Rakshit Shetty: ಕನ್ನಡದಲ್ಲಿಯೂ ಬರಲಿದೆಯಂತೆ RRR ಸಿನಿಮಾ, ರಕ್ಷಿತ್ ಶೆಟ್ಟಿ ಏನ್ ಹೇಳ್ತಿದ್ದಾರೆ ಕೇಳಿ

ಕನ್ನಡದಲ್ಲಿಯೂ RRR ಚಿತ್ರ ಬರಲಿದೆಯಂತೆ. ಅಯ್ಯೋ ಇದೇನಪ್ಪಾ ಈಗಾಗಲೇ ಕನ್ನಡದಲ್ಲಿ RRR ಬಂದಿದೆ ಇದ್ಯಾವ ಹೊಸ ಆರ್​ಆರ್​ಆರ್​ ಎಂದು ಆಲೋಚಿಸಬೇಡಿ. ನಾವು ಹೇಳ್ತಿವಿ ಕೇಳಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತೆಲುಗಿನ ನಿರ್ದೇಶಕ ರಾಜಮೌಳಿ (S. S. Rajamouli) ನಿರ್ದೇಶನದ RRR ಚಿತ್ರವು (Movie) ಈಗಾಗಲೇ ಪ್ಯಾನ್ ಇಂಡಿಯಾ (PAN India) ಮಟ್ಟದಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಅನೇಕ ದಾಖಲೆಗಳನ್ನು ಬರೆದಿದೆ. ಚಿತ್ರವು ಕನ್ನಡದಲ್ಲಿಯೂ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಎಲ್ಲವೂ ಇದೀಗ ಹಳೆಯ ವಿಷಯವಾಗಿದೆ. ಆದರೆ ಇದೊಂದು ಸಖತ್ ಸುದ್ದಿಯೊಂದು ಇದೀಗ ಹೊರಬಿದ್ದಿದ್ದು, ಕನ್ನಡದಲ್ಲಿಯೂ RRR ಚಿತ್ರ ಬರಲಿದೆಯಂತೆ. ಅಯ್ಯೋ ಇದೇನಪ್ಪಾ ಈಗಾಗಲೇ ಕನ್ನಡದಲ್ಲಿ RRR ಬಂದಿದೆ ಇದ್ಯಾವ ಹೊಸ ಆರ್​ಆರ್​ಆರ್​ ಎಂದು ಆಲೋಚಿಸಬೇಡಿ. ನಾವು ಹೇಳ್ತಿವಿ ಕೇಳಿ. ತೆಲುಗಿನಲ್ಲಿ RRR (ರೌದ್ರಂ, ರಣಂ, ರುದೀರಂ) ಆದರೆ ರಾಮ್ ಚರಣ್ ತೇಜ, ರಾಜಮೌಳಿ ಹಾಗೂ ಜೂ ಎನ್‌ಟಿಆರ್ ಮೂವರು ಸೇರಿ ಮಾಡಿದ RRR ಆಗಿದೆ.

ಜನರು ಇವರುಗಳ ಕಾಂಬಿನೇಷ್​ನೂ ರಾಮ್ ಚರಣ್ ತೇಜ, ರಾಜಮೌಳಿ ಹಾಗೂ ಜೂ ಎನ್‌ಟಿಆರ್ ಮೂವರು ಸೇರಿ ಮಾಡಿದ ಆರ್​ಆರ್​ಆರ್​ ಎನ್ನುತ್ತಿದ್ದಾರೆ. ಹಾಗೇಯೇ ಕನ್ನಡಲ್ಲಿಯೂ ರಾಜ್​ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಸೇರಿ ಸಿನಿಮಾ ಮಾಡುವ ಕುರಿತು ಸುದ್ದಿಯೊಂದು ಕೇಳಿಬಂದಿದ್ದು, ಕನ್ನಡದಲ್ಲಿಯೂ ಆರ್​ಆರ್​ಆರ್​ ಬರಲಿದೆ ಎಂದು ಹೇಳಲಾಗುತ್ತಿದೆ.

ಕನ್ನಡದಲ್ಲಿ ಬರಲಿದೆ RRR:

ಹೌದು, ಕನ್ನಡದ್ಲಲಿಯೂ RRR ಕಾಂಬಿನೇಷನ್​ ನಲ್ಲಿ ಸಿನಿಮಾ ಮೂಡಿಬರಲಿದೆಯಂತೆ. ಇದನ್ನು ಸ್ವತಃ ರಕ್ಷಿತ್ ಶೆಟ್ಟಿಯೇ ಹೇಳಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಖಂಡಿತವಾಗಿ ಕನ್ನಡದಲ್ಲಿಯೂ RRR ಕಾಂಬಿನೇಷನ್​ ನಲ್ಲಿ ಚಿತ್ರವು ಬರಲಿದೆ. ನನ್ನ ಬಳಿ ಒಂದು ಕತೆ ಇದೆ ಅದರಲ್ಲಿ ನಾನು (ರಕ್ಷಿತ್ ಶೆಟ್ಟಿ), ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸುವ ಆಲೋಚನೆ ಇದೆ. ಖಂಡಿತವಾಗಿಯೂ ಅದು ನೆರವೇರಲಿದೆ‘ ಎಂದು ಹೇಳಿದ್ದಾರೆ.

ರಕ್ಷಿತ್ ಶೆಟ್ಟಿಯ ಪುಣ್ಯಕೋಟಿ ಚಿತ್ರದ ನಂತರ ಅಥವಾ ಅದಕ್ಕೂ ಮುಂಚಿತವಾಗಿ ನಮ್ಮ 3 ಕಾಂಬಿನೇಷನ್​​ ನಲ್ಲಿ ಚಿತ್ರ ಮುಡಿಬರಲಿದೆ. ನಾನು ಈಗಾಗಲೇ ನಾವು ಮೂವರೂ ಹಾಗೂ ಪ್ರಮೋದ್ ಶೆಟ್ಟಿ ಅಭಿನಯಿಸುವಂತಹ ಕಥೆಯೊಂದನ್ನು ಸಿದ್ಧ ಮಾಡಿಕೊಂಡಿದ್ದೇನೆ. ಅದನ್ನು ತೆರೆಮೇಲೆ ತರುವ ಆಲೋಚನೆ ಇದೆ. ಇದರ ನಡುವೆ ಏನಾದರೂ ರಾಜ್​ ಬಿ ಶೆಟ್ಟಿ ಅವರು ಕಥೆ ರಚಿಸಿದರೆ ನಾನು ನಟಿಸಲು ಸಿದ್ಧನಿದ್ದೇನೆ ಎಂದು ರಕ್ಷಿತ್ ಸಂದರ್ಶನದಲ್ಲಿ ಹೇಳುವ ಮುಲಕ ಕನ್ನಡ ಸಿನಿ ಪ್ರೇಮಿಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ.

ಈಗಾಗಲೇ  ಬಂದಾಗಿದೆ:

ಈಗಾಗಲೇ ಕನ್ನಡದಲ್ಲಿ RR ಬಂದಾಗಿದೆ. ಹೌದು, ರಾಜ್​ ಬಿ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಇಬ್ಬರೂ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ನಟಿಸಿದ್ದಾರೆ. ಅದರಂತೆ ಕಿರಿಕ್ ಪಾರ್ಟಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ನಟಿಸಿದಾಗಿದೆ. ಈ ಎರಡೂ ಚಿತ್ರಗಳು ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಹೀಗಾಗಿ ಈ ಮೂವರ ಜೋಡಿ ಏನಾದರೂ ತೆರೆಮೇಲೆ ಬಂದಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಚಿತ್ರವು ಸದ್ದು ಮಾಡಲಿದೆ ಎಂಬುದು ಅಭಿಮಾನಿಗಳ ಆಶಯ.

ಯಾರು ಮಾಡಲಿದ್ದಾರೆ ಕನ್ನಡ RRR:

ಹಾಗಿದ್ದಲ್ಲಿ ಕನ್ನಡದಲ್ಲಿ ಯಾರು ಮೊದಲು ಆರ್​ಆರ್​ಆರ್​ ಮಾಡಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ರಕ್ಷಿತ್, ‘ಖಂಡಿತ ನಾನೇ ಮಾಡ್ತೀನಿ ಎಂದರು. ಆದರೆ ರಾಜ್​ ಬಿ ಶೆಟ್ಟಿ ಇದಕ್ಕೆ ಮಾತನಾಡಿ, ಅತ್ತ ರಿಷಬ್ ಸಹ ತಾನು ಮಾಡುತ್ತೇನೆ ಎನ್ನುತ್ತಿದ್ದಾರೆ. ಆದರೆ ಇವರಿಬ್ಬರಲ್ಲಿ ಯಾರೇ ಮಾಡಿದರೂ ನಾನು ಮಧ್ಯದಲ್ಲಿ ಇದ್ದು ಬಿಡುತ್ತೇನೆ‘ ಎಂದು ತಮಾಷೆಯ ಉತ್ತರ ನೀಡಿದರು.

ಮೂವರು ಸಿನಿಮಾಗಳಲ್ಲಿ ಬ್ಯೂಸಿ:

ಇನ್ನು, ಸದ್ಯ ಈ ಮೂವರು ನಟರು ಇತರೆ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ರಕ್ಷಿತ್ ಸದ್ಯ 777 ಚಾರ್ಲಿ ಚಿತ್ರದ ಯಶಸ್ಸಿನಲ್ಲಿದ್ದಾರೆ. ಇದರೊಂದಿಗೆ, ಸಪ್ತ ಸಾಗರದಾಚೆ, ರಿಚರ್ಡ್ ಆ್ಯಂಟೋನಿ, ಕಿರಿಕ್ ಪಾರ್ಟಿ 2, 'ಪುಣ್ಯಕೋಟಿ' ಚಿತ್ರಗಳಲ್ಲಿ ಬ್ಯುಸಿಯಾಗಿದ್ದರೆ. ಇತ್ತ ರಿಷಬ್ ಶೆಟ್ಟಿಯ 'ಕಾಂತಾರ' ಬಿಡುಗಡೆಯ ತಯಾರಿಯಲ್ಲಿದ್ದಾರೆ. ರಾಜ್ ಬಿ ಶೆಟ್ಟಿ 'ಗರಡು ಗಮನ ವೃಷಭ ವಾಹನ' ಸಿನಿಮಾ ಮುಗಿಸಿದ್ದು, ಮುಂದಿನ ಸಿನಿಮಾ ಇನ್ನಷ್ಟೆ ಘೋಷಿಸಬೇಕಿದೆ.
Published by:shrikrishna bhat
First published: