Rakhi Sawanth: ಕಾರ್ ಆಯ್ತು ಈಗ, ದುಬೈನಲ್ಲಿ ಮನೆ! ರಾಖಿಗೆ ಮತ್ತೊಂದು ದುಬಾರಿ ಗಿಫ್ಟ್ ಕೊಟ್ಟ ಹೊಸ ಬಾಯ್ ಫ್ರೆಂಡ್

Rakhi Sawanth: ಬಾಲಿವುಡ್ ಚಲನಚಿತ್ರೋದ್ಯಮದ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ತಮ್ಮ ದಿಟ್ಟ ಮತ್ತು ಮುಕ್ತ ಸ್ವಭಾವದಿಂದ ಹೆಚ್ಚು ಹೆಸರುವಾಸಿಯಾಗಿದ್ದಾರೆ.

ರಾಖಿ ಸಾವಂತ್

ರಾಖಿ ಸಾವಂತ್

  • Share this:
ರಾಖಿ ಸಾವಂತ್ (Rakhi Sawanth) ಯಾವಾಗಲೂ ಸುದ್ದಿಯಲ್ಲಿರುವ ನಟಿಯರಲ್ಲಿ ಒಬ್ಬರು. ಒಂದೆಲ್ಲ ಒಂದು ಕಾರಣಕ್ಕೆ ಪ್ರಚಾರದಲ್ಲಿರಲು ಅವರಿಗೆ ಇಷ್ಟ ಎಂದರೆ ತಪ್ಪಾಗಲಾರದು. ಅಲ್ಲದೇ ಪತಿ ವಿಚ್ಛೇದಿತ ಪತಿ ರಿತೇಶ್ ಸಿಂಗ್‌ನಿಂದ (Ritesh Singh)  ಬೇರ್ಪಡುವುದಾಗಿ ಘೋಷಿಸಿದಾಗಿನಿಂದ ರಾಖಿ ಸಾವಂತ್ ಸುದ್ದಿಯಲ್ಲಿದ್ದಾರೆ. ನಂತರ ಕೂಡ ಮತ್ತೊಬ್ಬ ವ್ಯಕ್ತಿಯ ಜೊತೆ ಪ್ರೀತಿಯಲ್ಲಿರುವುದಾಗಿ ಹೇಳಿದ್ದಲ್ಲದೇ, ಹೊಸ ಗೆಳೆಯ ಆದಿಲ್ ಖಾನ್ (Adil Khan)  ದುರಾನಿಯನ್ನು ಸಹ ಜನರಿಗೆ ಪರಿಚಯ ಮಾಡಿಸಿದ್ದರು. ಈ ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ. ಇದೀಗ ಅವರು ಮತ್ತೆ ತನ್ನ ಬಾಯ್ ಫ್ರೆಂಡ್ ವಿಚಾರವಾಗಿ ಮತ್ತೆ ಸುದ್ದಿ ಮಾಡುತ್ತಿದ್ದಾರೆ.  

ಕಳೆದ ವಾರ ರಾಖಿಗೆ ಬಾಯ್​ಫ್ರೆಂಡ್​ ಬಿಎಂಡಬ್ಲ್ಯೂ ಕಾರ್ ಕೊಟ್ಟು ಸಖತ್ ಸುದ್ದಿ ಮಾಡಿದ್ದರು. ಇದೀಗ ಮತ್ತೆ ಗಿಫ್ಟ್​ ವಿಚಾರವಾಗಿ ರಾಖಿ ಮತ್ತೆ ಪ್ರಚಾರದಲ್ಲಿದ್ದಾರೆ.  ಇತ್ತೀಚೆಗಷ್ಟೇ ಮೈಸೂರು ಮೂಲದ ಉದ್ಯಮಿಯಾದ ಆದಿಲ್ ಖಾನ್ ದುರಾನಿ ಜತೆ  ತಾನೂ ಡೇಟಿಂಗ್ ಮಾಡುತ್ತಿದ್ದೇನೆ ಎಂದು ರಾಖಿಯೇ ಸ್ವತಃ ತಮ್ಮ ಪ್ರೀತಿಯ ವಿಚಾರವನ್ನ ಬಹಿರಂಗಪಡಿಸಿದ್ದರು. ಆದಿಲ್ ಕರ್ನಾಟಕದ ಮೈಸೂರಿನವರಾಗದಿದ್ರೂ ಸಹ ಅವರು ಮುಂಬೈನಲ್ಲಿ ವಾಸವಿದ್ದು, ಕಾರಿನ ಉದ್ಯಮವನ್ನು ನಡೆಸುತ್ತಿದ್ದಾರೆ. ದುಬಾರಿ ಕಾರಿನ ಗಿಫ್ಟ್​ ನಂತರ ಮತ್ತೊಂದು ದುಬಾರಿ ಗಿಫ್ಟ್​ ಅನ್ನು ತನ್ನ ಪ್ರೇಯಸಿಗೆ ಆದಿಲ್ ನೀಡಿದ್ದು, ಬಾಲಿವುಡ್​ನವರು ಹುಬ್ಬೇರಿಸುವಂತೆ ಮಾಡಿದೆ.

ದುಬಾರಿ ಗಿಫ್ಟ್​ ನೀಡಿದ ಆದಿಲ್​

ಆದಿಲ್ ದುಬೈನಲ್ಲಿ ರಾಖಿಗೆ ದುಬಾರಿ ಮನೆ ಖರೀದಿಸಿ ಗಿಫ್ಟ್ ಮಾಡಿದ್ದು, ರಾಕಿ ಫುಲ್ ಖುಷಿಯಲ್ಲಿ ತೇಲುತ್ತಿದ್ದಾರೆ. ಮೊನ್ನೆಯಷ್ಟೇ ರಾಖಿ ಹಾಗೂ ಆದಿಲ್ ದುಬೈ ಹೋಗುವಾಗ ಮತ್ತು ಬರುವಾಗ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದು, ಪಾಪರಾಜಿಗಳಿಗೆ ಪೋಸ್​ ಮಾಡಲು ಆದಿಲ್ ನಾಚಿಕೊಂಡಿದ್ದಾರೆ.  ಇನ್ನು ಆದಿಲ್ ಗಿಫ್ಟ್​ ಕೊಟ್ಟಿರುವ ಬಗ್ಗೆ ರಾಖಿಯೇ ಹೇಳಿಕೊಮಡಿದ್ದು, ನನಗೆ ಆದಿಲ್ ಸಿಕ್ಕಿದ್ದು ನನ್ನ ಪುಣ್ಯ ಎಂದಿದ್ದಾರೆ. ಹಾಗೆಯೇ ಆದಿಲ್ ಸಹ ರಾಖಿ ಸ್ವಲ್ಪ ಗ್ಲಾಮರಸ್​ ಬಟ್ಟೆ ಹಾಕುವುದನ್ನ ಕಡಿಮೆ ಮಾಡಬೇಕು ಎಂದು ಹೇಳುತ್ತೀನಿ ಎಂದಿದ್ದಾರೆ.

ಇದನ್ನೂ ಓದಿ: ಮತ್ತೊಮ್ಮೆ ಗೋಲ್ಡ್​ ಮೆಡಲ್ ತಮ್ಮದಾಗಿಸಿಕೊಂಡ ಫಿದಾ ಬೆಡಗಿ, ಶ್ಯಾಮ್‌ ಸಿಂಗ್‌ ರಾಯ್ ಚಿತ್ರದ ಅಭಿನಯಕ್ಕೆ ಬಿಹೈಂಡ್ ದಿ ವುಡ್ಸ್ ಪ್ರಶಸ್ತಿ

ಅಲ್ಲದೇ ರಾಖಿ ಹಾಗೂ ಆದಿಲ್ ನಡುವೆ ಆರು ವರ್ಷಗಳ ವ್ಯತ್ಯಾಸವಿದೆ, ಅಂದರೆ ಆದಿಲ್ ರಾಜಖಿಗಿಂತ 6 ವರ್ಷ ಚಿಕ್ಕವರು. ಅದೇನೆ ಇರಲಿ ಬಾಲಿವುಡ್​ನಲ್ಲಿ ರಾಖಿ ಸುದ್ದಿ ಮಾತ್ರ  ಚರ್ಚಿತ ವಿಚಾರವಾಗಿದೆ.  ಇನ್ನು ಇತ್ತೀಚೆಗಷ್ಟೇ ಆದಿಲ್ ಮಾಜಿ ಪ್ರೇಯಸಿ ವಿಚಾರವಾಗಿ ಬಹಳ ಸುದ್ದಿ ಹರಿದಾಡುತ್ತಿತ್ತು.

ಪ್ರಚಾರ ಪ್ರಿಯೆ ರಾಖಿ

ರಾಖಿ ಸಾವಂತ್‌ಗೆ ಮೈಸೂರಿನ ರೋಶಿನಾ ದೆಲಾವರಿ ಎಂಬ ಹುಡುಗಿಯಿಂದ ಕರೆ ಬಂದಿದೆ. ಆ ಒಂದು ಕರೆ ಎಲ್ಲಾವನ್ನು ಬದಲಿಸಿದೆ ಎನ್ನಲಾಗುತ್ತಿದೆ. ಆದಿಲ್ ತನ್ನನ್ನು 4 ವರ್ಷಗಳಿಂದ ಪ್ರೀತಿಸುತ್ತಿರುವುದಾಗಿ ರೋಶಿನಾ ರಾಖಿಗೆ ತಿಳಿಸಿದ್ದಾರೆ. ರೋಶಿನಾ ಅವರು ಆದಿಲ್ ಜೊತೆ ಕಳೆದ ಸಮಯವನ್ನು ರಾಖಿಗೆ ತಿಳಿಸಿದ್ದು, ಇದು ರಾಖಿ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ ಎಂದು ಈ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: ಸಿನಿರಂಗದಲ್ಲಿ ಮತ್ತೆ ಬ್ಯುಸಿಯಾದ ಶ್ರುತಿ ಹರಿಹರನ್, ಸಾಲು ಸಾಲು ಚಿತ್ರ ಒಪ್ಪಿಕೊಂಡ ಲೂಸಿಯಾ ಬೆಡಗಿ

ಬಾಲಿವುಡ್ ಚಲನಚಿತ್ರೋದ್ಯಮದ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ತಮ್ಮ ದಿಟ್ಟ ಮತ್ತು ಮುಕ್ತ ಸ್ವಭಾವದಿಂದ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ರಾಖಿ ಹಲವು ಬಾರಿ ಹೇಳಿಕೆ ನೀಡುತ್ತಿರುತ್ತಾರೆ. ಅವರು ಹಾಕುವ ವಿಭಿನ್ನ ರೀತಿಯ ಬಟ್ಟೆಗಳು ಸಹ ಯಾವಾಗಲು ಟ್ರೋಲ್ ಆಗುತ್ತದೆ. ಬಿಗ್ಬಾಸ್ ಮನೆಗೆ ಹೋಗಿದ್ದ ರಾಖಿ ಅಲ್ಲಿ ಸಹ ಗಂಡನ ವಿಚಾರವಾಗಿ ಸುದ್ದಿಯಾಗಿದ್ದರೂ, ನಂತರ ಸಹ ಸೆಟ್ ಹೊರಗೆ ವಿಚಿತ್ರ ಅವತಾರದಲ್ಲಿ ಕಾಣಿಸಿಕೊಂಡು, ಟ್ರೋಲ್ ಪೇಜ್ಗಳಿಗೆ ಆಹಾರವಾಗಿದ್ದರು.
Published by:Sandhya M
First published: