• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rakhi Sawant: ಏನಾಯ್ತೋ ಇದೇನಾಯ್ತೋ? ಪೊಲೀಸ್ ಠಾಣೆ ಎದುರು ಗಳಗಳನೆ ಕಣ್ಣೀರಿಟ್ಟ ರಾಖಿ ಸಾವಂತ್!

Rakhi Sawant: ಏನಾಯ್ತೋ ಇದೇನಾಯ್ತೋ? ಪೊಲೀಸ್ ಠಾಣೆ ಎದುರು ಗಳಗಳನೆ ಕಣ್ಣೀರಿಟ್ಟ ರಾಖಿ ಸಾವಂತ್!

ಕಣ್ಣೀರಿಟ್ಟ ರಾಖಿ ಸಾವಂತ್

ಕಣ್ಣೀರಿಟ್ಟ ರಾಖಿ ಸಾವಂತ್

ರಾಖಿ ಸಾವಂತ್ ಪೊಲೀಸ್ ಠಾಣೆ (Police Station) ಎದುರೇ ಗಳಗಳನೆ ಅತ್ತಿದ್ದಾರೆ. ಬಾಯ್ ಫ್ರೆಂಡ್ ಆದಿಲ್ ಖಾನ್ ಸಮಾಧಾನ ಮಾಡಿದರೂ ಸುಮ್ಮನಾಗದ ರಾಖಿ, ಕಣ್ಣೀರಿಟ್ಟಿದ್ದಾರೆ. ಹಾಗಿದ್ರೆ ರಾಖಿ ಸಾವಂತ್‌ಗೆ ಏನಾಯ್ತು? ಗಳಗಳನೆ ಕಣ್ಣೀರಿಟ್ಟಿದ್ಯಾಕೆ? ಇಲ್ಲಿದೆ ಓದಿ ರಾಖಿ ಕಣ್ಣೀರಿನ ಕಥೆ…

ಮುಂದೆ ಓದಿ ...
  • Share this:

ಮುಂಬೈ: ಬಾಲಿವುಡ್ ನಟಿ (Bollywood Actress), ಹಾಟ್‌ ಹಾಟ್‌ (Hot Hot) ಬೆಡಗಿ ರಾಖಿ ಸಾವಂತ್ (Rakhi Sawanth) ಈಗೊಂದು ಕೆಲ ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ರಾಖಿ ತಮ್ಮ ಹೊಸ ಬಾಯ್‌ ಫ್ರೆಂಡ್ (New Boyfriend), ಮೈಸೂರು (Mysuru) ಮೂಲದ ಆದಿಲ್ ಖಾನ್ (Adil Khan) ಜೊತೆ ಎಲ್ಲಾ ಕಡೆ ಸುತ್ತಾಡ್ತಾ ಇದ್ದಾರೆ. ಈ ಜೋಡಿ (Couple) ಹೋದಲ್ಲಿ ಬಂದಲ್ಲಿ ಎಲ್ಲಾ ಸುದ್ದಿಯಾಗ್ತಿದೆ (News). ಇದೀಗ ರಾಖಿ ಸಾವಂತ್ ಪೊಲೀಸ್ ಠಾಣೆ (Police Station) ಎದುರೇ ಗಳಗಳನೆ ಅತ್ತಿದ್ದಾರೆ. ಬಾಯ್ ಫ್ರೆಂಡ್ ಆದಿಲ್ ಖಾನ್ ಸಮಾಧಾನ ಮಾಡಿದರೂ ಸುಮ್ಮನಾಗದ ರಾಖಿ, ಕಣ್ಣೀರಿಟ್ಟಿದ್ದಾರೆ. ಹಾಗಿದ್ರೆ ರಾಖಿ ಸಾವಂತ್‌ಗೆ ಏನಾಯ್ತು? ಗಳಗಳನೆ ಕಣ್ಣೀರಿಟ್ಟಿದ್ಯಾಕೆ? ಇಲ್ಲಿದೆ ಓದಿ ರಾಖಿ ಕಣ್ಣೀರಿನ ಕಥೆ…


ಗಳಗಳನೆ ಕಣ್ಣೀರಿಟ್ಟ ರಾಖಿ ಸಾವಂತ್


ಬಾಲಿವುಡ್ ನಟಿ ರಾಖಿ ಸಾವಂತ್ ಕಣ್ಣೀರಿಟ್ಟಿದ್ದಾರೆ. ಮುಂಬೈನ ಓಶಿವಾರಾ ಪೊಲೀಸ್ ಠಾಣೆ ಮುಂದೆ ರಾಖಿ ಗಳಗಳನೆ ಅತ್ತಿದ್ದಾರೆ. ಪಕ್ಕದಲ್ಲೇ ಹೊಸ ಬಾಯ್‌ ಫ್ರೆಂಡ್ ಆದಿಲ್ ಖಾನ್ ಸಮಾಧಾನ ಮಾಡುತ್ತಿದ್ದರೂ ರಾಖಿಗೆ ಸಮಾಧಾನವಾಗಿಲ್ಲ. ಮಾಧ್ಯಮದ ಎದುರು ತಮ್ಮ ಕಷ್ಟ ತೋಡಿಕೊಂಡ ರಾಖಿ, ಕೊನೆಗೆ ಕಂಟ್ರೋಲ್ ಮಾಡಿಕೊಳ್ಳೋಕೆ ಆಗದೇ ಕಣ್ಣೀರು ಸುರಿಸಿದ್ದಾರೆ.

View this post on Instagram


A post shared by TAHIR JASUS007 (@tahirjasus)

ಮಾಜಿ ಪತಿ ರಿತೇಶ್ ವಿರುದ್ಧ ರಾಖಿ ದೂರು


ಅಂದಹಾಗೆ ರಾಖಿ ಸಾವಂತ್ ತಮ್ಮ ಮಾಜಿ ಪತಿ ರಿತೇಶ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. "ನನ್ನ ಮಾಜಿ ಪತಿ ರಿತೇಶ್ ನನಗೆ ತುಂಬಾ ತೊಂದರೆ ನೀಡುತ್ತಿರುವುದರಿಂದ ನಾನು ಪೊಲೀಸ್ ಠಾಣೆಗೆ ಬಂದಿದ್ದೇನೆ, ಅವನು ನನ್ನ ಇನ್ಸ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ನನ್ನ ಜಿಮೇಲ್ ಖಾತೆಯನ್ನು ಹ್ಯಾಕ್ ಮಾಡಿದ್ದಾನೆ. ಅವನು ನನ್ನ ಎಲ್ಲಾ ಖಾತೆಗಳಲ್ಲಿ ಅವನ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿದ್ದಾನೆ ಅಂತ ಆರೋಪಿಸಿದ್ದಾರೆ.


ಇದನ್ನೂ ಓದಿ: Rakhi Sawant: ಬಾಯ್​ಫ್ರೆಂಡ್​ ಮುಂದೆ ರಾಖಿ ಹೇಳಿದ್ದು ಅಂತಿಂಥಾ ಮಾತಲ್ಲ, ಪಾಪ ಆದಿಲ್ ಅಂದ್ರು ನೆಟ್ಟಿಗರು


“ಮಾಜಿ ಪತಿ ನನ್ನ ಜೀವನ ಹಾಳು ಮಾಡುತ್ತಿದ್ದಾನೆ”


ನಾವು ಒಟ್ಟಿಗೆ ಇದ್ದಾಗ ಅವನು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುತ್ತಿದ್ದನು ಮತ್ತು ನಾವು ಬೇರ್ಪಟ್ಟ ನಂತರ ನಾನು ಪಾಸ್‌ವರ್ಡ್‌ಗಳನ್ನು ಬದಲಾಯಿಸಲಿಲ್ಲ. ಯಾಕೆಂದ್ರೆ ನಾವು ಪರಸ್ವರ ಒಪ್ಪಿಗೆ ಇದ್ದೇ ಬೇರೆಯಾಗಿದ್ದೆವು. ಹೀಗಾಗಿ ಆತ ಈ ರೀತಿಯೆಲ್ಲ ನನ್ನ ಮೇಲೆ ಸೇಡು ತಿರಿಸಿಕೊಳ್ಳುವುದಿಲ್ಲ ಎಂಬ ಭರವಸೆ ಇತ್ತು. ಆದರೆ ಅವನು ನನ್ನ ಲೈಫ್ ನಾಶಪಡಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾನೆ.  ಇಂದು ನಾವೆಲ್ಲರೂ ಇಸ್ಸ್‌ಸ್ಟಾಗ್ರಾಮ್ ಖಾತೆಯಿಂದ ಹಣವನ್ನು ಗಳಿಸುತ್ತೇವೆ. ಆದರೆ ಅವನು ಅದನ್ನು ಹ್ಯಾಕ್ ಮಾಡಿದ್ದಾನೆ ಅಂತ ರಾಖಿ ಸಾವಂತ್ ಆರೋಪಿಸಿದ್ದಾರೆ.


“ಅವಾಚ್ಯ ಶಬ್ದಗಳಿಂದ ನಿಂದನೆ”


ರಿತೇಶ್ ನಾನು ಫೋನ್ ಕಾಲ್ ಮಾಡಿದ್ರೆ ರಿಸೀವ್ ಮಾಡುತ್ತಿಲ್ಲ. ನನಗೆ ತೊಂದರೆ ನೀಡಬೇಡಿ ಎಂದು ನಾನು ವಿನಂತಿಸಿದ್ರೂ, ಆತ ತೊಂದರೆ ಕೊಡುತ್ತಿದ್ದಾನೆ. ನನ್ನ ಖಾತೆಯಲ್ಲಿ ಕಲರ್ಸ್ ಹಾಗೂ ಇತರೇ ಚಾನೆಲ್ ಬಗ್ಗೆ ಅಸಹ್ಯವಾದ ವಿಷಯವನ್ನು ಬರೆಯುತ್ತಿದ್ದಾನೆ. ನಾನು ಅದನ್ನು ಬರೆಯುತ್ತಿದ್ದೇನೆ ಎಂದು ಜನರೆಲ್ಲ ಭಾವಿಸುತ್ತಾರೆ. ಅವರು ನನ್ನನ್ನು ಚಾನಲ್‌ನಿಂದ ನಿಷೇಧಿಸಬೇಕು ಮತ್ತು ಸಲ್ಮಾನ್ ಖಾನ್ ಭಾಯ್ ಅವರೊಂದಿಗಿನ ನನ್ನ ಸಂಬಂಧವನ್ನು ಹಾಳುಮಾಡಬೇಕೆಂಬುದು ರಿತೇಶ್ ಉದ್ದೇಶ ಅಂತ ರಾಖಿ ಕಣ್ಣೀರಿಟ್ಟಿದ್ದಾರೆ.


ಇದನ್ನೂ ಓದಿ: Rakhi Sawanth: ಇನ್ಮೇಲೆ ಗ್ಲಾಮರಸ್ ಬಟ್ಟೆ ಹಾಕಲ್ವಂತೆ ಈ ಬಿಚ್ಚೋಲೆ ಗೌರಮ್ಮ! ರಾಖಿ ಮಾಡೋದೆಲ್ಲ ಬಾಯ್‌ಫ್ರೆಂಡ್‌ಗಾಗಿ ಸ್ವಾಮಿ


“ನಾನು ಆದಿಲ್ ಜೊತೆ ಚೆನ್ನಾಗಿರೋದು ಅವನಿಗೆ ಇಷ್ಟವಿಲ್ಲ”


ನಾನು ಈಗ ಆದಿಲ್ ಖಾನ್ ಜೊತೆ ಸಂತೋಷವಾಗಿ ಇದ್ದೇನೆ. ಆದರೆ ಇದನ್ನು ರಿತೇಶ್ ಸಹಿಸುತ್ತಿಲ್ಲ. ಹೇಗಾದರೂ ಮಾಡಿ ನಮ್ಮಿಬ್ಬರ ಸಂಬಂಧ ಹಾಳು ಮಾಡಲು ಯೋಚಿಸಿದ್ದಾನೆ. ನಿನ್ನ ಜೀವನ ನಾಶ ಮಾಡ್ತೀನಿ ಅಂತ ನನಗೆ ಬೆದರಿಕೆ ಹಾಕಿದ್ದಾನೆ ಅಂತ ದೂರಿನಲ್ಲಿ ಹೇಳಿದ್ದಾರೆ.

Published by:Annappa Achari
First published: