Rakshit Shetty: "ನಂಗೆ ಲವ್ ಫೆಲ್ಯೂರ್ ಆಗಿಲ್ಲ" ಎಂದಿದ್ದೇಕೆ ರಕ್ಷಿತ್? 'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ' ತ್ಯಾಗ ಮಾಡಿ 'ಕರ್ಣ'ನಾದ್ರಾ ಶೆಟ್ರು?

Ravichandran: ಇನ್ನು ಕನ್ನಡ ಸಿನಿರಂಗದಲ್ಲಿ ಯಾವ ಹೀರೋಯಿನ್ ಇಷ್ಟ ಎಂದು ಕೇಳಿದ್ದಕ್ಕೆ ರಕ್ಷಿತ್ ರಮ್ಯಾ ಎಂದಿದ್ದಾರೆ.

ರಕ್ಷಿತ್​ ಶೆಟ್ಟಿ

ರಕ್ಷಿತ್​ ಶೆಟ್ಟಿ

  • Share this:
ನಟ ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ಕ್ರೇಜಿಸ್ಟಾರ್​ ರವಿಚಂದ್ರನ್​ (Ravichandran) ಇಬ್ಬರೂ ತಮ್ಮದೇ ಆದ ವಿಭಿನ್ನ ಶೈಲಿಯ ಮೂಲಕ ಜನಮನ ಗೆದ್ದಿದ್ದಾರೆ. ಒಬ್ಬರು ಪ್ರೇಮಲೋಕವನ್ನು ಸೃಷ್ಟಿಸಿದ್ದಾರೆ, ಇನ್ನೊಬ್ಬರು ಕಾಲೇಜಿನ ಕಥೆಯನ್ನು ಸಾರಿ ಹೇಳಿದ್ದಾರೆ. ಅವರ ಅಭಿಮಾನಿಗಳಿಗೆ ಅವರು ಎಂದಿಗೂ ಆರಾಧ್ಯ ದೈವ. ಅವರಿಬ್ಬರ ಸಂದರ್ಶನ ಎಂದರೆ ಅಭಿಮಾನಿಗಳು (Fans) ಕಾದು ಕುಳಿತಿರುತ್ತಾರೆ. ರಕ್ಷಿತ್ ಹಾಗೂ  ಕ್ರೇಜಿ ಸ್ಟಾರ್​ ಅವರ ಸಂದರ್ಶನ ಮಾಡಿದರೆ ಹೇಗಿರುತ್ತದೆ? ನಿಜಕ್ಕೂ ಈ ಸ್ಟಾರ್​ ನಟರ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಈಗ ಈ ಅದ್ಭುತ ಕನಸು ನನಸಾಗಿದೆ.  

ಹೌದು, ರಕ್ಷಿತ್ ಶೆಟ್ಟಿ ಹಾಗೂ ಕ್ರೇಜಿ ಸ್ಟಾರ್​ ರವಿಚಂದ್ರನ್​ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅದು ಒಂದು ಮಸ್ತ್ ಸಂದರ್ಶನದಲ್ಲಿ.  ಕನ್ನಡದ ಪ್ರಖ್ಯಾತ ನಿರೂಪಕಿ ಅನುಶ್ರೀ ಅವರ ಯೂ ಟ್ಯೂಬ್​ ಚಾನೆಲ್​ ನಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡು, ಅಭಿಮಾನಿಗಳಿಗೆ ಮನರಂಜನೆ ನೀಡಿದ್ದಾರೆ.

ಏನಂದ್ರು ಕ್ರೇಜಿಸ್ಟಾರ್​?

ಹೌದು, ಈ ಸಂದರ್ಶನದಲ್ಲಿ ರಕ್ಷಿತ್ ಹಾಗೂ ಕ್ರೇಜಿಸ್ಟಾರ್​ ಬಹಳ ಎಂಜಾಯ್ ಮಾಡಿದ್ದು, ವೀಕ್ಷಕರಿಗೆ ಸಹ ಪ್ರೋಮೋ ನೋಡಿಯೇ ಖುಷಿ ಆಗಿದೆ.  ಅದರಲ್ಲಿ ರಕ್ಷಿತ್ ರವಿಚಂದ್ರನ್ ಅವರಿಗೆ ಅವರ ಚಿತ್ರಗಳನ್ನು ಈಗಿನ ಯಾವ ಹೀರೋ ಮಾಡಿದರೆ ಇಷ್ಟ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಒಂದೊಂದಕ್ಕೂ ಒಂದೊಂದು ಹೆಸರನ್ನು ಅವರು ಹೇಳಿದ್ದಾರೆ.  ಶಾಂತಿ ಕ್ರಾಂತಿ ಚಿತ್ರವನ್ನು ಯಾರು ಮಾಡಬಹುದು ಎಂದು ಕೇಳಿದ್ದಕ್ಕೆ ಸುದೀಪ್ ಎಂದಿದ್ದು, ರಣಧೀರ ಚಿತ್ರವನ್ನು ತಮ್ಮ ಮಗ ಮನೋರಂಜನ್ ಮಾಡಬಹುದು ಎಂದಿದ್ದಾರೆ. ಆದರೆ ಎಲ್ಲರ ನೆಚ್ಚಿನ ಎವರಗ್ರೀನ್ ಫಿಲ್ಮ್​ ಪ್ರೇಮಲೋಕವನ್ನು ಯಾರು ಮಾಡಬಹುದು ಎಂದು ಕೇಳಿದ್ದಕ್ಕೆ, ಅದನ್ನು ಮಾತ್ರ ಯಾರಿಗೂ ಬಿಟ್ಟುಕೊಡುವುದಿಲ್ಲ, ಅದನ್ನು ನಾನು ಮಾತ್ರ ಮಾಡುತ್ತೇನೆ ಎಂದಿದ್ದು, ರಕ್ಷಿತ್ ಹಾಗೂ ಅನುಶ್ರೀ ಬಿದ್ದು ಬಿದ್ದು ನಕ್ಕಿದ್ದಾರೆ.ಇನ್ನು ಸಿಪಾಯಿ ಚಿತ್ರ ಯಾರು ಮಾಡಬಹುದು ಎಂದು ಕೇಳಿದ್ದಕ್ಕೆ ದರ್ಶನ್ ಎಂದಿದ್ದು, ಯಾಕೆ ಎಂಬ ಪ್ರಶ್ನೆಗೆ ಹಿರೋಯಿನ್ ಮುಂದೆ ಸರಿಯಾಗಿ ಕಾಣುತ್ತಾರೆ ಎಂದಿದ್ದಾರೆ. ಇನ್ನು ರಕ್ಷಿತ್​ಗೆ ನೀವು ನನ್ನ ರಾಮಾಚಾರಿ ಚಿತ್ರ ಮಾಡಿ ಎಂದಿದ್ದಾರೆ. ಅದಕ್ಕೆ ಅನುಶ್ರೀ ಹೀರೋಯಿನ್ ಯಾರು ಎಂದಿದ್ದಕ್ಕೆ ಮಾಲಾಶ್ರೀ ಮಗಳೇ ರೆಡಿ ಇದ್ದಾಳೆ ಎಂದು ತಮಾಷೆ ಮಾಡಿದ್ದಾರೆ.  ಅಲ್ಲದೇ ನನಗೆ ಹೆಣ್ಣಿನ ಋಣ ಕೊಟ್ಟ ಆದ್ರೆ ಮಣ್ಣಿನ ಋಣ ಕೊಟ್ಟಿಲ್ಲ ಎಂದು ಸಹ ತಮಾಷೆ ಮಾಡುತ್ತಾರೆ.

ಇದಲ್ಲದೇ ಈ ಜನರೇಷನ್​ನಲ್ಲಿ ನಿಮ್ಮ ಫೇವರೇಟ್​ ನಟ ಯಾರು ಎಂಬ ಪ್ರಶ್ನೆಗೆ ಕ್ರೇಜಿಸ್ಟಾರ್​ ರವಿಚಂದ್ರನ್​, ಚಾಲೆಂಜಿಂಗ್ ಸ್ಟಾರ್​ ದರ್ಶನ ಅವರ ಹೆಸರನ್ನು ಹೇಳಿದ್ದಾರೆ.

ಇದನ್ನೂ ಓದಿ: ಕಾರ್ ಆಯ್ತು ಈಗ, ದುಬೈನಲ್ಲಿ ಮನೆ! ರಾಖಿಗೆ ಮತ್ತೊಂದು ದುಬಾರಿ ಗಿಫ್ಟ್ ಕೊಟ್ಟ ಹೊಸ ಬಾಯ್ ಫ್ರೆಂಡ್

ನನಗೆ ಲವ್​ ಫೇಲ್ಯೂರ್​ ಆಗಿಲ್ಲ ಅಂದ ರಕ್ಷಿತ್

ಇನ್ನು ರಕ್ಷಿತ್​ ಅವರು ಕೂಡ ತಮ್ಮ ವಿಚಾರಗಳನ್ನು ಮಾತನಾಡಿದ್ದು, ಅನುಶ್ರೀ ನೀವು ತುಂಬಾ ರೋಮ್ಯಾಂಟಿಕ್​ ಎಂಬ ಪ್ರಶ್ನೆಗೆ ಅವರು ಸಹ ತುಂಟತನದಿಂದ ಉತ್ತರ ನೀಡಿದ್ದಾರೆ.

ಇದೆಲ್ಲಕ್ಕಿಂತ ಹೆಚ್ಚಾಗಿ ರಕ್ಷಿತ್ ಹೇಳಿರುವ ಒಂದು ಮಾತು ಬಹಳ ಸುದ್ದಿಯಲ್ಲಿದೆ. ರವಿಚಂದ್ರನ್ ಅವರು ರಕ್ಷಿತ್​ ಗೆ ನಿನಗೆ ಲವ್​ ಫೇಲ್ಯೂರ್​ ಆಗಿದ ಅದಕ್ಕೆ ನೀನು ಸಕ್ಸಸ್​​ ಆಗಿದಿಯಾ  ಎನ್ನುತ್ತಾರೆ. ಅದಕ್ಕೆ ನಗುತ್ತಾ ಉತ್ತರಕೊಟ್ಟ ರಕ್ಷಿತ್​, ನನ್ನ ಪ್ರಕಾರ ನನಗೆ ಲವ್ ಫೇಲ್ಯೂರ್ ಆಗಿಲ್ಲ, ಆದರೆ ಇಡೀ ಜಗತ್ತು ಪೂರ್ತಿ ಲವ್​ ಫೇಲ್ಯೂರ್​ ಆಗಿದೆ ಎಂದು ಹೇಳುತ್ತಿದ್ದೆ ಎಂದು ನಕ್ಕಿದ್ದಾರೆ. ಇದನ್ನು ಕೇಳಿದ ಅನುಶ್ರೀ ನಗು ತಡೆಯಲಾರದೇ ಬಿದ್ದು, ಬಿದ್ದು ನಕ್ಕಿದ್ದಾರೆ.  ರಕ್ಷಿತ್ ಅವರ ಮಾತು ಈಗ ಸುದ್ದಿಯಲ್ಲಿದೆ ಏಕೆಂದರೆ, ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಹಾಗೂ ರಕ್ಷಿತ್ ಎಂಗೇಜ್​ಮೆಂಟ್​ ಆಗಿತ್ತು. ಆದರೆ ನಂತರ ಮುರಿದು ಬಿದ್ದಿತ್ತು.  ಈಗ ರಕ್ಷಿತ್ ಹೇಳಿರುವ ಮಾತು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ.

ಇನ್ನು ಕನ್ನಡ ಸಿನಿರಂಗದಲ್ಲಿ ಯಾವ ಹೀರೋಯಿನ್ ಇಷ್ಟ ಎಂದು ಕೇಳಿದ್ದಕ್ಕೆ ರಕ್ಷಿತ್ ರಮ್ಯಾ ಎಂದಿದ್ದಾರೆ.

ಇದನ್ನೂ ಓದಿ: ಸೂಪರ್ ಮಾಡೆಲ್​ ಸ್ಟೈಲ್​​ ಕಾಪಿ ಮಾಡಿದ್ರಾ ಅನನ್ಯಾ? ನಟಿಯ ಡ್ರೆಸ್​ ನೋಡಿ ನೆಟ್ಟಿಗರ ಕಾಮೆಂಟ್​

ಇನ್ನು ಅಲ್ಲಿ ಭಾಗವಹಿಸಿದ್ದ ಪ್ರೇಕ್ಷಕರು ಸಹ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ, ಒಬ್ಬರು ರಕ್ಷಿತ್​ಗೆ ಸರ್ ನಿಮಗೆ ಚಾರ್ಲಿ ಅಂದ್ರೆ ಏನು ಅಂತ ಕೇಳಿದ್ದಾರೆ. ಇನ್ನೊಬ್ಬರು ರವಿಚಂದ್ರನ್ ಅವರಿಗೆ ನೀವು ತುಂಬಾ ನೇರ ಸ್ವಭಾವದವರು, ಆ ಧೈರ್ಯ ನಮಗೂ ಬರಬೇಕು ಅಂದ್ರೆ ಏನು ಮಾಡಬೇಕು ಅಂತ ಕೇಳಿದ್ದಾರೆ.  ಒಟ್ಟಾರೆಯಾಗಿ ಈ ಕಾರ್ಯಕ್ರಮವೇ ಅದ್ಭುತವಾಗಿ ಮೂಡಿ ಬಂದಿದ್ದು, ಅಭಿಮಾನಿಗಳು ಫುಲ್​ ವಿಡಿಯೋಗಾಗಿ ಕಾಯುತ್ತಿದ್ದಾರೆ.
Published by:Sandhya M
First published: