• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rakhi Sawanth: ಇನ್ಮೇಲೆ ಗ್ಲಾಮರಸ್ ಬಟ್ಟೆ ಹಾಕಲ್ವಂತೆ ಈ ಬಿಚ್ಚೋಲೆ ಗೌರಮ್ಮ! ರಾಖಿ ಮಾಡೋದೆಲ್ಲ ಬಾಯ್‌ಫ್ರೆಂಡ್‌ಗಾಗಿ ಸ್ವಾಮಿ

Rakhi Sawanth: ಇನ್ಮೇಲೆ ಗ್ಲಾಮರಸ್ ಬಟ್ಟೆ ಹಾಕಲ್ವಂತೆ ಈ ಬಿಚ್ಚೋಲೆ ಗೌರಮ್ಮ! ರಾಖಿ ಮಾಡೋದೆಲ್ಲ ಬಾಯ್‌ಫ್ರೆಂಡ್‌ಗಾಗಿ ಸ್ವಾಮಿ

ರಾಖಿ ಸಾವಂತ್ ಬಾಯ್​ಫ್ರೆಂಡ್​ ಜೊತೆ

ರಾಖಿ ಸಾವಂತ್ ಬಾಯ್​ಫ್ರೆಂಡ್​ ಜೊತೆ

Bollywood: ಇತ್ತೀಚೆಗೆ ಮೈಸೂರು ಮೂಲದ ಆದಿಲ್​ ಅವರ ಜೊತೆಗಿನ ಪ್ರೀತಿಯ ವಿಚಾರ ಎಲ್ಲಾ ಕಡೆ ಹರಡಿತ್ತು. ಮೊನ್ನೆಯಷ್ಟೆ ಆದಿಲ್ ಜೊತೆ ರಾಖಿ ದುಬೈ ಟ್ರಿಪ್ ಸಹ ಮುಗಿಸಿಕೊಂಡು ಬಂದಿದ್ದು, ಈಗ ಈ ಶಾಕಿಂಗ್ ಹೇಳಿಕೆ ನೀಡಿದ್ದಾರೆ. 

  • Share this:

ಬಾಲಿವುಡ್ ನಟಿ (Bollywood) ರಾಕಿ ಸಾವಂತ್ (Rakhi Sawanth) ಈ ಹೆಸರಿಗೆ ಹಾಗೂ ಪ್ರಚಾರಕ್ಕೆ ಅದೇನೋ ನಂಟು ಎನ್ನಬಹುದು. ಪ್ರಚಾರಕ್ಕಾಗಿ ಬಹಳಷ್ಟು ಸರ್ಕಸ್ ಮಾಡಿರುವ ನಟಿ ಕೂಡ ಹೌದು, ಸದ್ಯ ಇದೀಗ ಅವರ ಬಾಯ್​ ಫ್ರೆಂಡ್​ (Boyfriend)  ವಿಚಾರವಾಗಿ ಬಹಳ ಸುದ್ದಿಯಲ್ಲಿದ್ದಾರೆ. ದುಬಾರಿ ಗಿಫ್ಟ್​ ವಿಚಾರವಾಗಿ ಸುದ್ದಿ ಮಾಡಿದ್ದ ರಾಖಿ, ಈಗ ಬಟ್ಟೆಯ ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ.  


ಹೌದು, ಸದ್ಯ ರಾಖಿ ಸಾವಂತ್ ಒಂದು ಹೇಳಿಕೆ ನೀಡಿದ್ದು ಅದು ಅಭಿಮಾನಿಗಳಿಗೆ ಮಾತ್ರವಲ್ಲ ಬಾಲಿವುಡ್​ಗೂ ಶಾಕ್​ ಆಗಿದೆ. ಅದೇನಪ್ಪ ಅಂದ್ರ, ರಾಖಿ ಇನ್ನು ಮುಮದೆ ಗ್ಲಾಮರಸ್​ ಬಟ್ಟೆ ಹಾಕಲ್ವಂತೆ. ಮೈ ತುಂಬಾ ಮುಚ್ಚುವ ಬಟ್ಟೆಯನ್ನು ಮಾತ್ರ ಹಾಕೋದಂತೆ. ಇದೆಲ್ಲ ಮತ್ತೆ ಪ್ರಚಾರಕ್ಕೆ ಅಂತ ಅಲ್ಲ, ಇದು ಅವರ ಬಾಯ್​ಫ್ರೆಂಡ್​ಗಾಗಿ.


ಗ್ಲಾಮರಸ್​ ಬಟ್ಟೆ ಹಾಕಲ್ವಂತೆ


ಇತ್ತೀಚೆಗೆ ಮೈಸೂರು ಮೂಲದ ಆದಿಲ್​ ಅವರ ಜೊತೆಗಿನ ಪ್ರೀತಿಯ ವಿಚಾರ ಎಲ್ಲಾ ಕಡೆ ಹರಡಿತ್ತು. ಮೊನ್ನೆಯಷ್ಟೆ ಆದಿಲ್ ಜೊತೆ ರಾಖಿ ದುಬೈ ಟ್ರಿಪ್ ಸಹ ಮುಗಿಸಿಕೊಂಡು ಬಂದಿದ್ದು, ಈಗ ಈ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ರಾಖಿಯ ಹೊಸ ಬಾಯ್​ಫ್ರೆಂಡ್ ಗೆ ರಾಖಿ ಗ್ಲಾಮರಸ್​​ ಬಟ್ಟೆ ಹಾಕೋದು ಇಷ್ಟವಿಲ್ಲ ಅಂತೆ ಹಾಗಾಗಿ  ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಇನ್ನು ರಿತೇಶ್​ ಜೊತೆ ಡೈವೋರ್ಸ್ ಆದ ನಂತರ ರಾಖಿ ಆದಿಲ್ ಜೊತೆ ಸುತ್ತಾಡುತ್ತಿದ್ದು, ಮಾಧ್ಯಮಗಳಿಗೆ ಸಹ ಲವರ್ ಎಂದು ಪರಿಚಯ ಮಾಡಿಕೊಡುತ್ತಿದ್ದಾರೆ. ಇತ್ತೀಚೆಗೆ ಆದಿಲ್​ ದುಬಾರಿ ಕಾರ್ ಗಿಫ್ಟ್​ ಮಾಡಿದ್ರೂ, ಈಗ ದುಬೈನಲ್ಲಿ ಮನೆಯನ್ನು ಸಹ ಗಿಫ್ಟ್​ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಭಾ ಮಾ ಹರೀಶ್​ ಆಯ್ಕೆ - ಸಾ ರಾ ಗೋವಿಂದುಗೆ ಸೋಲು


ದುಬಾರಿ ಗಿಫ್ಟ್ನೀಡಿದ ಆದಿಲ್


ಆದಿಲ್ ದುಬೈನಲ್ಲಿ ರಾಖಿಗೆ ದುಬಾರಿ ಮನೆ ಖರೀದಿಸಿ ಗಿಫ್ಟ್ ಮಾಡಿದ್ದು, ರಾಕಿ ಫುಲ್ ಖುಷಿಯಲ್ಲಿ ತೇಲುತ್ತಿದ್ದಾರೆ. ಮೊನ್ನೆಯಷ್ಟೇ ರಾಖಿ ಹಾಗೂ ಆದಿಲ್ ದುಬೈ ಹೋಗುವಾಗ ಮತ್ತು ಬರುವಾಗ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದು, ಪಾಪರಾಜಿಗಳಿಗೆ ಪೋಸ್​ ಮಾಡಲು ಆದಿಲ್ ನಾಚಿಕೊಂಡಿದ್ದಾರೆ.  ಇನ್ನು ಆದಿಲ್ ಗಿಫ್ಟ್​ ಕೊಟ್ಟಿರುವ ಬಗ್ಗೆ ರಾಖಿಯೇ ಹೇಳಿಕೊಮಡಿದ್ದು, ನನಗೆ ಆದಿಲ್ ಸಿಕ್ಕಿದ್ದು ನನ್ನ ಪುಣ್ಯ ಎಂದಿದ್ದಾರೆ. ಹಾಗೆಯೇ ಆದಿಲ್ ಸಹ ರಾಖಿ ಸ್ವಲ್ಪ ಗ್ಲಾಮರಸ್​ ಬಟ್ಟೆ ಹಾಕುವುದನ್ನ ಕಡಿಮೆ ಮಾಡಬೇಕು ಎಂದು ಹೇಳುತ್ತೀನಿ ಎಂದಿದ್ದಾರೆ.


 ರಾಖಿ ಸಾವಂತ್‌ಗೆ ಮೈಸೂರಿನ ರೋಶಿನಾ ದೆಲಾವರಿ ಎಂಬ ಹುಡುಗಿಯಿಂದ ಕರೆ ಬಂದಿದೆ. ಆ ಒಂದು ಕರೆ ಎಲ್ಲಾವನ್ನು ಬದಲಿಸಿದೆ ಎನ್ನಲಾಗುತ್ತಿದೆ. ಆದಿಲ್ ತನ್ನನ್ನು 4 ವರ್ಷಗಳಿಂದ ಪ್ರೀತಿಸುತ್ತಿರುವುದಾಗಿ ರೋಶಿನಾ ರಾಖಿಗೆ ತಿಳಿಸಿದ್ದಾರೆ. ರೋಶಿನಾ ಅವರು ಆದಿಲ್ ಜೊತೆ ಕಳೆದ ಸಮಯವನ್ನು ರಾಖಿಗೆ ತಿಳಿಸಿದ್ದು, ಇದು ರಾಖಿ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ ಎಂದು ಈ ಟೈಮ್ಸ್ ವರದಿ ಮಾಡಿದೆ.


ಇದನ್ನೂ ಓದಿ: ಮಂಡ್ಯದ ಗಂಡಿನ ಜನ್ಮದಿನಕ್ಕೆ ಹುಟ್ಟೂರಲ್ಲಿ ವಿಶೇಷ ಕಾರ್ಯಕ್ರಮ, ಅಭಿಮಾನಿಗಳಿಂದ ಆರೋಗ್ಯ ಶಿಬಿರ


ಬಾಲಿವುಡ್ ಚಲನಚಿತ್ರೋದ್ಯಮದ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ತಮ್ಮ ದಿಟ್ಟ ಮತ್ತು ಮುಕ್ತ ಸ್ವಭಾವದಿಂದ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ರಾಖಿ ಹಲವು ಬಾರಿ ಹೇಳಿಕೆ ನೀಡುತ್ತಿರುತ್ತಾರೆ. ಅವರು ಹಾಕುವ ವಿಭಿನ್ನ ರೀತಿಯ ಬಟ್ಟೆಗಳು ಸಹ ಯಾವಾಗಲು ಟ್ರೋಲ್ ಆಗುತ್ತದೆ. ಬಿಗ್ಬಾಸ್ ಮನೆಗೆ ಹೋಗಿದ್ದ ರಾಖಿ ಅಲ್ಲಿ ಸಹ ಗಂಡನ ವಿಚಾರವಾಗಿ ಸುದ್ದಿಯಾಗಿದ್ದರೂ, ನಂತರ ಸಹ ಸೆಟ್ ಹೊರಗೆ ವಿಚಿತ್ರ ಅವತಾರದಲ್ಲಿ ಕಾಣಿಸಿಕೊಂಡು, ಟ್ರೋಲ್ ಪೇಜ್ಗಳಿಗೆ ಆಹಾರವಾಗಿದ್ದರು.

First published: