡ್​ ನಟಿಯ ಹಾಟ್​ ಚಿತ್ರಗಳು..!
Published by:Anitha E
First published: