ಚಿತ್ರೀಕರಣದ ವೇಳೆ ಅವಘಡ: ರಕ್ಷಿತ್ ಶೆಟ್ಟಿ ವಿಡಿಯೋ ವೈರಲ್

news18
Updated:August 27, 2018, 8:56 PM IST
ಚಿತ್ರೀಕರಣದ ವೇಳೆ ಅವಘಡ: ರಕ್ಷಿತ್ ಶೆಟ್ಟಿ ವಿಡಿಯೋ ವೈರಲ್
news18
Updated: August 27, 2018, 8:56 PM IST
-ನ್ಯೂಸ್ 18 ಕನ್ನಡ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ. ದೃಶ್ಯವೊಂದರ ಚಿತ್ರೀಕರಣದ ವೇಳೆ ನಾಯಕ ನಟ ರಕ್ಷಿತ್ ಶೆಟ್ಟಿ ಕುದುರೆಯಿಂದ ಕೆಳಗೆ ಬಿದ್ದಿದ್ದಾರೆ.

ಆದರೆ ಈ ಘಟನೆಯು ಮೂರು ತಿಂಗಳ ಹಿಂದೆ ನಡೆದಿರುವುದಾಗಿ ಚಿತ್ರದ ನಿರ್ದೇಶಕ ಸಚಿನ್ ರವಿ ತಿಳಿಸಿದ್ದಾರೆ. ಸಾಹಸ ದೃಶ್ಯಕ್ಕಾಗಿ ಚಿತ್ರೀಕರಣ ನಡೆಸುವ ವೇಳೆ ಈ ಘಟನೆ ನಡೆದಿದ್ದು, ನಟ ರಕ್ಷಿತ್ ಶೆ್ಟ್ಟಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ವೇಳೆ ಈ ಘಟನೆಯ ದೃಶ್ಯವನ್ನು ಮೊಬೈಲ್​ನಲ್ಲಿ ಯಾರೊ ಚಿತ್ರೀಕರಿಸಿ ಹರಿಬಿಟ್ಟಿದ್ದಾರೆ. ಮೂರು ತಿಂಗಳ ಹಳೆಯ ವಿಡಿಯೋ ತುಣುಕು ಇದೀಗ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು 'ಅವನೇ ಶ್ರೀಮನ್ನಾರಾಯಣ' ಚಿತ್ರತಂಡ ತಿಳಿಸಿದೆ.


'ಕಿರಿಕ್ ಪಾರ್ಟಿ' ಎಂಬ ಬ್ಲಾಕ್ ಬ್ಲಸ್ಟರ್ ಚಿತ್ರದ ಬಳಿಕ ರಕ್ಷಿತ್ ಶೆಟ್ಟಿ ಮತ್ತು ತಂಡ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ಒಂದಾಗಿದ್ದು, ಈಗಾಗಲೇ ಸಿನಿಮಾದ ಫಸ್ಟ್​ ಟೀಸರ್​ನ್ನು ಚಿತ್ರತಂಡ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ಬಿಡುಗಡೆ ಮಾಡಿದೆ.
Loading...

First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...