HOME » NEWS » Entertainment » RAKSHIT SHETTY AND HIS 777 CHARLIE TEAM LEFT TO KASHMIR FOR SHOOTING AE

Rakshit Shetty: ಕಾಶ್ಮೀರದಲ್ಲಿ ರಕ್ಷಿತ್​ ಶೆಟ್ಟಿ: ಭೂಮಿ ಮೇಲಿನ ಸ್ವರ್ಗದಲ್ಲಿ ನಡೆಯಲಿದೆ 777 ಚಾರ್ಲಿ ಚಿತ್ರೀಕರಣ ..!

777 Charlie: ಕೊಡೈಕೆನಾಲ್​ನಲ್ಲಿ ಚಿತ್ರೀಕರಣ ಮುಗಿಸಿದ ನಂತರ ಚಾರ್ಲಿ ನಿರ್ದೇಶಕ ಕಿರಣ್​ರಾಜ್​ ಕೆ ಹಾಗೂ ಅವರ ತಂಡದವರು ಹಿಮಾಚಲ ಪ್ರದೇಶ ಹಾಗೂ ಇತರೆ ರಾಜ್ಯಗಳಲ್ಲಿ ಶೂಟಿಂಗ್​ ಲೊಕೇಶನ್​ ಹಂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಅಲ್ಲಿಂದ ಮರಳಿದ ನಂತರ ಈಗ ಚಿತ್ರತಂಡ ಕೊನೆಯ ಹಂತದ ಶೂಟಿಂಗ್​ಗೆ ಸಿದ್ಧತೆ ಮಾಡಿಕೊಂಡಿದೆ.

Anitha E | news18-kannada
Updated:November 25, 2020, 11:09 AM IST
Rakshit Shetty: ಕಾಶ್ಮೀರದಲ್ಲಿ ರಕ್ಷಿತ್​ ಶೆಟ್ಟಿ: ಭೂಮಿ ಮೇಲಿನ ಸ್ವರ್ಗದಲ್ಲಿ ನಡೆಯಲಿದೆ 777 ಚಾರ್ಲಿ ಚಿತ್ರೀಕರಣ ..!
ಕಾಶ್ಮೀರದಲ್ಲಿ 777 ಚಾರ್ಲಿ ಚಿತ್ರತಂಡ
  • Share this:
ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ 777 ಚಾರ್ಲಿ. ಕಿರಣ್​ರಾಜ್​ ಕೆ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣ ಕೊರೋನಾ ಲಾಕ್​ಡೌನ್​ ಆರಂಭವಾಗುವ ಮೊದಲೇ ಸಾಕಷ್ಟು ಲೊಕೇಷನ್​ಗಳಲ್ಲಿ ಚಿತ್ರೀಕರಣಗೊಂಡಿತ್ತು. ಕೊರೋನಾ ಭೀತಿಯಿಂದಾಗಿ ಲಾಕ್​ಡೌನ್​ ಘೋಷಣೆಯಾಗುತ್ತಿದ್ದಂತೆಯೇ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿ, ಚಿತ್ರತಂಡ ಬೆಂಗಳೂರಿಗೆ ಮರಳಿತ್ತು. ಇದಾದ ನಂತರ ಇತ್ತೀಚೆಗಷ್ಟೆ ಮತ್ತೆ ಬೆಂಗಳೂರಿನಲ್ಲಿ ಶೂಟಿಂಗ್​ ಆರಂಭವಾಯಿತು. ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿದ ನಂತರ ಚಿತ್ರತಂಡ ಮತ್ತೆ ಕೊಡೈಕೆನಾಲ್​ಗೆ ಹೋಗಿತ್ತು. ಈ ಬಗ್ಗೆ ಸಿನಿಮಾದ ನಿರ್ದೇಶಕ ಕಿರಣ್​ರಾಜ್​ ಸಾಮಾಜಿಕ ಜಾಲತಾಣದಲ್ಲಿ ಸದಾ ಅಪ್ಡೇಟ್​ ಕೊಡುತ್ತಿದ್ದರು. ಇನ್ನೂ ರಕ್ಷಿತ್​ ಶೆಟ್ಟಿ ಸಹ ರಿಚ್ಚಿ ಸಿನಿಮಾದ ಕಥೆ ಬರೆಯಲು ಗೋವಾಗೆ ಹೋಗಿದ್ದರು. ಅಲ್ಲಿಂದ ಬಂದ ಕೂಡಲೇ ಶೂಟಿಂಗ್​ ಸೆಟ್​ಗೆ ಮರಳಿದ್ದರು. ಕೊಡೈಕೆನಾಲ್​ನಲ್ಲಿ ಶೂಟಿಂಗ್​ ಮುಗಿಸಿದ ನಂತರ ಈಗ 777 ಚಾರ್ಲಿ ಚಿತ್ರತಂಡ ಕಾಶ್ಮೀರ ಸೇರಿಕೊಂಡಿದೆ. 

ಕೊಡೈಕೆನಾಲ್​ನಲ್ಲಿ ಚಿತ್ರೀಕರಣ ಮುಗಿಸಿದ ನಂತರ ಚಾರ್ಲಿ ನಿರ್ದೇಶಕ ಕಿರಣ್​ರಾಜ್​ ಕೆ ಹಾಗೂ ಅವರ ತಂಡದವರು ಹಿಮಾಚಲ ಪ್ರದೇಶ ಹಾಗೂ ಇತರೆ ರಾಜ್ಯಗಳಲ್ಲಿ ಶೂಟಿಂಗ್​ ಲೊಕೇಶನ್​ ಹಂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಅಲ್ಲಿಂದ ಮರಳಿದ ನಂತರ ಈಗ ಚಿತ್ರತಂಡ ಕೊನೆಯ ಹಂತದ ಶೂಟಿಂಗ್​ಗೆ ಸಿದ್ಧತೆ ಮಾಡಿಕೊಂಡಿದೆ.
View this post on Instagram


A post shared by Kiranraj K (@kiranraj_k)


ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಮುಗಿಸಲು ಕಾಶ್ಮೀರ ಸೇರಿಕೊಂಡಿದೆ 777 ಚಾರ್ಲಿ ಚಿತ್ರತಂಡ. ಈ ಸಿನಿಮಾದ ಶೂಟಿಂಗ್​ ನಾಳೆಯಿಂದ ಅಂದರೆ ನ.26ರಿಂದ ಆರಂಭವಾಗಿದೆ.

777 Chralie, 777 Charlie Shooting at Kashmir, ರಕ್ಷಿತ್​ ಶೆಟ್ಟಿ, ಕಾಶ್ಮೀರಕ್ಕೆ ಹೊರಟ ರಕ್ಷಿತ್​ ಶೆಟ್ಟಿ, 777 Charlie Shooting at Kodaikanal, rakshit Shetty, Punyakoti, Punyakoti movie details, Punyakoti Movie updates, Punyakoti movie shooting, 777 Charlie, 777 charlie movie updates, Rakshit Shetty Short Films, Sandalwood, Rakshit Shetty spent 10 years in sandalwood, ರಕ್ಷಿತ್​ ಶೆಟ್ಟಿ, 777 ಚಾರ್ಲಿ, ಪುಣ್ಯಕೋಟಿ, ಕನ್ನಡ ಸಿನಿಮಾ, ಕನ್ನಡ ಚಿತ್ರರಂಗ, ಕಿರುಚಿತ್ರದ ಕಥೆ ಬರೆಯುತ್ತಿದ್ದಾರೆ ರಕ್ಷಿತ್​ ಶೆಟ್ಟಿ, ಪುಣ್ಯಕೋಟಿಗೆ ಬ್ರೇಕ್​, 777 ಚಾರ್ಲಿ, ನಿರ್ದೇಶಕ ಕಿರಣ್​ ರಾಜ್​ ಕೆ, ಕೊಡೈಕೆನಾಲ್​, ರಕ್ಷಿತ್ ಶೆಟ್ಟಿ ಕೊಡೈಕೆನಾಲ್​ನಲ್ಲಿ
ಕಾಶ್ಮೀರದಲ್ಲಿ ನಿರ್ದೇಶಕ ಕಿರಣ್​ ರಾಜ್​


ಇನ್ನು ನಿನ್ನೆಯೇ ಮುಂಬೈ ಸೇರಿಕೊಂಡ ರಕ್ಷಿತ್​ ಈಗಾಗಲೇ ಕಾಶ್ಮೀರ ತಲುಪಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೂ ಮೊದಲೇ ನಿರ್ದೇಶಕ ಕಿರಣ್​ರಾಜ್​ ಹಾಗೂ ಅವರ ತಂಡ ಕಾಶ್ಮೀರ ಸೇರಿಕೊಂಡಿದ್ದಾರೆ.ಇನ್ನು ಇತ್ತೀಚೆಗಷ್ಟೆ ತಮಿಳು ನಟ ಬಾಬಿ ಸಿಂಹ ಎಂಟ್ರಿ ಕೊಟ್ಟ ವಿಷಯ ಗೊತ್ತೇ ಇದೆ. ಕೊಡೈಕೆನಾಲ್​ನಲ್ಲಿ ಬಾಬಿ ಸಿಂಹ ಅವರ ಭಾಗದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಇನ್ನು ಕಾಶ್ಮೀರದಲ್ಲಿ ಶೂಟಿಂಗ್​ ಪೂರ್ಣಗೊಂಡರೆ, 777 ಚಾರ್ಲಿ ಸಿನಿಮಾದ ರಿಲೀಸ್​ಗೆ ದಿನಗಣನೆ ಆರಂಭವಾಗಲಿದೆ. ರಕ್ಷಿತ್​ ಶೆಟ್ಟಿ ಅವರ ಕೈಯಲ್ಲಿ ಈ ಚಿತ್ರ ಬಿಟ್ಟು, ಸಪ್ತಸಾಗರದಾಚೆ, ಪುಣ್ಯಕೋಟಿ, ಕಿರಿಕ್​ ಪಾರ್ಟಿ 2 ಹಾಗೂ ಇನ್ನೂ ಹೆಸರಿಡದ ಸಿನಿಮಾ ಇದೆ.
Published by: Anitha E
First published: November 25, 2020, 11:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories