News18 India World Cup 2019

ದರ್ಶನ್-ಸುದೀಪ್-ಶಿವಣ್ಣನಿಗೆ ಟಕ್ಕರ್ ಕೊಡಲಿದ್ದಾರಾ ರಕ್ಷಿತ್ ಶೆಟ್ಟಿ!

ಇಲ್ಲಿ 'ಪೈಲ್ವಾನ್' ಹಾಗೂ 'ಕುರುಕ್ಷೇತ್ರ' ಚಿತ್ರಗಳು ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲೂ ಒಂದೇ ದಿನ ಬಿಡುಗಡೆಯಾಗುತ್ತಿರುವುದು ಮತ್ತೊಂದು ವಿಶೇಷ.

zahir | news18
Updated:May 19, 2019, 10:51 PM IST
ದರ್ಶನ್-ಸುದೀಪ್-ಶಿವಣ್ಣನಿಗೆ ಟಕ್ಕರ್ ಕೊಡಲಿದ್ದಾರಾ ರಕ್ಷಿತ್ ಶೆಟ್ಟಿ!
@RsFB
zahir | news18
Updated: May 19, 2019, 10:51 PM IST
ಆಗಸ್ಟ್​ 9 ಕನ್ನಡಿಗರ ಪಾಲಿಗೆ ಸಿನಿಮಾ ಸುಗ್ಗಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಒಂದೆಡೆ ಪೈಲ್ವಾನ್, ಕುರುಕ್ಷೇತ್ರ ಮತ್ತು ಆನಂದ್ ಚಿತ್ರಗಳು ವರ ಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗಪ್ಪಳಿಸಲು ತಯಾರಾಗಿದ್ದರೆ, ಇತ್ತ ಕಡೆ ಕಿರಿಕ್ ಕರ್ಣ ರಕ್ಷಿತ್ ಶೆಟ್ಟಿ ಹೊಸ ಅವತಾರದಲ್ಲಿ ಅಂದೇ ತೆರೆಗೆ ಬರಲು ಸನ್ನದ್ಧರಾಗುತ್ತಿದ್ದಾರೆ.

2016 ರಲ್ಲಿ ತೆರೆ ಕಂಡಿದ್ದ 'ಕಿರಿಕ್ ಪಾರ್ಟಿ' ಸಿನಿಮಾ ಬಾಕ್ಸಾಫೀಸ್​ನಲ್ಲಿ ಭರ್ಜರಿ ಯಶಸ್ವಿಯಾಗಿತ್ತು. ಆ ಬಳಿಕ ಮೂರು ನಾಲ್ಕು ಚಿತ್ರಗಳನ್ನು ರಕ್ಷಿತ್ ಶೆಟ್ಟಿ ಘೋಷಿಸಿದರೂ, ಯಾವುದೇ ಚಿತ್ರಗಳು ತೆರೆಕಂಡಿಲ್ಲ. ಅದರಲ್ಲೂ ಕಳೆದ ಎರಡೂವರೆ ವರ್ಷದಲ್ಲಿ ರಕ್ಷಿತ್ ತೆರೆ ಮೇಲೆ ಕಾಣಿಸಿದ್ದು ಕೇವಲ ಒಂದು ಚಿತ್ರದಲ್ಲಿ. ಅದು ಕೂಡ ವಿಶೇಷ ಪಾತ್ರದಲ್ಲಿ.

'ಪಡ್ಡೆಹುಲಿ' ಸಿನಿಮಾದಲ್ಲಿ ಕಿರಿಕ್ ಕರ್ಣನಾಗಿ ರಿ ಎಂಟ್ರಿ ಕೊಟ್ಟಿದ್ದ ಶೆಟ್ರು, ಇದೀಗ 'ಅವನೇ ಶ್ರೀಮನ್ನಾರಾಯಣ' ಮೂಲಕ ಬ್ಯಾಕ್​ ಟು ಬಾಕ್ಸಾಫೀಸ್ ಅನ್ನುತ್ತಿದ್ದಾರೆ. 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಕೆಲಸ ಮಾಡಿರುವ ಬಹುತೇಕ ತಂಡವೇ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲೂ ಕೆಲಸ ಮಾಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಗಲ್ಲಾ ಪೆಟ್ಟಿಗೆ ಅಲುಗಾಡುವುದರಲ್ಲಿ ಸಂಶಯವೇ ಇಲ್ಲಾ ಎಂಬುದು ಗಾಂಧಿನಗರ ಸಿನಿಪಂಡಿತರ ಅಭಿಪ್ರಾಯ.

ಈಗಾಗಲೇ ಚಿತ್ರದ ಬಹುತೇಕ ಕೆಲಸವನ್ನು ಮುಗಿಸಿರುವ ಚಿತ್ರತಂಡ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತಿಳಿಸಿರುವಂತೆ ಆಗಸ್ಟ್​ನಲ್ಲಿ 'ಅವನೇ ಶ್ರೀಮನ್ನಾರಾಯಣ'  ತೆರೆಗೆ ತರಲು  ಸಜ್ಜಾಗಿದೆ. ಅದು ಕೂಡ ಆಗಸ್ಟ್​ 9 ರಂದೇ ಎಂದು ಹೇಳಲಾಗುತ್ತಿದೆ. ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ದರ್ಶನ್​- ಸುದೀಪ್ ಚಿತ್ರಗಳು ಬಾಕ್ಸಾಫೀಸ್ ಬಿಗ್ ಕ್ಲ್ಯಾಶ್​ಗೆ ಸನ್ನದ್ಧವಾಗಿದ್ದು​, ಶಿವಣ್ಣ ಅಭಿನಯದ 'ಆನಂದ್' ಸಿನಿಮಾ ಮುಹೂರ್ತದಲ್ಲಿ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆ ಮಾಡುವುದಾಗಿ ಈ ಹಿಂದೆ ನಿರ್ಮಾಪಕರು ತಿಳಿಸಿದ್ದರು. ಈ ತ್ರಿಕೋನ ಸ್ಪರ್ಧೆಯಲ್ಲಿ ಇದೀಗ ರಕ್ಷಿತ್ ಶೆಟ್ಟಿ ಹೆಸರು ಕೇಳಿ ಬಂದಿರುವುದು ಸಿನಿಪ್ರಿಯ ಕುತೂಹಲಕ್ಕೆ ಕಾರಣವಾಗಿದೆ.



ಈ ಹಿಂದೆ ವರಮಹಾಲಕ್ಷ್ಮಿ ಹಬ್ಬದಂದು ತೆರೆ ಕಂಡಿದ್ದ 'ಆಪ್ತಮಿತ್ರ' ಮತ್ತು 'ಜೋಗಿ' ಚಿತ್ರಗಳು ಸ್ಯಾಂಡಲ್​ವುಡ್​ ಹೊಸ ದಾಖಲೆಯನ್ನು ಸೃಷ್ಟಿಸಿತ್ತು. ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ಹ್ಯಾಟ್ರಿಕ್ ಹೀರೋ ಶಿವಣ್ಣ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು ಈಗ ಇತಿಹಾಸ. ಹಲವು ವರ್ಷಗಳ ಬಳಿಕ ಇದೀಗ ಕನ್ನಡದಲ್ಲಿ ಸ್ಟಾರ್​ಗಳ ಚಿತ್ರ ಏಕಕಾಲಕ್ಕೆ ತೆರೆಗೆ ಬರಲು ಸಜ್ಜಾಗುತ್ತಿದೆ.
Loading...



ಇಲ್ಲಿ 'ಪೈಲ್ವಾನ್' ಹಾಗೂ 'ಕುರುಕ್ಷೇತ್ರ' ಚಿತ್ರಗಳು ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲೂ ಒಂದೇ ದಿನ ಬಿಡುಗಡೆಯಾಗುತ್ತಿರುವುದು ಮತ್ತೊಂದು ವಿಶೇಷ. ಈ ಮೂಲಕ ಪರಭಾಷಾ ಚಿತ್ರಗಳಿಗೂ ಕನ್ನಡ ಸಿನಿಮಾಗಳು ಭರ್ಜರಿ ಪೈಪೋಟಿ ನೀಡಲಿದೆ. ಇನ್ನು ಇದೇ ಮೊದಲ ಬಾರಿ ಪೊಲೀಸ್ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಬಣ್ಣ ಹಚ್ಚಿದ್ದು, ಈಗಾಗಲೇ ಟೀಸರ್​ವೊಂದರ ಮೂಲಕ  'ಅವನೇ ಶ್ರೀಮನ್ನಾರಾಯಣ' ಎಲ್ಲರ ಗಮನ ಸೆಳೆದಿದೆ.



ಸ್ಯಾಂಡಲ್​ವುಡ್​ನಲ್ಲಿ ಹೊಸ ಹವಾ ಸೃಷ್ಟಿಸಿರುವ ರಕ್ಷಿತ್ ಶೆಟ್ಟಿ ಅಭಿನಯದ​ ಚಿತ್ರಕ್ಕಾಗಿ ಕಾಯುತ್ತಿರುವ ಅಭಿಮಾನಿಗಳ ದಂಡೇ ಇದೆ. ಇದೀಗ ವರ್ಷಗಳ ಬಳಿಕ 'ಅವನೇ ಶ್ರೀಮನ್ನಾರಾಯಣ' ಬರುತ್ತಿರುವುದ ಸಿನಿ ಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ಈ ಆಟಗಾರ ತಂಡದಲ್ಲಿದ್ದರೆ, 2023ರ ವಿಶ್ವಕಪ್​ನಲ್ಲಿ ಆಡುವೆ ಎಂದ ಎಬಿಡಿ

ಇದನ್ನೂ ಓದಿ: ಮಾನವೀಯತೆ ಮರೆದ ವಿಶ್ವದ ಶ್ರೇಷ್ಠ ಆಟಗಾರ..!

ನಿಮ್ಮ ನ್ಯೂಸ್ 18 ಕನ್ನಡವನ್ನು ಇನ್​​​ಸ್ಟಾಗ್ರಾಂನಲ್ಲೂ ಹಿಂಬಾಲಿಸಿ
First published:May 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...