Puneeth Rajkumar: ಪವರ್ ಸ್ಟಾರ್ ಅಭಿಮಾನಿಗಳಿಗೆ ಪವರ್​ಫುಲ್ 'ರಾಖಿ'; ಅಪ್ಪು 'ರಕ್ಷಾಬಂಧನ'

ನಾಳೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದ್ದು, ಬಗೆಬಗೆಯ ರಾಖಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅಪ್ಪು ಅಭಿಮಾನಿಗಳಿಗಾಗಿ ಅಪ್ಪು ಫೋಟೋ ಇರೋ ರಾಕಿಗಳು ಸಹ ಲಭ್ಯವಿದೆ.

ಅಪ್ಪು ಫೋಟೋ ಇರೋ ರಾಕಿ

ಅಪ್ಪು ಫೋಟೋ ಇರೋ ರಾಕಿ

  • Share this:
ರಕ್ಷಾ ಬಂಧನ (Raksha Bandhan) ಅಣ್ಣ ತಂಗಿಯರ ಹಬ್ಬ,  ಈ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ (Market) ಬಣ್ಣ ಬಣ್ಣದ ತರಹೇವಾರಿ ರಾಕಿಗಳು ಬಂದಿವೆ. ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಆಚರಿಸುವ ರಕ್ಷಾ ಬಂಧನಕ್ಕೆ ಅಂಗಡಿಗಳು ಮತ್ತು ವ್ಯಾಪಾರಸ್ಥರು ಗ್ರಾಹಕರನ್ನು ಆಕರ್ಷಿಸಲು ತಮ್ಮ ಬಗೆಬಗೆಯ ರಾಕಿಗಳನ್ನು ಇಟ್ಟಿದ್ದಾರೆ. ಈ ಮಧ್ಯೆ  ರಾಜ್ಯದ  ಅನೇಕ ಕಡೆಗಳಲ್ಲಿ ಪುನೀತ್ ರಾಜ್​ (Puneeth Rajkumar) ಕುಮಾರ್​ ಫೋಟೋ ಇರುವ ರಾಖಿಗಳು ಮಾರುಕಟ್ಟೆಗೆ ಬಂದಿವೆ. ಅಪ್ಪು (Appu) ಮೇಲಿನ ಅಭಿಮಾನದಿಂದ ಜನ ಈ ರಾಖಿಗಳನ್ನು ಕೊಳ್ಳುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಅಪ್ಪು ಫೋಟೋ ಇರುವ ರಾಖಿ 

ನಟ ಪುನೀತ್​ ರಾಜ್​ಕುಮಾರ್ ಅವರು ಇಹಲೋಕ ತ್ಯಜಿಸಿ ಹಲವು ತಿಂಗಳುಗಳು ಕಳೆದರೂ ಅವರು ಜನರ ಮನಸ್ಸಿನಲ್ಲಿ ಮಾತ್ರ ಅವರು ಜೀವಂತವಾಗಿದ್ದಾರೆ.  ಹಬ್ಬ-ಹರಿದಿನಗಳಲ್ಲೂ ಪುನೀತ್‌ ಅವರ ಸ್ಮರಣೆ ಇದ್ದೇಇರುತ್ತದೆ. ಇದೀಗ ರಕ್ಷಾ ಬಂಧನದ ಪ್ರಯುಕ್ತ ಮಾರುಕಟ್ಟೆಯಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಫೋಟೋ ಇರುವ ಅಪ್ಪು ರಾಖಿ ಬಂದಿದ್ದು, ಜನರ ಇಷ್ಟಪಟ್ಟು ಖರೀದಿಸುತ್ತಿದ್ದಾರೆ.

ನಾಳೆ ರಕ್ಷಾ ಬಂಧನ

ಆಗಸ್ಟ್​ 11ರಂದು ಅಂದರೆ ನಾಳೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದ್ದು, ಬಗೆಬಗೆಯ ರಾಖಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಸಿಂಪಲ್ ಹಾಗೂ ಬಜೆಟ್‌ ಫ್ರೆಂಡ್ಲಿ​ ರಾಖಿಯಿಂದ ದುಬಾರಿ ಬೆಲೆಯ ರಾಖಿಗಳು, ಹಲವು ಡಿಸೈನ್​ಗಳ ರಾಖಿಗಳನ್ನು ನಾವು ಮಾರ್ಕೆಟ್‌ನಲ್ಲಿ ಕಾಣಬಹುದು.

raksha bandhan Puneeth rajkumar fans showing appu rakhi
ಅಪ್ಪು ಫೋಟೋ ಇರೋ ರಾಕಿ


 ಅಪ್ಪು ಮೇಲಿನ ಪ್ರೀತಿಯೇ ಸಾಕ್ಷಿ

ರಾಜ್ಯದ ಹಲವೆಡೆ ಪುನೀತ್ ರಾಜ್​ ಕುಮಾರ್ ಅಭಿಮಾನಿಗಳು, ಅಪ್ಪು ಮೇಲಿನ ಅಭಿಮಾನವನ್ನು ವಿಭಿನ್ನ ರೀತಿಯಲ್ಲಿ ತೋರಿಸುತ್ತಿದ್ದಾರೆ. ಅನೇಕ  ಅಂಗಡಿಗಳಲ್ಲಿ, ಹೋಟೆಲ್​ಗಳಲ್ಲಿ ಅಪ್ಪು ಫೋಟೋ ಕಾಣಬಹುದು. ಇನ್ನು ಹಬ್ಬಗಳಲ್ಲಿ ದೇವರಂತೆ ಅಪ್ಪು ಫೋಟೋವನ್ನು ಜನರು ಹೊತ್ತು ಕುಣಿಯುತ್ತಾರೆ. ಅಪ್ಪು ಸಾಮಾಜಿಕ ಕಾರ್ಯಕ್ರಮಗಳು ಅವರನ್ನು ಜನರ ಮನಸ್ಸಿನಲ್ಲಿ ಜೀವಂತವಾಗಿಸಿದೆ.

ರಾಖಿ ಹಬ್ಬದಲ್ಲೂ ಪವರ್​ ಸ್ಟಾರ್​

ಕೊಪ್ಪಳ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಪುನೀತ್ ರಾಜ್​ಕುಮಾರ್​ ಫೋಟೋ ಇರುವ ರಾಖಿಗಳನ್ನು ತಯಾರಿಸಲಾಗಿದೆ. ಅಪ್ಪು ಮೇಲಿನ ಅಭಿಮಾನಕ್ಕೆ ಜನರು ಇವುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಆ ಮೂಲಕ ರಕ್ಷಾ ಬಂಧನ ಹಬ್ಬಕ್ಕೆ ‘ಪವರ್​ ಸ್ಟಾರ್​’ ಅಭಿಮಾನಿಗಳಿಂದ ವಿಶೇಷ ಕಳೆ ಬರುತ್ತಿದೆ. ಸಿನಿಮಾ ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಗಳಿಂದ ಪುನೀತ್​ ಅವರು ಜನಮನ ಗೆದ್ದಿದ್ದರು. ಆ ಕಾರಣದಿಂದ ಅವರು ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ.

Raghavendra Rajkumar shares a video of puneeth fan
ನಟ ಪುನೀತ್ ರಾಜ್​ಕುಮಾರ್


‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವ

ಪುನೀತ್​ ಅವರಿಗೆ ನಾಡು-ನುಡಿಯ ಮೇಲೆ ಅಪಾರ ಗೌರವ ಇತ್ತು. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ದೊಡ್ಡದು. ಇದೆಲ್ಲವನ್ನೂ ಪರಿಗಣಿಸಿ, ಮರಣೋತ್ತರವಾಗಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಲಾಯಿತು. ನವೆಂಬರ್​ 1ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪುನೀತ್​ ಅವರು ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡಿದ್ದರು. ಕರುನಾಡಿನ ಅರಣ್ಯ ಮತ್ತು ವನ್ಯ ಜೀವಿಗಳ ಮೇಲೆ ಚಿತ್ರಿತವಾಗಿರುವ ಈ ಡಾಕ್ಯುಮೆಂಟರಿ ಅಕ್ಟೋಬರ್​ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಋಅ

ರಕ್ಷಾಬಂಧನ ಹಬ್ಬವು ಸಹೋದರ ಸಹೋದರಿಯರ ನಡುವಿನ ಸುಂದರ ಸಂಬಂಧವನ್ನು ತೋರಿಸುವ ಪ್ರಮುಖ ಹಬ್ಬವಾಗಿದೆ. ರಕ್ಷಾಬಂಧನದ ದಿನದಂದು, ಒಬ್ಬ ಸಹೋದರಿ ತನ್ನ ಸಹೋದರನ ಮಣಿಕಟ್ಟಿನ ಮೇಲೆ ರಾಖಿಯನ್ನು ಕಟ್ಟುತ್ತಾಳೆ ಮತ್ತು ತನ್ನ ಸಹೋದರನಿಂದ ರಕ್ಷಣೆಯ ಭರವಸೆಯನ್ನು ತೆಗೆದುಕೊಳ್ಳುತ್ತಾಳೆ  ಅದಕ್ಕೆ ಪ್ರತಿಯಾಗಿ, ಸಹೋದರನು ಭರವಸೆ ನೀಡುವ ಮೂಲಕ ಸ್ವಲ್ಪ ಉಡುಗೊರೆಯನ್ನು ನೀಡುತ್ತಾನೆ. ಇದೀಗ ಅಪ್ಪು ಅಭಿಮಾನಿ ತಂಗಿ ಅಪ್ಪುವಿನ ರಾಖಿ ಕಟ್ಟಬಹುದು.
Published by:Pavana HS
First published: