HOME » NEWS » Entertainment » RAKSHIT SHETTY ANNOUNCED 777 CHARLIE RELEASE AND CLARIFIES ABOUT MOVIE WITH KICHCHA SUDEEP AE

777 ಚಾರ್ಲಿ ಸಿನಿಮಾ ರಿಲೀಸ್​ಗೆ ಮುಹೂರ್ತ ಫಿಕ್ಸ್​: ಕಿಚ್ಚ ಸುದೀಪ್​​ ಜತೆಗಿನ ಸಿನಿಮಾ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ..!

ಈಗ ಅಲ್ಲೂ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಬಂದಿರುವ 777 ಚಾರ್ಲಿ ಮತ್ತೆ ಕಾಶ್ಮೀರಕ್ಕೆ ಹೋಗಲಿದೆ. ಸಿನಿಮಾದ ಕ್ಲೈಮ್ಯಾಕ್ಸ್​ ಶೂಟಿಂಗ್ ಬಾಕಿ ಇದ್ದು, ಅದರ ಜೊತೆಗೆ 2 ದಿನಗಳು ಪ್ಯಾಚ್​ಅಪ್​ ಕೆಲಸಗಳು ಬಾಕಿ ಇವೆಯಂತೆ. ಇದು ಮುಗಿದ ಕೂಡಲೇ ಸಿನಿಮಾದ ಸೆಕೆಂಡ್​ ಹಾಫ್​ನ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಆರಂಭವಾಗಲಿವೆ. 

Anitha E | news18-kannada
Updated:January 15, 2021, 12:17 PM IST
777 ಚಾರ್ಲಿ ಸಿನಿಮಾ ರಿಲೀಸ್​ಗೆ ಮುಹೂರ್ತ ಫಿಕ್ಸ್​: ಕಿಚ್ಚ ಸುದೀಪ್​​ ಜತೆಗಿನ ಸಿನಿಮಾ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ..!
ರಕ್ಷಿತ್​ ಶೆಟ್ಟಿ ಹಾಗೂ ಕಿಚ್ಚ ಸುದೀಪ್​
  • Share this:
ರಕ್ಷಿತ್​ ಶೆಟ್ಟಿ (Rakshit Shetty) ಅಭಿನಯಿಸುತ್ತಿರುವ  777 ಚಾರ್ಲಿ (777 Charlie) ಸಿನಿಮಾ ಚಿತ್ರೀಕರಣ ಲಾಕ್​ಡೌನ್​ ಸಡಿಲಗೊಂಡ ನಂತರ ಮತ್ತೆ ಆರಂಭವಾಗಿದೆ. ಅದರಲ್ಲೂ ಕೊಡೈಕೆನಾಲ್​ನಲ್ಲಿ ಶೂಟಿಂಗ್​ ಮುಗಿಸಿ, ನಂತರ ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರದಲ್ಲಿ ಬೀಡು ಬಿಟ್ಟಿತ್ತು ಚಾರ್ಲಿ ಚಿತ್ರತಂಡ. ಕೊರೋನಾ ಕಾಟ ಆರಂಭವಾಗುವ ಮೊದಲು ಚಾರ್ಲಿ ಸಿನಿಮಾದ ಚಿತ್ರೀಕರಣ ಜೋರಾಗಿ ನಡೆಯುತ್ತಿತ್ತು. ಆದರೆ ಇದ್ದಕ್ಕಿದ್ದಂತೆಯೇ ಆರಂಭವಾದ ಕೊರೋನಾ ವೈರಸ್​ ಕಾಟದಿಂದಾಗಿ ಇಡೀ ದೇಶವನ್ನೇ ಲಾಕ್​ಡೌನ್​ ಮಾಡಲಾಗಿತ್ತು. ಆಗ ದೇಶದಿಂದ ದೂರ ಇದ್ದವರು ಹಾಗೂ ಮನೆಯಿಂದ ಹೊರ ರಾಜ್ಯಗಳಿಗೆ ಹೋಗಿದ್ದವರೆಲ್ಲ ಬಂದು ಮನೆ ಸೇರಿಕೊಂಡರು. ಅಂತೆಯೇ 777 ಚಾರ್ಲಿ ಚಿತ್ರತಂಡ ಸಹ ಅರ್ಧಕ್ಕೆ ಚಿತ್ರೀಕರಣ ನಿಲ್ಲಿಸಿ, ಮರಳಬೇಕಾಯಿತು. ಲಾಕ್​ಡೌನ್​ ಈಗ ಮುಗಿಯಲಿದೆ, ಆಗ ಅನ್​ಲಾಕ್​ ಆಗಲಿದೆ ಎಂದು ಕಾದಿದ್ದೇ ಆಯಿತು. ಸಂಪೂರ್ಣವಾಗಿ ಇನ್ನೂ ಸಹ ಲಾಕ್​ಡೌನ್​ ಅನ್​ಲಾಕ್​ ಆಗಿಲ್ಲ. ಆಗಲೇ ಅನ್​ಲಾಕ್​ ಆಗಿದ್ದಿದ್ದರೆ, 777 ಚಾರ್ಲಿ ವಿದೇಶಕ್ಕಾದರೂ ಹೋಗಿ ಹಿಮ ಬೀಳುವ ಭಾಗದಲ್ಲಿ ನಡೆಸಬೇಕಿದ್ದ ಚಿತ್ರೀಕರಣ ಮುಗಿಸಿಕೊಂಡು ಬರುತ್ತಿತ್ತು. ಆದರೆ ಲಾಕ್​ಡೌನ್​ನಿಂದಾಗಿ ಅದು ಸಾಧ್ಯವಾಗಲಿಲ್ಲ. 

ಎಲ್ಲ ಸರಿ ಇದ್ದಿದ್ದರೆ, ಇಷ್ಟೊತ್ತಿಗೆ ಚಿತ್ರೀಕರಣ ಮುಗಿದು ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿತ್ತು. ಆದೆರೆ ಲಾಕ್​ಡೌನ್​ ಸಡಿಲಗೊಂಡ ನಂತರ ಮತ್ತೆ ಶೂಟಿಂಗ್​ ಆರಂಭಿಸಿದ ಚಿತ್ರತಂಡ ಮೊದಲು ಕೊಡೈಕೆನಾಲ್​ನಲ್ಲಿ ಶೂಟಿಂಗ್​ ಮುಗಿಸಿತು. ನಂತರ ಹಿಮಾಚಲ ಪ್ರದೇಶ ಗಾಗೂ ಕಾಶ್ಮೀರದತ್ತ ಸಾಗಿತ್ತು.





ಈಗ ಅಲ್ಲೂ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಬಂದಿರುವ 777 ಚಾರ್ಲಿ ಮತ್ತೆ ಕಾಶ್ಮೀರಕ್ಕೆ ಹೋಗಲಿದೆ. ಸಿನಿಮಾದ ಕ್ಲೈಮ್ಯಾಕ್ಸ್​ ಶೂಟಿಂಗ್ ಬಾಕಿ ಇದ್ದು, ಅದರ ಜೊತೆಗೆ 2 ದಿನಗಳು ಪ್ಯಾಚ್​ಅಪ್​ ಕೆಲಸಗಳು ಬಾಕಿ ಇವೆಯಂತೆ. ಇದು ಮುಗಿದ ಕೂಡಲೇ ಸಿನಿಮಾದ ಸೆಕೆಂಡ್​ ಹಾಫ್​ನ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಆರಂಭವಾಗಲಿವೆ.






ಲಾಕ್​ಡೌನ್​ನಲ್ಲಿ ಸಾಕಷ್ಟು ಸಮಯ ಸಿಕ್ಕಿದ್ದು, ಆಗಲೇ ಸಿನಿಮಾದ ಮೊದಲರ್ಧ ಭಾಗದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಹಾಗೂ ಡಬ್ಬಿಂಗ್​ ಎಲ್ಲ ಮುಗಿದಿದೆಯಂತೆ. ಇದರಿಂದಾಗಿ ಜೂನ್​, ಜುಲೈ ಹಾಗೂ ಆಗಸ್ಟ್​ ತಿಂಗಳಿನಲ್ಲಿ ಸಿನಿಮಾ ರಿಲೀಸ್​ ಮಾಡುವ ಪ್ಲಾನ್​ ಇದೆ ಎಂದು ರಕ್ಷಿತ್​ ಶೆಟ್ಟಿ ನಿನ್ನೆ ಸಂಜೆ ಇನ್​ಸ್ಟಾಗ್ರಾಂನಲ್ಲಿ ಲೈವ್​ ಬಂದಿದ್ದಾಗ ಹೇಳಿದ್ದಾರೆ. ಕಿರಣ್​ ರಾಜ್​ ನಿರ್ದೇಶನದ 777 ಚಾರ್ಲಿ ಚಿತ್ರದ ಬಗ್ಗೆ ಸಿನಿಪ್ರಿಯರಿಗೆ ತುಂಬಾ ನಿರೀಕ್ಷೆ ಇದೆ.

ಸುದೀಪ್​ ಜತೆ ಸಿನಿಮಾಗೆ ಬಗ್ಗೆ ರಕ್ಷಿತ್​ ಕೊಟ್ಟ ಅಪ್ಡೇಟ್​

ಅವನೇ ಶ್ರೀಮನ್ನಾರಾಯಣ ಹಿಂದಿ ವರ್ಷನ್​ ರಿಲೀಸ್​ ಬಗ್ಗೆ ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ ರಕ್ಷಿತ್ ಶೆಟ್ಟಿ, ಹಿಂದಿ ಸಿನಿಮಾದ ಹಕ್ಕು ಮಾರಾಟವಾಗಿದೆ. ಸಿನಿಮಾ ಸಹ ರೆಡಿ ಇದೆ. ಅದು ಯಾವಾಗ ಎಲ್ಲಿ ಬರುತ್ತದೆ ಎಂದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಚಾರ್ಲಿ ಸಿನಿಮಾ ಮುಗಿದ ನಂತರ ಸಪ್ತಸಾಗರದಾಚೆ ಎಲ್ಲೋ, ನಂತರ ರಿಚ್ಚಿ ಚಿತ್ರೀಕರಣ. ಇವೆಲ್ಲ ಮುಗಿದ ಮೇಲೆ ಪುಣ್ಯಕೋಟಿ ಸಿನಿಮಾ ಕೆಲಸಗಳು ಆರಂಭವಾಗಲಿವೆ.

ಇದನ್ನೂ ಓದಿ: Makara Sankranti: ದರ್ಶನ್​ -ಜೋಗಿ ಪ್ರೇಮ್​ ತೋಟದ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ..!

ಕಿಚ್ಚ ಸುದೀಪ್​ ಹಾಗೂ ರಕ್ಷಿತ್​ ಶೆಟ್ಟಿ ಕಾಂಬಿನೇಷನ್​ನಲ್ಲಿ ಚಿತ್ರವೊಂದು ಬರಲಿದೆ ಎಂದು ಹೇಳಲಾಗುತ್ತಿದೆ. ಬಹಳ ಸಮಯದಿಂದ ಹರಿದಾಡುತ್ತಿರುವ ಈ ಸುದ್ದಿಯ ಕುರಿತಾಗಿ ರಕ್ಷಿತ್​ ಲೈವ್​ನಲ್ಲಿ ಅಪ್ಡೇಟ್​ ಕೊಟ್ಟಿದ್ದಾರೆ. ಅವರಿಗಾಗಿ ಕಥೆ ಬರೆಯುತ್ತಿದ್ದೇನೆ. ಇನ್ನೂ ಪೂರ್ಣಗೊಂಡಿಲ್ಲ. ನನ್ನ ಬಾಕಿ ಇರುವ ಸಿನಿಮಾಗಳನ್ನು ಮುಗಿಸಿ, ಆ ಕೆಲಸ ಕೈಗೆತ್ತಿಕೊಳ್ಳುತ್ತೇನೆ ಎಂದಿದ್ದಾರೆ ರಕ್ಷಿತ್​.
Published by: Anitha E
First published: January 15, 2021, 12:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories