Urfi-Rakhi Sawant: ಉರ್ಫಿ ಜಾವೇದ್​ ಫೇಮಸ್​ ಆಗಿದ್ದು ನನ್ನಿಂದ; ಆಕೆ ನನ್ನನ್ನೇ ಫಾಲೋ ಮಾಡ್ತಿದ್ದಾಳೆ ಎಂದ ರಾಖಿ ಸಾವಂತ್​!

ಉರ್ಫಿ ಜಾವೇದ್ ಫೇಮಸ್ ಆಗಲು ತಾವೇ ಕಾರಣ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಇತ್ತೀಚೆಗಷ್ಟೇ ರಾಖಿ ಸಾವಂತ್ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಉರ್ಫಿ ಜಾವೇದ್ ಅವರನ್ನು ಬೆಳಕಿಗೆ ತಂದಿದ್ದು ನಾನೇ ಎಂದು ಹೇಳಿಕೊಂಡಿದ್ದರು. 

ಉರ್ಫಿ ಜಾವೇದ್​, ರಾಖಿ ಸಾವಂತ್

ಉರ್ಫಿ ಜಾವೇದ್​, ರಾಖಿ ಸಾವಂತ್

  • Share this:
ಹಿಂದಿ ಬಿಗ್ ಬಾಸ್ OTT (Big boss) ಖ್ಯಾತಿಯ ಉರ್ಫಿ ಜಾವೇದ್ (Urfi Javed) ತನ್ನ ವಿಚಿತ್ರ ಫ್ಯಾಷನ್ (fashion) ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ಏನಾದರೂ ವಿಭಿನ್ನ ಹಾಗೂ ವಿಚಿತ್ರವಾಗಿ ಬಟ್ಟೆ ಹಾಕುವ ಮೂಲಕ ಸುದ್ದಿಯಲ್ಲಿರುತ್ತಾರೆ. ಜೊತೆಗೆ ಉರ್ಫಿ ತನ್ನ ಹಾಟ್‌ನೆಸ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಅದೇನೇ ಮಾಡಿದ್ರೂ ನೆಟ್ಟಿಗರು ಇವರನ್ನು ಬಿಡುವ ಲಕ್ಷಣಗಳಿಲ್ಲ. ಒಂದೆಲ್ಲಾ ಒಂದು ವಿಚಾರಕ್ಕೆ ಟ್ರೋಲ್ (Troll) ಮಾಡುತ್ತಾರೆ. ಉರ್ಫಿ ಈಗ ಫ್ಯಾಷನ್ ಐಕಾನ್ ಎಂದು ಕರೆಸಿಕೊಳ್ತಿದ್ದಾರೆ. ಪ್ರತಿ ಬಾರಿಯೂ ಉರ್ಫಿ ಹೊಸ ಹೊಸ ಲುಕ್​ನಲ್ಲಿ ಮಿಂಚುತ್ತಿದ್ದಾರೆ. ಫ್ಯಾಷನ್​ ಐಕಾನ್ (Fashion Icon) ಆಗಿರೋ ಉರ್ಫಿಯನ್ನು ಮಾಧ್ಯಮಕ್ಕೆ ಕರೆ ತಂದಿದ್ದು ನಾನೇ ಎಂದು ರಾಖಿ ಸಾವಂತ್ ಹೇಳಿದ್ದಾರೆ.

ನನ್ನನ್ನೇ ಫಾಲೋ ಮಾಡ್ತಿದ್ದಾರೆ ಉರ್ಫಿ

ಉರ್ಫಿ ಜಾವೇದ್ ಫೇಮಸ್ ಆಗಲು ನಾನೇ ಕಾರಣ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಇತ್ತೀಚೆಗಷ್ಟೇ ರಾಖಿ ಸಾವಂತ್ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಉರ್ಫಿ ಜಾವೇದ್ ಅವರನ್ನು ಬೆಳಕಿಗೆ ತಂದಿದ್ದು ನಾನೇ ಎಂದು ಹೇಳಿಕೊಂಡಿದ್ದರು. ಉರ್ಫಿ ತನ್ನ ಹೆಜ್ಜೆಗಳನ್ನೇ ಅನುಸರಿಸುತ್ತಿದ್ದಾರೆ ಎಂದು ರಾಖಿ ಸಾವಂತ್​ ಹೇಳಿದ್ದಾರೆ. ಬಾಲಿವುಡ್​ ಹಲವು ಮಂದಿ ಉರ್ಫಿಯನ್ನು ಫ್ಯಾಷನ್ ಐಕಾನ್ ಎಂದೇ ಒಪ್ಪಿಕೊಂಡಿದ್ದಾರೆ. ಉರ್ಫಿ ಕೋ ಮೀಡಿಯಾ ಮೆ ಲಾನೆ ವಾಲಿ ಮೆ ಹೂ, ಉಸ್ಸೆ ಪೆಹ್ಲೆ ಮೀಡಿಯಾ ಮೆ ಕಹಾನ್ ಥಿ ವೋ ಎಂದು ರಾಖಿ ಸಾವಂತ್​ ಹೇಳಿದ್ದಾರೆ.


View this post on Instagram


A post shared by FilmyKalakar (@filmykalakar)


ಹೊಸ ಹೊಸ ಅವತಾರದಲ್ಲಿ ಉರ್ಫಿ

ಉರ್ಫಿ ಜಾವೇದ್ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹೊಸ ಲುಕ್​​ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸ್ಟೋನ್​ಗಳಿಂದ ಮಾಡಿದ ಡ್ರೆಸ್​ ತೊಟ್ಟು ಉರ್ಫಿ ಮಿಂಚಿದ್ದಾರೆ.  ಸ್ಟೋನ್​ಗಳಿಂದ ಬ್ರೇಲೆಟ್ ಮತ್ತು ಮಿನಿ ಸ್ಕರ್ಟ್ ಅನ್ನು ತಯಾರಿಸಿದಂತಿದೆ ಈ ಡ್ರೆಸ್​​. ವೀಡಿಯೊದ ಆರಂಭದಲ್ಲಿ,ಟ್ರೋಲರ್‌ಗಳು ಆಕೆಯ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಬಳಿಕ ಅದೇ ಕಲ್ಲುಗಳಿಂದ ಉರ್ಫಿ ಡ್ರೆಸ್ ತಯಾರಿಸಿದ್ದಾರೆ.


ಇದನ್ನೂ ಓದಿ: Urfi Javed: ಕೇವಲ 10 ರೂಪಾಯಿಯಲ್ಲಿ ರೆಡಿಯಾಯ್ತು ಫ್ಯಾಷನ್ ಉಡುಗೆ; ಇದು ಉರ್ಫಿ ಜಾವೇದ್ ಕೊಟ್ಟ ಟಿಪ್ಸ್


View this post on Instagram


A post shared by Uorfi (@urf7i)


ಉರ್ಫಿ ವಿಡಿಯೋಗೆ ಕಾಮೆಂಟ್​

ವೀಡಿಯೊವನ್ನು ಹಂಚಿಕೊಂಡ ಉರ್ಫಿ ಈ ರೀತಿ ಬರೆದುಕೊಂಡಿದ್ದಾರೆ. 'ನಿಮ್ಮ ಕಾಮೆಂಟ್​​ಗಳೇ ನಾನು ಈ ರೀತಿ ಡ್ರೆಸ್ ಮಾಡಲು ಸ್ಫೂರ್ತಿ ಎಂದಿದ್ದಾರೆ.. ಸದ್ಯ ಈಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರ ಗಮನ ಸೆಳೆಯುತ್ತಿದೆ. ಉರ್ಫಿ ಅವರ ಹೊಸ ವೀಡಿಯೋಗೂ ಹಲವು ಕಾಮೆಂಟ್‌ಗಳು ಬಂದಿದೆ.  ಕೆಲವರು ಜೀನಿಯಸ್ ಅಂದಿದ್ದಾರೆ. ಆದ್ರೆ ಕೆಲವರು ಬಂಡೆಗಲ್ಲು, ಕಲ್ಲುಗಳಿಂದ ಹೊಡೆಯಬೇಕು ಎಂದು ಹೇಳುತ್ತಾರೆ. ಅಸಾಧಾರಣ ಎಂದು ಅನೇಕ ಒಳ್ಳೆಯ ಮತ್ತು ಕೆಟ್ಟ ಕಾಮೆಂಟ್‌ಗಳು ವೀಡಿಯೊದಲ್ಲಿ ಬರುತ್ತಿವೆ.

ಇದನ್ನೂ ಓದಿ: ಸೊಳ್ಳೆ ಬತ್ತಿಯಲ್ಲಿ ಮೈ ಮುಚ್ಚಿಕೊಂಡು ಬಂದ ಉರ್ಫಿ! ಕಳಚಿದ್ರೆ ನಿನ್ನ ಕಥೆ ಗೋವಿಂದ ಅಂತ ಟ್ರೋಲ್
View this post on Instagram


A post shared by Uorfi (@urf7i)


ಉರ್ಫಿ ಕೂಡ ಪ್ರಸಿದ್ಧ ಟಿವಿ ನಟಿ

ಉರ್ಫಿ ಕೂಡ ಪ್ರಸಿದ್ಧ ಟಿವಿ ಕಾರ್ಯಕ್ರಮದ ನಟಿ. ಆಕೆಯ ಡ್ರೆಸ್ಸಿಂಗ್ ಸೆನ್ಸ್‌ ನ ಬಗ್ಗೆ  ಹೆಚ್ಚು ಚರ್ಚೆ ಆಗುತ್ತಿದೆ. ಉರ್ಫಿ ಕೂಡ ಕೆಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದು, ಬಿಗ್ ಬಾಸ್ ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.
Published by:Pavana HS
First published: